ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ, ಮಂದಿರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗೆ ಪೊಲೀಸ್ ಪರಿಶೀಲನೆ ಹಾಗೂ ಚಾರಿತ್ರ್ಯ ಪ್ರಮಾಣಪತ್ರವನ್ನು (Character Certificate) ಕಡ್ಡಾಯಗೊಳಿಸಲಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಮಂದಿರದ ಪ್ರತಿಯೊಬ್ಬ ಉದ್ಯೋಗಿಯ ಹಿನ್ನೆಲೆ ಪರಿಶೀಲನೆಯನ್ನು ಕಟ್ಟುನಿಟ್ಟಾಗಿ ನಡೆಸಲು ಮುಂದಾಗಿದೆ. ಮಂದಿರದ ನೌಕರರು ಪೊಲೀಸ್ ಇಲಾಖೆಯಿಂದ ಪಡೆದ ಚಾರಿತ್ರ್ಯ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಇದರೊಂದಿಗೆ ನೌಕರರ ವೈಯಕ್ತಿಕ ವಿವರಗಳು, ಕುಟುಂಬದ ಹಿನ್ನೆಲೆ ಹಾಗೂ ಬಂಧು- ಬಳಗದ ಸಂಪೂರ್ಣ ಮಾಹಿತಿಯನ್ನು ಟ್ರಸ್ಟ್ ಸಂಗ್ರಹಿಸುತ್ತಿದೆ.
ಇದನ್ನೂ ಓದಿ: ರಾಮಮಂದಿರ ಲೂಟಿ: ಆರೋಪಿಗಳ ಪರ ವಾದಿಸದಿರಲು ಅಯೋಧ್ಯೆಯ ವಕೀಲರ ನಿರ್ಧಾರ
ಈ ವರ್ಷದ ಜೂನ್ ತಿಂಗಳಿನಲ್ಲಿ ರಾಮಮಂದಿರದ ದೇಣಿಗೆ ಎಣಿಕೆ ವೇಳೆ ಹಣ ದುರುಪಯೋಗ ಮತ್ತು ಕಳವು ಪ್ರಕರಣ ಹೊರಬಿದ್ದಿದೆ. ಇದರ ತನಿಖೆ ನಂತರ ಟ್ರಸ್ಟ್ ಭದ್ರತೆಯನ್ನು ತೀವ್ರಗೊಳಿಸಿದೆ. ನೂತನವಾಗಿ ನೇಮಕಗೊಂಡಿರುವ ಸಿಇಒ ಜಿತೇಂದ್ರ ಮಿಶ್ರಾ ಅವರ ನೇತೃತ್ವದಲ್ಲಿ ಮಂದಿರದ ನಿರ್ವಹಣಾ ವ್ಯವಸ್ಥೆಯನ್ನು ಬದಲಾಯಿಸಲಾಗುತ್ತಿದೆ. ಕಾಣಿಕೆ ಎಣಿಕೆ ಕಾರ್ಯಕ್ಕೆ ಪ್ರತ್ಯೇಕ ಮತ್ತು ವಿಶೇಷ ತಂಡವನ್ನು ನಿಯೋಜಿಸಲಾಗಿದ್ದು, ಅವರಿಗೆ ಜೇಬುಗಳಿಲ್ಲದ ಸಮವಸ್ತ್ರ ಸೇರಿದಂತೆ ಹಲವು ಶಿಸ್ತುಕ್ರಮಗಳನ್ನು ಜಾರಿಗೆ ತರಲಾಗಿದೆ.
ಈ ನಡುವೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸಿಬ್ಬಂದಿಗೂ ಈ ಪೊಲೀಸ್ ವೆರಿಫಿಕೇಷನ್; ಪ್ರಮಾಣಪತ್ರ ಪಡೆಯುವ ನಿಯಮ ಅನ್ವಯವಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.




