ಡಾ.ಅಂಬರೀಶ್ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Date:

  • ಸಿಎಂರಿಂದ ರೇಸ್ ಕೋರ್ಸ್ ರಸ್ತೆಯ ಅಂಬರೀಶ್ ನಾಮಫಲಕ ಅನಾವರಣ
  • ಅಂಬರೀಶ್ ಸ್ಮಾರಕವನ್ನೂ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಕರ್ನಾಟಕದ ರೆಬಲ್ ಸ್ಟಾರ್, ಎಲ್ಲರ ಮನಸ್ಸನ್ನು ಗೆದ್ದಅಂಬರೀಶ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸೋವಾರ ಸಂಜೆ, ಮೌರ್ಯ ಸರ್ಕಲ್‌ನಿಂದ ಬಸವೇಶ್ವರ ವೃತ್ತದ ವರೆಗಿನ ರೇಸ್ ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್ ಡಾ.ಎಂ.ಹೆಚ್.ಅಂಬರೀಶ್ ರಸ್ತೆ ಎಂದು ನಾಮಕರಣ ಮಾಡಿ ಅದರ ನಾಮಫಲಕವನ್ನು ಸಿಎಂ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಅವರು, ಅಂಬರೀಶ್ ಅವರ ನೆನಪಿಗಾಗಿ ಇವತ್ತು ರೇಸ್ ಕೋರ್ಸ್ ರಸ್ತೆಗೆ ಅವರ ಹೆಸರನ್ನೇ ನಾಮಕರಣ ಮಾಡಿ, ಅದರ ಫಲಕವನ್ನು ಉದ್ಘಾಟಿಸುತ್ತಿದ್ದೇನೆ. ಇದು ಅವರು ಹೆಚ್ಚು ಓಡಾಡಿದ ಸ್ಥಳ. ಎಲ್ಲ ಅಭಿಮಾನಿಗಳ ಒತ್ತಾಸೆ ಮೇರೆಗೆ ಇವತ್ತು ಇವರ ಹೆಸರನ್ನು ಇಟ್ಟಿದ್ದೇವೆ.

ಅಂಬರೀಶ್ ಅವರು ನನ್ನ ಮಿತ್ರರು. ಅವರ ಜೀವನ ತೆರೆದ ಪುಸ್ತಕ. ಹಲವಾರು ಬಾರಿ ಬೇಟಿಯಾಗಬೇಕು ಅಂದಾಗ ಅಲ್ಲೇ ರೇಸ್ ಕೋರ್ಸ್ ನಲ್ಲಿ ಇರುತ್ತೇನೆ ಬಾರಯ್ಯ ಎನ್ನುತ್ತಿದ್ದರು. ಅವರ ಹೆಸರನ್ನು ಬಿಟ್ಟು ಬೇರೆ ಯಾವ ಹೆಸರು ಈ ರಸ್ತೆಗೆ ಸೂಕ್ತವಲ್ಲ ಎಂದು ಬೊಮ್ಮಾಯಿ ಹೇಳಿದರು.

ಈ ಸುದ್ದಿ ಓದಿದ್ದೀರಾ? :ಇಂದು ಬೊಮ್ಮಾಯಿ, ಅಂದು ಯಡಿಯೂರಪ್ಪ; ಆತಂಕ ಮೂಡಿಸಿದ ಹೆಲಿಕಾಪ್ಟರ್…

ರೀಲ್ ಆ್ಯಂಡ್ ರಿಯಲ್ ಲೈಫ್ ಎರಡು ಒಂದೆಯಾಗಿದ್ದು, ನೇರ ವ್ಯಕ್ತಿತ್ವ ಅವರದ್ದಾಗಿತ್ತು.ಕ್ರೀಡೆಯಲ್ಲೂ ಪ್ರತಿಭೆಯನ್ನು ಹೊಂದಿದ್ದ ಅವರು, ಸಾರ್ವಜನಿಕ ಜೀವನಕ್ಕೆ ಬಂದಮೇಲೆ ವಸತಿ ಸಚಿವರಾಗಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ.

ಕಾವೇರಿ ವಿಚಾರ ಬಂದಾಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರು. ಅಧಿಕಾರ ಅವರನ್ನು ಹುಡುಕಿಕೊಂಡು ಬರುತ್ತಿತ್ತು ಎಂದ ಬೊಮ್ಮಾಯಿ ಹೇಳಿದರು. ಬಳಿಕ ಕಂಠೀರವ ಸ್ಟುಡಿಯೋ ಆವರಣದಲ್ಲಿನ ಅಂಬರೀಶ್ ಅವರ ಸ್ಮಾರಕವನ್ನೂ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಅಂಬರೀಶ್ ಪತ್ನಿ, ಸಂಸದೆ ಸುಮಲತಾ, ಪುತ್ರ ಅಭಿಷೇಕ್ ಅಂಬರೀಶ್, ನಟ ರಾಘವೇಂದ್ರ ರಾಜ್ ಕುಮಾರ್, ಫಿಲಂ ಚೇಂಬರ್ ಅಧ್ಯಕ್ಷ ಭಾ.ಮ ಹರೀಶ್ , ರಾಕ್ ಲೈನ್ ವೆಂಕಟೇಶ್, ಚಿನ್ನೆಗೌಡರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

3ನೇ ಕಂತಿಗಾಗಿ ಮತ್ತೆ ಬಂದ ಸುರ್ಜೇವಾಲ: ಸಿ ಟಿ ರವಿ ಆರೋಪ

ಕಾಂಗ್ರೆಸ್ ಯಾವಾಗಲೂ ಚುನಾವಣೆ ನಡೆಸುವುದೇ ಕಡೇ 3 ದಿನದಲ್ಲಿ ...

ಜನತಾ ದರ್ಶನದ ಮೂಲಕ ರಾಜ್ಯದ ‘ಆಡಳಿತ’ ಸಿಎಂಗೆ ಮನವರಿಕೆಯಾಗಿರಬಹುದು: ಕುಮಾರಸ್ವಾಮಿ

ಎಲ್ಲದಕ್ಕೂ ಸರ್ಕಾರವನ್ನು ಟೀಕಿಸಲ್ಲ ಎಂದ ಜೆಡಿಎಸ್ ರಾಜ್ಯಾಧ್ಯಕ್ಷ ನಮ್ಮ ಶಕ್ತಿ...