ಶಕ್ತಿ ಯೋಜನೆ | ಮತ್ತಷ್ಟು ‘ಸ್ವಾತಂತ್ರ್ಯ’ದತ್ತ ಮಹಿಳೆಯರ ಸವಾರಿ

Date:

ಕಾಂಗ್ರೆಸ್‌ ಸರ್ಕಾರ ತನ್ನ ಐದು ಮಹತ್ವಾಕಾಂಕ್ಷೆಯ ಭರವಸೆಗಳಲ್ಲಿ ಒಂದನ್ನು ಜಾರಿಗೊಳಿಸಿದೆ. ಭಾನುವಾರದಿಂದ (ಜೂನ್‌ 11) ಶಕ್ತಿ ಯೋಜನೆ ಅನುಷ್ಠಾನಗೊಂಡಿದ್ದು, ರಾಜ್ಯದ ಮಹಿಳೆಯರು ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದೊಂದಿಗೆ ಹರ್ಷಿಸುತ್ತಿದ್ದಾರೆ. ಪರ-ವಿರೋಧಗಳ ಚರ್ಚೆಯ ನಡುವೆಯೂ ಈ ಯೋಜನೆಯು ಮಹಿಳೆಯರು ಮತ್ತಷ್ಟು ‘ಸ್ವಾತಂತ್ರ್ಯ’ದತ್ತ ಹೆಜ್ಜೆ ಹಾಕುತ್ತಿದ್ದಾರೆ.

- Advertisement -

ಮುಖ್ಯಮಂತ್ತಿ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀಡಿ, ಮಹಿಳೆಯರಿಗೆ ಉಚಿತ ಟಿಕೆಟ್‌ ವಿತರಿಸಿದ್ದಾರೆ. ಹಲವೆಡೆ ಕಂಡಕ್ಟರ್‌ಗಳು ಮಹಿಳೆಯರನ್ನು ವಿಶ್ವಾಸದಿಂದ ಸ್ವಾಗತಿಸಿದ್ದಾರೆ. ಈಗ ಮಹಿಳೆಯರು ತಾವು ಕೆಲಸ ಮಾಡುವ ಕಚೇರಿಗಳಿಗೆ, ಆಸ್ಪತ್ರೆಗೆ ಸೇರಿದಂತೆ ರಾಜ್ಯದಲ್ಲಿ ಯಾವ ಭಾಗಕ್ಕಾದರೂ ಪ್ರಯಾಣಿಸಬಹುದು. ಇದು ಕೇವಲ ಮಹಿಳಾ ಸಬಲೀಕರಣದ ದಿನ ಮಾತ್ರವಲ್ಲ, ಹೆಣ್ಣು ಮಕ್ಕಳ ಸ್ವಾಭಿಮಾನದ ಬದುಕಿಗೊಂದು ಮೆಟ್ಟಿಲಾಗಿದೆ. ಅವರು ಆರ್ಥಿಕವಾಗಿ ಸಬಲರಾಗಲು ಪ್ರಮುಖ ಪಾತ್ರವಹಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಸಾಮಾನ್ಯವಾಗಿ ಮಹಿಳೆಯರು, ಅದರಲ್ಲೂ ಗೃಹಿಣಿಯರು ಎಲ್ಲಿಯೇ ಹೋಗಬೇಕೆಂದರೂ ಅವರ ಗಂಡನಿಂದ ಹಣ ಕೇಳಬೇಕಾಗುತ್ತದೆ. ಈಗ, ಅವರು ಕೇವಲ ಬಸ್ ಹತ್ತಿ ತಮ್ಮ ಗಮ್ಯಸ್ಥಾನವನ್ನು ತಲುಪಬಹುದು. ಇದು ಮಹಿಳೆಯರು ಗಂಡನ ಹಂಗಿನ ಬದುಕಿನಿಂತ ಕೊಂಚ ಸ್ವತಂತ್ರರನ್ನಾಗಿ ಮಾಡುತ್ತದೆ ಎಂದು ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ ಮಂಡ್ಯದ ಮಹಿಳೆಯೊಬ್ಬರು ಹೇಳಿದ್ದಾರೆ.

“ನಮ್ಮ ಮಗಳು ಉಚಿತವಾಗಿ ಕಾಲೇಜಿಗೆ ಪ್ರಯಾಣಿಸಬಹುದು. ಹಲವು ಸಂದರ್ಭಗಳಲ್ಲಿ ಆಕೆಗೆ ಬಸ್‌ ಪಾಸ್‌ ಕೊಡಿಸುವುದೇ ಸವಾಲಾಗಿತ್ತು. ಬಸ್‌ಗೆ ಅಗತ್ಯವಿದ್ದ ಹಣ ಭರಸಲಾಗದೆ, ಪಾಸ್‌ ಪಡೆಯುವುದು ತಡವಾಗುತ್ತಿತ್ತು. ಎಷ್ಟೋ ದಿನಗಳ ಕಾಲ ಪ್ರಯಾಣ ದರ ನೀಡಿ ಪ್ರಯಾಣಿಸುತ್ತಿದ್ದಳು. ಈಗ ಆಕೆ ಬಸ್‌ ಚಾರ್ಜ್, ಪಾಸ್‌ನ ಚಿಂತೆಯಿಲ್ಲದೆ ಪ್ರಯಾಣಿಸಬಹುದು” ಎಂದು ಕೆ.ಆರ್‌ ಪೇಟೆ ತಾಲೂಕಿನ ವಿದ್ಯಾರ್ಥಿನಿಯೊಬ್ಬರ ಒಂಟಿ ಪೋಷಕಿ ಇಂದ್ರಮ್ಮ ಹೇಳಿದ್ದಾರೆ.

“ಗಾರ್ಮೆಂಟ್‌ಗಳಲ್ಲಿ ದುಡಿಯುವವರಿಗೆ ಕಡಿಮೆ ವೇತನ ಸಿಗುತ್ತದೆ. ಆ ಹಣದಲ್ಲಿಯೇ ಪ್ರಯಾಣ, ಮನೆ ಖರ್ಚು, ಮಕ್ಕಳ ವಿದ್ಯಾಭ್ಯಾಸ ಖರ್ಚು ಎಲ್ಲವನ್ನೂ ಭರಿಸಬೇಕಿತ್ತು. ದುಡಿದ ಹಣದಲ್ಲಿ ಉಳಿತಾಯ ಮಾಡುವುದೇ ಕಷ್ಟವಾಗಿತ್ತು. ಈಗ, ಉಚಿತ ಪ್ರಯಾಣದ ಅವಕಾಶ ದೊರೆತಿರುವುದು ನಾನು ಮತ್ತು ನನ್ನ ಮಗಳ ಪ್ರಯಾಣದ ಹಣ ಉಳಿಯುತ್ತದೆ. ಮತ್ತೆನಾನ್ನಾದರೂ ಕೊಳ್ಳಲು ನೆರವಾಗುತ್ತದೆ” ಎಂದು ಮೈಸೂರಿನ ಗಾರ್ಮೆಂಟ್‌ವೊಂದರಲ್ಲಿ ದುಡಿಯುವ ಮಹಿಳೆ ಗಾಯತ್ರಿ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ʼನಮಸ್ಕಾರ ಬುದ್ಧಿ.. ಏನ್ಲಾ ಹೆಂಗಿದಿ..ʼ ಎನ್ನುವುದು ಗುಲಾಮಗಿರಿ ಮನಸ್ಥಿತಿ ಸಂಕೇತ: ಸಿಎಂ ಸಿದ್ದರಾಮಯ್ಯ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ಉಡುಪಿ | ಯುವಜನರೇ, ನಿರಂತರ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಿ: ಪ್ರಕಾಶ್ ಶೆಟ್ಟಿ

ಯುವಜನರು ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದರೆ...