ಸಂಸತ್‌ನಲ್ಲಿ ‘ಮಾಧ್ಯಮ ಮಸೂದೆ’ ಅಂಗೀಕಾರ; ಆತಂಕಕಾರಿ ಎಂದ ಎನ್‌ಎಜಿ-ಡಿಯುಜೆ

Date:

ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್-2023 ಅನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿವೆ. ಈ ಮಸೂದೆಯಲ್ಲಿ ಪತ್ರಿಕೋದ್ಯಮದ ಮೇಲೆ ಹಲವಾರು ಷರತ್ತುಗಳನ್ನು ಸರ್ಕಾರ ವಿಧಿಸಿದೆ. ಮಸೂದೆಯನ್ನು ರಾಷ್ಟ್ರೀಯ ಪತ್ರಕರ್ತರ ಒಕ್ಕೂಟ (ಎನ್‌ಎಜೆ) ಮತ್ತು ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್ (ಡಿಯುಜೆ) ವಿರೋಧಿಸಿವೆ. ಅಲ್ಲದೆ, ಮಸೂದೆಯ ಷರತ್ತುಗಳು ‘ಆತಂಕಕಾರಿ’ಯಾಗಿವೆ ಎಂದು ಅವು ಹೇಳಿವೆ.

- Advertisement -

ಎರಡೂ ಸಂಘಗಳು ಮಾಧ್ಯಮ ಆಯೋಗಕ್ಕೆ ಜಂಟಿ ಪತ್ರ ಬರೆದಿವೆ. “ಹೊಸ ಮಸೂದೆಯು ಮಾಧ್ಯಮ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತವೆ. ಪತ್ರಕರ್ತರು ಮತ್ತು ಅವರ ಗೌಪ್ಯ ಸುದ್ದಿ ಮೂಲಗಳು ಸೇರಿದಂತೆ ನಾಗರಿಕರ ಮೇಲೆ ವ್ಯಾಪಕ ಕಣ್ಗಾವಲು ಇಡುತ್ತವೆ. ಇದು ಸರ್ಕಾರವು ಮಾಧ್ಯಮಗಳ ಮೇಲೆ ಸೆನ್ಸಾರ್‌ಶಿಪ್‌ ಅಧಿಕಾರ ಸಾಧಿಸಲು ಅವಕಾಶ ಮಾಡಿಕೊಡುತ್ತದೆ. ಇದರಿಂದ ಪತ್ರಿಕಾ ಸ್ವಾತಂತ್ರ್ಯದ ಹರಣವಾಗುವ ಸಾಧ್ಯತೆ ಇದೆ” ಎಂದು ಹೇಳಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

“ಈ ವಿವಾದಾತ್ಮಕ ಸಂಸತ್ತಿನ ಬೆಳವಣಿಗೆಗಳು 2021ರಲ್ಲಿ ಐಟಿ ನಿಯಮಗಳಿಗೆ ಮಾಡಿದ ತಿದ್ದುಪಡಿಗಳನ್ನು ಅನುಸರಿಸುತ್ತವೆ. ಆ ತಿದ್ದುಪಡಿಗಳು ಸರ್ಕಾರಿ ಇಲಾಖೆಗಳಿಗೆ ಆಕ್ಷೇಪಾರ್ಹವೆಂದು ಕಂಡುಬಂದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತೆಗೆದುಹಾಕಲು ಅಧಿಕಾರ ನೀಡಿದ್ದವು. ಸರ್ಕಾರ ಈಗ ಆ ಅಧಿಕಾರವನ್ನು ಮಾಧ್ಯಮಗಳಿಗೂ ವಿಸ್ತರಿಸಿಕೊಳ್ಳುತ್ತಿದೆ” ಎಂದು ಎನ್‌ಎಜಿ ಮತ್ತು ಡಿಯುಜಿ ಹೇಳಿವೆ.

ಈ ಸುದ್ದಿ ಓದಿದ್ದೀರಾ?: ಸಂಸತ್ ಅಧಿವೇಶನ ಒಂದೂವರೆ ಗಂಟೆ ಭಾಷಣ ಮಾಡಿದರೂ ಮಣಿಪುರದ ಬಗ್ಗೆ ತುಟಿ ಬಿಚ್ಚದ ಪ್ರಧಾನಿ ನರೇಂದ್ರ ಮೋದಿ

“ಅಲ್ಲದೆ, ಮಾಹಿತಿ ಹಕ್ಕು ಕಾಯ್ದೆಗೆ (ಆರ್‌ಟಿಐ) ಇತ್ತೀಚಿನ ತಿದ್ದುಪಡಿಗಳು ಸರ್ಕಾರಿ ಮಾಹಿತಿ ಪಡೆಯುವ ನಾಗರಿಕರ ಹಕ್ಕುಗಳನ್ನು ಗಮನಾರ್ಹವಾಗಿ ಮೊಟಕುಗೊಳಿಸಿವೆ. ಈ ತಿದ್ದುಪಡಿಗಳು ಮಾಹಿತಿ ಹಕ್ಕು ಕಾಯಿದೆಯ ‘ಅವನತಿ’ಯನ್ನು ತೋರಿಸಿವೆ” ಎಂದು ಅವು ಆತಂಕ ವ್ಯಕ್ತಪಡಿಸಿವೆ.

ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳು ಮತ್ತು ಪತ್ರಕರ್ತರ ಹಕ್ಕುಗಳು ಹಾಗೂ ಸ್ವಾತಂತ್ರ್ಯಗಳ ಸವೆತವನ್ನು ಎರಡೂ ಸಂಘಟನೆಗಳು ಒತ್ತಿ ಹೇಳಿವೆ. ಅಲ್ಲದೆ, ಮಾಧ್ಯಮ ಮಂಡಳಿಯ ರಚನೆಗೆ ಆಗ್ರಹಿಸಿವೆ. “ಪ್ರಸ್ತಾವಿತ ಮಂಡಳಿಯು ನೈತಿಕ ವರದಿಗಾರಿಕೆ, ಕೋಮುವಾದದ ವಿರುದ್ಧ ಹೋರಾಟ, ಸುದ್ದಿ ಸುದ್ದಿಗಳು ಹಾಗೂ ಸಮಕಾಲೀನ ಸಮಸ್ಯೆಗಳನ್ನು ಪರಿಹರಿಸಲು ನೆರವಾಗುತ್ತದೆ. ಆ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನಗತ್ಯ ಸೆನ್ಸಾರ್ಶಿಪ್‌ಅನ್ನು ತಡೆಯುತ್ತದೆ” ಎಂದು ಹೇಳಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ. 10ರ ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸ್; ಕಠಿಣ ಕ್ರಮದ ಎಚ್ಚರಿಕೆ

ಮುಖ್ಯ ಚುನಾವಣಾ ಆಯುಕ್ತರ (CEC) ಹೊಣೆಗಾರಿಕೆ ಪ್ರಶ್ನಿಸಿ 'ಕಾಕ್ರೋಚ್ ಜನತಾ ಪಾರ್ಟಿ'...

ಪಂಜಾಬ್ ಸಿಎಂ ಕಚೇರಿ ಭ್ರಷ್ಟಾಚಾರದ ಸಿಬಿಐ ತನಿಖೆ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳ...

ಪಶ್ಚಿಮ ಬಂಗಾಳ ಉಪಚುನಾವಣೆ ವೇಳೆ ಅಕ್ರಮದ ಆರೋಪ; ಮರುಮತದಾನಕ್ಕೆ ವಿಪಕ್ಷಗಳ ಆಗ್ರಹ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ...