ಕೊರೋನಾ ಭ್ರಷ್ಟರ ಬಗ್ಗೆ ತನಿಖಾ ಆಯೋಗಕ್ಕೆ ಯತ್ನಾಳ್ ಮಾಹಿತಿ ನೀಡಲಿ: ದಿನೇಶ್ ಗುಂಡೂರಾವ್

Date:

ಕೋವಿಡ್ ಭ್ರಷ್ಟರ ಮಾಹಿತಿಯನ್ನ ಯತ್ನಾಳ್ ಅವರು, ತಮ್ಮ ಕೇಂದ್ರ ನಾಯಕರಿಗೆ ನೀಡುವ ಬದಲು ಜಸ್ಟಿಸ್ ಕುನ್ನಾ ಅವರ ತನಿಖಾ ಆಯೋಗಕ್ಕೆ ನೀಡಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

- Advertisement -

ಇತ್ತೀಚೆಗೆ, ಬಿಜೆಪಿ ಸರ್ಕಾರದಲ್ಲಿ ನಡೆದಿದ್ದ ಕೊರೋನಾ ಹಗಣರದ ಬಗ್ಗೆ ಬಿಜೆಪಿ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದೇನೆ ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದರು. ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, “ಕೋವಿಡ್‌ನಲ್ಲಿ ಕಾಯಕ ಮರೆತು ಕಳಂಕದ ಕೆಲಸ ಮಾಡಿದ ಭ್ರಷ್ಟರ ಮಾಹಿತಿಯನ್ನ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಕೇಂದ್ರ ನಾಯಕರಿಗೆ ನೀಡಿದರೆ ಏನು ಪ್ರಯೋಜನ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

“ಕೇಂದ್ರ ನಾಯಕರ ಸಹಕಾರವಿಲ್ಲದೇ 40 ಸಾವಿರ ಕೋಟಿ ಕೋವಿಡ್ ಭ್ರಷ್ಟಾಚಾರ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ನಡೆದಿರುತ್ತಾ. ಕೋವಿಡ್ ಭ್ರಷ್ಟಾಚಾರದ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮಲ್ಲಿರುವ ಮಾಹಿತಿ, ದಾಖಲೆಗಳನ್ನ ಕೇಂದ್ರ ನಾಯಕರಿಗೆ ನೀಡುವ ಬದಲು ಜಸ್ಟೀಸ್ ಕುನ್ಹಾ ಅವರ ತನಿಖಾ ಆಯೋಗಕ್ಕೆ ನೀಡಲಿ” ಎಂದಿದ್ದಾರೆ.

“ಬಸವೇಶ್ವರರ ಅನುಯಾಯಿ ಎಂದು ಹೇಳಿಕೊಳ್ಳುವ ಬಸನಗೌಡ ಯತ್ನಾಳ್ ಅವರು ಅಂತರಂಗ ಶುದ್ದಿ ಬಹಿರಂಗ ಶುದ್ದಿ‌ ಎರಡನ್ನೂ ಪಾಲಿಸಬೇಕು. ನಾಲ್ಕು ಗೋಡೆಗಳ ಮಧ್ಯೆ ಕೇಂದ್ರ ನಾಯಕರಿಗಷ್ಟೇ ಮಾಹಿತಿ ನೀಡಿದ್ದೇನೆ ಎಂದರೆ, ಅದರಿಂದ ಪ್ರಯೋಜನವಿಲ್ಲ” ಎಂದು ಹೇಳಿದ್ದಾರೆ.

“ಬಸವಣ್ಣನವರ ವಚನ ಪ್ರಸ್ತಾಪಿಸಿರುವ ಸಚಿವರು, ಕೋವಿಡ್ ವೇಳೆ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಶ್ರೇಷ್ಠ ಸಂದೇಶವನ್ನ ಪಾಲಿಸಬೇಕಿತ್ತು. ಆದರೆ ಜನರ ಜೀವ ಉಳಿಸಲು ಹೋರಾಟ ನಡೆಯುತ್ತಿದ್ದಾಗ ಬರೀ ಕಳಂಕದ ಕೆಲಸದಲ್ಲಿ ತೊಡಗಿದ್ದು ಅತ್ಯಂತ ಅಮಾನವೀಯ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಶಸ್ವಿಯಾಗಿ ನಡೆದ ʼಕೊಂದವರು ಯಾರು?ʼ ಆಂದೋಲನ ಆಯೋಜಿಸಿದ್ದ ರಾಷ್ಟ್ರೀಯ ವಿಚಾರಸಂಕಿರಣ

ಕೊಂದವರು ಯಾರು? ಆಂದೋಲನ ಆಯೋಜಿಸಿದ್ದ “ನಂಬಿಕೆಯೊಂದಿಗೆ ಸಂವಾದ: ಅಧಿಕಾರ, ಪಿತೃಪ್ರಧಾನತೆ, ಧರ್ಮ...

ಧಾರವಾಡ | ಎನ್‌.ಎಸ್‌.ಎಸ್‌ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ದಾರಿ: ನಾಲತವಾಡ

ವಿದ್ಯಾರ್ಥಿಗಳಲ್ಲಿ ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣ...

ವಿಜಯಪುರ | ಮತದಾರರ ಹಕ್ಕು ರಕ್ಷಣೆಗೆ SIR ಪರಿಶೋಧನಾ ಪ್ರವಾಸ; ನಟ ಪ್ರಕಾಶ್ ರಾಜ್ ಭಾಗಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತದಾರರ...

ಯುವ ಪೀಳಿಗೆ ಸತ್ಯ, ಸರಳತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ವಿಜಯಾ ಕೋರಿಶೆಟ್ಟಿ

ಸತ್ಯ, ಅಹಿಂಸೆ, ಸರಳತೆ, ಕರ್ತವ್ಯನಿಷ್ಠೆ ಮತ್ತು ನೈತಿಕ ಮೌಲ್ಯಗಳು ಕೇವಲ ಇತಿಹಾಸದ...