ʼಧನಿಕರ ಕ್ಲಬ್‌ʼ ಆಗಿ ಬದಲಾಗುತ್ತಿರುವ ರಾಜಕಾರಣ; ʼಧನ ಪ್ರಭುತ್ವʼವನ್ನು ಮೆರೆಸುತ್ತಿರುವ ಚುನಾವಣೆಗಳು

Date:

ರಾಜಕಾರಣ ಕೇವಲ ‘ಧನಿಕರ ಕ್ಲಬ್’ ಆಗಿ ಬದಲಾಗುತ್ತಿದೆ. ಚುನಾವಣೆ, ಉಪ ಚುನಾವಣೆಗಳಲ್ಲಿ ಸುರಿಯುತ್ತಿರುವ ಹಣದ ಹೊಳೆ ಚುನಾವಣಾ ವೆಚ್ಚದ ಕುರಿತು ಚರ್ಚೆಯನ್ನು ಹುಟ್ಟಿಸಿದೆ. ‘ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ’ ಎಂಬ ಪ್ರಜಾಪ್ರಭುತ್ವದ ಆಶಯ ‘ಹಣದಿಂದ, ಹಣಕ್ಕಾಗಿ, ಹಣಕ್ಕೋಸ್ಕರ’ ಎಂದು ಬದಲಾಗಬಾರದು.

- Advertisement -

ಚುನಾವಣೆಗಳು ಸಾಮಾನ್ಯವಾಗಿ ಆಡಳಿತಾರೂಢ ಪಕ್ಷಕ್ಕೆ ಅಗ್ನಿಪರೀಕ್ಷೆ ಮತ್ತು ವಿರೋಧ ಪಕ್ಷಗಳಿಗೆ ಅಸ್ತಿತ್ವದ ಹೋರಾಟವಾಗಿರುತ್ತವೆ. ಹಾಗಾಗಿ ಚುನಾವಣೆಗಳಲ್ಲಿ ಹಣ ಸುರಿಯುವುದು ಸಾಮಾನ್ಯವಾಗಿದೆ. ಇದು ಭಾರತೀಯ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಚುನಾವಣೆ, ಉಪ ಚುನಾವಣೆಗಳಲ್ಲಿ ಸುರಿಯುತ್ತಿರುವ ಹಣದ ಹೊಳೆ ಚುನಾವಣಾ ವೆಚ್ಚದ ಕುರಿತು ಚರ್ಚೆಯನ್ನು ಹುಟ್ಟಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಭಾರತೀಯ ಚುನಾವಣಾ ರಾಜಕಾರಣದಲ್ಲಿ ‘ಹಣದ ಬಲ’ ಎನ್ನುವುದು ಹೊಸ ವಿಷಯವೇನಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಚುನಾವಣೆ, ಉಪಚುನಾವಣೆಗಳು ಹಣಾಹಣಿಯ ಕಣಗಳಿಗಿಂತ ಹೆಚ್ಚಾಗಿ ‘ಹಣದ ಹೊಳೆ’ ಹರಿಸುವ ವೇದಿಕೆಗಳಾಗಿ ಮಾರ್ಪಡುತ್ತಿರುವುದು ಆತಂಕಕಾರಿ ಸಂಗತಿ. ಅಭಿವೃದ್ಧಿ, ಸಿದ್ಧಾಂತ ಮತ್ತು ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗಿಂತ ಹೆಚ್ಚಾಗಿ “ಯಾರು ಹೆಚ್ಚು ಖರ್ಚು ಮಾಡುತ್ತಾರೆ?” ಎನ್ನುವುದೇ ಇಲ್ಲಿ ಗೆಲುವಿನ ಮಾನದಂಡವಾಗುತ್ತಿದೆ.

ಉಪ ಚುನಾವಣೆಗಳು : ಪ್ರತಿಷ್ಠೆಯ ಕಣ, ಹಣದ ಹೊಳೆ

ಸಾಮಾನ್ಯವಾಗಿ ಮುಖ್ಯ ಚುನಾವಣೆಗಳಿಗಿಂತ ಉಪಚುನಾವಣೆಗಳಲ್ಲಿ ಹಣದ ಹೊಳೆ ಹರಿಯುವ ಪ್ರಮಾಣ ಅಧಿಕವಾಗಿರುವುದಕ್ಕೆ ಮುಖ್ಯ ಕಾರಣವೆಂದರೆ ‘ಪ್ರತಿಷ್ಠೆ’. ಇಡೀ ರಾಜ್ಯದ ಅಥವಾ ದೇಶದ ಗಮನ ಒಂದೇ ಒಂದು ಕ್ಷೇತ್ರದ ಮೇಲೆ ಕೇಂದ್ರೀಕೃತವಾಗಿರುವಾಗ, ರಾಜಕೀಯ ಪಕ್ಷಗಳು ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಹಠಕ್ಕೆ ಬೀಳುತ್ತವೆ. ಆಡಳಿತರೂಢ ಪಕ್ಷಕ್ಕೆ ಗೆಲ್ಲಲೇಬೇಕಾದ ಅನಿವಾರ್ಯತೆ, ವಿರೋಧ ಪಕ್ಷಗಳಿಗೆ ಆಡಳಿತಾರೂಢ ಪಕ್ಷದ ಗರ್ವ ಇಳಿಸಬೇಕೆಂಬ ಹಠ. ಒಂದೇ ಒಂದು ಕ್ಷೇತ್ರಕ್ಕೆ ಇಡೀ ಮಂತ್ರಿಮಂಡಲವೇ ಲಗ್ಗೆ ಇಡುತ್ತದೆ. ಪ್ರತಿ ಬೀದಿ, ಪ್ರತಿ ಮನೆಗೂ ತಲುಪಲು ಅಧಿಕಾರ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತದೆ. ವಿರೋಧ ಪಕ್ಷದ ಅಷ್ಟೂ ನಾಯಕರು ಸ್ಪರ್ಧಾಕಣಕ್ಕಿಳಿದು ಆಡಳಿತಾರೂಢ ಪಕ್ಷಕ್ಕೆ ತೊಡೆ ತಟ್ಟುತ್ತಾರೆ. ಉಪ ಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷಗಳಿಗೆ ಗೆಲ್ಲುವ ಸಾಧ್ಯತೆ ಹೆಚ್ಚಿದ್ದರೂ, ವಿರೋಧ ಪಕ್ಷಗಳು ತಮ್ಮ ಛಲ ತೋರಿಸುತ್ತವೆ.

ಇನ್ನು, ಮತದಾರರಿಗೆ ನೇರವಾಗಿ ಹಣ ಹಂಚುವುದು ಈಗ ರಹಸ್ಯವಾಗಿಯೇನೂ ಉಳಿದಿಲ್ಲ. ಪ್ರತಿ ಮತಕ್ಕೆ ಇಂತಿಷ್ಟು ಎಂಬ ‘ದರಪಟ್ಟಿ’ ಸಿದ್ಧವಾಗುತ್ತಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ ಎನ್ನುವದು ಇಲ್ಲಿ ಮುಖ್ಯಾಂಶ. ಹಾಗಾಗಿ ಉಪ ಚುನಾವಣೆಗಳು ಪ್ರತಿಷ್ಠೆಯ ಕಣಗಳಾಗಿ ಅಷ್ಟೇ ಅಲ್ಲದೆ, ಹಣದ ಗಣಿಯಾಗಿ ಪರಿವರ್ತನೆಯಾಗುತ್ತದೆ.

ಚುನಾವಣಾ ಆಯೋಗದ ಮಿತಿ ಮತ್ತು ವಾಸ್ತವ

ಚುನಾವಣಾ ಆಯೋಗವು ಪ್ರತಿ ಅಭ್ಯರ್ಥಿಗೆ ಇಂತಿಷ್ಟು ವೆಚ್ಚದ ಮಿತಿ ಎಂದು ನಿಗದಿಪಡಿಸಿದೆ. ಆದರೆ, ವಾಸ್ತವದಲ್ಲಿ ಅಭ್ಯರ್ಥಿಗಳು ಮಾಡುವ ಹಣದ ವಿನಿಯೋಗ ಆಯೋಗದ ಮಿತಿಗಿಂತ ಹತ್ತಾರು ಪಟ್ಟು ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಇದು ಮುಖ್ಯ ಚುನಾವಣೆ ಅಥವಾ ಉಪ ಚುನಾವಣೆ ಅಂತೇನೂ ಇಲ್ಲ. ಎಲ್ಲಾ ಚುನಾವಣೆಯಲ್ಲಿ ಇದು ಸಾಮಾನ್ಯ ಸಂಗತಿ.

ಅಧಿಕೃತವಾಗಿ ತೋರಿಸುವ ಖರ್ಚು ವೆಚ್ಚ ಕೇವಲ ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ. ತೆರೆಮರೆಯಲ್ಲಿ ನಡೆಯುವ ಜಾಹೀರಾತು, ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ಎನ್ನುವಷ್ಟರ ಮಟ್ಟಿಗೆ ಇತ್ತೀಚೆಗೆ ನೆಡೆಯುವ ಚುನಾವಣಾ ಅಭಿಯಾನ, ಚುನಾವಣಾ ಪ್ರಚಾರಗಳಿಗೆ ಹಣ ಕೊಟ್ಟು ಜನರನ್ನು ಸೇರಿಸುವುದು  ಮತ್ತು ಎಲೆಕ್ಶನ್‌ ಗಿಫ್ಟ್ ವಿತರಣೆಯ ಲೆಕ್ಕಚಾರ ಎಲ್ಲೂ ಸಿಗದೆ ಗೌಪ್ಯವಾಗಿಯೇ ಉಳಿದು ಬಿಡುತ್ತದೆ. ತಪಾಸಣಾ ತಂಡದ ಕಣ್ಣು ತಪ್ಪಿಸಲು ಬೇರೆ ಬೇರೆ ಖಾತೆಗಳಿಂದ ಡಿಜಿಟಲ್ ಪಾವತಿ (UPI), ಕೂಪನ್‌ಗಳು ಅಥವಾ ದಿನಸಿ ಸಾಮಗ್ರಿಗಳನ್ನು ಹಂಚುವ ಹೊಸ ಮಾರ್ಗಗಳನ್ನೂ ರಾಜಕೀಯ ಪಕ್ಷಗಳು ಕಂಡುಕೊಂಡಿವೆ.

ಮತದಾರರ ಮನಸ್ಥಿತಿ ಮತ್ತು ಪ್ರಜಾಪ್ರಭುತ್ವದ ಭವಿಷ್ಯ

“ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳು ಹಣ ಹಂಚುತ್ತಾರೆ, ಅದನ್ನು ಪಡೆಯುವುದು ನಮ್ಮ ಹಕ್ಕು” ಎಂಬ ತಪ್ಪು ಕಲ್ಪನೆ ಮತದಾರರಲ್ಲಿ ಮನೆಮಾಡುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. “ಮತವನ್ನು ಹಣಕ್ಕೆ ಮಾರಿಕೊಳ್ಳುವುದು ಎಂದರೆ ನಮ್ಮ ಮುಂದಿನ ಐದು ವರ್ಷಗಳ ಹಕ್ಕುಗಳನ್ನು ಮತ್ತು ನಮ್ಮ ಭವಿಷ್ಯವನ್ನು ಮಾರಿಕೊಂಡಂತೆ.”

ಚುನಾವಣೆಗಳಲ್ಲಿ ಹಣದ ಹರಿವು ಹೆಚ್ಚಾದಷ್ಟೂ ಸಾಮಾನ್ಯ ವ್ಯಕ್ತಿ ಅಥವಾ ಪ್ರಾಮಾಣಿಕ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸುವುದು ಅಸಾಧ್ಯವಾಗುತ್ತಿದೆ. ಇದರಿಂದಾಗಿ ರಾಜಕಾರಣ ಕೇವಲ ‘ಧನಿಕರ ಕ್ಲಬ್’ ಆಗಿ ಬದಲಾಗುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ರಾಜಕೀಯದಲ್ಲಿ ಸುಧಾರಣೆಯ ಅಗತ್ಯ

ಚುನಾವಣಾ ವೆಚ್ಚವನ್ನು ನಿಯಂತ್ರಿಸಲು ಮತ್ತು ಪಾರದರ್ಶಕತೆ ತರಲು ಕೆಲವು ಕಟ್ಟುನಿಟ್ಟಿನ ಕ್ರಮಗಳ ಅಗತ್ಯವಿದೆ. ಪಕ್ಷಗಳಿಗೆ ಬರುವ ದೇಣಿಗೆಯ ಮೂಲಗಳು (ಚುನಾವಣಾ ಬಾಂಡ್ ಮತ್ತು ನಿಧಿ) ಸಂಪೂರ್ಣವಾಗಿ ಬಹಿರಂಗವಾಗಬೇಕು. ಶ್ರೀಮಂತ ಅಭ್ಯರ್ಥಿಗಳ ಪ್ರಭಾವವನ್ನು ಕಡಿಮೆ ಮಾಡಬೇಕಾದ ಕ್ರಮ ಕಂಡುಕೊಳ್ಳಬೇಕಿದೆ. ಹಣ ಹಂಚುವುದು ಅಥವಾ ಆಮಿಷವೊಡ್ಡುವುದು, ಬೆದರಿಸುವುದು ಕಂಡುಬಂದಲ್ಲಿ ಅಭ್ಯರ್ಥಿಗಳನ್ನು ಆಜೀವ ಪರ್ಯಂತ ಚುನಾವಣೆಯಿಂದ ಅನರ್ಹಗೊಳಿಸುವ ಕಾನೂನು ಜಾರಿಗೆ ಬಂದರೆ, ಬಹುಶಃ ಚುನಾವಣಾ ರಾಜಕೀಯದಲ್ಲಿ ಸುಧಾರಣೆ ಕಾಣುವುದಕ್ಕೆ ಸಾಧ್ಯವಾಗುತ್ತದೆ.

ಇನ್ನು, ಉಪಚುನಾವಣೆಗಳಲ್ಲಿ ಹರಿಯುತ್ತಿರುವ ಹಣದ ಹೊಳೆ ಕೇವಲ ಒಂದು ಕ್ಷೇತ್ರದ ಸಮಸ್ಯೆಯಾಗಿ ಉಳಿದಿಲ್ಲ, ಅದು ನಮ್ಮ ವ್ಯವಸ್ಥೆಗೆ ತಗುಲಿರುವ ರೋಗ. ಮತದಾರರು ಜಾಗೃತರಾಗದ ಹೊರತು ಮತ್ತು ಕಾನೂನುಗಳು ಕಠಿಣವಾಗದ ಹೊರತು, ‘ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ’ ಎಂಬ ಪ್ರಜಾಪ್ರಭುತ್ವದ ಆಶಯ ‘ಹಣದಿಂದ, ಹಣಕ್ಕಾಗಿ, ಹಣಕ್ಕೋಸ್ಕರ’ ಎಂದು ಬದಲಾಗುವುದರಲ್ಲಿ ಸಂಶಯವಿಲ್ಲ.

ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆ

ಉತ್ತರ ಮತ್ತು ಮಧ್ಯ ಕರ್ನಾಟಕದ ಪ್ರಮುಖ ರಾಜಕೀಯ ಕೇಂದ್ರಗಳಾದ ಬಾಗಲಕೋಟೆ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿನ ತಲಾ ಒಂದು ಕ್ಷೇತ್ರ, ಅಲ್ಲಿನ ಶಾಸಕರ ನಿಧನದಿಂದ ಉಪ ಚುನಾವಣೆಯನ್ನು ಎದುರಿಸಿವೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಂಡುಬಂದ ರಾಜಕೀಯ ಬೆಳವಣಿಗೆಗಳು ಪ್ರಜಾಪ್ರಭುತ್ವದ ಆಶಯಗಳನ್ನೇ ಪ್ರಶ್ನಿಸುವಂತಿದ್ದವು. ಸಿದ್ಧಾಂತಗಳ ಹೋರಾಟವಾಗಬೇಕಿದ್ದ ಚುನಾವಣೆಗಳು, ಅಕ್ಷರಶಃ ಸಂಪನ್ಮೂಲಗಳ ಪ್ರದರ್ಶನವಾಗಿ ಬದಲಾಗಿವೆ.

ದಾವಣಗೆರೆಯ ರಾಜಕಾರಣವು ಪ್ರಬಲ ಸಮುದಾಯಗಳ ಮತ್ತು ಪ್ರಭಾವಿ ಕುಟುಂಬದ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ಉಪಚುನಾವಣೆಗಳಲ್ಲಿ ಕೇವಲ ಮತದಾರರನ್ನು ತಲುಪುವುದು ಮಾತ್ರವಲ್ಲ, ಎದುರಾಳಿ ಪಾಳಯದ ಬೆಂಬಲಿಗರನ್ನು ಸೆಳೆಯಲು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಲಾಗಿದೆ ಎಂಬ ಟೀಕೆಗಳಿವೆ.

ಬಾಗಲಕೋಟೆ ಇಡೀ ಜಿಲ್ಲೆ ಚುನಾವಣೆ ಎದುರಾದಾಗ ಸಕ್ಕರೆ ಕಾರ್ಖಾನೆಗಳ ಮಾಲೀಕರ ಮತ್ತು ಪ್ರಭಾವಿ ಉದ್ಯಮಿಗಳ ತೊಡಗಿಸಿಕೊಳ್ಳುವಿಕೆ ಸಾಮಾನ್ಯವಾಗಿರುತ್ತದೆ. ಇಲ್ಲಿನ ರಾಜಕಾರಣ ನೇರವಾಗಿ ಆರ್ಥಿಕ ಶಕ್ತಿಯ ಮೇಲೆ ನಿಂತಿದೆ ಎಂದರೆ ತಪ್ಪಾಗಲಾರದು.

ದಾವಣಗೆರೆಯ ಕೈಗಾರಿಕೆಗಳ ಪುನಶ್ಚೇತನ ಅಥವಾ ಬಾಗಲಕೋಟೆಯ ನೀರಾವರಿ ಯೋಜನೆಗಳ ಕುರಿತು ಗಂಭೀರ ಚರ್ಚೆ ನಡೆಯುವ ಬದಲು, “ಯಾವ ಅಭ್ಯರ್ಥಿ ಎಷ್ಟು ಪ್ರಭಾವಿ?” ಎಂಬ ಚರ್ಚೆಯೇ ಗಲ್ಲಿಗಳಲ್ಲಿ ಜೋರಾಗಿ ಕೇಳಿಬಂದಿದೆ. ಜನಸಾಮಾನ್ಯರು ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸುವ ಬದಲು, ತಾತ್ಕಾಲಿಕ ಆಮಿಷಗಳಿಗೆ ಬಲಿಯಾಗುತ್ತಿರುವುದು/ಬಲಿಯಾಗಿರುವುದು ವಿಷಾದನೀಯ.

ಉಳಿದಂತೆ, ಈಗ ನಡೆಯುತ್ತಿರುವ ಕೇರಳ, ತಮಿಳುನಾಡು, ಪುದುಚೆರಿ, ಪಶ್ಚಿಮ ಬಂಗಾಳ, ಅಸ್ಸಾಂ ಚುನಾವಣೆಗಳು ಇದರಿಂದ ಹೊರತಾಗಿ ಇಲ್ಲ ಎನ್ನುವುದು ಕೂಡ ಇಲ್ಲಿ ಮುಖ್ಯ.

ಒಟ್ಟಿನಲ್ಲಿ, ಉಪಚುನಾವಣೆಗಳು ರಾಜಕೀಯದ ದಿಕ್ಸೂಚಿಯಾಗುತ್ತವೆ. ಮತದಾರರು “ಹಣ ಪಡೆದು ಮತ ಹಾಕುವುದು ನಮ್ಮ ಭವಿಷ್ಯವನ್ನು ನಾವೇ ಹಾಳುಮಾಡಿಕೊಂಡಂತೆ” ಎಂದು ಅರಿಯುವವರೆಗೂ ಈ ಪರಿಸ್ಥಿತಿ ಬದಲಾಗುವುದಿಲ್ಲ. ಪ್ರಜಾಪ್ರಭುತ್ವ ‘ಧನ ಪ್ರಭುತ್ವ’ವಾಗದಂತೆ ತಡೆಯಬೇಕಾದ ಜವಾಬ್ದಾರಿ ಮರೆತು ಮತ ಚಲಾವಣೆ ಮಾಡುವುದಕ್ಕೆ ಯಾವೊಬ್ಬ ಮತದಾರನೂ ಮುಂದಾಗಬಾರದು ಎನ್ನುವುದಂತೂ ಸತ್ಯ.

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುಪ್ರೀಂ ಆದೇಶ ಉಲ್ಲಂಘನೆ: ಕಾನೂನುಬಾಹಿರ ವಶಕ್ಕೆ ತಡೆ ಇದ್ದರೂ 100ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ!

ರಾಜಧಾನಿ ದೆಹಲಿಯಲ್ಲಿ ಕನ್ಹಾಟ್ ಪ್ಲೇಸ್ ಹಾಗೂ ಜಂತರ್ ಮಂತರ್ ಸುತ್ತಮುತ್ತ ನಡೆಯುತ್ತಿರುವ...

ಗ್ಯಾನೂ ವಿರುದ್ಧ ಪ್ರತಿಭಟನೆ: ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಬಂಧನ

ದೆಹಲಿಯಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಭಾನುವಾರವೂ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿ, ಯುವತಿಯರ ಮೇಲೆ ಹಲ್ಲೆ; ನಾಲ್ವರು RSS ಗೂಂಡಾಗಳ ಬಂಧನ

ದೆಹಲಿಯಲ್ಲಿ ನಡೆದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು...