ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700 ಕೋಟಿ ನಾಮ!

Date:

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ ಬೆನ್ನಿನ ಹಿಂದೆ ನಡೆದಿರುವ ನಿಯಮ ಬದಲಾವಣೆ ಮತ್ತು ಸಾಲಗಾರರು ಎದುರಿಸಿದ 97,700 ಕೋಟಿ ರೂಗಳಿಗೂ ಅಧಿಕ ಬೃಹತ್ ʼಹೇರ್‌ಕಟ್ʼ‌ನ ಕಥೆಯೇ ಒಂದು ರೋಚಕ.

ಭಾಗ-1

- Advertisement -

ಭಾರತದ ಕಾರ್ಪೊರೇಟ್ ಮತ್ತು ಆರ್ಥಿಕ ವಲಯದಲ್ಲಿ ಕಳೆದ ಕೆಲವು ವರ್ಷಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿರುವ ದಿವಾಳಿತನ ಮತ್ತು ಪುನಶ್ಚೇತನ (Insolvency and Bankruptcy) ಪ್ರಕ್ರಿಯೆಗಳ ಕುರಿತು ಅಂದರೆ, ಸಾಲ ತೀರಿಸಲಾಗದ ಕಂಪನಿಯನ್ನು ಮುಚ್ಚಬೇಕೇ ಅಥವಾ ಮತ್ತೆ ಲಾಭದ ಹಾದಿಗೆ ತರಬೇಕೇ ಎಂದು ನಿರ್ಧರಿಸುವ ಪ್ರಕ್ರಿಯೆ ಕುರಿತು ಸ್ವತಂತ್ರ ಸುದ್ದಿ ಮಾಧ್ಯಮ ‘ನ್ಯೂಸ್‌ಲಾಂಡ್ರಿ’ (Newslaundry) ಅತ್ಯಂತ ವಿಸ್ತೃತವಾದ ತನಿಖಾ ವರದಿಯೊಂದನ್ನು ಹೊರಹಾಕಿದೆ. ಸಾವಿರಾರು ಕೋಟಿ ರೂಪಾಯಿಗಳ ಸಾರ್ವಜನಿಕ ಹಣ ನೀರಿನಂತೆ ಪೋಲಾಗುತ್ತಿರುವಾಗ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಅಪಾರ ಪ್ರಮಾಣದ ನಷ್ಟ ಎದುರಿಸುತ್ತಿರುವಾಗ, ನ್ಯಾಯಾಲಯಗಳು ಹಾಗೂ ನ್ಯಾಯಮಂಡಳಿಗಳು ದಿವಾಳಿತನ ಪ್ರಕ್ರಿಯೆಗಳಲ್ಲಿ ಎಷ್ಟರ ಮಟ್ಟಿಗೆ ಹಸ್ತಕ್ಷೇಪ ಮಾಡಬಹುದು ಮತ್ತು ಸಾಲಗಾರರ ಸಮಿತಿಯ (CoC) ನಿರ್ಧಾರಗಳು ಎಷ್ಟು ಪಾರದರ್ಶಕವಾಗಿರುತ್ತವೆ ಎಂಬಿತ್ಯಾದಿ ಗಂಭೀರ ಪ್ರಶ್ನೆಗಳ ಮೇಲೆ ಈ ವರದಿ ಬೆಳಕು ಚೆಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಈ ಟೂರ್ನಮೆಂಟ್‌ನಲ್ಲಿ ಅತ್ಯಂತ ದೊಡ್ಡ ಆಟಗಾರನಾಗಿ ಹೊರಹೊಮ್ಮಿರುವ ಅದಾನಿ ಗ್ರೂಪ್‌ನ ಕಾರ್ಯವೈಖರಿ ಮತ್ತು ಯಶಸ್ಸಿನ ದಾಖಲೆಗಳನ್ನು ನ್ಯೂಸ್‌ಲಾಂಡ್ರಿ ಈ ವರದಿಯಲ್ಲಿ ಕೂಲಂಕಷವಾಗಿ ವಿಶ್ಲೇಷಿಸಿದೆ. ದಿವಾಳಿತನ ಪ್ರಕ್ರಿಯೆಗಳ ಮೂಲಕ ಅತ್ಯಂತ ಯಶಸ್ವಿಯಾಗಿ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿರುವ ಅದಾನಿ ಗ್ರೂಪ್, ಸ್ವಾಧೀನಪಡಿಸಿಕೊಂಡ ಒಟ್ಟು ಕಂಪನಿಗಳ ಸಂಖ್ಯೆ ಹಾಗೂ ಮೊತ್ತದ ಆಧಾರದ ಮೇಲೆ ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ರೋಚಕ ಕಥೆಯನ್ನ ವರದಿ ಮೂಲಕ ಬಿಚ್ಚಿಡಲಾಗಿದೆ.

2018ರಿಂದೀಚೆಗೆ ಅದಾನಿ ಗ್ರೂಪ್, ಅದರ ಒಡನಾಡಿ ಸಂಸ್ಥೆಗಳು ಮತ್ತು ಒಕ್ಕೂಟಗಳು ಒಟ್ಟು 26 ಸಂಕಷ್ಟಕ್ಕೀಡಾದ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಬಿಡ್‌ಗಳಲ್ಲಿ ಭಾಗವಹಿಸಿವೆ. ಈ ಪೈಕಿ ಒಟ್ಟು 16 ಕಂಪನಿಗಳನ್ನು ಅದಾನಿ ಗ್ರೂಪ್ ಯಶಸ್ವಿಯಾಗಿ ತನ್ನದಾಗಿಸಿಕೊಂಡಿದೆ (ಒಂದು ಪ್ರಕರಣ ಪ್ರಸ್ತುತ ಬಾಕಿ ಇದೆ, ಆದಾಗ್ಯೂ ಇತ್ತೀಚಿನ ತೀರ್ಪು ಅದಾನಿ ಪರವಾಗಿ ಬಂದಿದೆ). ಸುಮಾರು ಪ್ರತಿ 5 ಬಿಡ್‌ಗಳಲ್ಲಿ 3 ಅನ್ನು ಅದಾನಿ ಗ್ರೂಪ್ ಗೆದ್ದುಕೊಂಡಿದೆ. ಈ ಸ್ವಾಧೀನಗಳಲ್ಲಿ 14 ಕಂಪನಿಗಳು ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆ (CIRP) ಮೂಲಕ ಮರುಜೀವ ಪಡೆದರೆ, ಉಳಿದ 2 ಕಂಪನಿಗಳು ಲಿಕ್ವಿಡೇಶನ್ (ಸ್ವತ್ತುಗಳ ಮಾರಾಟ) ಮೂಲಕ ವಿಲೇವಾರಿಯಾಗಿವೆ.

ಅದಾನಿ ಗೆದ್ದುಕೊಂಡ 16 ಕಂಪನಿಗಳಲ್ಲಿ 13 ಕಂಪನಿಗಳ ಸಾರ್ವಜನಿಕ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಇದರಲ್ಲಿ ವಿದ್ಯುತ್ ಸ್ಥಾವರಗಳು, 2 ಬಂದರುಗಳು, ಸಿಮೆಂಟ್ ಆಸ್ತಿಗಳು, ರಕ್ಷಣಾ ಉತ್ಪಾದನೆ ಮತ್ತು ಮುಂಬೈನ ಪ್ರಮುಖ ರಿಯಲ್ ಎಸ್ಟೇಟ್ ಯೋಜನೆಗಳು ಸೇರಿವೆ.

ದಿವಾಳಿತನ ಮತ್ತು ದಿವಾಳಿತನ ಸಂಹಿತೆ (IBC) ನಿಯಮಗಳ ಅಡಿಯಲ್ಲಿ ಇಡೀ ಪ್ರಕ್ರಿಯೆಯು ಕಟ್ಟುನಿಟ್ಟಾದ ಕಾನೂನಿನ ಚೌಕಟ್ಟಿನಲ್ಲಿ ನಡೆಯಬೇಕು. ಆದರೆ ಅದಾನಿ ಗ್ರೂಪ್‌ನ ಬಿಡ್‌ ವೃತ್ತಾಂತದಲ್ಲಿ ಕೆಲವು ಆಘಾತಕಾರಿ ಅಂಶಗಳು ಬಯಲಾಗಿವೆ.

ಭಾರತದ ದಿವಾಳಿತನ ಕಾನೂನು (IBC) ಬಂದು 10 ವರ್ಷಗಳಾಗಿವೆ. ಈ ಕಾನೂನಿನಡಿ ಕೆಲವೇ ಕೆಲವು ಹಣಕಾಸು ಸಾಲಗಾರರಿಗೆ ಮಾತ್ರ ನಿರ್ಧಾರಾಧಿಕಾರವಿರುತ್ತದೆ. ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳು ಅವರ ನಿರ್ಧಾರಗಳನ್ನು ಪ್ರಶ್ನಿಸುವುದನ್ನು ಸೀಮಿತಗೊಳಿಸುತ್ತದೆ. ಇಲ್ಲಿ ಕಂಪನಿಗಳು ಮಾಡಿರುವ ಸಾಲದ ಹಣವು ಸಾರ್ವಜನಿಕರದ್ದಾಗಿದೆ. ಅಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಮತ್ತು ಯೆಸ್ ಬ್ಯಾಂಕ್ ಜೊತೆಗೆ ಪವರ್ ಫೈನಾನ್ಸ್ ಕಾರ್ಪೊರೇಷನ್ (PFC), REC, IIFCL, EXIM ಬ್ಯಾಂಕ್ ಮತ್ತು IFCI ಮುಂತಾದ ಸರ್ಕಾರಿ ಬೆಂಬಲಿತ ಹಣಕಾಸು ಸಂಸ್ಥೆಗಳು ಮತ್ತು ವಿಮಾ ಕಂಪನಿಗಳು ಈ ಸಾಲಗಳಲ್ಲಿ ದೊಡ್ಡ ಪಾಲು ಹೊಂದಿವೆ.

ಮಾರ್ಚ್ 2026ರ ಅಂಕಿಅಂಶಗಳ ಪ್ರಕಾರ, ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಂಡ 16 ಕಂಪನಿಗಳಿಂದ ಸಾಲಗಾರರಿಗೆ ಒಟ್ಟು ₹1.31 ಲಕ್ಷ ಕೋಟಿ ಬರಬೇಕಿತ್ತು. ಆದರೆ ವಾಪಸ್ ಸಿಕ್ಕಿದ್ದು ಕೇವಲ ₹33,000 ಕೋಟಿ ಮಾತ್ರ. ಅಂದರೆ ಸರಾಸರಿ ಶೇಕಡಾ 69.4 ರಷ್ಟು ಹೇರ್‌ಕಟ್ (ಸಾಲದಾತರು ತಮಗೆ ಬರಬೇಕಾದ ಒಟ್ಟು ಸಾಲದಲ್ಲಿ ವಾಪಸ್‌ ಪಡೆಯಲಾಗದೆ ಬಿಟ್ಟ ಮೊತ್ತ ಅಥವಾ ನಷ್ಟದ ಪ್ರಮಾಣ) ಸಂಭವಿಸಿದೆ. ಅಂದರೆ ಶೇಕಡಾ 74.6 ರಷ್ಟು ಬೃಹತ್ ಹೇರ್‌ಕಟ್‌ಗೆ ಸಾಲಗಾರರು ತುತ್ತಾಗಿದ್ದು, ಸುಮಾರು 97,700 ಕೋಟಿ ರೂ.ಗಳಿಗೂ ಅಧಿಕ ಸಾರ್ವಜನಿಕ ಹಣ ನಷ್ಟವಾಗಿದೆ.

2023ರ ಫೆಬ್ರವರಿಯಲ್ಲಿ ದಿವಾಳಿ ಪ್ರಕ್ರಿಯೆಯಲ್ಲಿದ್ದ ಲ್ಯಾಂಕೊ ಅಮರ್‌ಕಂಟಕ್‌ ವಿದ್ಯುತ್‌ ಕಂಪನಿಯ ಬಿಡ್ಡಿಂಗ್‌ ವೇಳೆ ಸಾಲದಾತರ ಸಮಿತಿಯು ಪವರ್‌ ಫೈನಾನ್ಸ್‌ ಕಾರ್ಪೊರೇಷನ್‌ (PFC) ಮತ್ತು ಆರ್‌ಇಸಿ (REC) ಒಕ್ಕೂಟದ ₹3,020 ಕೋಟಿ ಮೊತ್ತದ ಪರಿಹಾರ ಯೋಜನೆಯನ್ನು ಆಯ್ಕೆ ಮಾಡಿ, ಅನುಮೋದನೆಗಾಗಿ NCLTಗೆ ಸಲ್ಲಿಸಿತ್ತು. ಆದರೆ, ಬಳಿಕ ಅದಾನಿ ಪವರ್‌, ಜಿಂದಾಲ್‌ ಪವರ್‌ ಮತ್ತು ಮೇಘಾ ಎಂಜಿನಿಯರಿಂಗ್‌ ಹೆಚ್ಚಿನ ಮೊತ್ತದ ಬಿಡ್‌ಗಳನ್ನು ಸಲ್ಲಿಸಿದವು. ಅದಾನಿ ಪವರ್‌ ತನ್ನ ಪ್ರಸ್ತಾವನೆಯನ್ನು ಮೊದಲು ₹3,645 ಕೋಟಿಗೆ, ನಂತರ ₹4,101 ಕೋಟಿಗೆ ಹೆಚ್ಚಿಸಿತು. ಇದಾದ ಬಳಿಕ ಸಾಲದಾತರ ಸಮಿತಿ ಬಿಡ್‌ ಪ್ರಕ್ರಿಯೆಯನ್ನು ಮರುತೆರೆಯಲು ನಿರ್ಧರಿಸಿತು. 2024ರ ಜನವರಿಯಲ್ಲಿ NCLT ಹೊಸ ಸ್ಪರ್ಧಾತ್ಮಕ ಬಿಡ್‌ ಪ್ರಕ್ರಿಯೆಗೆ ಅನುಮತಿ ನೀಡಿದ ಬಳಿಕ, ಅದಾನಿ ಪವರ್‌ ಏಕೈಕ ಬಿಡ್‌ದಾರನಾಗಿ ಉಳಿದು ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಲ್ಯಾಂಕೊ ಅಮರ್‌ಕಂಟಕ್ ಕಂಪನಿಯ ಸಾಲದಾತರಿಗೆ ಒಟ್ಟು ₹14,632 ಕೋಟಿ ಸಾಲ ಬರಬೇಕಿತ್ತು. ಆದರೆ, ಅದಾನಿ ಪವರ್‌ನ ಪರಿಹಾರ ಯೋಜನೆಯಡಿ ಸುರಕ್ಷಿತ ಸಾಲದಾತರಿಗೆ ದೊರೆತಿದ್ದು ಸುಮಾರು ₹4,101 ಕೋಟಿ ಮಾತ್ರ. ಈಗಾಗಲೇ ಒಂದು ಬಿಡ್ ಆಯ್ಕೆ ಮಾಡಿ ನ್ಯಾಯಮಂಡಳಿಗೆ ಸಲ್ಲಿಸಿದ್ದರೂ, ಮತ್ತೆ ಬಿಡ್ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಿದ್ದು ಏಕೆ ಎಂಬ ಪ್ರಶ್ನೆಯನ್ನು ನ್ಯೂಸ್‌ಲಾಂಡ್ರಿಯ ತನಿಖೆ ಎತ್ತಿದೆ.

ಮಹಾರಾಷ್ಟ್ರದ ದಿಘಿ ಬಂದರು ಪ್ರಕರಣದಲ್ಲೂ ಬಿಡ್ ಪ್ರಕ್ರಿಯೆ ವಿವಾದಕ್ಕೆ ಕಾರಣವಾಯಿತು. ಆರಂಭದಲ್ಲಿ ಅದಾನಿ ಪೋರ್ಟ್ಸ್ ಹೆಚ್ಚಿನ ಅಂಕ ಪಡೆದಿದ್ದರೂ, ಸಾಲದಾತರ ಸಮಿತಿ JNPT (ಜವಾಹರಲಾಲ್‌ ನೆಹರು ಬಂದರು ಪ್ರಾಧಿಕಾರ)ಯ ಬಿಡ್ ಆಯ್ಕೆ ಮಾಡಿತ್ತು. ಆದರೆ, NCLT ಸೂಚಿಸಿದ ಬದಲಾವಣೆಗಳನ್ನು JNPT ಒಪ್ಪದ ಕಾರಣ ಬಿಡ್ ಪ್ರಕ್ರಿಯೆಯನ್ನು ಮತ್ತೆ ತೆರೆಯಲಾಯಿತು. ಮರುಬಿಡ್ಡಿಂಗ್‌ನಲ್ಲಿ ಅದಾನಿ ಪೋರ್ಟ್ಸ್ ತನ್ನ ಬಿಡ್ ಮೊತ್ತ ಹೆಚ್ಚಿಸಿ, ಶೇ.99.68ರಷ್ಟು ಮತಗಳೊಂದಿಗೆ ಸಾಲದಾತರ ಸಮಿತಿಯ ಅನುಮೋದನೆ ಪಡೆಯಿತು. 2020ರ ಮಾರ್ಚ್‌ನಲ್ಲಿ NCLT ಕೂಡ ಯೋಜನೆಗೆ ಅನುಮೋದನೆ ನೀಡಿತು. ಈ ಪ್ರಕರಣದಲ್ಲಿ ಸಾಲದಾತರಿಗೆ ಬರಬೇಕಿದ್ದ ₹3,056 ಕೋಟಿಯಲ್ಲಿ ಕೇವಲ ₹650 ಕೋಟಿ ಮಾತ್ರ ವಸೂಲಿಯಾಯಿತು. ಅಂದರೆ, ಸುಮಾರು ಶೇ.78.7ರಷ್ಟು ಸಾಲದ ಮೊತ್ತ ವಸೂಲಿಯಾಗಲಿಲ್ಲ. NCLT ಸೂಚಿಸಿದ ಬದಲಾವಣೆಗಳನ್ನು JNPT ಒಪ್ಪದ ಬಳಿಕ ಬಿಡ್ ಪ್ರಕ್ರಿಯೆ ಮರುತೆರೆದ ಕ್ರಮವು ಸಾಮಾನ್ಯ ಪ್ರಕ್ರಿಯೆಯಿಂದ ಭಿನ್ನವಾಗಿತ್ತು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದರು.

ವಿದರ್ಭ ಇಂಡಸ್ಟ್ರೀಸ್ ಪವರ್ ಕಂಪನಿಯ ದಿವಾಳಿ ಪ್ರಕ್ರಿಯೆಯಲ್ಲೂ ಬಿಡ್ ನಿಯಮಗಳ ಬಗ್ಗೆ ಪ್ರಶ್ನೆಗಳು ಎದ್ದವು. 2024ರಲ್ಲಿ ಅದಾನಿ ಪವರ್, ಎನ್‌ಟಿಪಿಸಿ, ವೇದಾಂತ ಮತ್ತು ಕ್ಯಾಪ್ರಿ ಗ್ಲೋಬಲ್ ಬಿಡ್ ಸಲ್ಲಿಸಿದ್ದವು. ಆದರೆ, ಬಿಡ್ ತೆರೆದ ಮೂರು ದಿನಗಳ ಬಳಿಕ ಎಲ್ಲರೂ ಒಂದೇ ಮಾದರಿಯಲ್ಲಿ ಹೊಸ ಪ್ರಸ್ತಾವನೆ ಸಲ್ಲಿಸಬೇಕೆಂದು ಸಾಲದಾತರ ಸಮಿತಿ ಸೂಚಿಸಿತು. ಇದಕ್ಕೆ ಎನ್‌ಟಿಪಿಸಿ ಒಪ್ಪಲಿಲ್ಲ. 2025ರ ಫೆಬ್ರವರಿಯಲ್ಲಿ ಸಾಲದಾತರ ಸಮಿತಿ ಹೊಸ ‘ಆಂಕರ್ ಬಿಡ್‌ದಾರ’ ವ್ಯವಸ್ಥೆ ಜಾರಿಗೆ ತಂದು, ಅದಾನಿ ಪವರ್‌ಗೆ ಆ ಸ್ಥಾನ ನೀಡಿತು. ಇದರ ಪ್ರಕಾರ, ಇತರ ಬಿಡ್‌ದಾರರು ಅದಾನಿಯ ಬಿಡ್‌ಗಿಂತ ಕನಿಷ್ಠ ₹50 ಕೋಟಿ ಹೆಚ್ಚು ನೀಡಬೇಕಿತ್ತು. ನಂತರ ಇತರರ ಬಿಡ್ ಮೊತ್ತಕ್ಕೆ ಸಮನಾಗಿ ಅಥವಾ ಅದಕ್ಕಿಂತ ಹೆಚ್ಚು ಬಿಡ್ ಮಾಡಲು ಅದಾನಿ ಪವರ್‌ಗೆ ಆರು ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಒಬ್ಬ ಸದಸ್ಯನನ್ನು ಹೊಂದಿದ್ದ ಸಾಲದಾತರ ಸಮಿತಿಯು ಅಂತಿಮವಾಗಿ ಅದಾನಿ ಪವರ್‌ನ ಯೋಜನೆಯನ್ನು ಅನುಮೋದಿಸಿತು. ಸುರಕ್ಷಿತ ಸಾಲದಾತರಿಗೆ ಬರಬೇಕಿದ್ದ ₹6,200 ಕೋಟಿಯಲ್ಲಿ ಸುಮಾರು ₹3,706 ಕೋಟಿ ಮಾತ್ರ ಮರುಪಾವತಿಯಾಯಿತು. ಅದಾನಿ ಪವರ್‌ಗೆ ‘ಆಂಕರ್ ಬಿಡ್‌ದಾರ’ ಸ್ಥಾನ ನೀಡಲು ಯಾವ ಮಾನದಂಡಗಳನ್ನು ಬಳಸಲಾಯಿತು ಮತ್ತು ಇತರ ಬಿಡ್‌ದಾರರಿಗೆ ಸಮಾನ ಅವಕಾಶ ಸಿಕ್ಕಿತೇ ಎಂಬ ಪ್ರಶ್ನೆಗಳಿಗೆ NCLTಯ ಅನುಮೋದನಾ ಆದೇಶದಲ್ಲಿ ಸ್ಪಷ್ಟನೆ ಇರಲಿಲ್ಲ.

ಕೊರ್ಬಾ ವೆಸ್ಟ್ ಪವರ್ ಪ್ರಕರಣದಲ್ಲಿ ಅದಾನಿ ಪವರ್ ಸಾಲದಾತನಾಗಿಯೂ, ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ಬಿಡ್‌ದಾರನಾಗಿಯೂ ಇತ್ತು. 2019ರ ಮಾರ್ಚ್‌ನಲ್ಲಿ ಸಾಲದಾತರ ಸಮಿತಿಯಲ್ಲಿ ಅದಾನಿ ಗ್ರೂಪ್ ಶೇ.37.33ರಷ್ಟು ಮತದಾನದ ಪಾಲು ಹೊಂದಿತ್ತು. ಅದಾನಿ ಪವರ್ ಸಲ್ಲಿಸಿದ ಪರಿಹಾರ ಯೋಜನೆಗೆ ಶೇ.69.08ರಷ್ಟು ಮತಗಳೊಂದಿಗೆ ಅನುಮೋದನೆ ದೊರೆಯಿತು. ಆದರೆ, ಸಾಲದಾತನಾಗಿದ್ದ ಅದಾನಿಯೇ ತನ್ನ ಯೋಜನೆಗೆ ಮತ ಚಲಾಯಿಸಿದ ವಿಚಾರವನ್ನು NCLT ಆದೇಶ ಪ್ರತ್ಯೇಕವಾಗಿ ಚರ್ಚಿಸಿರಲಿಲ್ಲ. ಕಂಪನಿಯ ₹5,032 ಕೋಟಿ ಸಾಲದ ಪೈಕಿ ಸುಮಾರು ₹2,785 ಕೋಟಿ ಮಾತ್ರ ಮರುಪಾವತಿಯಾಗಿತ್ತು.

ಇದನ್ನೂ ಓದಿ: ಅದಾನಿ ಗ್ರೂಪ್‌ಗೆ ಧಾರಾವಿ ಸ್ಲಮ್‌ ಅಭಿವೃದ್ಧಿ ಯೋಜನೆ; ಮುಂಬೈನಲ್ಲಿ ಬೃಹತ್ ಪ್ರತಿಭಟನೆ

ಕರೈಕಲ್ ಬಂದರು ಪ್ರಕರಣದಲ್ಲೂ ಸಾಲದಾತರ ಸಮಿತಿಯ ನಿರ್ಧಾರಗಳ ಬಗ್ಗೆ ವಿವಾದ ಉಂಟಾಗಿತ್ತು. ಓಂಕಾರಾ ARC ಮತ್ತು ಫೀನಿಕ್ಸ್ ARC ಸಮಿತಿಯ ಸದಸ್ಯರಾಗಿದ್ದವು. ಅದಾನಿ ಪೋರ್ಟ್ಸ್ ಸಮಿತಿಯ ನಿರ್ಧಾರಗಳ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತಿರಬಹುದು ಎಂದು ಫೀನಿಕ್ಸ್ ಆಕ್ಷೇಪಿಸಿತ್ತು. ಆದರೆ, NCLT ಈ ಆರೋಪವನ್ನು ತಿರಸ್ಕರಿಸಿ ಫೀನಿಕ್ಸ್‌ಗೆ ₹5 ಲಕ್ಷ ದಂಡ ವಿಧಿಸಿತು. ಬಳಿಕ ಫೀನಿಕ್ಸ್ ತನ್ನ ಸಾಲದ ಹಕ್ಕನ್ನು ಓಂಕಾರಾಗೆ ವರ್ಗಾಯಿಸಿತು. ಇದರಿಂದ ಓಂಕಾರಾ ಶೇ.100ರಷ್ಟು ಮತದಾನದ ಹಕ್ಕು ಪಡೆದು ಅದಾನಿಯ ಯೋಜನೆಯನ್ನು ಅನುಮೋದಿಸಿತು. ಈ ಪ್ರಕರಣದಲ್ಲಿ ₹2,959 ಕೋಟಿ ಸಾಲದ ಎದುರು ಸುಮಾರು ₹1,580 ಕೋಟಿ ಮಾತ್ರ ಮರುಪಾವತಿಯಾಗಿತ್ತು.

ಕೋಸ್ಟಲ್ ಎನರ್ಜೆನ್ ಪ್ರಕರಣದಲ್ಲಿ ಅದಾನಿ ಪವರ್ ಒಳಗೊಂಡ ಡಿಎಐಟಿ ಒಕ್ಕೂಟದ ₹3,335 ಕೋಟಿ ಪರಿಹಾರ ಯೋಜನೆಗೆ ಸಾಲದಾತರ ಸಮಿತಿ ಶೇ.97.8ರಷ್ಟು ಮತಗಳೊಂದಿಗೆ ಅನುಮೋದನೆ ನೀಡಿತು. ಆದರೆ, ಅದಾನಿಯ ಪ್ರತ್ಯೇಕ ಬಿಡ್ ತಿರಸ್ಕೃತಗೊಂಡಿದ್ದರೂ ಒಕ್ಕೂಟದ ಮೂಲಕ ಮತ್ತೆ ಸ್ಪರ್ಧೆಗೆ ಪ್ರವೇಶಿಸಿತು ಎಂದು ಕಂಪನಿಯ ಮಾಜಿ ಪ್ರವರ್ತಕ ಅಹ್ಮದ್ ಬುಹಾರಿ ಆಕ್ಷೇಪಿಸಿದ್ದರು. ಈ ಆರೋಪಗಳನ್ನು NCLT ತಿರಸ್ಕರಿಸಿ, ನಿಯಮ ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿತು. ಈ ಪ್ರಕರಣದಲ್ಲಿ ₹11,677 ಕೋಟಿ ಸುರಕ್ಷಿತ ಸಾಲದ ಎದುರು ಸುಮಾರು ₹3,330 ಕೋಟಿ ಮಾತ್ರ ಮರುಪಾವತಿಯಾಗಿತ್ತು

ಜೈಪ್ರಕಾಶ್ ಅಸೋಸಿಯೇಟ್ಸ್ ಪ್ರಕರಣದಲ್ಲಿ 28 ಕಂಪನಿಗಳು ಆಸಕ್ತಿ ತೋರಿಸಿದ್ದವು. ಅಂತಿಮವಾಗಿ ಐದು ಸಂಸ್ಥೆಗಳು ಸ್ಪರ್ಧೆಯಲ್ಲಿದ್ದರೆ, ಕೊನೆಯ ಹಂತದಲ್ಲಿ ಅದಾನಿ ಮತ್ತು ವೇದಾಂತ ನಡುವೆ ಪೈಪೋಟಿ ನಡೆಯಿತು. ಅಂತಿಮ ಬಿಡ್ ಬಳಿಕ ವೇದಾಂತ ತನ್ನ ಪ್ರಸ್ತಾವನೆಯನ್ನು ಸುಧಾರಿಸಲು ಪ್ರಯತ್ನಿಸಿದರೂ, ಸಾಲದಾತರ ಸಮಿತಿ ಅದನ್ನು ತಿರಸ್ಕರಿಸಿತು. ಅದಾನಿಯ ಯೋಜನೆಗೆ ಶೇ.93.81ರಷ್ಟು ಮತಗಳೊಂದಿಗೆ ಅನುಮೋದನೆ ದೊರೆಯಿತು. NCLT 2026ರ ಮಾರ್ಚ್‌ನಲ್ಲಿ ಯೋಜನೆಗೆ ಅನುಮೋದನೆ ನೀಡಿದ್ದು, ಮೇ ತಿಂಗಳಲ್ಲಿ NCLAT ವೇದಾಂತದ ಮೇಲ್ಮನವಿಗಳನ್ನು ತಿರಸ್ಕರಿಸಿತು. ಈ ಪ್ರಕರಣದಲ್ಲಿ ₹57,497 ಕೋಟಿಗೂ ಅಧಿಕ ಸಾಲದ ಎದುರು ಸುಮಾರು ₹13,982 ಕೋಟಿ ಮಾತ್ರ ಮರುಪಾವತಿಯಾಗಿತ್ತು.

ಮೂಲ: https://www.newslaundry.com/2026/09/25/adanis-insolvency-edge-3-in-every-5-bids-won-rs-97700-cr-in-haircuts-and-some-unexpected-turns

…. ಮುಂದುವರೆಯುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ಮುಂಬೈನಲ್ಲಿ ಮಹಾತ್ಮ ಗಾಂಧಿ ಮರಿಮೊಮ್ಮಗ ತುಷಾರ್ ಗಾಂಧಿ ಬಂಧನ

ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಮುಂಬೈನ...

ಶಿವಮೊಗ್ಗ | ಜಿಪಂ, ತಾಪಂ ಮೀಸಲಾತಿ ಕರಡು ಪಟ್ಟಿ ಬಿಡುಗಡೆ; ಆಕ್ಷೇಪಣೆ ಸಲ್ಲಿಸಲು ಅ. 19 ಕೊನೆಯ ದಿನಾಂಕ

ಶಿವಮೊಗ್ಗ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣಾ ಕ್ಷೇತ್ರಗಳ ಮೀಸಲಾಟ ಕರಡು...

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ಜಂತರ್‌ ಮಂತರ್‌ನಲ್ಲಿ ವರದಿಗಾರರಿಗೂ ಪೊಲೀಸರ ನಿರ್ಬಂಧ

ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ಮೊಳೆಗಳು, ಬ್ಯಾರಿಕೇಡ್‌ಗಳು ಹಾಗೂ...