2022ರ ವಿಶ್ವ ಡಿಜಿಟಲ್ ಪಾವತಿ ವಹಿವಾಟಿನಲ್ಲಿ ಭಾರತಕ್ಕೆ ಮೊದಲ ಸ್ಥಾನ | ಕೇಂದ್ರದ ದತ್ತಾಂಶ

Date:

  • ಭಾರತ 2022ರಲ್ಲಿ 8.95 ಲಕ್ಷ ಡಿಜಿಟಲ್ ಪಾವತಿ ವಹಿವಾಟು ನಡೆಸಿದೆ
  • 9 ವರ್ಷದಲ್ಲಿ ಭಾರತ ಡಿಜಿಟಲ್ ಇಂಡಿಯಾ ಮೂಲಕ ಬಹುದೂರ ಸಾಗಿದೆ

ಡಿಜಿಟಲ್‌ ಪಾವತಿ ವಹಿವಾಟಿಗೆ ಸಂಬಂಧಿಸಿ 2022ರ ವಿಶ್ವದ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಕೇಂದ್ರ ಸರ್ಕಾರ ಶನಿವಾರ (ಜೂನ್‌ 10) ಬಿಡುಗಡೆಗೊಳಿಸಿದ ದತ್ತಾಂಶ ಹೇಳಿದೆ.

ಭಾರತ ಇದೀಗ ನಗದು ರಹಿತ ವ್ಯವಹಾರದಲ್ಲಿ ಇತರ ಎಲ್ಲ ರಾಷ್ಟ್ರಗಳನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

2022ರ ಸಾಲಿನಲ್ಲಿ ಭಾರತ 8.95 ಕೋಟಿ ಡಿಜಿಟಲ್‌ ವಹಿವಾಟು ನಡೆಸಿದ್ದು ಈ ಮೂಲಕ ಡಿಜಿಟಲ್‌ ಪಾವತಿ ಮಾಡುವ ವಹಿವಾಟಿನಲ್ಲಿ ದಾಖಲೆ ಬರೆದಿದೆ ಎಂದು ಸರ್ಕಾರದ ದತ್ತಾಂಶ ತಿಳಿಸಿದೆ.

2022ರಲ್ಲಿ ಭಾರತವು ಜಾಗತಿಕ ಆನ್‌ಲೈನ್ ಪಾವತಿಯಲ್ಲಿ ಶೇ 46ರಷ್ಟು ಪಾಲು ಹೊಂದಿದೆ. ಅಲ್ಲದೆ ಡಿಜಿಟಲ್‌ ಪಾವತಿಯಲ್ಲಿ ನಂತರದ ಸ್ಥಾನದಲ್ಲಿರುವ ನಾಲ್ಕು ಪ್ರಮುಖ ರಾಷ್ಟ್ರಗಳ ಡಿಜಿಟಲ್‌ ಪಾವತಿಯನ್ನು ಒಟ್ಟುಗೂಡಿಸಿದರೂ ಭಾರತದ ವಹಿವಾಟು ಮಿಗಿಲಾಗಿದೆ.

ಈ ಮೂಲಕ ಭಾರತ ತನ್ನ ಅಗ್ರಸ್ಥಾನ ಕಾಯ್ದುಕೊಂಡಿದೆ ಎಂದು ದತ್ತಾಂಶ ಹೇಳಿದೆ.

ಭಾರತ ಸರ್ಕಾರದ ನಾಗರಿಕ ಭಾಗವಹಿಸುವಿಕೆಯ ವೇದಿಕೆಯಾದ ಮೈ ಗವರ್ನಮೆಂಟ್ ಇಂಡಿಯಾ ಈ ಕುರಿತು ಟ್ವೀಟ್ ಮಾಡಿದೆ.

“ಡಿಜಿಟಲ್‌ ಪಾವತಿ ವಹಿವಾಟಿನಲ್ಲಿ ಭಾರತ ತನ್ನ ಅಧಿಪತ್ಯ ಮುಂದುವರಿಸಿದೆ. ವಿನೂತ ಪರಿಹಾರ, ಹೊಸ ತಂತ್ರಜ್ಞಾನ, ಕೈಗೆಟುವ ಹಾಗೂ ಸರಳವಾಗಿರುವ ಪಾವತಿ ವ್ಯವಸ್ಥೆ ಮೂಲಕ ಭಾರತ ಅತೀ ದೊಡ್ಡ ನಗದು ರಹಿತ ವ್ಯವಹಾರದ ಆರ್ಥಿಕತೆಯಾಗಿ ಹೊರಹೊಮ್ಮಿದೆ” ಎಂದು ಹೇಳಿದೆ.

ಡಿಜಿಟಲ್ ಪಾವತಿ ವಹಿವಾಟಿನಲ್ಲಿ 2022ರಲ್ಲಿ ಅಗ್ರ ಸ್ಥಾನ ಪಡೆದ ವಿಶ್ವದ ರಾಷ್ಟ್ರಗಳು ಹೀಗಿವೆ. ಭಾರತ – 8.95 ಕೋಟಿ ವಹಿವಾಟು, ಬ್ರೆಜಿಲ್ -2.92 ಕೋಟಿ, ಚೀನಾ – 1.76 ಕೋಟಿ, ಥಾಯ್ಲೆಂಡ್ – 1.65 ಕೋಟಿ ಮತ್ತು ದಕ್ಷಿಣ ಕೊರಿಯಾ -80 ಲಕ್ಷ ವಹಿವಾಟು ನಡೆಸಿವೆ ಎಂದು ದತ್ತಾಂಶ ಹೇಳಿದೆ.

ಈ ಸುದ್ದಿ ಓದಿದ್ದೀರಾ? ಥಾಣೆ ಹತ್ಯೆ ಪ್ರಕರಣ | ಎಚ್‌ಐವಿ ಸೋಂಕಿತನಾಗಿದ್ದ ಹಂತಕ; ಮಹಿಳೆಯದು ಆತ್ಮಹತ್ಯೆ ಎಂದು ಹೇಳಿಕೆ!

ಕಳೆದ 9 ವರ್ಷದಲ್ಲಿ ಭಾರತ ಡಿಜಿಟಲ್ ಇಂಡಿಯಾ ಮೂಲಕ ಬಹುದೂರ ಸಾಗಿದೆ. ಭಾರತದಲ್ಲಿ ಕೃತಕ ಬುದ್ಧಿಮತ್ತೆ (ಎಐ) ನಿರ್ವಹಣೆಯನ್ನು ಡಿಜಿಟಲ್ ನಾಗರಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಂದ್ರಯಾನ 3: ವಿಕ್ರಮ್, ಪ್ರಗ್ಯಾನ್‌ನಿಂದ ಇನ್ನೂ ಯಾವುದೇ ಸಿಗ್ನಲ್ ಬಂದಿಲ್ಲ ಎಂದ ಇಸ್ರೋ

ಚಂದ್ರನ ದಕ್ಷಿಣ ಧ್ರುವದಲ್ಲಿ ನಿಂತಿರುವ ಚಂದ್ರಯಾನ 3 ಯೋಜನೆಯ ಭಾಗವಾದ ವಿಕ್ರಮ್‌...

ಉದಯನಿಧಿ ಪೂರ್ವಜರು ಕೂಡ ಸನಾತನ ಧರ್ಮದ ಬಗ್ಗೆ ಮಾತನಾಡಿದ್ದರು: ನಟ ಕಮಲ್ ಹಾಸನ್

ಕೊಯಮತ್ತೂರಿನಲ್ಲಿ ಮಕ್ಕಳ್ ನೀಧಿ ಮೈಯಂ ಪಕ್ಷದ ಸಭೆಯಲ್ಲಿ ಹೇಳಿಕೆ ನೀಡಿದ ಸ್ಥಾಪಕ ಪೆರಿಯಾರ್...

ಬಿಜೆಪಿ ಸಂಸದನಿಂದ ಅವಹೇಳನ: ಸ್ಪೀಕರ್‌ ವಿರುದ್ಧ ಸಿಡಿದೆದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಮರ್ಯಾದಾ ಪುರುಷ ಸ್ಪೀಕರ್ ಅವರೇ ಏನು ಕ್ರಮ ಕೈಗೊಳ್ಳುತ್ತೀರಿ? ಬಹಿರಂಗವಾಗಿಯೇ ಪ್ರಶ್ನಿಸಿದ...

ಯುಪಿಯ ಸರ್ಕಾರ ಒಬಿಸಿ ಕೋಟಾ ಸೇರಿಸದಿರುವುದಕ್ಕೆ ವಿಷಾದವಿದೆ: ರಾಹುಲ್‌ ಗಾಂಧಿ

ಯುಪಿಎ ಸರ್ಕಾರ 2010ರಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಮಹಿಳೆಯರಿಗೆ...