ಸ್ನೇಹಿತರ ಜತೆ ಈಜಲು ಕೆರೆಗೆ ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಗುಜಮಾಗಡಿ ಗ್ರಾಮದಲ್ಲಿ ನಿನ್ನೆ ನಡೆದಿದೆ.
ಗುಜಮಾಗಡಿ ಗ್ರಾಮದ ಶರಣಪ್ಪ ಅಸೂಟಿ(25) ಮೃತ ಯುವಕ. ಮದ್ಹಾನ್ನ ಸ್ನೇಹಿತರ ಜೊತೆಗೆ ಕರೆಯಲ್ಲಿ ಈಜಾಡಲು ಹೋಗಿದ್ದ ಯುವಕ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಕರೆಯಲ್ಲಿ ಈಜಲು ಜಿಗಿದಾಗ ಬಹಳ ಸಮಯ ಆದರೂ ಮೇಲೆಳದೆ ಇದುದರಿಂದ ಅಲ್ಲಿದ್ದ ಸ್ನೇಹಿತರು ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಮೃತ ಯುವಕನನ್ನು ಹೊರ ತೆಗೆಯಲು ಕೆರೆಯಲ್ಲಿದ್ದ ನೀರನ್ನು ಪಂಪ್ಸೆಟ್ ಮೂಲಕ ಹೊರಹಾಕಲು ಪ್ರಯತ್ನಸಿದ್ದಾರೆ. ನಂತರ ಮುಳುಗು ತಜ್ಞರನ್ನು ಕರೆಸಿ ಮೃತ ಯುವಕನನ್ನು ಹೊರ ತೆಗೆದಿದ್ದಾರೆ.
ನರೇಗಲ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




