ಹರಿಯಾಣ ಆರ್ಬಿಟಲ್ ರೈಲು ಸುರಂಗ ಆರನೇ ಬಾರಿ ಕುಸಿತ: ಗ್ರಾಮದಲ್ಲಿ ಮನೆಗಳಿಗೆ ಹಾನಿ, ಗ್ರಾಮಸ್ಥರ ಸ್ಥಳಾಂತರ

Date:

ಹರಿಯಾಣದ ನೂಹ್ ಜಿಲ್ಲೆಯ ತಾವ್ರು ಉಪವಿಭಾಗದ ಸಹಸೋಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ‘ಹರಿಯಾಣ ಆರ್ಬಿಟಲ್ ರೈಲ್ ಕಾರಿಡಾರ್’ (HORC) ಸುರಂಗ ಮಾರ್ಗದ ಮೇಲ್ಭಾಗದ ಭೂಮಿ ಭಾನುವಾರ ಆರನೇ ಬಾರಿಗೆ ಕುಸಿದಿದೆ. ಈ ಭೂಕುಸಿತವು ಜನವಸತಿ ಪ್ರದೇಶವನ್ನು ತಲುಪಿದ್ದು, ಮನೆಗಳು ಮತ್ತು ರಸ್ತೆಗಳಿಗೆ ತೀವ್ರ ಹಾನಿಯುಂಟುಮಾಡಿದೆ.

- Advertisement -

ಭಾನುವಾರ ಸಂಭವಿಸಿದ ಈ ಭೂಕುಸಿತದಿಂದಾಗಿ ಗ್ರಾಮದ ಮೊದಲ ಸಾಲಿನ ಮನೆಯೊಂದು ಹಾನಿಗೊಳಗಾಗಿದ್ದು, ಸುಮಾರು 200 ಅಡಿ ಉದ್ದದ ಗ್ರಾಮದ ಸಂಪರ್ಕ ರಸ್ತೆ ಮತ್ತು 400 ಅಡಿಗೂ ಹೆಚ್ಚು ವಿಸ್ತೀರ್ಣದ ಭೂಭಾಗ ಕುಸಿದಿದೆ. ಆಡಳಿತ ಮಂಡಳಿಯು ಮುನ್ನೆಚ್ಚರಿಕಾ ಕ್ರಮವಾಗಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ದಾಟಿ ಈ ಕುಸಿತ ಜನವಸತಿ ಪ್ರದೇಶಕ್ಕೆ ವ್ಯಾಪಿಸಿದೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಹಾಗೂ ಅಕ್ಟೋಬರ್ 10ರಂದು ಸಂಭವಿಸಿದ ಕುಸಿತದಂತೆ ಈ ಬಾರಿ ಗ್ಯಾಸ್ ಪೈಪ್‌ಲೈನ್‌ಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇಂದು ಭಗತ್ ಸಿಂಗ್ ಹೆಸರು ಬಳಸುವ ಆರ್‌ಎಸ್‌ಎಸ್ ನಾಯಕರಿಗೆ...

ಜಾತ್ಯತೀತತೆ ಮತ್ತು ಸಮಾಜವಾದದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದ, ಕೋಮುವಾದಿ ಧೋರಣೆಗಳನ್ನು ಕಟುವಾಗಿ ವಿಮರ್ಶಿಸುತ್ತಿದ್ದ ಭಗತ್ ಸಿಂಗ್ ಅವರನ್ನು ಇಂದು ಅದೇ ಸಿದ್ಧಾಂತಗಳ ವಿರುದ್ಧ ನಿಂತಿರುವ ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ನಾಯಕರು ತಮ್ಮ 'ಸ್ವಂತ...

ಬರಗಾಲ | ಕಾಡಿನ ಮೌನದ ಹಿಂದೆ ಅಡಗಿದೆ ಜೀವಸಂಕುಲದ...

ಒಂದು ಆನೆಗೆ ದಿನಕ್ಕೆ ನೂರಾರು ಲೀಟರ್ ನೀರು ಮತ್ತು ನೂರಾರು ಕೆ.ಜಿ. ಆಹಾರ ಬೇಕಾಗುತ್ತದೆ. ಇನ್ನು ಕಾಡಿನಲ್ಲಿರುವ ಸಾವಿರಾರು ಆನೆಗಳು, ಹುಲಿಗಳು, ಚಿರತೆಗಳು, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ವನ್ಯಜೀವಿಗಳ ಅಗತ್ಯವನ್ನು ಲೆಕ್ಕಹಾಕಿದರೆ...

ಬಾಗಲಕೋಟೆ | ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತರಗತಿ ಆರಂಭ;...

ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಕಾಲ ಕೂಡಿಬಂದಿದೆ. ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬ ದಶಕಗಳ ಬೇಡಿಕೆಗೆ ಸಾಕಾರ ರೂಪ ಸಿಕ್ಕಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಗರದ ಬಹುನಿರೀಕ್ಷಿತ...

ಪದೇ ಪದೇ ಸಂಭವಿಸುತ್ತಿರುವ ಈ ಭೂಕುಸಿತದಿಂದ ದೊಡ್ಡ ಮಟ್ಟದ ಅನಾಹುತ ಸಂಭವಿಸಬಹುದೆಂಬ ಭೀತಿಯಲ್ಲಿ ಹಲವು ಕುಟುಂಬಗಳು ತಮ್ಮ ಮನೆಗಳಿಗೆ ಬೀಗ ಹಾಕಿ ಸುರಕ್ಷಿತ ಸ್ಥಳಗಳಿಗೆ ತೆರಳಿವೆ. ಕೆಲವರು ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದರೆ, ಇನ್ನು ಕೆಲವರು ತಮ್ಮ ಜಾನುವಾರುಗಳೊಂದಿಗೆ ಬಾಡಿಗೆ ಕೊಠಡಿಗಳಿಗೆ ಸ್ಥಳಾಂತರಗೊಂಡಿದ್ದಾರೆ. ಅಲ್ಲದೆ, ಭೂಕುಸಿತದಿಂದ ಹಲವಾರು ಮರಗಳು ನಾಶವಾಗಿದ್ದು, ಅರಣ್ಯ ಇಲಾಖೆಯು ಈ ನಷ್ಟವನ್ನು ಅಂದಾಜಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಾಮಗಾರಿಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ಆಗುಂಬೆ ಸುರಂಗ, ಶೃಂಗೇರಿ ರೈಲು ಮಾರ್ಗ: ವಯನಾಡು ಮಾದರಿ ದುರಂತಕ್ಕೆ ಮುನ್ನುಡಿಯೇ?

ಕಳೆದ ಎರಡು ತಿಂಗಳಿನಿಂದ ಈ ಭಾಗದಲ್ಲಿ ನಿರಂತರವಾಗಿ ಭೂಮಿ ಕುಸಿಯುತ್ತಿದೆ. ಕಾಮಗಾರಿ ಸ್ಥಗಿತಗೊಳಿಸುವಂತೆ ಕೋರಿ ಗ್ರಾಮಸ್ಥರು ನೂಹ್ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರು. ಸಂಭವಿಸಿದ ಭಾರಿ ಕುಸಿತದಿಂದ ಸರ್ಕಾರಿ ಶಾಲೆಯ ಕಟ್ಟಡ ಮತ್ತು ಮನೆಯೊಂದಕ್ಕೆ ಹಾನಿಯಾಗಿ, 500 ಮೀಟರ್‌ಗೂ ಹೆಚ್ಚು ಭೂಮಿ ಕುಸಿದಿತ್ತು. ಈ ವೇಳೆ ಗೇಲ್ ಗ್ಯಾಸ್ ಪೈಪ್‌ಲೈನ್ ಕೂಡ ಬಹಿರಂಗಗೊಂಡಿತ್ತು.

ನಂತರದ ದಿನಗಳಲ್ಲಿಯೂ ಭೂಮಿ ಕುಸಿದು ಸರ್ಕಾರಿ ರಸ್ತೆ ಹಾನಿಗೊಳಗಾಗಿತ್ತು. ರೈಲ್ವೆ ಅಧಿಕಾರಿಗಳು ಮಣ್ಣು ತುಂಬಿ ರಸ್ತೆ ಸರಿಪಡಿಸಿದ್ದರೂ ನವೆಂಬರ್ 18ರಂದು ಮತ್ತೆ ಕುಸಿದಿತ್ತು. ಇದುವರೆಗೆ ಪಟುಕಾ ಗ್ರಾಮದ ಸುಮಾರು 10 ರಿಂದ 12 ಎಕರೆ ಕೃಷಿ ಭೂಮಿ ಮತ್ತು ಬೆಳೆಗಳು ನಾಶವಾಗಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಹರಿಯಾಣ ರೈಲ್ ಕಾರ್ಪೊರೇಷನ್‌ನ ಹಿರಿಯ ಅಧಿಕಾರಿಯೊಬ್ಬರು, “ಪದೇ ಪದೇ ಸಂಭವಿಸುತ್ತಿರುವ ಕುಸಿತಗಳಿಂದಾಗಿ ಭೂಗರ್ಭದ ಸಮತೋಲನ ತಪ್ಪಿದ್ದು, ತಾಂತ್ರಿಕ ತನಿಖೆ ನಡೆಸಲಾಗುತ್ತಿದೆ. ಪ್ರಸ್ತುತ ಸುರಂಗ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದ್ದು, ಸುರಂಗದ ಆರಂಭಿಕ ಭಾಗವನ್ನು ಮಣ್ಣಿನಿಂದ ಮುಚ್ಚಲಾಗಿದೆ” ಎಂದು ತಿಳಿಸಿದ್ದಾರೆ.

ಬಾಧಿತ ಪ್ರದೇಶದ ಮನೆಗಳನ್ನು ಗುರುತಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ. ತಜ್ಞರ ಸಮಿತಿಯ ವರದಿ ಮತ್ತು ಹೊಸ ವಿನ್ಯಾಸದ ಆಧಾರದ ಮೇಲೆ ಭೂಸ್ವಾಧೀನ ಪೂರ್ಣಗೊಂಡ ನಂತರವೇ ಮುಂದಿನ ಕಾಮಗಾರಿ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಪಲ್ವಲ್‌ನಿಂದ ಸೋನಿಪತ್‌ವರೆಗೆ ನಿರ್ಮಾಣವಾಗುತ್ತಿರುವ 126 ಕಿ.ಮೀ ಉದ್ದದ ಈ ಡಬಲ್-ಲೈನ್ ರೈಲು ಕಾರಿಡಾರ್ ಯೋಜನೆಯಡಿ ಅರಾವಳಿ ಬೆಟ್ಟದ ತಪ್ಪಲಿನಲ್ಲಿ 4.69 ಕಿ.ಮೀ ಉದ್ದದ ಅವಳಿ ಸುರಂಗವನ್ನು ಸುಮಾರು ₹1,200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸಡಿಲವಾದ ಮಣ್ಣು ಮತ್ತು ಬಿರುಕು ಬಿಟ್ಟ ಬಂಡೆಗಳ ಪದರವಿರುವುದರಿಂದ ಈ ಪ್ರದೇಶದಲ್ಲಿ ಸುರಂಗ ಕೊರೆಯುವುದು ಅಪಾಯಕಾರಿ ಎಂದು ತಾಂತ್ರಿಕ ವರದಿಗಳು ಈ ಮೊದಲೇ ಎಚ್ಚರಿಸಿದ್ದವು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಟನ್ ಕಬ್ಬಿಗೆ ₹4,000 ಬೆಲೆ ಘೋಷಣೆಗೆ ಪಟ್ಟು: ರೈತರ ಧರಣಿ 11ನೇ ದಿನಕ್ಕೆ

ಬೀದರ್ ಜಿಲ್ಲೆಯ ರೈತರ ನಾಲ್ಕು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಅನಿರ್ದಿಷ್ಟಾವಧಿ...

ಶಿರಸಿ | ಮೊಗೇರರಿಗೆ ಎಸ್‌ಸಿ ಪ್ರಮಾಣಪತ್ರ ನೀಡಬೇಡಿ: ಅರ್ಜುನ್ ಮಿಂಟಿ

ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರ್ ಸಮುದಾಯಕ್ಕೆ ಪರಿಶಿಷ್ಟ ಜಾತಿ (ಎಸ್‌ಸಿ)...

ಅನಾರೋಗ್ಯದಿಂದ 2.5 ತಿಂಗಳ ಮಗು ಸಾವು; ಮೃತದೇಹ ಮನೆಗೆ ಬರುವಷ್ಟರಲ್ಲಿ 10 ವರ್ಷದ ಅಕ್ಕ ಆತ್ಮಹತ್ಯೆ!

ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಎರಡೂವರೆ ತಿಂಗಳ ಪುಟ್ಟ ತಂಗಿ ಆಸ್ಪತ್ರೆಯಲ್ಲಿ ಮೃತಪಟ್ಟ...

2027ರ ಪಂಜಾಬ್ ಚುನಾವಣೆ: ಅಮೃತಪಾಲ್ ಸಿಂಗ್ ಪಕ್ಷ, ಬಿಎಸ್‌ಪಿ ನಡುವೆ ಮೈತ್ರಿ ಕಸರತ್ತು

ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ರಾಜ್ಯ ರಾಜಕೀಯದಲ್ಲಿ ಹೊಸ...