ಪ್ರಜ್ವಲ್‌ ಮತ್ತು ರೇವಣ್ಣ ನಿವಾಸದಲ್ಲಿ ತಪಾಸಣೆ ಪೂರ್ಣಗೊಳಿಸಿದ ಎಫ್‌ಎಸ್‌ಎಲ್ ತಂಡ

Date:

ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಎಸ್‌ಪಿ ಕಚೇರಿ ಪಕ್ಕದಲ್ಲೇ ಇರುವ ಲೋಕಸಭಾ ಸದಸ್ಯರ ನಿವಾಸ ಹಾಗೂ ಹೊಳೆನರಸೀಪುರ ಪಟ್ಟಣದಲ್ಲಿರುವ ಮಾಜಿ ಸಚಿವ ಎಚ್ ಡಿ ರೇವಣ್ಣ ನಿವಾಸದಲ್ಲಿ ಭೇಟಿ ನೀಡಿದ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್) ತಂಡ ತಪಾಸಣೆಯನ್ನು ಪೂರ್ಣಗೊಳಿಸಿದೆ.

ಸಂಸದರ ನಿವಾಸದಲ್ಲಿ ಅತ್ಯಾಚಾರವಾಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಸತತ ನಾಲ್ಕು ಗಂಟೆಗಳ ನಿವಾಸದಲ್ಲಿ ಪರಿಶೀಲನೆ ನಡೆಸಲಾಯಿತು. ಅನೇಕ ದಾಖಲೆಗಳನ್ನು ಸಂಗ್ರಹಿಸಿದ ಅಧಿಕಾರಿಗಳು ನಂತರ ಹೊಳೆನರಸೀಪುರಕ್ಕೆ ತೆರಳಿದರು.

ಹಿಂದೆ ಸಂತ್ರಸ್ತ ಮಹಿಳೆಯೊಬ್ಬರು ತನ್ನ ಮೇಲೆ ಸಂಸದರ ನಿವಾಸದಲ್ಲಿ ಅತ್ಯಾಚಾರ ನಡೆದಿದೆ ಎಂದು ಹೇಳಿಕೆ ನೀಡಿ ದೂರು ದಾಖಲಿಸಿದ್ದರು. ಮಹಿಳೆಯ ದೂರನ್ನಾಧರಿಸಿ ಎಫ್‌ಎಸ್‌ಎಲ್‌ ತಂಡ ಸ್ಥಳ ಪರಿಶೀಲನೆ ನಡೆಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸ್ಥಳ ಪರಿಶೀಲನೆ ಬಳಿಕ ಸಂಸದರ ನಿವಾಸವನ್ನು ಸೀಜ್ ಮಾಡಿ ಬೀಗ ಹಾಕಿ ಕೀಲಿಯನ್ನು ಎಫ್‌ಎಸ್‌ಎಲ್‌ ಅಧಿಕಾರಿಗಳ ತಂಡ ತಮ್ಮ ವಶಕ್ಕೆ ಪಡೆದಿದೆ. ಮೇ 4 ರಂದು ಸಂತ್ರಸ್ತ ಮಹಿಳೆ ಜತೆ ಎಸ್‌ಐಟಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಅದಾದ ಬಳಿಕ ಮತ್ತೆ ಮತ್ತೆ ಎರಡನೇ ಬಾರಿಗೆ ಪರಿಶೀಲನೆ ನಡೆಸಿದ್ದಾರೆ.

ಹೊಳೆನರಸೀಪುರದ ಚೆನ್ನಾಂಬಿಕ ನಿವಾಸದಲ್ಲೂ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಮಹಿಳೆ ನೀಡಿದ ಹೇಳಿಕೆ ಆಧರಿಸಿ ಅಲ್ಲಿಗೂ ತೆರಳಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅನುಮಾನಗಳನ್ನು ಹುಟ್ಟುಹಾಕುವುದೇ ಕೆಲವರ ಕೆಲಸ: ಮುಖ್ಯ ಚುನಾವಣಾ ಆಯುಕ್ತ

ಅನುಮಾನಗಳನ್ನು ಹುಟ್ಟುಹಾಕುವುದೇ ಕೆಲವರ ಕೆಲಸ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್...

ಮೈಸೂರು: ಮೇಕೆ ಮೇಯಿಸುತ್ತಿದ್ದ ಮಹಿಳೆ ಹೊತ್ತೊಯ್ದ ಹುಲಿ

ಮೇಕೆಗಳನ್ನು ಮೇಯಿಸುತ್ತಿದ್ದಾಗ ಹುಲಿ ಯೊಂದು ಹಠಾತ್ ದಾಳಿ ನಡೆಸಿ ಮಹಿಳೆಯನ್ನು ಹೊತ್ತೊಯ್ದ...

ಹಾಸನದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ 6 ಜನರ ಸಾವು

ಇಂದು ಮುಂಜಾನೆ ಹಾಸನ ಹೊರವಲಯದ ಕಂಡ್ಲಿ ಈಚನಹಳ್ಳಿ ಗ್ರಾಮ ಬಳಿಯ ಬೆಂಗಳೂರು-ಮಂಗಳೂರು...

ನಿರ್ಗಮಿಸುವ ಪ್ರಧಾನಿ ತನ್ನನ್ನು ತಾನು ದೇವಮಾನವನೆಂದು ಭಾವಿಸಬಹುದು: ಕಾಂಗ್ರೆಸ್‌

"ನಿರ್ಗಮಿಸುತ್ತಿರುವ ಪ್ರಧಾನಿ ಸೋಲಿನ ವಾಸ್ತವ ತಿಳಿಯುತ್ತಿದ್ದಂತೆ, ಹೆಚ್ಚು ಭ್ರಮೆಯಲ್ಲಿದ್ದಾರೆ. ಅದಕ್ಕೆ ತನ್ನ...