ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಯನಾಡ್ ಭೂಕುಸಿತದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಆರು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ವಯನಾಡ್ ಭೂಕುಸಿತದಿಂದಾಗಿ ಸುಮಾರು 200ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಆರು ಲಕ್ಷ ರೂಪಾಯಿಗಳಲ್ಲಿ ನಾಲ್ಕು ಲಕ್ಷ ರೂಪಾಯಿಗಳನ್ನು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಮತ್ತು ಉಳಿದವು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಯಿಂದ (ಸಿಎಮ್‌ಡಿಆರ್‌ಎಫ್) ನೀಡಲಾಗುತ್ತದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ವಯನಾಡ್ | ದುರಂತ ಪೀಡಿತ ಜನರಿಗಾಗಿ ಮೀಡಿದ ಮಾನವೀಯ ಮನಸ್ಸುಗಳು
ಭೂಕುಸಿತದಲ್ಲಿ ಕಣ್ಣು ಮತ್ತು ಕೈಕಾಲುಗಳನ್ನು ಕಳೆದುಕೊಂಡ ಅಥವಾ ಶೇ.60 ರಷ್ಟು ಅಂಗವೈಕಲ್ಯಕ್ಕೆ ಒಳಗಾದವರಿಗೆ ಸಿಎಂಡಿಆರ್‌ಎಫ್‌ನಿಂದ 75,000 ರೂಪಾಯಿಗಳನ್ನು ಮಂಜೂರು ಮಾಡಲಾಗುವುದು ಎಂದು ಕೂಡಾ ಘೋಷಿಸಿದ್ದಾರೆ.
STORY | Kerala landslides: CM Vijayan announces Rs 6 lakh compensation to kin of deceased
— Press Trust of India (@PTI_News) August 14, 2024
READ: https://t.co/t27pRJNFeQ#WayanadLandslides #WayanadDisaster
(PTI File Photo) pic.twitter.com/W4YF4ZTS2e