ತಾಜ್‌ಮಹಲ್‌ ಧ್ವಂಸಗೊಳಿಸಿ ದೇವಸ್ಥಾನ ನಿರ್ಮಾಣಕ್ಕೆ ಬಿಜೆಪಿ ಶಾಸಕನ ಒತ್ತಾಯ

Date:

ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಮೊಘಲ್‌ ನಿರ್ಮಿತ ತಾಜ್‌ಮಹಲ್‌ ಮತ್ತು ಕುತುಬ್‌ ಮಿನಾರ್‌ ಸ್ಮಾರಕವನ್ನು ಧ್ವಂಸಗೊಳಿಸಬೇಕು ಎಂದು ಅಸ್ಸಾಂನ ಬಿಜೆಪಿ ಶಾಸಕ ರೂಪಜ್ಯೋತಿ ಕುರ್ಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ಮೊಘಲ್ ಯುಗದ ಎರಡು ಸ್ಮಾರಕಗಳಾದ  ತಾಜ್‌ಮಹಲ್‌ ಮತ್ತು ಕುತುಬ್‌ ಮಿನಾರ್‌ನನ್ನು ಧ್ವಂಸಗೊಳಿಸಿ ಆ ಸ್ಥಳದಲ್ಲಿ ದೇವಾಲಯಗಳನ್ನು ನಿರ್ಮಿಸಬೇಕು” ಎಂದು ಬಿಜೆಪಿ ಶಾಸಕ  ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.

ಬಿಜೆಪಿ ಶಾಸಕನ ಭಾಷಣದ ವಿಡಿಯೋವೊಂದು ವೈರಲ್‌ ಆಗಿದ್ದು, ಇದರಲ್ಲಿ ಮೊಘಲ್ ಚಕ್ರವರ್ತಿ ಶಹಜಹಾನ್ ತನ್ನ ಪತ್ನಿ ಮುಮ್ತಾಜ್ ಅನ್ನು “ನಿಜವಾಗಿ ಪ್ರೀತಿಸುತ್ತಿದ್ದನೇ” ಎಂಬುದರ ಕುರಿತು ತನಿಖೆ ನಡೆಸಬೇಕೆಂದು ಎಂದು ಒತ್ತಾಯಿಸಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

“ಹಿಂದೂ ರಾಜಮನೆತನದ ಸಂಪತ್ತಿನಿಂದ ತಾಜ್‌ಮಹಲ್ ಮತ್ತು ಕುತುಬ್ ಮಿನಾರ್ ಅನ್ನು ನಿರ್ಮಿಸಲಾಗಿದೆ. ತಕ್ಷಣವೇ ಇದನ್ನು ಕೆಡವಲು ನಾನು ಪ್ರಧಾನಿಯನ್ನು ಒತ್ತಾಯಿಸುತ್ತೇನೆ. ಈ ಎರಡು ಸ್ಮಾರಕಗಳ ಜಾಗದಲ್ಲಿ ಜಗತ್ತಿನಲ್ಲೇ ಅತ್ಯಂತ ಸುಂದರವಾದ ದೇವಾಲಯಗಳನ್ನು ನಿರ್ಮಿಸಬೇಕು. ದೇವಸ್ಥಾನ ನಿರ್ಮಾಣಕ್ಕೆ ನನ್ನ ಒಂದು ವರ್ಷದ ವೇತನ ನೀಡಲು ಸಿದ್ಧನಿದ್ದೇನೆ” ಎಂದು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರೂಪಜ್ಯೋತಿ ಕುರ್ಮಿ ಘೋಷಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಸೋಲಿನ ಭಯದಿಂದ ಸಿನಿಮಾ ತಾರೆಯರ ಹಿಂದೆ ಬಿದ್ದಿದೆಯೇ ಬಿಜೆಪಿ?

ಮೊಘಲ್ ಸಾಮ್ರಾಜ್ಯದ ಅಧ್ಯಾಯಗಳಿಗೆ ಕೊಕ್

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) 12ನೇ ತರಗತಿಯ ಇತಿಹಾಸ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಿದ್ದು, ಪುಸ್ತಕದಲ್ಲಿನ ಮೊಘಲ್ ಸಾಮ್ರಾಜ್ಯದ ಅಧ್ಯಾಯಗಳನ್ನು ತೆಗೆದು ಹಾಕಲಾಗಿದೆ.

ʻಸೆಂಟ್ರಲ್ ಇಸ್ಲಾಮಿಕ್ ಲ್ಯಾಂಡ್ಸ್’, ‘ಕ್ಲಾಶ್ ಆಫ್ ಕಲ್ಚರ್ಸ್’ ಮತ್ತು ‘ಇಂಡಸ್ಟ್ರಿಯಲ್ ರೆವಲ್ಯೂಷನ್’ನಂತಹ ಅಧ್ಯಾಯಗಳನ್ನು 11ನೇ ತರಗತಿಯ ‘ಥೀಮ್ಸ್ ಇನ್ ವರ್ಲ್ಡ್ ಹಿಸ್ಟರಿ’ ಪಠ್ಯಪುಸ್ತಕದಿಂದ ಕೈಬಿಡಲಾಗಿದೆ.

ದೇಶಾದ್ಯಂತ ಎನ್‌ಸಿಇಆರ್‌ಟಿ ಅನುಸರಿಸುವ ಎಲ್ಲ ಶಾಲೆಗಳಿಗೆ ಈ ಬದಲಾವಣೆ ಅನ್ವಯಿಸುತ್ತದೆ. ಈಗ ಮಾಡಲಾದ ಎಲ್ಲ ಬದಲಾವಣೆಗಳನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದ, ಅಂದರೆ 2023-2024 ರಿಂದ ಜಾರಿಗೆ ತರಲಾಗುತ್ತದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೂಪಾಯಿ ನೋಟುಗಳಲ್ಲಿ ಗಾಂಧೀಜಿ ಚಿತ್ರ ಮೊದಲ ಆಯ್ಕೆಯಾಗಿರಲಿಲ್ಲ; ಮತ್ಯಾರು?

ಇತರೆ ದೇಶಗಳ ಕರೆನ್ಸಿಗಳಂತೆ ಭಾರತದ ರೂಪಾಯಿ - ನೋಟು, ನಾಣ್ಯಗಳು ಕೂಡಾ...

ತಾವು ತೊಂದರೆಗೆ ಸಿಗದಿರಲಿ ಅಂತ ಸಿದ್ದರಾಮಯ್ಯ ಪರ ಜಿ ಟಿ ದೇವೇಗೌಡ ಬ್ಯಾಟ್‌ : ಕುಮಾರಸ್ವಾಮಿ

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಎಚ್...

ಇಶಾ ಫೌಂಡೇಶನ್ ವಿರುದ್ಧದ ಪೊಲೀಸ್ ತನಿಖೆಗೆ ಸುಪ್ರೀಂ ತಡೆಯಾಜ್ಞೆ

ಕೊಯಮತ್ತೂರಿನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರು ನಡೆಸುತ್ತಿರುವ ಇಶಾ ಫೌಂಡೇಶನ್ ವಿರುದ್ಧ...

ಜಾತಿ ಆಧಾರದಲ್ಲಿ ಕೈದಿಗಳ ನಡುವೆ ತಾರತಮ್ಯ ಸಲ್ಲ: ಸುಪ್ರೀಂ ಕೋರ್ಟ್

ದೇಶದ ಕೆಲವು ರಾಜ್ಯಗಳ ಜೈಲು ಕೈಪಿಡಿಗಳು ಜಾತಿ ಆಧಾರಿತ ತಾರತಮ್ಯವನ್ನು ಪ್ರೋತ್ಸಾಹಿಸುತ್ತಿವೆ...