ತರಬೇತಿಯಿಲ್ಲ, ಮೋಟಾರ್ ಬೋಟ್ ಇಲ್ಲ: ಅಸ್ಸಾಂ ಪ್ರವಾಹದಲ್ಲಿ 2,000 ಜನರನ್ನು ರಕ್ಷಿಸಿದ 10ನೇ ತರಗತಿ ಡ್ರಾಪ್‌ಔಟ್

Date:

ಯಾವುದೇ ಔಪಚಾರಿಕ ರಕ್ಷಣಾ ತರಬೇತಿಯಿಲ್ಲ, ಅತ್ಯಾಧುನಿಕ ಮೋಟಾರ್ ಬೋಟ್ ಕೂಡ ಇಲ್ಲ. ಆದರೂ, 10ನೇ ತರಗತಿಗೆ ಶಾಲೆಯಿಂದ ಹೊರಗುಳಿದಿದ್ದ (ಡ್ರಾಪ್‌ಔಟ್) 25 ವರ್ಷದ ಯುವಕನೊಬ್ಬ ಅಸ್ಸಾಂನ ಭೀಕರ ಪ್ರವಾಹದಲ್ಲಿ ಸುಮಾರು 2,000 ಜನರ ಜೀವ ಉಳಿಸುವ ಮೂಲಕ ಅಪ್ರತಿಮ ಸಾಹಸ ಮೆರೆದಿದ್ದಾನೆ.

- Advertisement -

ಜುಲೈ 19ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಶ್ರವಣ್ ಕುಮಾರ್ ಎಂಬ ಈ ಯುವಕ ಬಿಹುಬೋರ್‌ನ ದಿಕ್ಹೌ ನದಿ ತೀರಕ್ಕೆ ತೆರಳಿದ್ದ. ಪ್ರವಾಹದಲ್ಲಿ ತೇಲಿಬರುವ ಮರದ ದಿಮ್ಮಿಗಳನ್ನು ಸಂಗ್ರಹಿಸಿ, ಉರುವಲಾಗಿ ಬಳಸುವುದು ಆತನ ವಾಡಿಕೆಯಾಗಿತ್ತು. ಆದರೆ, ಅಂದು ನದಿಯ ರಭಸ ಮತ್ತು ದೈತ್ಯ ಮರಗಳು ಕೊಚ್ಚಿಕೊಂಡು ಬರುತ್ತಿದ್ದ ವೇಗವನ್ನು ಕಂಡು ಆತನಿಗೆ ಮುಂಬರುವ ಭೀಕರ ಪ್ರವಾಹದ ಮುನ್ಸೂಚನೆ ಸಿಕ್ಕಿತ್ತು. ಸೂರ್ಯೋದಯದ ಹೊತ್ತಿಗೆ ಆತನ ಊಹೆ ನಿಜವಾಗಿ, ಇಡೀ ಪ್ರದೇಶವೇ ಜಲಾವೃತಗೊಳ್ಳಲಾರಂಭಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ...

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ. ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ...

ಈ ವೇಳೆ ಸ್ವತಃ ಶ್ರವಣ್ ಮನೆಯೊಳಗೂ ನೀರು ನುಗ್ಗಿತ್ತು. ಆತನ ತಾಯಿ ಮತ್ತು ಸಹೋದರ ಮನೆಯ ವಸ್ತುಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಶ್ರವಣ್ ತನ್ನ ಮನೆಗೆ ಹೋಗಿ ಕುಟುಂಬದವರಿಗೆ ಸಹಾಯ ಮಾಡಬಹುದಿತ್ತು. ಆದರೆ, “ನಾನು ನನ್ನ ಮನೆಯವರನ್ನು ಮಾತ್ರ ರಕ್ಷಿಸಲು ಹೋದರೆ, ಉಳಿದವರನ್ನು ಕಾಪಾಡುವವರು ಯಾರು?” ಎಂದು ನಿರ್ಧರಿಸಿದ ಆತ, ಊರಿನ ಜನರ ರಕ್ಷಣೆಗೆ ಮುಂದಾದ. ಸ್ಥಳೀಯವಾಗಿ ಬಳಸುವ ‘ತುಲುಂಗಾ ನಾವೊ’ ಎಂಬ ಸಾಂಪ್ರದಾಯಿಕ ಮರದ ದೋಣಿಯನ್ನು ಬಳಸಿಕೊಂಡು, ತನ್ನ ಸ್ನೇಹಿತರ ಪಡೆಯೊಂದಿಗೆ ಕಾರ್ಯಾಚರಣೆಗಿಳಿದ.

ಅಂದು ಬೆಳಿಗ್ಗೆ 10 ಗಂಟೆಯಿಂದ ಮರುದಿನದವರೆಗೆ ಈ ಯುವಕರ ಪಡೆ ವಿಶ್ರಮಿಸಲಿಲ್ಲ. ನುರಿತ ದೋಣಿ ಚಾಲಕರೂ ನೀರಿಗಿಳಿಯಲು ಹೆದರುತ್ತಿದ್ದ ಪರಿಸ್ಥಿತಿಯಲ್ಲಿ, ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದರು. ಪ್ರವಾಹಕ್ಕೆ ಸಿಲುಕಿದ್ದ ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ರೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ ಗುರ್ತಿಸಿ ಸ್ಥಳಾಂತರಿಸಿದರು. ಮನೆಗಳ ಛಾವಣಿಯ ಮೇಲೆ ಹಾಗೂ ಚಾವಣಿಯೊಳಗೆ (ಸೀಲಿಂಗ್) ಸಿಲುಕಿದ್ದವರನ್ನೂ ಕತ್ತಲಲ್ಲಿಯೇ ಹುಡುಕಿ ರಕ್ಷಿಸಿದರು. ಶಿವಸಾಗರ ಜಿಲ್ಲೆಯ ನಜೀರಾ ಉಪ-ವಿಭಾಗದ ಐದು ಹಳ್ಳಿಗಳಲ್ಲಿ ಸತತ ಕಾರ್ಯಾಚರಣೆ ನಡೆಸಿ ಸುಮಾರು 2,000 ಜನರನ್ನು ಶ್ರವಣ್ ಮತ್ತು ಆತನ ತಂಡ ರಕ್ಷಿಸಿದೆ.

ಶನಿವಾರದ ವರದಿಗಳ ಪ್ರಕಾರ, ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಕೊಂಚ ಸುಧಾರಿಸಿದ್ದು, ಸಂತ್ರಸ್ತರ ಸಂಖ್ಯೆ 1.92 ಲಕ್ಷದಿಂದ 1.78 ಲಕ್ಷಕ್ಕೆ ಇಳಿಕೆಯಾಗಿದೆ. ಆದರೆ, ಪ್ರವಾಹ ಪೀಡಿತ ಜಿಲ್ಲೆಗಳ ಸಂಖ್ಯೆ 5ರಿಂದ 7ಕ್ಕೆ ಏರಿಕೆಯಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ತಿಳಿಸಿದೆ.

ಗೋಲಾಘಾಟ್, ಶಿವಸಾಗರ, ಚರೈದೇವ್, ಬಾಜಾಲಿ, ಧೇಮಾಜಿ, ಸೋನಿತ್‌ಪುರ ಮತ್ತು ಜೋರ್ಹತ್ ಜಿಲ್ಲೆಗಳ 349 ಹಳ್ಳಿಗಳು ಜಲಾವೃತಗೊಂಡಿವೆ. ಇದರಲ್ಲಿ ಚರೈದೇವ್ ಜಿಲ್ಲೆ ಅತಿ ಹೆಚ್ಚು ಹಾನಿಗೊಳಗಾಗಿದ್ದು, 75,199 ಜನರು ಸಂತ್ರಸ್ತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಹೊಸ ಪ್ರಾಣಹಾನಿ ವರದಿಯಾಗಿಲ್ಲ, ಈವರೆಗಿನ ಒಟ್ಟು ಸಾವಿನ ಸಂಖ್ಯೆ 82ರಲ್ಲೇ ಮುಂದುವರಿದಿದೆ. ಶಿವಸಾಗರದ ದಿಕ್ಹೌ ನದಿ ಮತ್ತು ಗೋಲಾಘಾಟ್‌ನ ಧನಸಿರಿ ನದಿಗಳು ಈಗಲೂ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ರಾಜ್ಯದಾದ್ಯಂತ 44 ಪರಿಹಾರ ಶಿಬಿರಗಳು ಕಾರ್ಯಾಚರಿಸುತ್ತಿದ್ದು, ಸುಮಾರು 15,000 ಜನರಿಗೆ ಆಶ್ರಯ ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಸಮಾಜದ ಅಭಿವೃದ್ಧಿಯಲ್ಲಿ ಎಂಜಿನಿಯರ್‌ ಪಾತ್ರ ಮಹತ್ವದ್ದು: ರಾಕೇಶ್ ಗೋಪಾಲ್ ಜೋಶಿ

ಸಮಾಜದ ಅಭಿವೃದ್ಧಿ, ದೇಶದ ಪ್ರಗತಿಯಲ್ಲಿ ಎಂಜಿನಿಯರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು...

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ ಶಕ್ತಿಗೆ ಕತ್ತರಿ

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ...

ಮೋದಿಯ ಮೋಸದ UPI ಶುಲ್ಕ ನೀತಿ; ತೀವ್ರ ವಿರೋಧದ ನಡುವೆಯೂ ಜಾರಿಗೆ ಮುಂದಾದ ಕೇಂದ್ರ

₹2,000ಕ್ಕಿಂತ ಹೆಚ್ಚಿನ UPI ವಹಿವಾಟುಗಳಿಗೆ ಪ್ರಸ್ತಾಪಿಸಿರುವ ಶೇ 0.4ರಷ್ಟು ಮರ್ಚೆಂಟ್ ಡಿಸ್ಕೌಂಟ್...

ಕಲಬುರಗಿ | ಪಿಎಸ್‌ಐ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾದ ಪೊಲೀಸ್ ಪೇದೆ

ಖಾಕಿ ಧರಿಸಿ ರಕ್ಷಣೆ ಮಾಡಬೇಕಾದವರೇ ಅಪರಾಧ ಕೃತ್ಯಕ್ಕೆ ಇಳಿದಿರುವ ಘಟನೆ...