ಗುಜರಾತ್ ಸಂಪುಟ ಪುನಾರಚನೆ | ಕ್ರಿಕೆಟಿಗ ಜಡೇಜಾ ಪತ್ನಿ ಸೇರಿ 19 ಮಂದಿ ಹೊಸಬರಿಗೆ ಸಚಿವಗಿರಿ

Date:

ಶುಕ್ರವಾರ ಗುಜರಾತ್ ಸಂಪುಟ ಪುನಾರಚನೆಯಾಗಿದ್ದು, ಗೃಹ ಸಚಿವ ಹರ್ಷಾ ಸಂಘವಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಸೇರಿದಂತೆ ಒಟ್ಟು 19 ಮಂದಿ ಹೊಸಬರಿಗೆ ಸಚಿವಗಿರಿ ನೀಡಲಾಗಿದೆ. ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ 26 ಸಚಿವರಿಗೆ ಪ್ರಮಾಣವಚನ ಬೋಧಿಸಿದರು.

- Advertisement -

ಹೊಸ ನಾಯಕರು ಕೈಯಲ್ಲಿ ಭಗವದ್ಗೀತೆಯನ್ನು ಹಿಡಿದು ಪ್ರಮಾಣವಚನ ಸ್ವೀಕರಿಸಿದರು. ಸಾಮಾನ್ಯವಾಗಿ ಪ್ರಮಾಣವಚನ ಸ್ವೀಕರಿಸುವಾಗ ಯಾವುದೇ ಧರ್ಮಕ್ಕೆ ಸೇರಿದ ಪುಸ್ತಕಗಳನ್ನು ಇಟ್ಟುಕೊಳ್ಳುವುದಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಇದನ್ನು ಓದಿದ್ದೀರಾ? ಗುಜರಾತ್ | ಸಂಪುಟ ಪುನರ್‌ ರಚನೆ: ಸಿಎಂ ಪಟೇಲ್ ವಿನಾ ಎಲ್ಲ ಸಚಿವರ ರಾಜೀನಾಮೆ

ಇನ್ನು ಹಲವು ಹಳೆಯ ಮತ್ತು ಕಾಂಗ್ರೆಸ್ ಮೂಲದ ಸಚಿವರನ್ನು ತೆಗೆದುಹಾಕಲಾಗಿದೆ. ಹೊಸ ಸಚಿವ ಸಂಪುಟದಲ್ಲಿ ಹಳಬರು ಮತ್ತು ಕಾಂಗ್ರೆಸ್ ಮೂಲದ ಸಚಿವರನ್ನು ತೆಗೆದುಹಾಕಲಾಗಿದೆ. ಹೊಸ ಸಂಪುಟದಲ್ಲಿ ಏಳು ಮಂದಿ ಪಾಟಿದಾರ್‌, ಎಂಟು ಮಂದಿ ಒಬಿಸಿ, ಮೂವರು ಪರಿಶಿಷ್ಟ ಜಾತಿಗಳು, ನಾಲ್ವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಮೂವರು ಮಹಿಳೆಯರಾಗಿದ್ದಾರೆ.

26 ಸಚಿವರಲ್ಲಿ ಕೇವಲ ಆರು ಮಂದಿ ಮಾತ್ರ ಈ ಹಿಂದಿನ ಸಚಿವರು. ಹತ್ತು ಮಂದಿಯನ್ನು ಸಂಪುಟದಿಂದ ಕೈಬಿಡಲಾಗಿದೆ. 19 ಮಂದಿಯನ್ನು ಹೊಸದಾಗಿ ಸಂಪುಟ ಸೇರಿಸಲಾಗಿದೆ. ಬಿಜೆಪಿಯು 2027ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಸಂಪುಟ ಪುನಾರಚನೆ ಮಾಡಿದಂತಿದೆ.

ಹಿಂದಿನ ಸಂಪುಟದಲ್ಲಿದ್ದ ಕುನ್ವರ್ಜಿ ಬವಾಲಿಯಾ ಮತ್ತು ಅರ್ಜುನ್ ಮೋಧ್ವಾಡಿಯಾ ಮಾತ್ರ ಮತ್ತೆ ಸಚಿವ ಸ್ಥಾನ ಪಡೆದಿದ್ದಾರೆ. ಉಳಿದಂತೆ ಬಲವಂತ್‌ಸಿನ್ಹ ರಜಪೂತ್, ಭಿಖುಸಿನ್ಹ ಪರ್ಮಾರ್, ಕುನ್ವರ್ಜಿ ಹಲ್ಪತಿ ಮತ್ತು ರಾಘವ್‌ಜಿ ಪಟೇಲ್ ಅವರನ್ನು ತೆಗೆದುಹಾಕಲಾಗಿದೆ.

ಗುಜರಾತ್ ಈವರೆಗೆ ಐವರು ಉಪ ಮುಖ್ಯಮಂತ್ರಿಗಳನ್ನು ಮಾತ್ರ ಕಂಡಿದೆ. ಚಿಮನ್ ಪಟೇಲ್ ಮತ್ತು ಕಾಂತಿಲಾಲ್ ಘಿಯಾ (1972), ಕೇಶುಭಾಯಿ ಪಟೇಲ್ (1990), ನರಹರಿ ಅಮೀನ್ (1994), ಮತ್ತು ರೂಪಾನಿ ಮುಖ್ಯಮಂತ್ರಿಯಾಗಿದ್ದಾಗ ನಿತಿನ್ ಪಟೇಲ್ ಡಿಸಿಎಂ ಆಗಿದ್ದರು. ಅದಾದ ಬಳಿಕ ಇದೀಗ ಸಂಘವಿ ಡಿಸಿಎಂ ಆಗಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ | ರಸ್ತೆ ಕಳಪೆ ಕಾಮಗಾರಿ ಪ್ರಶ್ನಿಸಿದಕ್ಕೆ ಹಲ್ಲೆ; ಯುವಕನ ಕಪಾಳಕ್ಕೆ ಹೊಡೆದ ದುರಹಂಕಾರಿ ಸಚಿವ

ದೆಹಲಿಯಲ್ಲಿ ಸಚಿವ ಪರ್ವೇಶ್ ವರ್ಮಾ ಅವರು ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾದ...

ಪಂಜಾಬ್: ಎಲ್‌ಪಿಯು ‘ವಿವಿ’ಯಲ್ಲಿ ಅತ್ಯಾಚಾರ ಆರೋಪ; ಭುಗಿಲೆದ್ದ ಪ್ರತಿಭಟನೆ, ತರಗತಿಗಳು ರದ್ದು

ಪಂಜಾಬ್‌ನ ಫಗ್ವಾರಾದಲ್ಲಿರುವ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ (ಎಲ್‌ಪಿಯು) ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ...

3 ದಿನಗಳ ಬ್ಯಾಂಕ್ ಮುಷ್ಕರ ವಾಪಸ್: ವಾರಕ್ಕೆ 5 ದಿನ ಕೆಲಸದ ಪರಿಶೀಲನೆಗೆ ಸಮಿತಿ

ಸಾರ್ವಜನಿಕ ವಲಯದ ಬ್ಯಾಂಕ್‌ ನೌಕರರ ಒಕ್ಕೂಟವು (ಯುಎಫ್‌ಬಿಯು) ಸೋಮವಾರದಿಂದ ಹಮ್ಮಿಕೊಂಡಿದ್ದ ಮೂರು...

2017ರಲ್ಲಿ ಚುನಾವಣಾ ಆಯೋಗವನ್ನು ನಂಬಿದ್ದೆವು, ಆದರೆ 2022ರಲ್ಲಿ ಎಸ್‌ಪಿ ಮತಗಳನ್ನು ಇಸಿ ಅಳಿಸಿದೆ: ಅಖಿಲೇಶ್ ಆರೋಪ

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಬೆಂಬಲಿಗರ...