ಪ್ರಜ್ವಲ್ ಪ್ರಕರಣ | ʼನಿಷ್ಪಕ್ಷಪಾತ ತನಿಖೆ‌ ಆಗಲಿ, ನಾವೆಲ್ಲ ನಿಮ್ಮೊಂದಿಗಿದ್ದೇವೆʼ ಎಂದು ಹೇಳುವ ಅಗತ್ಯವಿದೆ

Date:

“ಯಾವುದೇ ಪೂರ್ವಗ್ರಹವಿಲ್ಲದೆ ನಿಷ್ಪಕ್ಷಪಾತ ತನಿಖೆ‌ ಆಗಲಿ… ನಾವೆಲ್ಲ ನಿಮ್ಮೊಂದಿಗೆ ಇರುತ್ತೇವೆ” ಎಂದು ಸರ್ಕಾರ ಮತ್ತು ಸರ್ಕಾರದಲ್ಲಿರುವ ಅಧಿಕಾರಸ್ಥರು, ವಿರೋಧ ಪಕ್ಷದ ನಾಯಕರು, ಜನಪರ ರಾಜಕಾರಣಿಗಳು, ನಿಷ್ಠುರ ಪತ್ರಕರ್ತರು, ನಿವೃತ್ತ ನ್ಯಾಯಮೂರ್ತಿಗಳು, ನಿವೃತ್ತ IAS, IPS ಅಧಿಕಾರಿಗಳು, ಮಿಲಿಟರಿ ಅಧಿಕಾರಿಗಳು, ಬುದ್ಧಿಜೀವಿಗಳು ಮತ್ತು ಬದ್ಧತೆಯಿರುವ ಹೋರಾಟಗಾರರು ಗಟ್ಟಿಯಾಗಿ ಹೇಳಬೇಕಿದೆ.

“ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಗಂಭೀರ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ತನಿಖೆಗೆ ಅಸಹಕಾರ ತೋರುತಿದ್ದಾರೆ”, “ಹೊರಗೆ ಬಂದ ಕೂಡಲೇ ನೋಡಿಕೊಳ್ಳುವುದಾಗಿ” ತನಿಖಾಧಿಕಾರಿಗಳನ್ನು ಬೆದರಿಸುತಿದ್ದಾರೆಂದು ಇಂದು ‘ಪ್ರಜಾವಾಣಿ’ ವರದಿ ಮಾಡಿದೆ. ಅದೇ ರೀತಿ ಭವಾನಿ ರೇವಣ್ಣ ತನಿಖಾಧಿಕಾರಿಗಳನ್ನು ಏಳು ಗಂಟೆಗಳ ಕಾಲ ಹೊಳೆನರಸೀಪುರದ ಮನೆ ಮುಂದೆ ಕಾಯಿಸಿದ್ದಾರೆ ಎಂಬುದೂ ಸುದ್ದಿಯಾಗಿದೆ.

ಜಗತ್ತಿನ ಅತಿದೊಡ್ಡ ಲೈಂಗಿಕ ಪ್ರಕರಣಗಳ ಸಾಲಿಗೆ ಸೇರಬಹುದಾದ ಈ ಪ್ರಕರಣದಲ್ಲಿ ಆರೋಪಿಯಾಗಿರುವವರು ಈ ದೇಶದ ಪ್ರದಾನಮಂತ್ರಿ ಮತ್ತು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅತ್ಯಂತ ಪ್ರತಿಷ್ಠಿತ ಹಾಗೂ ರಾಜ್ಯಾಧಿಕಾರದ ಅತ್ಯುನ್ನತ ಸ್ಥಾನದಲ್ಲಿರುವ ಕುಟುಂಬದ ಸದಸ್ಯರು. ಅದರಲ್ಲೂ ಈಗ ರಾಷ್ಟ್ರಾಧಿಕಾರ ಹೊಂದಿರುವ ಅತ್ಯಂತ ಪ್ರಭಾವಿ ಸರ್ಕಾರ ಮತ್ತು ಪ್ರಭಾವಿ ಪಕ್ಷದೊಂದಿಗೆ ಶಾಮೀಲಾಗಿರುವ ಕುಟುಂಬ. ಅಂತೆಯೇ ರಾಜ್ಯ ರಾಜಕಾರಣದ ಅತ್ಯಂತ ದೊಡ್ಡ ಮತ್ತು ಪ್ರಭಾವಿ ಸಮುದಾಯಕ್ಕೆ ಸೇರಿದ ಕುಟುಂಬ. ಕಳೆದ ನಾಲ್ಕು ದಶಕಗಳಿಂದ ಅನೇಕ IAS, IPS ಅಧಿಕಾರಿಗಳ ವರ್ಗಾವಣೆ, ಬಡ್ತಿ, ಆಯಕಟ್ಟಿನ ಜಾಗಗಳಿಗೆ ಹಾಕಿದ ಮತ್ತು ಎದುರಾಡಿದವರನ್ನು ಕಸದ ಬುಟ್ಟಿಗೆ ಎಸೆದಂತೆ ಎಸೆದ ಕುಟುಂಬವಿದು.

ಈಗಿನ ಎಸ್.ಐ.ಟಿ. ಅಧಿಕಾರಿಗಳಿಗೆ ಇದೆಲ್ಲ ಗೊತ್ತಿಲ್ಲದ ವಿಷಯವಲ್ಲ. ಅವರು ಮನಸ್ಸು ಮಾಡಿದರೆ ಈ ಪ್ರಕರಣದ ನಂತರ ಅವರು ಹೇಗೆ ನಮ್ಮನ್ನು ಫುಟ್ಬಾಲ್ ಆಡಬಲ್ಲರು ಎಂಬುದೂ ಗೊತ್ತಿಲ್ಲದಿಲ್ಲ. ಹೀಗಿರುವಾಗ ಪ್ರಜ್ವಲ್, ರೇವಣ್ಣ, ಭವಾನಿಯರಿಗೆ ಇಂತವರ ಮೇಲೆ ಹೇಗೆ‌ ಅಧಿಕಾರ ಚಲಾಯಿಸಬೇಕು ಎಂಬುದು ಗೊತ್ತಿದೆ. ಈ ಸಂದರ್ಭದಲ್ಲಿ ಹೇಗೆ ಇವರನ್ನು ಹೆದರಿಸಬಹುದು ಎಂಬುದೂ ಗೊತ್ತಿದೆ. ಇವರ ಹಿಂದೆ ದೇವೇಗೌಡರಂತ ದೇವೇಗೌಡರು, ಮೋದಿಯಂತಹ ಮೋದಿಯವರು, ಕುಮಾರಣ್ಣನಂತಹ ಕುಮಾರಣ್ಣನವರೂ ಹಿಮಾಲಯದಂತೆ ನಿಂತಿದ್ದಾರೆ ಎಂಬುದೂ ಗೊತ್ತಿದೆ. ಇವರ ಅಧಿಕಾರಾವಧಿಯಲ್ಲಿ ಇವರ ಪ್ರಭಾವದಿಂದ ಅದೆಷ್ಟು ಜನ ಇವರ ಆಪ್ತರು ನ್ಯಾಯಮೂರ್ತಿಗಳಾಗಿಲ್ಲ? ಅದೆಷ್ಟು ಮಂದಿ ಹಿರಿಯ ಶ್ರೇಣಿಯ IAS, IPS ಗಳು ಇಂದಿಗೂ ಇವರ ಮನೆ ಬಾಗಿಲು ಕಾಯುತ್ತಿಲ್ಲ. ಇವರಿಗೆ ಮುಗಿಬಿದ್ದು ಇವರ ಈ ‘ಕಷ್ಟಕಾಲದಲ್ಲಿ’ ಇವರಿಗೆ ಕಾನೂನು ಸಲಹೆ ನೀಡುತ್ತಿಲ್ಲ. ಈಗ ತನಿಖೆ ಮಾಡುತ್ತಿರುವ ಅಧಿಕಾರಿಗಳ ಮೇಲೆ ಅದೆಷ್ಟು ಒತ್ತಡ ಹಾಕುತ್ತಿಲ್ಲ ಎಂಬ ಪರಿಕಲ್ಪನೆ ನಮ್ಮ‌ ಮುಗ್ದ ಜನಸಾಮಾನ್ಯರಿಗೆ ಇರಲಾರದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?: ಯಾರು ಅಧಿಕಾರಕ್ಕೆ? ಬೇರೆಯೇ ಭವಿಷ್ಯ ಹೇಳುತ್ತಿವೆ ಗ್ರೌಂಡ್‌ನಲ್ಲಿ ಕೆಲಸ ಮಾಡಿರುವ ನಾಗರಿಕ ಸಂಘಟನೆಗಳು

ಆಂಧ್ರದ ಗ್ಯಾಂಗ್ ರೇಪ್‌ನಲ್ಲಿ ಸಿಕ್ಕಿಬಿದ್ದ ಅತ್ಯಂತ ಕಡುಬಡವರು, ದಿಕ್ಕಿಲ್ಲದವರು, ಕನಿಷ್ಠ ಅಪರಾಧದ ಸುಳಿವೂ ಇಲ್ಲದ ಆಪಾದಿತರನ್ನು ಹಿಡಿದು ಪ್ರಾಥಮಿಕ ವಿಚಾರಣೆಯೂ ಇಲ್ಲದೆ ಎನ್ಕೌಂಟರ್ ಮಾಡಿ ಮುಗಿಸಿದ “ಹೀರೋಯಿಕ್” ಪ್ರಕರಣವನ್ನು ಒಮ್ಮೆ ಈ ಪ್ರಕರಣದೊಂದಿಗೆ ಇಟ್ಟು ನೋಡಿ. ಈ ದೇಶದ ಪೋಲಿಸ್ ಮತ್ತು ಕಾನೂನಿನ ತನಿಖಾ ವ್ಯವಸ್ಥೆಯ ತಾರತಮ್ಯದ ಸತ್ಯದರ್ಶನವಾಗುತ್ತದೆ.

ಇಲ್ಲಿ ಈ ‘ಹೈ ವೋಲ್ಟೇಜ್’ ಪ್ರಕರಣದ ಹಿನ್ನೆಲೆ ಮತ್ತು ಆಗಬಹುದಾದ ಪರಿಣಾಮಗಳ ಬಗ್ಗೆ ನಿಮ್ಮ ಗಮನ ಸೆಳೆದಿದ್ದೇನೆ ಅಷ್ಟೇ. ಆದರೆ ತನಿಖೆ ಮಾಡುತ್ತಿರುವವರ ಬಗ್ಗೆ ನಾವು ಅನಗತ್ಯವಾಗಿ ಅನುಮಾನ ಪಡುವುದು ಬೇಡ. ಅವರ ಬಗ್ಗೆ ಅಪಾರ ವಿಶ್ವಾಸ ಇಡೋಣ. ಆದರೆ ಈ ಸನ್ನಿವೇಶದಲ್ಲಿ ಕೆಲವೇ ಜವರಿಗೆ ಅತ್ಯಂತ ಬಲಿಷ್ಠವಾದ ನೈತಿಕ ಬೆಂಬಲ ನೀಡಬೇಕಾದ ಅವಶ್ಯಕತೆಯಿದೆ. ಆ ಬೆಂಬಲವನ್ನು ನಮ್ಮಂತಹ ಜನಸಾಮಾನ್ಯರು ಕೊಟ್ಟರೆ ಸಾಲದು. “ಯಾವುದೇ ಪೂರ್ವಗ್ರಹವಿಲ್ಲದೆ ನಿಷ್ಪಕ್ಷಪಾತ ತನಿಖೆ‌ ಆಗಲಿ… ನಾವೆಲ್ಲ ನಿಮ್ಮೊಂದಿಗೆ ಇರುತ್ತೇವೆ” ಎಂದು ಸರ್ಕಾರ ಮತ್ತು ಸರ್ಕಾರದಲ್ಲಿರುವ ಅಧಿಕಾರಸ್ಥರು, ವಿರೋಧ ಪಕ್ಷದ ನಾಯಕರು, ಜನಪರ ರಾಜಕಾರಣಿಗಳು, ನಿಷ್ಠುರ ಪತ್ರಕರ್ತರು, ನಿವೃತ್ತ ನ್ಯಾಯಮೂರ್ತಿಗಳು, ನಿವೃತ್ತ IAS, IPS ಅಧಿಕಾರಿಗಳು, ಮಿಲಿಟರಿ ಅಧಿಕಾರಿಗಳು, ಬುದ್ಧಿಜೀವಿಗಳು ಮತ್ತು ಬದ್ಧತೆಯಿರುವ ಹೋರಾಟಗಾರರು ಗಟ್ಟಿಯಾಗಿ ಹೇಳಬೇಕಿದೆ.
ಅಧಿಕಾರ ರಾಜಕಾರಣದ ಲೈಂಗಿಕ ಅಪರಾಧಿ ಇತಿಹಾಸದಲ್ಲಿ ದಾಖಲಾಗುವ ಈ ಪ್ರಕರಣದಲ್ಲಿ ನಾವೆಷ್ಟು ನೈತಿಕ ಜವಾಬ್ದಾರಿಯಿಂದ ವರ್ತಿಸಿದೆವು ಎಂಬುದನ್ನೂ ಇತಿಹಾಸ ಮರೆಯುವದಿಲ್ಲ.

-ಸಿ.ಎಸ್.ದ್ವಾರಕಾನಾಥ್

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವರಾಜ ರಾಯರೆಡ್ಡಿ ಮಾಹಿತಿ ತಿಳಿದುಕೊಂಡು ಮಾತನಾಡಲಿ: ದಿನೇಶ್ ಗೂಳಿಗೌಡ

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ ಎಂಬ ಮುಖ್ಯಮಂತ್ರಿಗಳ ಆರ್ಥಿಕ...

ಬಾಲ್ಯ ವಿವಾಹ | ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕಳವಳ

ಬಾಲ್ಯ ವಿವಾಹ ವಿಚಾರದಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಇದು ದುರದೃಷ್ಟಕರ...

ಉಪಚುನಾವಣೆ ಫಲಿತಾಂಶ | 13ರ ಪೈಕಿ 10ರಲ್ಲಿ ಗೆದ್ದ ‘ಇಂಡಿಯಾ’; ಎನ್‌ಡಿಎಗೆ ಕೇವಲ 2 ಸ್ಥಾನ

ಲೋಕಸಭಾ ಚುನಾವಣೆಯಲ್ಲಿನ ಪ್ರಬಲ ಪ್ರದರ್ಶನವನ್ನು ಮುಂದುವರೆಸಿರುವ 'ಇಂಡಿಯಾ' ಮೈತ್ರಿಕೂಟ ಏಳು ರಾಜ್ಯಗಳ...