ಅಖ್ಲಾಕ್ ಹತ್ಯೆ ಆರೋಪಿಗಳ ರಕ್ಷಣೆ ಯತ್ನಕ್ಕೆ ತೀವ್ರ ಹಿನ್ನಡೆ: ಕೋರ್ಟಿನಲ್ಲಿ ಯೋಗಿ ಸರ್ಕಾರದ ಅರ್ಜಿ ವಜಾ

Date:

2015ರ ದಾದ್ರಿ ಗುಂಪು ಹಲ್ಲೆ ಪ್ರಕರಣದಲ್ಲಿ ಹತ್ಯೆಯಾದ ಮೊಹಮ್ಮದ್ ಅಖ್ಲಾಕ್ ಆರೋಪಿಗಳ ರಕ್ಷಣೆಗೆ ಮುಂದಾಗಿದ್ದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಗ್ರೇಟರ್ ನೋಯ್ಡಾದ ಸೂರಜ್‌ಪುರದ ಜಿಲ್ಲಾ ನ್ಯಾಯಾಲಯವು ಆಪಾದಿತರ ಮೇಲಿನ ಆಪಾದನೆಗಳನ್ನು ಕೈಬಿಡುವಂತೆ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

- Advertisement -

ಈ ನಡುವೆಯೇ ಯೋಗಿ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಪ್ರಶ್ನಿಸಿ ಅಖ್ಲಾಕ್ ಪತ್ನಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮೊಹಮ್ಮದ್ ಅಖ್ಲಾಕ್‌ನನ್ನು ಕೊಂದ ಹಿಂದುತ್ವವಾದಿಗಳ ರಕ್ಷಣೆಗೆ ಇಳಿದಿರುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಈ ಮೂಲಕ ಪ್ರಶ್ನಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹವ್ಯಾಸದಿಂದ ಉದ್ಯಮದತ್ತ: ಶಿರಸಿ ಮಹಿಳೆಯರ ʻಡೇರೆʼ ಕೃಷಿಗೆ ಸ್ವಾವಲಂಬನೆಯ...

ಮನೆಯಂಗಳದ ಅಂದ ಹೆಚ್ಚಿಸುವ ಹೂವಷ್ಟೇ ಆಗಿದ್ದ ಡೇರೆ ಹೂವು (ಡೇಲಿಯಾ), ಇದೀಗ ಮಲೆನಾಡಿನ ಮಹಿಳೆಯರ ಪಾಲಿಗೆ ಹೊಸ ಆದಾಯದ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಶಿವಮೊಗ್ಗ...

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪೆಹ್ಲೂಖಾನ್‌ಗೆ ಬಗೆದ ಅದೇ ದ್ರೋಹ ಕಾದಿದೆಯೇ ಅಖ್ಲಾಕ್‌ಗೆ?

ಉತ್ತರ ಪ್ರದೇಶದ ಗಡಿಭಾಗದ ದಾದ್ರಿಯ ಬಿಸಾದ ಗ್ರಾಮದ ಮೊಹಮ್ಮದ್ ಅಖ್ಲಾಕ್ ಹಿಂದುತ್ವವಾದಿಗಳ ಗುಂಪು ಜಜ್ಜಿ ಕೊಂದಿತ್ತು. ಇದಕ್ಕೆ ಕಾರಣ ಮನೆಯ ರೆಫ್ರಿಜರೇಟರಿನಲ್ಲಿ ಗೋಮಾಂಸ ಇಟ್ಟಿದ್ದ ಎಂಬ ಅನುಮಾನ! ಈಗಾಗಲೇ ಈ ಹತ್ಯೆಯ ಎಲ್ಲ ಆಪಾದಿತರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇಂತಹ ಹತ್ಯೆ ಮಾಡಿದವರ ಪರವಾಗಿ ನಿಂತಿರುವ ಬಿಜೆಪಿ ಸರ್ಕಾರ ಆಪಾದಿತರ ಮೇಲಿನ ಆಪಾದನೆಗಳನ್ನು ಕೈಬಿಡುವಂತೆ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಅರ್ಜಿ ವಿರುದ್ಧ ಅಖ್ಲಾಕ್ ಪತ್ನಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಆದರೆ ಅದಾಗಲೇ ಸ್ಥಳೀಯ ನ್ಯಾಯಾಲಯ ಯೋಗಿ ಸರ್ಕಾರದ ಅರ್ಜಿ ವಜಾಗೊಳಿಸಿದೆ.

ಈ ಪ್ರಕರಣ ನಡೆದ ಆರಂಭದಲ್ಲಿ ಪೊಲೀಸರು ಕೊಲೆ ಆರೋಪ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಗುಂಪು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು ಸೇರಿದಂತೆ ಒಟ್ಟು 18 ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳಲ್ಲಿ ಓರ್ವ 2016ರಲ್ಲಿ ನಿಧನರಾಗಿದ್ದು, ಉಳಿದ 14 ಆರೋಪಿಗಳು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.

2015ರ ಸೆಪ್ಟಂಬರ್ 28ರ ರಾತ್ರಿ ಅಖ್ಲಾಕ್ ಮತ್ತು ಆತನ 22 ವರ್ಷ ವಯಸ್ಸಿನ ಮಗ ದಾನಿಶ್ ನಿದ್ರಿಸುತ್ತಿದ್ದ ಹೊತ್ತು. ದೊಣ್ಣೆಗಳು, ಖಡ್ಗಗಳು, ನಾಡ ಪಿಸ್ತೂಲುಗಳನ್ನು ಹಿಡಿದ ಗುಂಪೊಂದು ಮನೆಗೆ ನುಗ್ಗಿತು. ಆಕಳೊಂದನ್ನು ಕೊಂದು ತಿಂದಿರುವುದಾಗಿ ಕುಟುಂಬವನ್ನು ನಿಂದಿಸಿತು. ರೆಫ್ರಿಜರೇಟರನ್ನು ತೆರೆದು ಅಲ್ಲಿ ಕಂಡ ಮಾಂಸವನ್ನು ಗೋಮಾಂಸ ಎಂದು ಸಾರಿತು. ಅದು ಕುರಿ ಮಾಂಸವೆಂದು ಕುಟುಂಬವು ಸಾಕ್ಷ್ಯಾಧಾರಗಳೊಂದಿಗೆ ವಾದಿಸಿದರೂ ಕೇಳಿರಲಿಲ್ಲ.

ಆಹಾರ ಸ್ವಾತಂತ್ರ್ಯದ ಮೇಲೆ, ಕೋಮು ಆಧಾರದಲ್ಲಿ ನಡೆದ ಈ ದಾಳಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಆದರೆ, ನಂತರದ ಪಶುವೈದ್ಯಕೀಯ ವರದಿ ಮತ್ತು ಆರಂಭಿಕ ತನಿಖೆಗಳಲ್ಲಿ ಅದು ಗೋಮಾಂಸವಲ್ಲ, ಬದಲಿಗೆ ಮೇಕೆ ಮಾಂಸ ಎಂದು ದೃಢಪಟ್ಟಿತ್ತು. ಈ ಪ್ರಕರಣ ನಡೆದು ಹತ್ತು ವರ್ಷಗಳಾಗಿದೆ. ಆದರೆ ಇಂದಿಗೂ ಅಖ್ಲಾಕ್ ಕುಟುಂಬ ನ್ಯಾಯಕ್ಕಾಗಿ ಕೋರ್ಟ್‌ ಅಳೆಯುತ್ತಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೇರಳಕ್ಕೂ ಕಾಲಿಟ್ಟಿತು, ಕೋಮುದ್ವೇಷಿ ಗುಂಪುಹತ್ಯೆಯ ಪಿಡುಗು!

2025ರ ಮೇ ತಿಂಗಳಲ್ಲಿ ಅಲಿಗಢದಲ್ಲಿ ನಾಲ್ವರು ಮುಸ್ಲಿಂ ವ್ಯಕ್ತಿಗಳ ಮೇಲೆ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಶಂಕೆಯ ಮೇಲೆ ದಾಳಿ ನಡೆಸಿ, ಅವರ ವಾಹನಕ್ಕೆ ಬೆಂಕಿ ಹಚ್ಚಲಾಗಿತ್ತು. ಅದಾದ ನಂತರ ಮಥುರಾದ ಸರ್ಕಾರಿ ಪ್ರಯೋಗಾಲಯದಿಂದ ಬಂದ ಫೋರೆನ್ಸಿಕ್ ವರದಿಯಲ್ಲಿ ಆ ಮಾಂಸವು ಗೋಮಾಂಸವಲ್ಲ ಎಂದು ಸಾಬೀತಾಗಿತ್ತು. ಹಾಗೆಯೇ 2024ರ ಆಗಸ್ಟ್‌ನಲ್ಲಿ ಹರಿಯಾಣದ ಚರ್ಖಿ ದಾದ್ರಿ ಜಿಲ್ಲೆಯಲ್ಲಿ ಸಾಬಿರ್ ಮಲಿಕ್ ಎಂಬ ವಲಸೆ ಕಾರ್ಮಿಕನನ್ನು ಗೋಮಾಂಸ ಸೇವಿಸಿದ ಶಂಕೆಯ ಮೇಲೆ ಹತ್ಯೆ ಮಾಡಲಾಗಿತ್ತು. ಅದೇ ವರ್ಷ ಹರಿಯಾಣದ ಫರಿದಾಬಾದ್‌ನಲ್ಲಿ ತಮ್ಮನ್ನು ತಾವು ಗೋರಕ್ಷಕರು ಎಂದು ಹೇಳಿಕೊಳ್ಳುವ ಗುಂಪು ಆರ್ಯನ್ ಮಿಶ್ರಾ ಎಂಬ ವಿದ್ಯಾರ್ಥಿಯನ್ನು 30 ಕಿ.ಮೀ ಬೆನ್ನಟ್ಟಿ ಗುಂಡಿಕ್ಕಿ ಕೊಂದಿತ್ತು.

ಉತ್ತರ ಭಾರತದಲ್ಲಿ ತೀವ್ರವಾಗಿರುವ ಗುಂಪು ಹತ್ಯೆಯ ಈ ಪಿಡುಗು ದಕ್ಷಿಣ ಭಾರತ ಅದರಲ್ಲಿಯೂ ಕೋಮು ಸಾಮರಸ್ಯಕ್ಕೆ ಹೆಸರಾದ ಕೇರಳಕ್ಕೆ ಕಾಲಿಟ್ಟಿದೆ. “ನೀನು ಬಾಂಗ್ಲಾದೇಶಿಯೇ” ಎಂದು ಕೇಳಿ ಛತ್ತೀಸಗಢದ ರಾಮನಾರಾಯಣ ಬಘೇಲ್ ಎಂಬ ಕಡುಬಡ ದಲಿತ ಯುವಕನ ಹತ್ಯೆ ಮಾಡಲಾಗಿದೆ. ಹಿಂದುತ್ವವಾದಿಗಳು ಹರಡಿರುವ ಈ ಬೆಂಕಿ ಇದೀಗ ದೇಶದಾದ್ಯಂತ ವ್ಯಾಪಿಸುತ್ತಿದ್ದು, ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ನೆಪ ಹುಡುಕಿ ಹಲ್ಲೆ ನಡೆಸಲಾಗುತ್ತಿದೆ. ಬಿಜೆಪಿ ಸರ್ಕಾರದ ರಾಜಕೀಯ ಅಸ್ತ್ರಕ್ಕೆ ಸೌಹಾರ್ದತೆ ಬಲಿಯಾಗುತ್ತಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ಯಾನೇಶ್ ಕುಮಾರ್ ವಿರುದ್ಧ ಅ. 2ರಂದು ಬೃಹತ್ ಪ್ರತಿಭಟನೆ: ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್

ಚುನಾವಣಾ ಆಯೋಗದ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ಕಾರ್ಯವೈಖರಿಯನ್ನು ಒತ್ತಾಯಿಸಿ ಹಾಗೂ ಮುಖ್ಯ...

ನೋಂದಣಿಯೇ ಆಗದ RSSನಿಂದ ಪೌರತ್ವ ನೋಂದಣಿ ಜಾರಿಗೆ ಆಗ್ರಹ: ಜನಗಣತಿ, SIR ನಡುವೆ ಹೊಸ ವಿವಾದ

ದೇಶದಲ್ಲಿ ಮುಂಬರುವ ಜನಗಣತಿ ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ...

ತನಿಖೆಯ ನೆಪ, ನನೆಗುದಿಗೆ ಬಿಲ್: ₹38,000 ಕೋಟಿ ಪಾವತಿಗೆ ಗಡುವು ನೀಡಿದ ಗುತ್ತಿಗೆದಾರರು

ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಬೆನ್ನೆಲುಬಾಗಿರುವ ಸರ್ಕಾರಿ ಗುತ್ತಿಗೆದಾರರು ಸದ್ಯ ಸರ್ಕಾರದ ವಿರುದ್ಧ...

SIR ಮುಕ್ತಾಯದ ಬೆನ್ನಲ್ಲೇ ಒಡಿಶಾ ಸಿಇಒ ಸ್ವಯಂ ನಿವೃತ್ತಿಗೆ ಅರ್ಜಿ

ಒಡಿಶಾದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಹಾಗೂ ಹಿರಿಯ ಐಎಎಸ್ ಅಧಿಕಾರಿ ಆರ್.ಎಸ್....