ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಸಫಾಯಿ ಕರ್ಮಚಾರಿಗಳು/ಪೌರಕಾರ್ಮಿಕರುಗಳಿಗೆ ವಿದೇಶದಲ್ಲಿನ ಸಚ್ಛತಾ ನಿರ್ವಹಣಾ ಅಧ್ಯಯನದ ಎರಡನೇ ಬ್ಯಾಚ್‌ನ ವಿದೇಶ ಪ್ರವಾಸ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್ ಸಿ ಮಹದೇವಪ್ಪ ಚಾಲನೆ ನೀಡಿದರು.
ಮೈಸೂರು, ಬಳ್ಳಾರಿ, ಬೆಳಗಾವಿ ಹಾಗೂ ಧಾರವಾಡ ಮಹಾನಗರ ಪಾಲಿಕೆಯ 37 ಸಫಾಯಿ ಕರ್ಮಚಾರಿ/ಪೌರಕಾರ್ಮಿಕರುಗಳು ಸಿಂಗಾಪುರದಲ್ಲಿ ಸ್ವಚ್ಚತಾ ನಿರ್ವಹಣಾ ಕ್ರಮಗಳ ಕುರಿತು ವಿದೇಶ ಪ್ರವಾಸದ ಕಾರ್ಯಕ್ರಮದಲ್ಲಿ ಅಧ್ಯಯನ ನಡೆಸಲಿದ್ದಾರೆ.
ಮೂರು ದಿನಗಳ ಕಾಲ ಸಿಂಗಾಪುರದಲ್ಲಿ ಸ್ವಚ್ಚತಾ ನಿರ್ವಹಣಾ ಅಧ್ಯಯನ ನಡೆಸಿದ ಬಳಿಕ ಸಫಾಯಿ ಕರ್ಮಚಾರಿ/ಪೌರಕಾರ್ಮಿಕರು ರಾಜ್ಯಕ್ಕೆ ಹಿಂದಿರುಗಲಿದ್ದು, ತದನಂತರ ಹಂತ ಹಂತವಾಗಿ ಏಳು ಬ್ಯಾಚ್‌ಗಳಲ್ಲಿ ಸ್ವಚ್ಚತಾ ನಿರ್ವಹಣಾ ಅಧ್ಯಯನದ ವಿದೇಶ ಪ್ರವಾಸ ಕಾರ್ಯಕ್ರಮ ನಡೆಯಲಿದೆ.