ಬಂಗಾಳ ಚುನಾವಣೆ | ಮಮತಾ-ಅಭಿಷೇಕ್ ಜಂಟಿ ತಂತ್ರ – ಒಂಟಿ ಪ್ರಚಾರ; ಬಿಜೆಪಿ ಅತಂತ್ರ?

Date:

ಅಭಿಷೇಕ್ ಬ್ಯಾನರ್ಜಿ ಅವರು 2021ರ ವಿಧಾನಸಭಾ ಮತ್ತು ನಂತರದ ಲೋಕಸಭಾ ಚುನಾವಣೆಗಳಲ್ಲಿಯೂ ಸಕ್ರಿಯ ಪಾತ್ರ ವಹಿಸಿದ್ದರು. ಆದರೂ, ಮಮತಾ ಮತ್ತು ಅಭಿಷೇಕ್ ನಡುವಿನ ಸಮನ್ವಯ ಹೆಚ್ಚಾಗಿ ಕಾಣಿಸಿರಲಿಲ್ಲ. ಯುವ ನಾಯಕರಿಗೆ ಹೆಚ್ಚಿನ ಅವಕಾಶ ನೀಡಬೇಕೆಂದು ಅಭಿಷೇಕ್ ಪ್ರತಿಪಾದಿಸಿದ್ದರೆ, ಪಕ್ಷದ ಸಾಂಪ್ರದಾಯಿಕ ರಚನೆಯನ್ನು ಮುಂದುವರೆಸಲು ಮಮತಾ ನಿರ್ಧರಿಸಿದ್ದರು. ಆದರೆ, ಪ್ರಸ್ತುತ ಚುನಾವಣೆಯ ಪ್ರಚಾರದಲ್ಲಿ ಇಬ್ಬರ ನಡುವಿನ ಅಭೂತಪೂರ್ವ ಸಮನ್ವಯ ಪ್ರತಿಫಲಿಸುತ್ತಿದೆ.

- Advertisement -

ಪಶ್ಚಿಮ ಬಂಗಾಳ ಚುನಾವಣೆಗೆ ಮೂರು ವಾರಗಳಷ್ಟೇ ಇವೆ. ಚುನಾವಣಾ ಅಖಾಡ ಗಂಭೀರವಾಗಿದೆ. ಅಧಿಕಾರಕ್ಕಾಗಿ ಟಿಎಂಸಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸ ಟಿಎಂಸಿಯಲ್ಲಿದೆ. ಚುನಾವಣಾ ಪ್ರಚಾರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಪ್ರಬಲ ನಾಯಕ ಅಭಿಷೇಕ್ ಬ್ಯಾನರ್ಜಿ ಸಮನ್ವಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಇವರ ಜಂಟಿ ನಾಯಕತ್ವವು ಹಿಂದಿನ ಚುನಾವಣೆಗಿಂತಲೂ ಹೆಚ್ಚು ಸಮನ್ವಯದಿಂದ ಕೂಡಿದ್ದು, ರಾಜ್ಯದ ಚುನಾವಣಾ ರಾಜಕಾರಣದಲ್ಲಿ ವಿಶಿಷ್ಟ ಮೈಲಿಗಲ್ಲು ಸೃಷ್ಟಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಅಭಿಷೇಕ್ ಬ್ಯಾನರ್ಜಿ ಅವರು 2021ರ ವಿಧಾನಸಭಾ ಮತ್ತು ನಂತರದ ಲೋಕಸಭಾ ಚುನಾವಣೆಗಳಲ್ಲಿಯೂ ಸಕ್ರಿಯ ಪಾತ್ರ ವಹಿಸಿದ್ದರು. ಆದರೂ, ಮಮತಾ ಮತ್ತು ಅಭಿಷೇಕ್ ನಡುವಿನ ಸಮನ್ವಯ ಹೆಚ್ಚಾಗಿ ಕಾಣಿಸಿರಲಿಲ್ಲ. ಯುವ ನಾಯಕರಿಗೆ ಹೆಚ್ಚಿನ ಅವಕಾಶ ನೀಡಬೇಕೆಂದು ಅಭಿಷೇಕ್ ಪ್ರತಿಪಾದಿಸಿದ್ದರೆ, ಪಕ್ಷದ ಸಾಂಪ್ರದಾಯಿಕ ರಚನೆಯನ್ನು ಮುಂದುವರೆಸಲು ಮಮತಾ ನಿರ್ಧರಿಸಿದ್ದರು. ಇದು ಅವರಿಬ್ಬರ ನಡುವಿನ ಸಮನ್ವಯತೆಯಲ್ಲಿ ಕೊರತೆಯನ್ನು ಬಹಿರಂಗಪಡಿಸಿತ್ತು. ಆದರೆ, ಪ್ರಸ್ತುತ ಚುನಾವಣೆಯ ಪ್ರಚಾರದಲ್ಲಿ ಇಬ್ಬರ ನಡುವಿನ ಅಭೂತಪೂರ್ವ ಸಮನ್ವಯ ಪ್ರತಿಫಲಿಸುತ್ತಿದೆ.

ಬಂಗಾಳಕ್ಕೆ ಆಕ್ರಮಣಕಾರಿ ವಿರೋಧ ಪಕ್ಷದ ರಾಜಕಾರಣ ಹೊಸದೇನಲ್ಲ. ಜ್ಯೋತಿ ಬಸು ಮತ್ತು ಬುದ್ಧದೇವ್ ಭಟ್ಟಾಚಾರ್ಯ ಅವರ ನೇತೃತ್ವದ ಎಡರಂಗದ ಆಡಳಿತದ ಅವಧಿಯಲ್ಲಿ, ಮಮತಾ ಬ್ಯಾನರ್ಜಿ ವಿರೋಧ ಪಕ್ಷದ ನಾಯಕಿಯಾಗಿದ್ದರು. ಅವರ ಟಿಎಂಸಿ ಪ್ರಬಲ ವಿರೋಧ ಪಕ್ಷವಾಗಿ ರಾಜ್ಯದಲ್ಲಿತ್ತು. ಟಿಎಂಸಿ ಅಧಿಕಾರಕ್ಕೇರಿದ ಬಳಿಕ, ಬಿಜೆಪಿ ಕ್ರಮೇಣ ಪ್ರಮುಖ ಮತ್ತು ಪ್ರಬಲ ವಿಪಕ್ಷವಾಗಿ ಬೆಳೆದಿದೆ. ಅದರಲ್ಲೂ, ಕಳೆದ 5 ವರ್ಷಗಳಲ್ಲಿ ಬಿಜೆಪಿಯ ಬೆಳವಣಿಗೆ ಗಮನಾರ್ಹವಾಗಿದೆ. ಆದಾಗ್ಯೂ, ಬಂಗಾಳದಲ್ಲಿ ಬಿಜೆಪಿ ಆಂತರಿಕ ಬಿಕ್ಕಟ್ಟು ಎದುರಿಸುತ್ತಿದೆ. ರಾಜ್ಯದ ಅಧಿಕಾರಕ್ಕಾಗಿ ಹವಣಿಸುತ್ತಿದೆ.

ಈ ಚುನಾವಣೆಯ ಮತ್ತೊಂದು ಪ್ರಮುಖ ಲಕ್ಷಣವೆಂದರೆ, ಕೇಂದ್ರದ ಸಂಸ್ಥೆಗಳ ಎದ್ದುಕಾಣುವ ಪಾತ್ರ. ಚುನಾವಣಾ ಆಯೋಗದಂತಹ ಸಂಸ್ಥೆಗಳು ಸಕ್ರಿಯ ಪಾತ್ರ ವಹಿಸಿವೆ. ಆಯೋಗವು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಗಂಭೀರ ಆರೋಪಗಳು ಇವೆ. ಅದೇ ರೀತಿ ಆಯೋಗದ ಕೃತ್ಯಗಳೂ ಎದ್ದು ಕಾಣುತ್ತಿವೆ. ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಸಂಘಟಿತ ಪ್ರತಿ-ತಂತ್ರ ರೂಪಿಸುತ್ತಿದ್ದಾರೆ. ಪ್ರಬಲವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಹಿಂದಿನ ಭಿನ್ನಾಭಿಪ್ರಾಯಗಳ ನಡುವೆಯೂ ಮಮತಾ-ಅಭಿಷೇಕ್ ಒಂದು ಸಮತೋಲನಕ್ಕೆ ಬಂದಂತೆ ತೋರುತ್ತಿದೆ. ಪಕ್ಷವು ತನ್ನ ಹಳೆಯ ಆಚಾರ ವಿಚಾರಗಳನ್ನು ಯುವ ನಾಯಕತ್ವದೊಂದಿಗೆ ಬೆರೆಸಿ, ನಿರಂತರತೆ ಮತ್ತು ಬದಲಾವಣೆಯ ಮಿಶ್ರಣವನ್ನು ಹೊರತರುತ್ತಿದೆ. ಜೊತೆಗೆ, ಇವರಿಬ್ಬರೂ ಪ್ರಚಾರದ ತಂತ್ರವನ್ನು ಎಚ್ಚರಿಕೆಯಿಂದ ಹಂಚಿಕೊಂಡಿದ್ದಾರೆ. ಇಬ್ಬರೂ ತಮ್ಮ ಪ್ರವಾಸಗಳನ್ನು ಪರಸ್ಪರ ಅತಿಕ್ರಮಿಸದಂತೆ ಮತ್ತು ಗರಿಷ್ಠ ಜನರನ್ನು ತಲುಪುವಂತೆ ಸಂಯೋಜಿಸಿದ್ದಾರೆ.

ಮಮತಾ ಉತ್ತರ ಬಂಗಾಳದಲ್ಲಿ ಪ್ರಚಾರ ನಡೆಸುವಾಗ, ಅಭಿಷೇಕ್ ದಕ್ಷಿಣದ ಮೇಲೆ, ವಿಶೇಷವಾಗಿ ತಮ್ಮ ಡೈಮಂಡ್ ಹಾರ್ಬರ್ ಕ್ಷೇತ್ರದ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಅದೇ ರೀತಿ ಅಭಿಷೇಕ್ ಉತ್ತರಕ್ಕೆ ತೆರಳಿದಾಗ, ಮಮತಾ ದಕ್ಷಿಣಕ್ಕೆ ಬರುತ್ತಾರೆ. ತಮ್ಮ ಓಡಾಟವನ್ನು ಮರು-ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಈ ಪ್ರಚಾರ ಮತ್ತು ಕೆಲಸದ ವಿಭಜನೆಯನ್ನು ಟಿಎಂಸಿ ಮಾಧ್ಯಮ ತಂಡವಾದ ಐ-ಪ್ಯಾಕ್ ಸಂಸ್ಥೆ ನಿರ್ವಹಿಸುತ್ತಿದೆ. ಅದು ವ್ಯವಸ್ಥಿತ ಯೋಜನೆಯನ್ನು ಪಕ್ಷಕ್ಕೆ ನೀಡುತ್ತಿದೆ ಎಂದು ವರದಿಯಾಗಿದೆ.

ಅಂತೆಯೇ, ಅವರಿಬ್ಬರೂ ತಮ್ಮ ಪ್ರಚಾರದ ಸಂದೇಶಗಳನ್ನೂ ವಿಭಜಿಸಿಕೊಂಡಿದ್ದಾರೆ. ಅಭಿಷೇಕ್ ಯುವ ಕೇಂದ್ರಿತ ವಿಷಯಗಳಾದ ಉದ್ಯೋಗ, ಕೈಗಾರಿಕಾ ಬೆಳವಣಿಗೆ ಹಾಗೂ ‘ನವ ಬಂಗಾಳ’ದ ದೃಷ್ಟಿಕೋನದ ಮೇಲೆ ಗಮನ ಹರಿಸಿದರೆ, ಮಮತಾ ಕಲ್ಯಾಣ ಯೋಜನೆಗಳು, ಆಡಳಿತ, ಬಿಜೆಪಿಯ ಮೇಲಿನ ರಾಜಕೀಯ ದಾಳಿಗಳಿಗೆ ಒತ್ತು ನೀಡುತ್ತಾರೆ. ಇಬ್ಬರೂ ಬಿಜೆಪಿಯನ್ನು ಟೀಕಿಸುತ್ತಾರಾದರೂ, ಅವರ ಧಾಟಿ ಮತ್ತು ಶೈಲಿ ವಿಭಿನ್ನವಾಗಿದೆ.

ಆದಾಗ್ಯೂ, ಕೆಲವು ವಿಷಯಗಳಲ್ಲಿ ಅವರು ಏಕಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ‘ಚುನಾವಣಾ ದೌರ್ಜನ್ಯ’ ನಡೆಯುತ್ತಿದೆ ಎಂದು ಇಬ್ಬರೂ ಆರೋಪಿಸುತ್ತಿದ್ದಾರೆ, ಚುನಾವಣಾ ಆಯೋಗವನ್ನು ಟೀಕಿಸುತ್ತಿದ್ದಾರೆ. ಇಬ್ಬರೂ ಬಿಜೆಪಿ ನಾಯಕ ಸುವೇಂದು ಅಧಿಕಾರಿಯನ್ನು ಪದೇ ಪದೇ ಗುರಿಯಾಗಿಸಿಕೊಂಡಿದ್ದಾರೆ. ಹೆಚ್ಚಾಗಿ ಅವರ ಹೆಸರನ್ನು ಉಲ್ಲೇಖಿಸದೆಯೇ ಅವರನ್ನು ‘ದ್ರೋಹಿ’ ಎಂದು ಬಣ್ಣಿಸುತ್ತಿದ್ದಾರೆ.

ಸುವೇಂದು ಅಧಿಕಾರಿ ಪ್ರತಿನಿಧಿಸುತ್ತಿರುವ ಮತ್ತು ಈಗಲೂ ಸ್ಪರ್ಧಿಸಿರುವ ನಂದಿಗ್ರಾಮದ ಮೇಲೆ ಅಭಿಷೇಕ್ ಬ್ಯಾನರ್ಜಿ ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ. ಸುವೇಂದು ವಿರುದ್ಧ ಅವರ ಸಹವರ್ತಿಯೇ ಆಗಿದ್ದ ಪವಿತ್ರ ಕರ್ ಅವರನ್ನು ಟಿಎಂಸಿ ಕಣಕ್ಕಿಸಿದೆ. ಅವರ ಪರವಾಗಿ ಅಭಿಷೇಕ್ ಭಾರೀ ಪ್ರಚಾರ ನಡೆಸುತ್ತಿದ್ದಾರೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದಾರೆ. ಅವರು ಕ್ಷೇತ್ರದಲ್ಲಿ ಆಡಳಿತಾತ್ಮಕ ಕಾರ್ಯನಿರ್ವಹಣೆಯನ್ನು ನಿಕಟವಾಗಿ ಗಮನಿಸುತ್ತಿದ್ದರೆ, ಪಕ್ಷವು ಬ್ಲಾಕ್ ಮಟ್ಟದಲ್ಲಿ ವಿವರವಾದ ಚುನಾವಣಾ ಮೌಲ್ಯಮಾಪನಗಳನ್ನು ನಡೆಸುತ್ತಿದೆ.

ಮಮತಾ ಬ್ಯಾನರ್ಜಿ ಅವರ ಪ್ರಚಾರವು ಎಂದಿನಂತೆ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಸಂಬಂಧದ ಮೇಲೆ ಆಧಾರಿತವಾಗಿದೆ. ಅವರು ಗ್ರಾಮೀಣ ಬಂಗಾಳದ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ತಮ್ಮನ್ನು ತಾವು ದಾಳಿಗೊಳಗಾದ ನಾಯಕಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಜೊತೆಗೆ, ವಿಶೇಷವಾಗಿ ಮಹಿಳೆಯರು, ಒಬಿಸಿ, ಎಸ್‌ಸಿ/ಎಸ್‌ಟಿ ಹಾಗೂ ಮುಸ್ಲಿಂ ಸಮುದಾಯಗಳನ್ನು ಹೆಚ್ಚಾಗಿ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಭಿಷೇಕ್ ಅವರು ಮತುವಾ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಸಂದೇಶ್‌ಖಾಲಿ, ಆರ್.ಜಿ ಕರ್ ಘಟನೆಗಳಿಗೆ ಮರುಜೀವ ತುಂಬಲು BJP ಕುತಂತ್ರ!

ಮಾರ್ಚ್ 24 ರಂದು, ಟಿಎಂಸಿ ಪಥರ್ ಪ್ರತಿಮಾದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಅಭಿಷೇಕ್ ಬ್ಯಾನರ್ಜಿ, ಪಕ್ಷದ ಅಭ್ಯರ್ಥಿ ಸಮೀರ್ ಕುಮಾರ್ ಜನಾ ಅವರು 40,000 ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂಬ ಗುರಿ ನಿಗದಿಪಡಿಸಿದರು. ಅವರು ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಎತ್ತಿ ತೋರಿಸಿದರು. ಅಂತೆಯೇ, ಐದು ಪ್ರಮುಖ ಭರವಸೆಗಳನ್ನು ನೀಡಿದರು: ಲಕ್ಷ್ಮೀರ್ ಭಂಡಾರ್ ಯೋಜನೆಯ ವಿಸ್ತರಣೆ, ಆವಾಸ್ ಯೋಜನೆಯಡಿ ಎಲ್ಲರಿಗೂ ಮನೆ, ಪ್ರತಿ ಬ್ಲಾಕ್‌ನಲ್ಲಿ ಸುಲಭ ವೈದ್ಯಕೀಯ ಸೇವೆ, ಎಲ್ಲ ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರು ಹಾಗೂ ಸಾರ್ವತ್ರಿಕ ವೃದ್ಧಾಪ್ಯ ವೇತನ.

ಜೊತೆಗೆ, ಯುವಶ್ರೀ, ಲಕ್ಷ್ಮೀರ್ ಭಂಡಾರ್ ಹಾಗೂ ಸ್ವಾಸ್ಥ್ಯ ಸಾಥಿ ಅಡಿಯಲ್ಲಿನ ಫಲಾನುಭವಿಗಳು ಮತ್ತು ಪಥಶ್ರೀ ಅಡಿಯಲ್ಲಿ ನಿರ್ಮಿಸಲಾದ ಗ್ರಾಮೀಣ ರಸ್ತೆಗಳಂತಹ ಮೂಲಸೌಕರ್ಯ ಯೋಜನೆಗಳ ಕುರಿತು ಅಂಕಿಅಂಶಗಳ ಸಹಿತ ವಿವರಿಸಿದರು. ಅದೇ ಸಮಯದಲ್ಲಿ, ವಸತಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರ ಸರ್ಕಾರವು ನೀಡಿಬೇಕಿದ್ದ ಹಣವನ್ನು ತಡೆಹಿಡಿದಿದೆ ಎಂದು ಆರೋಪಿಸಿದರು.

ಇದಕ್ಕೆ ವ್ಯತಿರಿಕ್ತವಾಗಿ ಮಮತಾ ಬ್ಯಾನರ್ಜಿ ಮತ್ತೊಂದು ಶೈಲಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅದೇ ದಿನ (ಮಾರ್ಚ್‌ 24) ಉತ್ತರ ಬಂಗಾಳದ ಡೂವಾರ್ಸ್ ಪ್ರದೇಶದಲ್ಲಿ ಪ್ರಚಾರ ನಡೆಸಿದ ಮಮತಾ, ಚಾಲ್ಸಾದಿಂದ ಲಟಗುರಿಯ ಮಾರ್ಗಮಧ್ಯೆ ಆದಿವಾಸಿ ನೃತ್ಯಗಾರರೊಂದಿಗೆ ಸೇರಿಕೊಂಡರು. ನೃತ್ಯ ಮಾಡಿದರು. ಇದು ಅವರ ಸಹಜತೆ ಮತ್ತು ಸಾಂಸ್ಕೃತಿಕ ಸಂಬಂಧದ ಮೇಲಿನ ಒತ್ತನ್ನು ಪ್ರತಿಫಲಿಸುತ್ತದೆ. ತಮ್ಮ ಭಾಷಣಗಳಲ್ಲಿ ಅವರು ಜಾತಿ ಆಧಾರಿತ ರಾಜಕಾರಣವನ್ನು ವಿರೋಧಿಸಿ, ಸಾಮಾಜಿಕ ಏಕತೆಗೆ ಕರೆ ನೀಡಿದರು.

ಮಮತಾ ಮತ್ತು ಅಭಿಷೇಕ್ ವಿಭಿನ್ನ ಪ್ರದೇಶಗಳಲ್ಲಿ, ಭಿನ್ನ ರೀತಿಯಲ್ಲಿ, ನಾನಾ ತೆರನಾಗಿ ಪ್ರಚಾರ ನಡೆಸುತ್ತಿದ್ದಾರೆ. 4ನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅಧಿಕಾರ ಮುಂದುವರೆಸುವ ಭರವಸೆಯೂ ಅವರಲ್ಲಿದೆ. ಮಮತಾ-ಅಭಿಷೇಕ್ ತಂತ್ರ-ಪ್ರತಿತಂತ್ರಗಳು ಬಿಜೆಪಿಯನ್ನು ಕಂಗಾಲಾಗಿಸಿವೆ. ಆದಾಗ್ಯೂ, ಬಿಜೆಪಿಗರು ಯಥಾಪ್ರಕಾರ, ಕೋಮುದ್ವೇಷ, ಒಳನುಸುಳುಕೋರರು ಎಂಬಿತ್ಯಾದಿ ‘ಅಪ್ಪ ಹಾಕಿದ ಆಲದ ಮರ’ಕ್ಕೆ ಜೋತು ಬಿದ್ದಿದ್ದಾರೆ, ಹೆಣಗಾಡುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವ ಪೀಳಿಗೆ ಸತ್ಯ, ಸರಳತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ವಿಜಯಾ ಕೋರಿಶೆಟ್ಟಿ

ಸತ್ಯ, ಅಹಿಂಸೆ, ಸರಳತೆ, ಕರ್ತವ್ಯನಿಷ್ಠೆ ಮತ್ತು ನೈತಿಕ ಮೌಲ್ಯಗಳು ಕೇವಲ ಇತಿಹಾಸದ...

ಗಾಂಧೀಜಿ ಹೆಸರು, ವಿಚಾರಧಾರೆ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್

"ಮಹಾತ್ಮ ಗಾಂಧೀಜಿ ಭಾರತದ ಆತ್ಮವಿದ್ದಂತೆ. ಅವರ ಹೆಸರು ಹಾಗೂ ವಿಚಾರಧಾರೆಯನ್ನು ಅಳಿಸಿಹಾಕಲು...

ಸಾಗರ | ಗೂಡ್ಸ್ ಆಟೋ ಢಿಕ್ಕಿ; ಚಿಕಿತ್ಸೆ ಫಲಿಸದೆ ಬಾಲಕ ಸಾವು

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಗೂಡ್ಸ್ ಆಟೋ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ...

ಏಷ್ಯನ್ ಗೇಮ್ಸ್: 4 ದಶಕಗಳ ಬಳಿಕ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಒಲಿದ ಸುವರ್ಣ ಪದಕ

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ...