ಪ್ರಧಾನ ಮಂತ್ರಿ ಚೀನೀ ಯೋಜನೆಗಳು; ಬಿಜೆಪಿಯ ಚೀನೀ ಸಂಬಂಧ ಟೀಕಿಸಿದ ರಾಹುಲ್ ಗಾಂಧಿ

Date:

  • ‘ಪ್ರಧಾನ ಮಂತ್ರಿ ಚೀನೀ ಯೋಜನೆಗಳು’ ಎಂದು ಟೀಕಿಸಿದ ರಾಹುಲ್ ಗಾಂಧಿ
  • ಗೌತಮ್ ಅದಾನಿ ಯೋಜನೆಗಳಲ್ಲಿ ಚೀನೀ ಕಂಪನಿಯ ಪಾತ್ರದ ಬಗ್ಗೆ ಪ್ರಶ್ನೆ

ಪ್ರಧಾನ ಮಂತ್ರಿಯ ಆಪ್ತ ಉದ್ಯಮಪತಿಗಳು ಚೀನಾ ಜೊತೆಗೆ ಔದ್ಯಮಿಕ ಯೋಜನೆಗಳನ್ನು ಹೊಂದಿದ್ದಾರೆಯೆ? ರಾಹುಲ್ ಗಾಂಧಿ ಅವರು ಇಂದು ಟ್ವೀಟ್ ಮೂಲಕ ಚೀನಾದ ಉದ್ಯಮಪತಿಗಳ ಜೊತೆಗೆ ಭಾರತೀಯ ಉದ್ಯಮಿ ಗೌತಮ್ ಅದಾನಿಗೆ ಇರುವ ಸಂಬಂಧವೇನು ಎಂದು ಪ್ರಶ್ನಿಸಿದ್ದಾರೆ.

“ಚೀನಾ ಕುರಿತಾಗಿ ಬಿಜೆಪಿಯ ಹೇಳಿಕೆಗೆ ನಿಮ್ಮ ಅಭಿಪ್ರಾಯವೇನು” ಎಂದು ಮಾಧ್ಯಮಗಳು ರಾಹುಲ್ ಗಾಂಧಿ ಅವರನ್ನು ಪದೇಪದೆ ಪ್ರಶ್ನಿಸುತ್ತಿದ್ದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಟ್ವೀಟ್ ಮಾಡಿದ್ದಾರೆ.

“ಪಿಎಂಸಿ ಯೋಜನೆಗಳು- ‘ಪ್ರಧಾನ ಮಂತ್ರಿ ಚೈನೀಸ್’ ಪ್ರಾಜೆಕ್ಟ್‌ಗಳು? ಭಾರತದ ನಿರ್ಣಾಯಕ ಬಂದರುಗಳು, ವಿಮಾನ ನಿಲ್ದಾಣಗಳು, ರೈಲ್ವೆ ಹಳಿಗಳು ಹಾಗೂ ವಿದ್ಯುತ್ ಲೈನ್‌ಗಳನ್ನು ಚೀನೀ ಕಂಪನಿಗಳು ನಿರ್ಮಾಣ ಮಾಡಿ ನಿಯಂತ್ರಿಸುತ್ತಿರುವುದೇಕೆ?” ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಎನ್‌ಸಿಇಆರ್‌ಟಿ ಪರಿಷ್ಕೃತ ಪಠ್ಯ | ಮೊಘಲರು, ಜಾತಿ ವ್ಯವಸ್ಥೆ ಮುಂತಾದ ಐತಿಹಾಸಿಕ ಸಂಗತಿಗಳು ಕಡಿತ

ತಮ್ಮ ಟ್ವೀಟ್‌ಗೆ ಸಾಕ್ಷಿಯಾಗಿ ಅವರು ‘ಅದಾನಿ ವಾಚ್‌’ ಎನ್ನುವ ಒಂದು ವೆಬ್‌ಸೈಟ್‌ನ ಲಿಂಕ್ ಲಗತ್ತಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಸ್ಟ್ರೇಲಿಯನ್ ಹೂಡಿಕೆದಾರರಿಗೆ ಸಿಎಂ ಸಿದ್ದರಾಮಯ್ಯ ಆಹ್ವಾನ

ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ವಲಯದಲ್ಲಿ ಹೂಡಿಕೆ ಗ್ರೀನ್ ಫೀಲ್ಡ್...

ಸರ್ಕಾರದ ಉಚಿತ ಕೊಡುಗೆಗಳು ಜನರಲ್ಲಿ ಖರೀದಿಸುವ ಶಕ್ತಿ ಹೆಚ್ಚಿಸುತ್ತವೆ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಇನ್ಫೋಸಿಸ್‌ ಸ್ಥಾಪಕಾಧ್ಯಕ್ಷ ನಾರಾಯಣ ಮೂರ್ತಿ...

ಅರ್ಹ ರೈತರಿಗೆ ತಲಾ 2000 ರೂ.ವರೆಗೆ ಬೆಳೆ ಪರಿಹಾರ: ಸಿದ್ದರಾಮಯ್ಯ ಘೋಷಣೆ

ಕೇಂದ್ರದಿಂದ ಹಣ ಬರುವವರೆಗೂ ಕಾಯಲು ಸಾಧ್ಯವಿಲ್ಲ: ಸಿಎಂ ಮೊದಲನೇ ಕಂತಿನಲ್ಲಿ...