ಹವಾಯಿ ಕಾಳ್ಗಿಚ್ಚು: ಮೃತರ ಸಂಖ್ಯೆ 53ಕ್ಕೆ ಏರಿಕೆ

Date:

ಹವಾಯಿ ದ್ವೀಪದ ಐತಿಹಾಸಿಕ ಪಟ್ಟಣವನ್ನು ಅಕ್ಷರಶಃ ಭಸ್ಮಗೊಳಿಸಿರುವ ಭೀಕರ ಕಾಳ್ಗಿಚ್ಚಿಗೆ ಸಾವಿಗೀಡಾದವರ ಸಂಖ್ಯೆ 53ಕ್ಕೇರಿದೆ. ಅಮೆರಿಕದ ರಾಜ್ಯವಾದ ಬಳಿಕ ಈ ಪುಟ್ಟ ದ್ವೀಪ ರಾಜ್ಯದ ಇತಿಹಾಸದಲ್ಲೇ ಸಂಭವಿಸಿದ ಅತಿದೊಡ್ಡ ಕಾಳ್ಗಿಚ್ಚು ದುರಂತ ಇದಾಗಿದೆ.

ಹವಾಯಿಯ ಮೌವ್ವಿ ದ್ವೀಪದ ಪಶ್ಚಿಮ ಕರಾವಳಿಯಲ್ಲಿ ಆರಂಭವಾದ ಕಾಳ್ಗಿಚ್ಚು, ಪಕ್ಕದಲ್ಲಿ ಹಾದುಹೋಗುತ್ತಿದ್ದ ಬಿರುಗಾಳಿಯಿಂದಾಗಿ ಕಡಲ ಕಿನಾರೆಯ ಲಹೈನಾ ನಗರವನ್ನು ವ್ಯಾಪಿಸಿತು. ಬೆಂಕಿಯ ಜ್ವಾಲೆ ಎಷ್ಟು ಶೀಘ್ರವಾಗಿ ವ್ಯಾಪಿಸಿತು ಎಂದರೆ ಹಲವು ಮಂದಿ ಯಾವುದೇ ರಕ್ಷಣೆ ಪಡೆಯಲು ಸಾಧ್ಯವಾಗದೇ ಬೀದಿಯಲ್ಲಿ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿಕೊಂಡರು ಅಥವಾ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸಮುದ್ರಕ್ಕೆ ಹಾರಿದರು ಎಂದು ಉನ್ನತ ಮೂಲಗಳು ಹೇಳಿವೆ.

“1960ರಲ್ಲಿ ದೊಡ್ಡ ದ್ವೀಪಕ್ಕೆ ಬೃಹತ್ ಅಲೆ ಅಪ್ಪಳಿಸಿ 61 ಮಂದಿ ಮೃತಪಟ್ಟಿದ್ದರು” ಎಂದು ಗವರ್ನರ್ ಜೋಶ್ ಗ್ರೀನ್ ಹೇಳಿದ್ದಾರೆ. ಹವಾಯಿ ದ್ವೀಪ ಅಮೆರಿಕದ 50ನೇ ರಾಜ್ಯವಾಗಿ ಸೇರ್ಪಡೆಯಾದ ಒಂದು ವರ್ಷದಲ್ಲೇ ಈ ದುರಂತ ಸಂಭವಿಸಿತ್ತು ಎಂದು ನೆನಪಿಸಿಕೊಂಡಿದ್ದಾರೆ. “ಈ ಬಾರಿ ಸಾವಿನ ಸಂಖ್ಯೆ ಅದನ್ನು ಮೀರುವ ಎಲ್ಲ ಸಾಧ್ಯತೆಯೂ ಇದೆ” ಎಂದು ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಲೋಕಸಭೆಯಿಂದ ಅಧೀರ್ ರಂಜನ್ ಅಮಾನತು; ಕಾಂಗ್ರೆಸ್ ಸಂಸದರ ಸಭೆ ಕರೆದ ಸೋನಿಯಾ ಗಾಂಧಿ

ಗುರುವಾರ 53 ಮಂದಿ ಬೆಂಕಿ ದುರಂತದಲ್ಲಿ ಮೃತಪಟ್ಟಿರುವುದನ್ನು ಮೌವ್ವಿ ಕೌಂಟಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಿಸುವ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಲಹೈನಾ ಪಟ್ಟಣ ಗುರುವಾರ ಸಂಪೂರ್ಣ ಸುಟ್ಟು ಕರಕಲಾಗಿರುವ ದೃಶ್ಯ ಕಾಣಿಸುತ್ತಿದ್ದು, ಹೊಗೆಯಾಡುತ್ತಿರುವ ಅವಶೇಷಗಳು ಎಲ್ಲೆಂದರಲ್ಲಿ ಕಾಣಿಸುತ್ತಿವೆ. ಪಟ್ಟಣದ ಶೇ 80ರಷ್ಟು ಭಾಗ ನಾಶವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಲಹೈನಾ ಪಟ್ಟಣಕ್ಕೆ ಬಾಂಬ್ ಬಿದ್ದಂತೆ ಕಾಣಿಸುತ್ತಿದೆ ಎಂದು ವಿವರಿಸುವುದು ನಿಸ್ಸಂಶಯ ಎಂದು ಅವರು ಹೇಳಿದ್ದಾರೆ. “ಇದು ಸಂಪೂರ್ಣ ವಿನಾಶ. ನಾವು ದಶಕಗಳಿಂದ ಸಂತೋಷದಿಂದ ಕಳೆದ, ಸಂಭ್ರಮಿಸಿದ, ತಲೆಮಾರುಗಳನ್ನು ಕಳೆದ ಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿವೆ” ಎಂದು ಅವರು ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುವೈತ್ ಅಗ್ನಿ ದುರಂತದಲ್ಲಿ 40 ಮಂದಿ ಭಾರತೀಯರು ಮೃತ್ಯು; ಉನ್ನತಮಟ್ಟದ ಸಭೆ ಕರೆದ ಪ್ರಧಾನಿ ಮೋದಿ

ಕುವೈತ್‌ನ ಕಾರ್ಮಿಕರ ಶಿಬಿರದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ 40 ಮಂದಿ...

ಖಲಿಸ್ತಾನಿ ಪ್ರತ್ಯೇಕವಾದಿಗಳಿಂದ ಇಟಲಿಯಲ್ಲಿ ಮಹಾತ್ಮ ಗಾಂಧಿ ವಿಗ್ರಹ ಧ್ವಂಸ

ಉದ್ಘಾಟನೆಗೊಂಡ ಕೆಲವೇ ಗಂಟೆಗಳಲ್ಲಿ ಖಲಿಸ್ತಾನಿ ಪ್ರತ್ಯೇಕವಾದಿಗಳು ಮಹಾತ್ಮ ಗಾಂಧಿ ಅವರ ವಿಗ್ರಹವನ್ನು...

ಕುವೈತ್ ಕಟ್ಟಡದಲ್ಲಿ ಬೆಂಕಿ: ಭಾರತೀಯರು ಸೇರಿ 41 ಮಂದಿ ಸಾವು

ಕುವೈತ್‌ ಮಂಗಾಫ್ ಸಿಟಿಯಲ್ಲಿನ ವಸತಿ ಕಾರ್ಮಿಕರ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ...

ಜೀವನ ವಿಧಾನ | ಒನೈಡಾ ಆದಿವಾಸಿ ಸಮುದಾಯ ಮತ್ತು ಸದಾ ನಗುವ ಸ್ವಾಭಿಮಾನಿ ಮಹಿಳೆಯರು

ಒನೈಡಾ ಸಮುದಾಯದಲ್ಲಿ ಮಹಿಳೆಯರು ಆತ್ಮಗೌರವದಿಂದ ಬದುಕುತ್ತಿದ್ದಾರೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸದಿಂದ...