ಸಿಜೆಪಿ ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ದಮನಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಪ್ರತಿಭಟನೆ ವಿರುದ್ಧ ನಿಯೋಜಿಸಲಾಗಿದ್ದ ಭದ್ರತಾ ಪಡೆ – ಎನ್‌ಸಿಸಿ – ಯುವನೊಬ್ಬ ಮೋದಿ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಜೆಪಿಯನ್ನು ಈ ದೇಶದಲ್ಲಿ ಇರಲು ಬಿಡಲೇಬಾರದು. ನಮ್ಮ ಸಮಯವೂ ಬಂದೇ ಬರುತ್ತದೆ, ಆಗ ನಾವು ಸೂಕ್ತ ಉತ್ತರ ನೀಡಲಿದ್ದೇವೆ. ಕೇವಲ ರಾಜೀನಾಮೆಯಿಂದ ಏನೂ ಆಗುವುದಿಲ್ಲ, ಸಂಪೂರ್ಣ ಚುನಾವಣಾ ವ್ಯವಸ್ಥೆಯನ್ನೇ ಬದಲಾಯಿಸಬೇಕಾಗಿದೆ. ಹಾಗಾದಾಗ ಮಾತ್ರ ನಮಗೆ ನೆಮ್ಮದಿ ಸಿಗಲಿದೆ” ಎಂದು ಕಿಡಿಕಾರಿದ್ದಾರೆ.
ಅವರು ಮತಾನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ಲಾಠಿಚಾರ್ಜ್ ನಡೆಸಿದ ಪೊಲೀಸರಲ್ಲಿ 50%ರಷ್ಟು ಜನರು ಗೂಂಡಾಗಳು ಮತ್ತು ಆರ್‌ಎಸ್‌ಎಸ್ ಬೆಂಬಲಿಗರಾಗಿದ್ದರು. ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆ ಕುಳಿತು ಗಲಾಟೆ ನಡೆಸುತ್ತಿದ್ದವರು ಸಹ ಗೂಂಡಾಗಳೇ ಆಗಿದ್ದರು. ಹೆಣ್ಣುಮಕ್ಕಳ ಬಟ್ಟೆ ಹರಿಯುವುದು, ದೇಹದ ಸೂಕ್ಷ್ಮ ಭಾಗಗಳಿಗೆ ಕರುಣೆಯಿಲ್ಲದೆ ಲಾಠಿಯಿಂದ ಹೊಡೆಯುವುದು ಕ್ರೌರ್ಯದ ಪರಮಾವಧಿ. ನೆಮ್ ಪ್ಲೇಟ್ ಇಲ್ಲದೆ, ಸಮವಸ್ತ್ರವಿಲ್ಲದೆ ಹಾಗೂ ಹೆಲ್ಮೆಟ್ ಧರಿಸದೆ ಬಂದಿದ್ದವರೆಲ್ಲರೂ ಗೂಂಡಾಗಳಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
The security forces (NCC) deployed in Delhi started speaking भाजपा को देश में रखना ही नहीं है। https://t.co/NUfaSDc4k7
— Dr. SP (@sphavisha) October 10, 2026
“ದೆಹಲಿ ಪೊಲೀಸರ ಇಡಿ ದಮನವು ಸರ್ಕಾರ ಹೆಣೆದಿದ್ದ ಪೂರ್ಣ ನಿಯೋಜಿತ ಸಂಚಾಗಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರವು ಈ ರೀತಿಯ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ” ಎಂದು ದೂರಿದ್ದಾರೆ.




