ಮುಜಾಫರ್‌ನಗರ| ಯೋಗಿ ಹೊರತುಪಡಿಸಿ ಉಳಿದೆಲ್ಲ ಬಿಜೆಪಿ ನಾಯಕರ ಬಹಿಷ್ಕಾರಕ್ಕೆ ರಜಪೂತ ಮಹಾಪಂಚಾಯತ್ ಕರೆ

Date:

ಮುಜಾಫರ್‌ನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಖೇಡಾ ಗ್ರಾಮದಲ್ಲಿ ರಜಪೂತ ಮಹಾಪಂಚಾಯತ್ ನಡೆದಿದ್ದು, ಉತ್ತರ ಪ್ರದೇಶದ ಮೊದಲ ಹಂತದ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೊರತುಪಡಿಸಿ ಉಳಿದೆಲ್ಲ ಬಿಜೆಪಿ ನಾಯಕರ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ.

‘ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸದಿರುವುದು, ನಿರುದ್ಯೋಗ ಏರಿಕೆ, ಅಗ್ನಿವೀರ್ ಯೋಜನೆ ಮತ್ತು ರಜಪೂತ ಸಮಾಜದ ಅವಮಾನವನ್ನು ವಿರೋಧಿಸಿ’ ಬಿಜೆಪಿ ನಾಯಕರನ್ನು ಬಹಿಷ್ಕರಿಸಲು ರಜಪೂತ ಮಹಾಪಂಚಾಯತ್ ಕರೆ ನೀಡಲಾಗಿದೆ.

ರಜಪೂತ ಅಧಿಕಾರವನ್ನು ಸಂಕೇತಿಸುವ ಸಿವಾಲ್ ಖಾಸ್ (ಬಾಗ್‌ಪತ್), ಸರ್ಧಾನ (ಮೀರತ್) ಮತ್ತು ಖತೌಲಿ (ಮುಜಫರ್‌ನಗರ) ಅಸೆಂಬ್ಲಿ ಸ್ಥಾನಗಳ ಅಡಿಯಲ್ಲಿ ಬರುವ 24 ಹಳ್ಳಿಗಳ ಒಕ್ಕೂಟವಾದ ‘ಚೌಬಿಸಿ’ ಆಯೋಜಿಸಿದ ಮಹಾಪಂಚಾಯತ್ ಸಮಯದಲ್ಲಿ ಸಮುದಾಯದ ಮುಖಂಡರು ಮುಜಾಫರ್ ನಗರದಲ್ಲಿ ಎಸ್‌ಪಿ ಅಭ್ಯರ್ಥಿ ಹರೇಂದ್ರ ಮಲಿಕ್ ಅವರಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?  ಗುಜರಾತ್| ಕೇಂದ್ರ ಸಚಿವರ ವಿರುದ್ಧ ಕ್ಷತ್ರಿಯರ ಬೃಹತ್ ಪ್ರತಿಭಟನೆ; ಬಿಜೆಪಿಗೆ ಮುಗಿಯದ ಸಂಕಷ್ಟ!

ಹಾಗೆಯೇ ಈ ಪ್ರದೇಶದ ಇತರ ಲೋಕಸಭಾ ಕ್ಷೇತ್ರಗಳಲ್ಲಿ, “ಬಿಜೆಪಿಯನ್ನು ಸೋಲಿಸುವ ಅಥವಾ ಬಿಜೆಪಿ ಪ್ರತಿಸ್ಪರ್ಧಿಯಾಗಿ ನಿಂತಿರುವ ಅಭ್ಯರ್ಥಿಗೆ ಮತ ಹಾಕುತ್ತೇವೆ” ಎಂದು ರಜಪೂತ ಸಮುದಾಯ ಘೋಷಣೆ ಮಾಡಿದೆ. ಜೊತೆಗೆ ರಜಪೂತ ಸಮುದಾಯದ ಇಬ್ಬರು ಮಾಜಿ ಪ್ರಧಾನಿಗಳಾದ ವಿ ಪಿ ಸಿಂಗ್ ಮತ್ತು ಚಂದ್ರಶೇಖರ್ ಅವರಿಗೆ ಇನ್ನೂ ಏಕೆ ಭಾರತ ರತ್ನ ನೀಡಿಲ್ಲ ಎಂದು ಸಮುದಾಯದ ನಾಯಕರುಗಳು ಪ್ರಶ್ನಿಸಿದರು.

ಇನ್ನು “2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ 2013 ರಲ್ಲಿ ಇದೇ ಮೈದಾನದಲ್ಲಿ ನಡೆದ ಇದೇ ರೀತಿಯ ಪಂಚಾಯತ್ ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಗೆ ಆಧಾರವಾಗಿದೆ. ಈಗ ಇದೇ ಮಹಾಪಂಚಾಯತ್ ಈ ಪ್ರದೇಶದಲ್ಲಿ ಬಿಜೆಪಿಯ ಅವನತಿಗೆ ಕಾರಣವಾಗಲಿದೆ” ಎಂದು ರಜಪೂತ ಸಮುದಾಯದ ಮುಖಂಡರು ಹೇಳಿದ್ದಾರೆ.

ಮಹಾಪಂಚಾಯತ್‌ನ ಸಂಘಟಕರಲ್ಲಿ ಒಬ್ಬರಾದ ಕಿಸಾನ್ ಮಜ್ದೂರ್ ಸಂಘಟನೆಯ ಮುಜಾಫರ್‌ನಗರ ಜಿಲ್ಲಾಧ್ಯಕ್ಷ ದೀಪಕ್ ಸೋಮ್, “ಠಾಕೂರರು ಸಿಎಂ ಆದಿತ್ಯನಾಥ್ ಅವರನ್ನು ಬೆಂಬಲಿಸುತ್ತಾರೆ” ಎಂದು ಹೇಳಿದರು.

ಇದನ್ನು ಓದಿದ್ದೀರಾ?  ಗುಜರಾತ್‌| ಕ್ಷತ್ರಿಯ ಸಮುದಾಯದ ಪ್ರತಿಭಟನೆ; ಬಿಜೆಪಿಯಲ್ಲಿ ಮುಂದುವರಿದ ತಿಕ್ಕಾಟ

ಸ್ವಾಭಿಮಾನ ಮಹಾಪಂಚಾಯತ್ ಎಂಬ ವೇದಿಕೆಯಲ್ಲಿ ಈ ಮಹಾಪಂಚಾಯತ್ ಅನ್ನು ರಜಪೂತರು ನಡೆಸಿದ್ದು, ‘ಕಮಲ್ ಕಾ ಫೂಲ್ ಹಮಾರಿ ಭೂಲ್’ (ಬಿಜೆಪಿ ಚಿಹ್ನೆ ಕಮಲವನ್ನು ಆಯ್ಕೆ ಮಾಡಿದ್ದು ನಮ್ಮ ತಪ್ಪು) ಎಂದು ಬರೆಯಲಾಗಿದೆ. ಹಾಗೆಯೇ ಬಿಜೆಪಿ ಚುನಾವಣಾ ಚಿಹ್ನೆಯ ಮೇಲೆ ‘X’ ಎಂದು ಬರೆಯಲಾಗಿದೆ. ಈ ಮೂಲಕ ಬಿಜೆಪಿ ನಾಯಕರ ಬಹಿಷ್ಕಾರವನ್ನು ಘೋಷಿಸಲಾಗಿದೆ.

ಸಹರಾನ್‌ಪುರದ ನಾನೌಟಾದ ನಂತರ ಇದು ಎರಡನೇ ಮಹಾಪಂಚಾಯತ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ಹಿಂದೆ ಸಹರಾನ್‌ಪುರದ ನಾನೌಟಾದಲ್ಲಿ ಟಿಕೆಟ್ ಹಂಚಿಕೆ, ಪ್ರಾತಿನಿಧ್ಯ ಮತ್ತು ಯೋಜನೆಗಳ ಅನುಷ್ಠಾನದ ಬಗ್ಗೆ ಠಾಕೂರ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.

“ರಾಷ್ಟ್ರೀಯತೆ, ಪಾಕಿಸ್ತಾನ ಅಥವಾ ಚೀನಾವನ್ನು ಹೆದರಿಸಿ ಯಾರೂ ಮತಗಳನ್ನು ಪಡೆಯಲು ಸಾಧ್ಯವಿಲ್ಲ. ರಜಪೂತರಷ್ಟೇ ಅಲ್ಲ, ಎಲ್ಲ 36 ಜಾತಿಗಳೂ ನಮ್ಮೊಂದಿಗಿವೆ. ಯಾರೂ ನಮ್ಮನ್ನು ರಾಷ್ಟ್ರೀಯತೆ, ಪಾಕಿಸ್ತಾನ ಅಥವಾ ಚೀನಾದ ಹೆಸರಿನಲ್ಲಿ ಹೆದರಿಸಿ ಮತ ಪಡೆಯಲು ಸಾಧ್ಯವಿಲ್ಲ. ನಮ್ಮ ಪೂರ್ವಜರು ಗಡಿಯಲ್ಲಿ ಹೋರಾಡಿದ್ದಾರೆ, ನಮ್ಮ ಸಹೋದರರು ಹೋರಾಡುತ್ತಿದ್ದಾರೆ, ಯಾವುದೇ ಬಿಜೆಪಿ ಸಂಸದ ಅಥವಾ ಅವರ ಕುಟುಂಬ ಸದಸ್ಯರು ಅಲ್ಲಿ ಯುದ್ಧ ಮಾಡಲ್ಲ” ಎಂದು ಕಿಸಾನ್ ಮಜ್ದೂರ್ ಸಂಘಟನೆಯ ಅಧ್ಯಕ್ಷರಾದ ಪೂರಣ್ ಸಿಂಗ್ ಹೇಳಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರ ಬಜೆಟ್‌-2024 | ಮಹಿಳೆಯರಿಗೆ ನೆರವಾಗುವ ನಾರಿಶಕ್ತಿ ಬಜೆಟ್ ಇದಾಗಿದೆ: ಎಚ್‌ ಡಿ ಕುಮಾರಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ 'ವಿಕಸಿತ ಭಾರತ' ನಿರ್ಮಾಣಕ್ಕೆ ಶಕ್ತಿ...

ಗ್ಯಾಂಗ್‌ಸ್ಟಾರ್ ಜೊತೆ ಓಡಿ ಹೋಗಿದ್ದ ಐಎಎಸ್ ಅಧಿಕಾರಿ ಪತ್ನಿ ಆತ್ಮಹತ್ಯೆ

ಗ್ಯಾಂಗ್​ಸ್ಟರ್​ನನ್ನು ಪ್ರೀತಿಸಿ ಆತನೊಂದಿಗೆ ಓಡಿ ಹೋಗಿದ್ದ ಐಎಎಸ್​ ಅಧಿಕಾರಿ ಪತ್ನಿ ಮನೆಗೆ...

ಕೇಂದ್ರ ಬಜೆಟ್ | ಇನ್ಮುಂದೆ ಯಾವುದು ಅಗ್ಗ? ಯಾವುದು ದುಬಾರಿ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23ರಂದು ಕೇಂದ್ರ ಬಜೆಟ್...

ಕೇಂದ್ರ ಬಜೆಟ್ | ಬಿಹಾರ, ಆಂಧ್ರ ಪ್ರದೇಶಕ್ಕೆ ಬಂಪರ್; ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್‌ಗಳು ವೈರಲ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದು ಬಿಹಾರ...