ಪಂಚರತ್ನ ರಥಯಾತ್ರೆಗೆ ತೆರೆ | ದೇವೇಗೌಡರ ಭಾಷಣಕ್ಕೆ ಕಣ್ಣೀರಿಟ್ಟ ಕುಮಾರಸ್ವಾಮಿ, ರೇವಣ್ಣ

Date:

  • ಜಯಘೋಷಗಳ ನಡುವೆ ಜೆಡಿಎಸ್‌ನ ಪಂಚರತ್ನ ರಥಯಾತ್ರೆಗೆ ತೆರೆ
  • ಜನಸ್ತೋಮ ಕಂಡು ಕ್ಷಣಕಾಲ ಭಾವುಕರಾದ ಎಚ್‌ ಡಿ ದೇವೇಗೌಡ

ಲಕ್ಷಾಂತರ ಅಭಿಮಾನಿಗಳು ಮತ್ತು ಕಾರ್ಯಕರ್ತರ ಜಯಘೋಷಗಳ ನಡುವೆ ಜೆಡಿಎಸ್‌ನ ಪಂಚರತ್ನ ರಥಯಾತ್ರೆಯ ಸಮಾರೋಪ ಭಾನುವಾರ ಸಂಜೆ ನಡೆಯಿತು.

ಮೈಸೂರು ನಗರದ ಉತ್ತನಹಳ್ಳಿ ರಿಂಗ್​ ರಸ್ತೆಯ ಜ್ವಾಲಾಮುಖಿ ತ್ರಿಪುರ ದೇಗುಲದ ಮೈದಾನದಲ್ಲಿ ಜೆಡಿಎಸ್‌ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಎಚ್‌ ಡಿ ಕುಮಾರಸ್ವಾಮಿ ಪರ ಘೋಷಣೆಗಳು ಮುಗಿಲು ಮುಟ್ಟಿದವು. ಎಲ್ಲಡೆಯೂ ಪಕ್ಷದ ಬಾವುಟಗಳು ಹಾರಾಡಿದವು.

ಅನಾರೋಗ್ಯದ ಕಾರಣ ಗಾಲಿಕುರ್ಚಿಯಲ್ಲಿ ಜೆಡಿಎಸ್‌ ವರಿಷ್ಠ ಎಚ್ ಡಿ ದೇವೇಗೌಡರನ್ನು ವೇದಿಕೆಗೆ ಕರೆತರಲಾಯಿತು. ಈ ವೇಳೆ ಅವರು ಕುಳಿತುಕೊಂಡೇ ಜನರತ್ತ ಕೈಬೀಸಿದರು. ಅವರೊಂದಿಗೆ ಎಚ್ ಡಿ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಸೂರಜ್ ರೇವಣ್ಣ ಹೆಜ್ಜೆ ಹಾಕಿದರು. ನೆರೆದಿದ್ದ ಜನಸ್ತೋಮ ಕಂಡು ದೇವೇಗೌಡ ಕ್ಷಣಕಾಲ ಭಾವುಕರಾದರು.

ರೈತಗೀತೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ದೇವೇಗೌಡ “ದೇವರ ಆಶೀರ್ವಾದ, ಕಾರ್ಯಕರ್ತ ಶಕ್ತಿಯಿಂದ ಮತ್ತೆ ಅಧಿಕಾರಕ್ಕೆ ಜೆಡಿಎಸ್‌ ಬರಲಿದೆ. ನಾನು ಒಬ್ಬ ರೈತನ ಮಗ. ನೀವು ರೈತರ ಮಕ್ಕಳು. ಬಣ್ಣದ ನಾಟಕದ ಮಾತುಗಳಿಂದ ಯಾವುದೇ ಅಧಿಕಾರಕ್ಕೆ ಬಂದವರಲ್ಲ” ಎಂದರು.

ದೇವೇಗೌಡರು ಲಿಖಿತ ಭಾಷಣ ಓದುತ್ತಿರಬೇಕಾದರೆ, ಅತ್ತ ಮಾಜಿ ಸಿಎಂ ಎಚ್​ ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಎಚ್‌ ಡಿ ರೇವಣ್ಣ ಭಾವುಕರಾಗಿ ಕಣ್ಣೀರು ಹಾಕಿದರು.

ನಿಮ್ಮನ್ನು ನೋಡುತ್ತೇನೋ, ಇಲ್ಲವೋ ಎಂದುಕೊಂಡಿದ್ದೆ

“ನಾನು ಜೀವನದಲ್ಲಿ ಉಳಿದಿದ್ದು ರಾಜಕೀಯದಲ್ಲಾದರೂ ಬೆಳೆದಿದ್ದು ಮಾತ್ರ ನಿಮ್ಮಿಂದ ಮತ್ತು ಆ ದೇವರ ಕೃಪೆಯಿಂದ. ನಾನು ನಂಬುವುದು ಎರಡೇ ಶಕ್ತಿಗಳನ್ನು ಒಂದು ಆ ಭಗವಂತ ಮತ್ತು ನಮ್ಮ ಕಾರ್ಯಕರ್ತರು. ನನಗೆ ಇತ್ತೀಚೆಗೆ ಆರೋಗ್ಯದಲ್ಲಿ ತುಂಬಾ ಏರುಪೇರಾಗಿತ್ತು. ನಿಮ್ಮನ್ನು ನೋಡುತ್ತೇನೋ, ಇಲ್ಲವೋ ಎಂದು ಕೊಂಡಿದ್ದೆ. ಸದ್ಯ ಚೇತರಿಕೆ ಕಂಡಿದ್ದೇನೆ” ಎಂದರು.

90 ದಿನಗಳ ಕಾಲ ಯಾತ್ರೆ ಮಾಡಿದ್ದೇವೆ

“ಕೋಲಾರ ಜಿಲ್ಲೆ ಮುಳಬಾಗಿಲಿನಿಂದ ಪಂಚರತ್ನ ರಥಯಾತ್ರೆ ಆರಂಭಿಸಿದ್ದೆ. 90 ದಿನಗಳ ಕಾಲ ಈ ಪಂಚರತ್ನ ರಥಯಾತ್ರೆ ಮಾಡಿದ್ದೇವೆ. ಜನತೆ ಆಶೀರ್ವಾದದಿಂದ ಜೆಡಿಎಸ್‌ ಮತ್ತೆ ಅಧಿಕಾರಕ್ಕೆ ಬರಲಿದೆ” ಎಂದು ಎಚ್‌ ಡಿ ಕುಮಾರಸ್ವಾಮಿ ಹೇಳಿದರು.

“ನನಗೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದು ರಾಮನಗರ ಜಿಲ್ಲೆಯ ಜನರು. ನನ್ನ ರಾಜಕೀಯ ಬೆಳವಣಿಗೆಗೆ ಕಾರಣವಾಗಿದ್ದು ಮಂಡ್ಯ, ಮೈಸೂರು ಜನ. ರೈತರ ಮಕ್ಕಳು ಕೂಡ ನನ್ನ ಹೋರಾಟಕ್ಕೆ ದೇಣಿಗೆ ನೀಡಿದ್ದಾರೆ. ದೇವೇಗೌಡರು ಶತಾಯುಷಿಗಳಾಗಿ ಇರಬೇಕು. ಇದರಲ್ಲಿ ನಮ್ಮ ಸ್ವಾರ್ಥವಿಲ್ಲ. ನಿಮ್ಮ ಹಾರೈಕೆಯಿಂದ ಈ ಬಾರಿ 120 ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು ಸಾಧಿಸಬೇಕು” ಎಂದು ಕೇಳಿಕೊಂಡರು.

“ದೇವೇಗೌಡರು ನಮಗೆಲ್ಲ ಆದರ್ಶ ನಾಯಕರು ಎಂದು ಯಡಿಯೂರಪ್ಪ ಹೇಳುತ್ತಾರೆ. ಹೀಗಿದ್ದ ಮೇಲೆ ಕಾಂಗ್ರೆಸ್‌ನವರು ಯಾವ ಲೆಕ್ಕ. ಸಿದ್ದರಾಮಯ್ಯ, ಬೊಮ್ಮಾಯಿ ಸೇರಿ ಹಲವರು ಜೆಡಿಎಸ್‌ನಲ್ಲೇ ಬೆಳೆದವರು. ಕಾಂಗ್ರೆಸ್ ಉಳಿಯಲ್ಲ ಅಂತಾ ಕುಮಾರಸ್ವಾಮಿ ಅವರನ್ನು ತೆಗೆದರು ಹಾಕಿದರು” ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಹೇಳಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೀವ ಪ್ರಮಾಣ ಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಎರಡೇ ದಿನ ಬಾಕಿ

ಕೇಂದ್ರ ಸರ್ಕಾರ ಹಾಗೂ ನಾನಾ ರಾಜ್ಯಗಳಲ್ಲಿ ಉದ್ಯೋಗ ಮಾಡಿ ನಿವೃತ್ತಿ ಹೊಂದಿ...

ಹುಬ್ಬಳ್ಳಿ | ಕಸದ ರಾಶಿಯಿಂದ ಸೂಸುವ ದಟ್ಟ ಹೊಗೆ; ಜನರ ಪರದಾಟ

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ದಶಕಗಳಷ್ಟು ಹಳೆಯದಾದ ಕಸದ ರಾಶಿಗಳಿದ್ದು, ಸಾಕಷ್ಟು ಸಮಸ್ಯೆಗಳನ್ನು...

ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ಮಕ್ಕಳಿಗಿದು ಸುರಕ್ಷಿತ ತಾಣವೇ?

ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ನಾಲ್ವರು ಮುಖ್ಯಮಂತ್ರಿಗಳನ್ನು ಕಂಡಿದೆ. ಆದರೂ ರಾಜ್ಯದ...

ಹೆಣ್ಣುಭ್ರೂಣ ಹತ್ಯೆ ಪ್ರಕರಣ: 9 ಮಂದಿ ಆರೋಪಿಗಳ ಬಂಧನ; ಹಲವರ ಕೈವಾಡವಿರುವ ಶಂಕೆ

ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತ ಪ್ರಕರಣದ ಆರೋಪಿಗಳು 1,500ಕ್ಕೂ ಅಧಿಕ...