ಭಾರತೀಯ ಪೌರತ್ವದ ದಾಖಲೆಗಳಿದ್ದರೂ ಬಾಂಗ್ಲಾಗೆ ಮಹಿಳೆ ಗಡೀಪಾರು; ಭಾರತದಲ್ಲೇ ಉಳಿದ ಪತಿ, ಇಬ್ಬರು ಮಕ್ಕಳು

Date:

ಭಾರತೀಯ ಪೌರತ್ವವನ್ನು ಸಾಬೀತುಪಡಿಸುವ ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಹಾಗೂ ಆಸ್ತಿ ಪತ್ರಗಳಿದ್ದರೂ ಮುಸ್ಲಿಂ ಮಹಿಳೆಯೊಬ್ಬರನ್ನು ‘ಒಳನುಸುಳುಕೋರ’ರೆಂಬ ಶಂಕೆಯ ಮೇಲೆ ಕಾನೂನುಬಾಹಿರವಾಗಿ ಗಡಿಯಾಚೆಗೆ ತಳ್ಳಿರುವ ಭೀಕರ, ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ದೇಶದ ಸಂವಿಧಾನ ಮತ್ತು ಕಾನೂನು ವ್ಯವಸ್ಥೆಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ನಡೆದಿರುವ ಈ ಗಡೀಪಾರು ಕ್ರಮದಿಂದಾಗಿ, ಮಹಿಳೆಯ ಪತಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳು ಭಾರತದಲ್ಲೇ ಅನಾಥರಾಗಿ ಉಳಿದುಕೊಂಡಿದ್ದು, ಇಡೀ ಕುಟುಂಬ ತೀವ್ರ ಆಘಾತಕ್ಕೆ ಈಡಾಗಿದೆ.

- Advertisement -

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸ್ವರೂಪನಗರ ತಾಲೂಕಿನ ನಿವಾಸಿ ಸಾಹಿದಾ ಫಕೀರ್ ಅವರನ್ನು ಅನ್ಯಾಯವಾಗಿ ಬಾಂಗ್ಲಾಗೆ ಗಡಿಪಾರು ಮಾಡಲಾಗಿದೆ. ಸಾಹಿದಾ ಅವರು ಕಳೆದ ಎರಡು ದಶಕಗಳಿಂದ ಕುಟುಂಬದೊಂದಿಗೆ ನವಿ ಮುಂಬೈನಲ್ಲಿ ವಾಸಿಸುತ್ತಿದ್ದರು. ಅವರು ಜುಲೈ 18ರಂದು ಸನ್ಪಾದಾದ ಮಾರುಕಟ್ಟೆಯಲ್ಲಿ ದಿನಸಿ ತರಲು ಹೋದಾಗ, ಅವರನ್ನು ಪೊಲೀಸರು ಏಕಾಏಕಿ ವಶಕ್ಕೆ ಪಡೆದಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ...

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು...

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ತೆಲಂಗಾಣದ ಕೃಷಿ ಪ್ರದೇಶದಲ್ಲಿನ ನಿಂತಿರುವ ಬೆಳೆಗಳನ್ನು ರಕ್ಷಿಸಲು ಕರ್ನಾಟಕದಿಂದ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಆ ರಾಜ್ಯದ ಸಚಿವರು...

ಸಾಹಿದಾ ಅವರ ಪತಿ ಜುಮ್ಮನ್ ಫಕೀರ್ ಮತ್ತು ಇಬ್ಬರು ಮಕ್ಕಳು ಮುಂಬೈನಲ್ಲೇ ನೆಲೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಬಂಧನ ಕೇಂದ್ರಕ್ಕೆ (Detention Centre) ಧಾವಿಸಿ, ಆಕೆಯ ಜನನ ಪ್ರಮಾಣಪತ್ರ, ಶಾಲಾ ದಾಖಲೆ, ಆಸ್ತಿ ಪತ್ರಗಳು ಹಾಗೂ ಇತರೆ ಗುರುತಿನ ಚೀಟಿಗಳನ್ನು ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದರು. ಆದರೆ, ಯಾವ ದಾಖಲೆಗಳನ್ನೂ ಪರಿಗಣಿಸದ ಪೊಲೀಸರು, ಮೂರು ದಿನಗಳ ನಂತರ ಆಕೆಯನ್ನು ಬಾಂಗ್ಲಾದೇಶಕ್ಕೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.

image 164

ಸಾಹಿದಾ ಅವರನ್ನು ಮುಂಬೈನಿಂದ ಅಸ್ಸಾಂ ಗಡಿಗೆ ಕರೆದೊಯ್ದು, ತಡರಾತ್ರಿ ಬಲವಂತವಾಗಿ ಬಾಂಗ್ಲಾದೇಶದ ಭೂಭಾಗಕ್ಕೆ ತಳ್ಳಲಾಗಿದೆ. ಕತ್ತಲೆಯಲ್ಲಿ ಕೆಸರುಮಯ ಹಾದಿಯಲ್ಲಿ ಸತತ ಎಂಟು ಗಂಟೆ ನಡೆದು ಬಂದ ಸಾಹಿದಾ, ಪ್ರಸ್ತುತ ಬಾಂಗ್ಲಾದೇಶದ ಸತ್ಖಿರಾ ಜಿಲ್ಲೆಯ ಅಪರಿಚಿತ ಕುಟುಂಬವೊಂದರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

image 162

“ನನ್ನನ್ನು ಭೀಕರ ಕತ್ತಲೆಯಲ್ಲಿ, ಕೆಸರು ತುಂಬಿದ ಗದ್ದೆಗಳ ಮೂಲಕ ಬಾಂಗ್ಲಾಗೆ ತಳ್ಳಿದರು. ನಾನು ನೂರಕ್ಕೆ ನೂರರಷ್ಟು ಭಾರತೀಯ ಪ್ರಜೆ. ನನ್ನ ಪುಟ್ಟ ಮಕ್ಕಳು ತಾಯಿಯಿಲ್ಲದೆ ಅನಾಥವಾಗಿದ್ದಾರೆ. ನಾನು ನನ್ನ ಮನೆಗೆ, ನನ್ನ ದೇಶಕ್ಕೆ ಮರಳಬೇಕು” ಎಂದು ಸಾಹಿದಾ ದೂರವಾಣಿ ಮೂಲಕ ಕಣ್ಣೀರಿಟ್ಟಿದ್ದಾರೆ.

ಈ ಲೇಖನ ಓದಿದ್ದೀರಾ?: ಪ್ರಯಾಗ್‌ರಾಜ್‌ನ ಛಾತ್ರೋಂ ಕೀ ಗೂಂಜ್: ಯುವಜನರ ಆಕ್ರೋಶಕ್ಕೆ ಹೊಸ ರಾಜಕೀಯ ಭಾಷ್ಯ ಬರೆದ ರಾಹುಲ್

ಮಾನವ ಹಕ್ಕುಗಳ ಸಂಘಟನೆಯಾದ ‘ಬಾಂಗ್ಲಾರ್ ಮನಾಬಧಿಕರ್ ಸುರಕ್ಷಾ ಮಂಚ’ (MASUM) ಕಲ್ಕತ್ತಾ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ಪ್ರಕಾರ, ಸಾಹಿದಾ ಅವರ ತಂದೆ ಮತ್ತು ತಾಯಿ ಉತ್ತರ 24 ಪರಗಣ ಜಿಲ್ಲೆಯ ಗೋಬಿಂದಾಪುರ ಗ್ರಾಮದ ಖಾಯಂ ನಿವಾಸಿಗಳಾಗಿದ್ದಾರೆ. 2002ರ ಮತದಾರರ ಪಟ್ಟಿಯಲ್ಲೂ ಇವರ ಹೆಸರಿದೆ. ಅಂತೆಯೇ, ಸಾಹಿದಾ ಅವರ ವೈಯಕ್ತಿಕ ಹೆಸರಿನಲ್ಲಿ ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜನನ ಪ್ರಮಾಣಪತ್ರ ಹಾಗೂ ಜಮೀನಿನ ಭೂ ದಾಖಲೆಗಳು ಇವೆ. ಹೀಗಿದ್ದರೂ, ಬಂಧನದ ನಂತರ ಕನಿಷ್ಠ 90 ಗಂಟೆಗಳ ಕಾಲ ಸಾಹಿದಾ ಅವರನ್ನು ಯಾವುದೇ ಮ್ಯಾಜಿಸ್ಟ್ರೇಟ್‌ರ ಮುಂದೆ ಹಾಜರುಪಡಿಸದೆ, ವಕೀಲರನ್ನು ಸಂಪರ್ಕಿಸಲು ಬಿಡದೆ ಗಡೀಪಾರು ಮಾಡಲಾಗಿದೆ.

image 163

ಕೇವಲ ಭಾಷೆ ಮತ್ತು ಧರ್ಮದ ಆಧಾರದ ಮೇಲೆ ಬಂಗಾಳಿ ಮಾತನಾಡುವ ಶ್ರಮಿಕರನ್ನು ‘ಅಕ್ರಮ ಬಾಂಗ್ಲಾದೇಶಿಗಳು’ ಎಂದು ಬಿಂಬಿಸಿ ಗಡೀಪಾರು ಮಾಡುತ್ತಿರುವ ಸರಣಿ ಘಟನೆಗಳ ಭಾಗವಾಗಿಯೇ ಈ ಕೃತ್ಯ ನಡೆದಿದೆ. ಇದೀಗ ಸಾಹಿದಾ ಅವರ ಪತಿ ಮತ್ತು ಕುಟುಂಬಸ್ಥರು ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೌಜನ್ಯ ಪ್ರಕರಣ | SIT ವಿರುದ್ಧ ತಾಯಿ ಕುಸುಮಾವತಿ ಅಸಮಾಧಾನ; ತನಿಖಾಧಿಕಾರಿ ಬದಲಾವಣೆಗೆ ಆಗ್ರಹ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್‌ನ...

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ ‘ಮಹಾಭಿಯೋಗ’ ನಡೆದಿದೆಯೇ?

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ...

‘ವೀರಮಣಿ ಅತ್ಯಾಚಾರ ಪ್ರಕರಣ ಮುಚ್ಚುವುದರ ಹಿಂದೆ ಯಾವ ಒಪ್ಪಂದವಿತ್ತು’?; ಡಿಎಂಕೆ ವಿರುದ್ಧ ಸಿಎಂ ವಿಜಯ್‌ ವಾಗ್ದಾಳಿ

ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ತಮಿಳುನಾಡಿನ ಆರ್‌....

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ...