ಚೀಫ್ ಎಂಜಿನಿಯರ್ನ ನೇಮಕ ಮಾಡಲು ಎಷ್ಟೆಷ್ಟು ಫಿಕ್ಸ್ ಮಾಡಿದ್ದಿರಾ ಅದನ್ನು ನಿಲ್ಲಿಸಿ. ಇದನೆಲ್ಲಾ ನಾನು ಅನುಭವಿಸಿದ್ದೇನೆ. ಎಂಡಿ, ಚೀಫ್ ಎಂಜಿನಿಯರ್ಗೆ ಇಷ್ಟು ಅಂತಾ ಫಿಕ್ಸ್ ಮಾಡಿದ್ದಕ್ಕೆ ಜಲಾಶಯಕ್ಕೆ ಈ ಸ್ಥಿತಿ ಬಂದಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.
ಹೆಚ್ಎಂಟಿ ಭವನದಲ್ಲಿ ಮಂಗಳವಾರ ಮಾತನಾಡಿದ ಅವರು, “ಸೇಫ್ಟಿ ಮೆಜಾರಿಟಿ ಕಮಿಟಿಗೆ ಒಂದು ಫಾರ್ಮೇಟ್ ಕೊಟ್ಟಿರುತ್ತಾರೆ. ಪ್ರತಿಯೊಂದು ವಸ್ತುಗಳನ್ನು ಚೆಕ್ ಮಾಡಬೇಕು. ಪ್ರತಿವರ್ಷ ಲೂಬ್ರಿಕೇಷನ್ ಮಾಡಬೇಕಾಗುತ್ತದೆ. ಈ ಹಿನ್ನಲೆ ಕೇಂದ್ರ ಸರ್ಕಾರ 202ರಲ್ಲಿ ಹೊಸ ಕಾನೂನು ತಂದಿದೆ. ಇದರ ಪ್ರಕಾರ ಕೇಂದ್ರ ಸರ್ಕಾರದಿಂದ ಒಬ್ಬ , ರಾಜ್ಯ ಸರ್ಕಾರದಿಂದ ಒಬ್ಬ ಅಧಿಕಾರಿ ಇರುತ್ತಾರೆ” ಎಂದರು.
“ದುಡ್ಡು ಕೊಟ್ಟು ಬಂದವನು ಡ್ಯಾಂ ಏನಾಗಿದೆ ಅಂತಾ ನೋಡುತ್ತಾನಾ? ತುಂಗಭದ್ರಾ ಡ್ಯಾಂಗೆ 70 ವರ್ಷ ಆಗಿದೆ. ಇದು ಟಿಬಿ ಬೋರ್ಡ್ಗೆ ಬರುತ್ತದೆ. ಆಂಧ್ರ, ಕೇಂದ್ರ ಸರ್ಕಾರದ ಜವಾಬ್ದಾರಿ ಇದೆ. ಈ ಕುರಿತು ರಿಪೊರ್ಟ್ ಕೊಡಲು ಒಂದು ಕಮಿಟಿ ಇದೆ. ದುಡ್ಡು ಕೊಟ್ಟು ಬಂದವನು ಈ ಬಗ್ಗೆ ತಲೆ ಯಾಕೆ ಕೆಡಿಸಿಕೊಳ್ಳುತ್ತಾನೆ” ಎಂದು ಕಿಡಿಕಾರಿದರು.
“ಈಗ ತರಾತುರಿಯಲ್ಲಿ ಗೇಟ್ ರಿಪೇರಿ ಮಾಡೋದಕ್ಕೆ ಹೋಗಿ ಮತ್ತೆ ಏನೇನೋ ಅವಾಂತರ ಆಗುವುದು ಬೇಡ. ರೈತರಿಗೆ ಕಾನ್ಫಿಡೆನ್ಸ್ ಬರುವಂತೆ ಮಾಡಿ. ನಿಮ್ಮ ಊಹೆ ಮೇಲೆ ನಿರ್ಧಾರ ಮಾಡಿ ರೈತರ ಬೆಳೆ ನಷ್ಟ ಮಾಡಬೇಡಿ” ಎಂದರು.
ಭಾರೀ ಪ್ರಾಮಾಣಿಕ ಮಾಜಿ ಜಾತ್ಯತೀತ ಕುಮಾರಣ್ಣ,, ದೇವೇಗೌಡರು ಲೋಕೋಪಯೋಗಿ ಮಂತ್ರಿ ಆಗಿರುವಾಗ ಇಂಜಿನೀಯರುಗಳ ನೇಮಕಾತಿ ಪ್ರಕ್ರಿಯೆ ಹೇಗಿತ್ತು ಒಮ್ಮೆ ತಿರುಗಿ ನೋಡಿಕೊಂಡರೆ,, ಬಹುಶಃ ಬೇರೆಯವರ ಮೇಲೆ ಆಪಾದನೆ ಮಾಡುವ ನೈತಿಕತೆ ಬರಲಿಕ್ಕಿಲ್ಲ