ಖ್ಯಾತ ಟಿವಿ ನಿರೂಪಕಿ ಗೀತಾಂಜಲಿ ಅಯ್ಯರ್ ನಿಧನ

Date:

ದೂರದರ್ಶನದ ಮೊದಲ ಇಂಗ್ಲಿಷ್ ಸುದ್ದಿ ನಿರೂಪಕರಲ್ಲಿ ಒಬ್ಬರಾಗಿದ್ದ ಗೀತಾಂಜಲಿ ಅಯ್ಯರ್ ಬುಧವಾರ ನಿಧನರಾಗಿದ್ದಾರೆ.

1971ರಲ್ಲಿ ದೂರದರ್ಶನಕ್ಕೆ ಸೇರಿದ್ದ ಅಯ್ಯರ್, ಮೂರು ದಶಕಗಳ ವೃತ್ತಿಜೀವನದಲ್ಲಿ ನಾಲ್ಕು ಬಾರಿ ಅತ್ಯುತ್ತಮ ನಿರೂಪಕಿ ಪ್ರಶಸ್ತಿಯನ್ನು ಪಡೆದಿದ್ದರು.

ಅತ್ಯುತ್ತಮ ಮಹಿಳಾ ಸಾಧಕರಿಗೆ ನೀಡಲಾಗುವ ʻಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿʼಯನ್ನು1989 ರಲ್ಲಿ ಪಡೆದಿದ್ದ ಗೀತಾಂಜಲಿ ಅಯ್ಯರ್, ವರ್ಲ್ಡ್ ವೈಡ್ ಫಂಡ್‌ನ ಭಾರತದ ಪ್ರಮುಖ ದಾನಿಗಳ ಮುಖ್ಯಸ್ಥರಾಗಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೋಲ್ಕತ್ತಾದ ಲೊರೆಟೊ ಕಾಲೇಜಿನಲ್ಲಿ ಇಂಗ್ಲಿಷ್‌ನಲ್ಲಿ ಪದವಿ ಪೂರ್ತಿಗೊಳಿಸಿದ್ದ ಅಯ್ಯರ್‌, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಿಂದ ಡಿಪ್ಲೊಮಾ ಪಡೆದಿದ್ದರು.ದೂರದರ್ಶನದಲ್ಲಿ ಸುದ್ದಿ ನಿರೂಪಕಿಯಾಗಿ ಯಶಸ್ವಿ ವೃತ್ತಿಜೀವನದ ನಂತರ, ಕಾರ್ಪೊರೇಟ್ ಸಂವಹನ, ಸರ್ಕಾರಿ ಸಂಪರ್ಕ ಮತ್ತು ಮಾರ್ಕೆಟಿಂಗ್ ಕ್ಷೇತ್ರಗಳಲ್ಲೂ ಸೈ ಎನಿಸಿಕೊಂಡಿದ್ದರು.  ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ನಲ್ಲಿ ಸಲಹೆಗಾರರಾಗಿದ್ದ ಗೀತಾಂಜಲಿ ಅಯ್ಯರ್‌, “ಖಂಡಾನ್” ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಛತ್ತೀಸ್‌ಗಢ| ಬಸ್ತಾರ್‌ ಮತಗಟ್ಟೆ ಬಳಿ ಸ್ಫೋಟ: ಸಿಆರ್‌ಪಿಎಫ್ ಯೋಧ ಸಾವು

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಮತಗಟ್ಟೆಯೊಂದರ ಬಳಿ ಶುಕ್ರವಾರ ನಡೆದ ಐಇಡಿ ಸ್ಫೋಟದಲ್ಲಿ...

ನನ್ನ ಜನರಿಗೆ ದೇವಸ್ಥಾನಗಳಲ್ಲಿ ಪ್ರವೇಶವಿಲ್ಲ; ನಾನು ಅಯೋಧ್ಯೆಗೆ ಹೋದರೆ ಸಹಿಸುವರೇ?: ಮಲ್ಲಿಕಾರ್ಜುನ ಖರ್ಗೆ

ದೇಶಾದ್ಯಂತ ಪರಿಶಿಷ್ಟ ಜಾತಿಗಳ (ಎಸ್‌ಸಿ) ಜನರು ಇನ್ನೂ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಪರಿಶಿಷ್ಠರಿಗೆ...

ಲೋಕಸಭಾ ಚುನಾವಣೆ | ಬಿಜೆಪಿ ಗೆಲುವಿಗೆ 13 ರಾಜ್ಯಗಳ ಸವಾಲು! ಆಕ್ಸಿಸ್ ಎಂಡಿ ಗುಪ್ತಾ ಹೇಳುವುದೇನು? 

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂಬ...