ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾದರೆ ಸಿಡಿದೇಳುತ್ತೇವೆ- ಸ್ಟ್ಯಾಲಿನ್ ಎಚ್ಚರಿಕೆ

Date:

ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣದ ರಾಜ್ಯಗಳ ಹಿತವನ್ನು ಬಲಿಗೊಟ್ಟು ಉತ್ತರದ ರಾಜ್ಯಗಳ ರಾಜಕೀಯ ಅಧಿಕಾರವನ್ನು ಹುಚ್ಚಾಬಟ್ಟೆ ಹೆಚ್ಚಿಸಿಕೊಂಡರೆ ತಮಿಳುನಾಡು ಸಿಡಿದೇಳುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಎಚ್ಚರಿಕೆ ನೀಡಿದ್ದಾರೆ.

- Advertisement -

“ಈ ಹಿಂದೆಂದೂ ನೋಡಿರದ ತಮಿಳುನಾಡನ್ನು ನೋಡಲಿದ್ದೀರಿ. ಇದು ಬೆದರಿಕೆಯಲ್ಲ, ಎಚ್ಚರಿಕೆ” ಎಂದು 1950 ಮತ್ತು 1960ರ ದಶಕಗಳಲ್ಲಿ ನಡೆದ ಡಿಎಂಕೆ ಚಳವಳಿಗಳನ್ನು ನೆನಪಿಸಿಕೊಟ್ಟಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ನಾವು ಆತ್ಮಗೌರವಕ್ಕೆ ಅತ್ಯಂತ ಎತ್ತರದ ಸ್ಥಾನವನ್ನು ನೀಡುವ ಜನ. ನೀತಿ ತತ್ವಗಳು ನಮಗೆ ಮುಖ್ಯ. ರಾಜ್ಯಗಳ ಹಕ್ಕುಗಳ ರಕ್ಷಿಸಲು ಹೊಡೆದಾಡುವವರು ನಾವು. ಚುನಾವಣೆಗಳು ಮತ್ತು ರಾಜಕೀಯ ಅಧಿಕಾರ ನಮಗೆ ಮುಖ್ಯವಲ್ಲ.

ಪುನರ್ವಿಂಗಡಣಾ ಕಸರತ್ತನ್ನು ರಹಸ್ಯಮಯವಾಗಿ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರಗಳೊಂದಿಗೆ ಮತ್ತು ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸುವ ಜನತಾಂತ್ರಿಕ ನಡೆಯನ್ನು ಗಾಳಿಗೆ ತೂರಿದೆ ಕೇಂದ್ರ ಸರ್ಕಾರ ಎಂದು ಅವರು ತಕರಾರನ್ನು ಪುನರುಚ್ಚರಿಸಿದ್ದಾರೆ.

ಪುನರ್ವಿಂಗಡಣೆಯನ್ನು ಹೇಗೆ ಮಾಡುತ್ತಾರೆ ಎಂಬುದನ್ನು ಕೂಡ ನಮಗೆ ತಿಳಿಯಪಡಿಸಿಲ್ಲ. ಉದ್ದೇಶಿತ ಸಂವಿಧಾನ ತಿದ್ದುಪಡಿಯ ಕುರಿತು ಯಾವುದೇ ವಿವರಣೆ ನೀಡಿಲ್ಲ. ಜನಸಂಖ್ಯೆಯನ್ನು ನಿಯಂತ್ರಿಸಿದ್ದಕ್ಕಾಗಿ ತಮಿಳುನಾಡನ್ನು ಶಿಕ್ಷಿಸಲಾಗುತ್ತಿದೆ. ಈ ಕಸರತ್ತಿನಲ್ಲಿ ದಕ್ಷಿಣ ರಾಜ್ಯಗಳ ಹಿತವನ್ನು ಬಲಿಗೊಡುವುದಿಲ್ಲ ಎಂಬ ಯಾವುದೇ ಭರವಸೆಯನ್ನು ಪ್ರಧಾನಮಂತ್ರಿ ನೀಡಿಲ್ಲ.

ಪುನರ್ವಿಂಗಡಣೆಯಲ್ಲಿ ಸೀಟುಗಳ ಹಂಚಿಕೆಯನ್ನು ಸಾಕಷ್ಟು ಹೆಚ್ಚಿಸದೆ ಹೋದಲ್ಲಿ ದಕ್ಷಿಣ ರಾಜ್ಯಗಳ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನ ಅನ್ಯಾಯ ಎದುರಿಸಲಿದ್ದಾರೆ. ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳ ಹಿತವನ್ನು ಕಡೆಗಣಿಸಿ ಉತ್ತರಪ್ರದೇಶ ಮತ್ತು ಗುಜರಾತಿನ ಸೀಟುಗಳನ್ನು ಹೆಚ್ಚಿಸಲು ಹೊರಟಿದೆ ಎಂದು ತೆಲಂಗಾಣದ ಮುಖ್ಯಮಂತ್ರಿ ರೇವಂತರೆಡ್ಡಿ ಆಕ್ಷೇಪ ಪ್ರಕಟಿಸಿದ್ದಾರೆ.

ಒಟ್ಟು ಸೀಟುಗಳ ಶೇ.50ರಷ್ಟು ಸೀಟುಗಳ ಹೆಚ್ಚಳವನ್ನು ಆಯಾ ರಾಜ್ಯದ ಒಟ್ಟಾರೆ ಸೇವೆ ಸರಕುಗಳ ಮೌಲ್ಯವನ್ನು (ಜಿ ಎಸ್ ಡಿ ಪಿ) ಆಧರಿಸಿ ನಡೆಸಬೇಕು ಎಂಬ ಸಲಹೆಯನ್ನು ಅವರು ನೀಡಿದ್ದಾರೆ.

ಪುನರ್ವಿಂಗಡಣೆಯನ್ನು ಗುಟ್ಟುಗುಟ್ಟಾಗಿ ಮಾಡಲಾಗುತ್ತಿದೆ ಎಂಬ ಸ್ಟ್ಯಾಲಿನ್ ಕಳವಳಕ್ಕೆ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ದನಿಗೂಡಿಸಿದೆ. ಶಾಸನದ ಕರಡು ರೂಪವನ್ನು ಸಂಸತ್ ಸದಸ್ಯರೊಂದಿಗೆ ಹಂಚಿಕೊಂಡಿಲ್ಲ, ಇದು ಸಂಸತ್ತಿನ ಅಣಕವಲ್ಲದೆ ಇನ್ನೇನು ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಮತ್ತು ತೃಣಮೂಲ ಕಾಂಗ್ರೆಸ್ ವಕ್ತಾರ ಡೆರೆಕ್ ಓ ಬ್ರಿಯಾನ್ ಪ್ರಶ್ನಿಸಿದ್ದಾರೆ.

ಸಂಸತ್ತು ಚರ್ಚಿಸಿ ಒಪ್ಪಿಗೆ ನೀಡಬೇಕಿರುವ ಈ ಮಸೂದೆಗಳನ್ನು ಇಂದು ಮುಂಜಾನೆಯ ತನಕ ಗುಟ್ಟಾಗಿ ಇಟ್ಟಿದ್ದು ಜನತಂತ್ರದ ಬಹುದೊಡ್ಡ ಅಣಕ. ಪ್ರಧಾನಿ ನರೇಂದ್ರ ಮೋದಿಯವರ ಬುಲ್ಡೋಜರ್ ಮನಸ್ಥಿತಿಗೆ ಹಿಡಿದ ಕನ್ನಡಿ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಚುನಾವಣೆಗಳ ನಂತರ ಸರ್ವಪಕ್ಷ ಸಭೆ ಕರೆಯುವ ಬೇಡಿಕೆಯನ್ನೂ ತಿರಸ್ಕರಿಸಲಾಗಿದೆ ಎಂದು ಜೈರಾಮ್ ಟೀಕಿಸಿದ್ದಾರೆ.

ತಮ್ಮ ರಾಜ್ಯಗಳ ರಾಜಕೀಯ ಅಧಿಕಾರವನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮೊಹುವಾ ಮೊಯಿತ್ರ ಆಪಾದಿಸಿದ್ದಾರೆ.

ಜಾತಿ ಜನಗಣತಿಯಿಲ್ಲದೆ ಕ್ಷೇತ್ರ ಮರುವಿಂಗಡಣೆ ಮಾಡುವುದು ‘ಆತ್ಮಹೀನ ಜನತಂತ್ರ’. ಕ್ಷೇತ್ರಗಳ ಗಡಿಗಳನ್ನು ಮರುಗುರುತಿಸುವ ಈ ಕಾರ್ಯವು ಅಂಚಿನಲ್ಲಿ ಜೀವಿಸುತ್ತಿರುವ ನಿರ್ಲಕ್ಷಿತ ಸಮುದಾಯಗಳ ಜನಸಂಖ್ಯಾ ದತ್ತಾಂಶ (ಡೆಮಗ್ರಫಿಕ್ ಡೇಟಾ) ಇಲ್ಲದೆ ನಡೆಯುವುದು ಸರಿಯಲ್ಲ ಎಂದು ರಾಷ್ಟ್ರೀಯ ಜನತಾದಳದ ನಾಯಕ ಮನೋಜ್ ಝಾ ಖಂಡಿಸಿದ್ದಾರೆ.

ವಿಶೇಷ ಅಧಿವೇಶನ ಕರೆದಿರುವ ಕೇಂದ್ರ ಸರ್ಕಾರದ ನಡೆಯ ಹಿಂದಿರುವ ಅಸಲಿ ಹುನ್ನಾರ ಕ್ಷೇತ್ರ ಮರುವಿಂಗಡಣೆಯೇ ವಿನಾ ಮಹಿಳಾ ಮೀಸಲಾತಿ ಅಲ್ಲ. ಇದೊಂದು ಬಹುದೊಡ್ಡ ಅಪಾಯ ಮತ್ತು ಸಂವಿಧಾನದ ಮೇಲೆ ನಡೆದಿರುವ ಪ್ರಹಾರ ಎಂದು ಕಾಂಗ್ರೆಸ್ ನಾಯಕಿ ಸೋನಿಯಾಗಾಂಧೀ ಪ್ರತಿಕ್ರಿಯಿಸಿದ್ದಾರೆ.

ಲೋಕಸಭೆಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಯಾವುದೇ ಕ್ರಮವು ಸಂಖ್ಯಾತ್ಮಕವಾಗಿ ಮಾತ್ರವಲ್ಲದೆ, ರಾಜಕೀಯವಾಗಿಯೂ ನ್ಯಾಯಯುತ ಆಗಿರಬೇಕು. ಜೊತೆಜೊತೆಗೇ ಅಗತ್ಯವಾಗಿ ನಡೆಯಬೇಕಿರುವ ಜಾತಿ ಜನಗಣತಿಯನ್ನು ಹಳಿ ತಪ್ಪಿಸಲು ಹೊರಟಿದ್ದಾರೆ ಪ್ರಧಾನಮಂತ್ರಿ ಎಂದು ಅವರು ಆಪಾದಿಸಿದ್ದಾರೆ.

ಪುನರ್ವಿಂಗಡಣಾ ಕಾಯಿದೆಯಡಿ ತರಲು ಹೊರಟಿರುವ ಬದಲಾವಣೆಗಳು ಲೋಕಸಭೆಯ ಒಟ್ಟು ಸದಸ್ಯ ಬಲವನ್ನು ಈಗಿನ 543ರಿಂದ 850ಕ್ಕೆ (ಶೇ.50ರಷ್ಟು ಹೆಚ್ಚಳ) ಹೆಚ್ಚಿಸುವ ನಿರೀಕ್ಷೆ ಇದೆ.

ಉತ್ತರಪ್ರದೇಶದ ಲೋಕಸಭಾ ಸೀಟುಗಳ ಸಂಖ್ಯೆ ಈಗಿನ 80ರಿಂದ 120ಕ್ಕೆ, ಮಹಾರಾಷ್ಟ್ರದ ಸೀಟುಗಳು 48ರಿಂದ 72ಕ್ಕೆ, ಪಶ್ಚಿಮ ಬಂಗಾಳದ ಸೀಟುಗಳು 42ರಿಂದ 63ಕ್ಕೆ, ಬಿಹಾರದ ಸೀಟುಗಳು 40ರಿಂದ 60ಕ್ಕೆ, ತಮಿಳುನಾಡಿನ ಸೀಟುಗಳು 39ರಿಂದ 59ಕ್ಕೆ, ಮಧ್ಯಪ್ರದೇಶದ ಸೀಟುಗಳು 29ರಿಂದ 44ಕ್ಕೆ, ಕರ್ನಾಟಕದ ಸೀಟುಗಳು 28ರಿಂದ 42ಕ್ಕೆ, ಗುಜರಾತಿನ ಸೀಟುಗಳು 26ರಿಂದ 39ಕ್ಕೆ, ಆಂಧ್ರಪ್ರದೇಶದ ಸೀಟುಗಳು 25ರಿಂದ 38ಕ್ಕೆ, ರಾಜಸ್ತಾನದ ಸೀಟುಗಳು 25ರಿಂದ 38ಕ್ಕೆ, ತೆಲಂಗಾಣದ ಸೀಟುಗಳು 17ರಿಂದ 26ಕ್ಕೆ ಹಾಗೂ ಕೇರಳದ ಸೀಟುಗಳು 20ರಿಂದ 30ಕ್ಕೆ ಹೆಚ್ಚಲಿವೆಯೆಂದು ಅಂದಾಜು ಮಾಡಲಾಗಿದೆ. ಇದು ಪ್ರಮಾಣಾತ್ಮಕ ಮಾನದಂಡದ ಪ್ರಕಾರ ಮಾಡಿರುವ ಅಂದಾಜು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನ.28, 29ರಂದು 47ನೇ ಶರಣ ಕಮ್ಮಟ, ಅನುಭವಮಂಟಪ ಉತ್ಸವ

ವಿಶ್ವಬಸವಧರ್ಮ ಅನುಭವಮಂಟಪ, ಬಸವಕಲ್ಯಾಣ ವತಿಯಿಂದ ನವೆಂಬರ್ 28 ಮತ್ತು 29ರಂದು 47ನೇ...

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...

ಜಂತರ್ ಮಂತರ್ ಪ್ರತಿಭಟನಾ ಸ್ಥಳ ರದ್ದು: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಅಧಿಕೃತವಾಗಿ...