ಯುಪಿ ಚುನಾವಣೆ | ಕಾಂಗ್ರೆಸ್‌ಗೆ ಫಲ ನೀಡುವುದೇ ಬ್ರಾಹ್ಮಣ-ಮುಸ್ಲಿಂ ಸಮೀಕರಣ

Date:

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದ ಫೆಬ್ರವರಿ-ಮಾರ್ಚ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಗೆ ಕೆಲವೇ ತಿಂಗಳುಗಷ್ಟೇ ಬಾಕಿ ಇರುವ ಸಮಯದಲ್ಲಿ, ಕೇವಲ 2 ಶಾಸಕರನ್ನು ಮಾತ್ರವೇ ಹೊಂದಿರುವ ಕಾಂಗ್ರೆಸ್‌, ಈ ಬಾರಿ ತನ್ನ ನೆಲೆಯನ್ನು ಮರಳಿ ವಿಸ್ತರಿಸಿಕೊಳ್ಳಲು ಮುಂದಾಗಿದೆ. ಸಂಘಟನೆಯಲ್ಲಿ ನಾನಾ ರೀತಿಯ ಬದಲಾವಣೆಗಳನ್ನು ಮಾಡುತ್ತಿದೆ. ಪಕ್ಷದ ಹೈಕಮಾಂಡ್‌, ರಾಜ್ಯ ನಾಯಕತ್ವದಲ್ಲಿ ಸಾಮಾಜಿಕ ಸಮೀಕರಣಗಳನ್ನು ಮರುಹೊಂದಿಸುತ್ತಿದೆ. ತನ್ನ ರಾಜ್ಯಾಧ್ಯಕ್ಷರಾಗಿ ಶಾಸಕಿ ಆರಾಧನಾ ಮಿಶ್ರಾ ಮೋನಾ ಮತ್ತು ಕಾರ್ಯಾಧ್ಯಕ್ಷರಾಗಿ ಸಹಾರನ್‌ಪುರ ಲೋಕಸಭಾ ಕ್ಷೇತ್ರದ ಪ್ರಭಾವಿ ಸಂಸದ ಇಮ್ರಾನ್ ಮಸೂದ್ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಿಸಿದ್ದಾರೆ. ಈ ಪ್ರಮುಖ ನೇಮಕಗಳು ಉತ್ತರ ಪ್ರದೇಶದ ಹಳೆಯ ಬ್ರಾಹ್ಮಣ-ಮುಸ್ಲಿಂ ಮತಬ್ಯಾಂಕ್ ಸಮೀಕರಣವನ್ನು ಮರುರೂಪಿಸುವ ತಂತ್ರವೆಂದು ಹೇಳಲಾಗುತ್ತಿದೆ.

- Advertisement -

ಸುಮಾರು 15 ವರ್ಷಗಳ ಸುದೀರ್ಘ ವಿರಾಮದ ನಂತರ ಕಾಂಗ್ರೆಸ್ ಮತ್ತೆ ಬ್ರಾಹ್ಮಣ ಮಹಿಳೆಯೊಬ್ಬರಿಗೆ ರಾಜ್ಯದ ಚುಕ್ಕಾಣಿ ನೀಡಿದೆ. ಈ ಹಿಂದೆ 2007 ರಿಂದ 2012 ರವರೆಗೆ ರೀಟಾ ಬಹುಗುಣ ಜೋಶಿ ಅವರು ಕಾಂಗ್ರೆಸ್ ರಾಜ್ಯ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಇದೀಗ, ರಾಜ್ಯದಲ್ಲಿ ಪಕ್ಷವು ಕುಸಿದಿರುವ ಸಮಯದಲ್ಲಿ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಆರಾಧನಾ ಮಿಶ್ರಾ ಅವರಿಗೆ ಹೊಣೆಗಾರಿಕೆ ಮತ್ತು ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ರಾಜ್ಯಸಭಾ ಸಂಸದ ಪ್ರಮೋದ್ ತಿವಾರಿ ಅವರ ಪುತ್ರಿಯಾಗಿರುವ ಆರಾಧನಾ ಮಿಶ್ರಾ, ಪ್ರತಾಪ್‌ಗಢ ಜಿಲ್ಲೆಯ ರಾಂಪುರ್ ಖಾಸ್ ಕ್ಷೇತ್ರದಿಂದ ಸತತ ಮೂರು ಬಾರಿ (2014, 2017 ಮತ್ತು 2022) ಶಾಸಕಿಯಾಗಿ ಆಯ್ಕೆಯಾಗಿದ್ದು, ತಮ್ಮದೇ ರಾಜಕೀಯ ನೆಲೆ ಕಂಡುಕೊಂಡಿದ್ದಾರೆ. ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿದ್ದರೂ, ಅವರು ಪಂಚಾಯತ್ ಬ್ಲಾಕ್ ಮಟ್ಟದಿಂದ ರಾಜಕೀಯ ರಂಗಪ್ರವೇಶ ಮಾಡಿ ತಳಮಟ್ಟದ ಸಂಘಟನೆಯ ಅನುಭವ ಹೊಂದಿದ್ದಾರೆ. ಜೊತೆಗೆ, ಪ್ರಿಯಾಂಕಾ ಗಾಂಧಿ ಅವರ ನಿಕಟವರ್ತಿಯಾಗಿ ‘ಲಡ್ಕಿ ಹೂಂ, ಲಡ್ ಸಕ್ತಿ ಹೂಂ’ ಅಭಿಯಾನದಲ್ಲಿ ಸಕ್ರಿಯರಾಗಿಯೂ ಅವರು ತೊಡಗಿಸಿಕೊಂಡಿದ್ದರು. ಅವರು ಪಕ್ಷದ ಮಹಿಳಾ ಮತ್ತು ಬ್ರಾಹ್ಮಣ ಮುಖವಾಗಿ, ಈ ಎರಡೂ ಸಮುದಾಯಗಳ ಬೆಂಬಲವನ್ನು ಪಕ್ಷಕ್ಕೆ ತರುವ ಭರವಸ ಮೂಡಿಸಿದ್ದಾರೆ.

ಇನ್ನೊಂದೆಡೆ, ಪಶ್ಚಿಮ ಉತ್ತರ ಪ್ರದೇಶದ ಪ್ರಭಾವಿ ಮುಸ್ಲಿಂ ನಾಯಕ, ಸಹಾರನ್‌ಪುರದ ಸಂಸದ ಇಮ್ರಾನ್ ಮಸೂದ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿರುವುದು ಮುಸ್ಲಿಂ ಮತದಾರರನ್ನು ಸೆಳೆಯುವ ಕಾಂಗ್ರೆಸ್‌ನ ಪ್ರಮುಖ ಹೆಜ್ಜೆಯಾಗಿದೆ. 2014ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆಯಿಂದ ರಾಷ್ಟ್ರಮಟ್ಟದ ಗಮನ ಸೆಳೆದಿದ್ದ ಇಮ್ರಾನ್ ಮಸೂದ್, ನಂತರದ ದಿನಗಳಲ್ಲಿ ಸಮಾಜವಾದಿ ಪಕ್ಷ ಸೇರಿದ್ದರು. ಆಬಳಿಕ, ಮತ್ತೆ ಕಾಂಗ್ರೆಸ್‌‌ಗೆ ಮರಳಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಸಹಾರನ್‌ಪುರ ಕ್ಷೇತ್ರದಲ್ಲಿ ಭಾರೀ ಗೆಲುವು ಸಾಧಿಸಿದ್ದರು. ಪಶ್ಚಿಮ ಉತ್ತರ ಪ್ರದೇಶದ ಮುಸ್ಲಿಂ ಸಮುದಾಯದಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಮಸೂದ್ ಅವರ ನೇಮಕವು ಕಾಂಗ್ರೆಸ್‌ಗೆ ಹೊಸ ಶಕ್ತಿ ತುಂಬುವ ನಿರೀಕ್ಷೆಯಿದೆ.

ಕಾಂಗ್ರೆಸ್‌ನ ಈ ಹೊಸ ಸಂಘಟನಾ ಮಾದರಿಯು ‘ಇಂಡಿಯಾ’ ಮೈತ್ರಿಕೂಟದ ಮಿತ್ರಪಕ್ಷ ಸಮಾಜವಾದಿ ಪಕ್ಷದ ‘ಪಿಡಿಎ’ (ಪಿಛ್ಡಾ [ಹಿಂದುಳಿದ], ದಲಿತ, ಅಲ್ಪಸಂಖ್ಯಾತ) ರಾಜಕೀಯ ಸೂತ್ರಕ್ಕೂ ಹೊಂದಿಕೊಳ್ಳುವಂತಿದೆ. ಬ್ರಾಹ್ಮಣ ಸಮುದಾಯದ ಆರಾಧನಾ ಮಿಶ್ರಾ ಅಧ್ಯಕ್ಷರಾದರೆ, ಮುಸ್ಲಿಂ ಸಮುದಾಯದ ಇಮ್ರಾನ್ ಮಸೂದ್ ಕಾರ್ಯಾಧ್ಯಕ್ಷರಾಗಿದ್ದಾರೆ. ಇದರ ಜೊತೆಗೆ ಒಬಿಸಿ (ನಿಷಾದ್) ಸಮುದಾಯದ ದೇವೇಂದ್ರ ನಿಷಾದ್ ಮತ್ತು ದಲಿತ ಸಮುದಾಯದ ಆಲೋಕ್ ಪ್ರಸಾದ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಕಾಂಗ್ರೆಸ್ ಸರ್ವ ಸಮುದಾಯದ ಸಮತೋಲನ ಕಾಯ್ದುಕೊಂಡಿದೆ.

ಈ ಹೊಸ ನಾಯಕತ್ವವು ಉತ್ತರ ಪ್ರದೇಶದ ರಾಜಕೀಯದಲ್ಲಿ ಎರಡೆರಡು ಪ್ರಮುಖ ಸವಾಲುಗಳನ್ನು ಎದುರಿಸಬೇಕಾಗಿದೆ. ಒಂದೆಡೆ, ಬಿಜೆಪಿ ವಿರುದ್ಧ ಕಾಂಗ್ರೆಸ್‌ಅನ್ನು ಪ್ರಬಲ ರಾಜಕೀಯ ಪರ್ಯಾಯವಾಗಿ ರೂಪುಗೊಳಿಸಬೇಕು ಮತ್ತು ಇನ್ನೊಂದೆಡೆ, 2027ರ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ವಿಚಾರದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಸೌಹಾರ್ದ ಮಾತುಕತೆಗಳನ್ನು ನಡೆಸಬೇಕಿದೆ.

ಆದಾಗ್ಯೂ, ಇಮ್ರಾನ್ ಮಸೂದ್ ಅವರು ಇತ್ತೀಚೆಗೆ ಸಮಾಜವಾದಿ ಪಕ್ಷದ ಕೆಲವು ನಿಲುವುಗಳನ್ನು ಬಹಿರಂಗವಾಗಿ ವಿಮರ್ಶಿಸುತ್ತಿದ್ದರೆ, ಆರಾಧನಾ ಮಿಶ್ರಾ ಮತ್ತು ಅವರ ತಂದೆ ಪ್ರಮೋದ್ ತಿವಾರಿ ಸಮಾಜವಾದಿ ಪಕ್ಷದ ವರಿಷ್ಠರೊಂದಿಗೆ ಉತ್ತಮ ವೈಯಕ್ತಿಕ ಬಾಂಧವ್ಯ ಹೊಂದಿದ್ದಾರೆ. ಈ ಹೊಸ ಜೋಡಿಯು ರಾಜ್ಯದಲ್ಲಿ ಕಾಂಗ್ರೆಸ್‌ನ ನೆಲೆಯನ್ನು ತಳಮಟ್ಟದಲ್ಲಿ ವಿಸ್ತರಿಸುವುದರ ಜೊತೆಗೆ ಮೈತ್ರಿಕೂಟದ ಒಳಗಿನ ರಾಜಕೀಯ ತಂತ್ರಗಾರಿಕೆಯನ್ನು ನಿಭಾಯಿಸುವ ಗುರುತರ ಜವಾಬ್ದಾರಿಯನ್ನು ಹೊರಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾರ್ಮುಜ್ ಜಲಸಂಧಿಯಲ್ಲಿ ಕುವೈತ್ ಹಡಗಿನ ಮೇಲೆ ದಾಳಿ: ಐವರು ಭಾರತೀಯರ ರಕ್ಷಣೆ

ಹಾರ್ಮುಜ್ ಜಲಸಂಧಿಯಲ್ಲಿ ಕುವೈತ್ ಧ್ವಜವಿದ್ದ ತೈಲ ಹಡಗಿನ ಮೇಲೆ ಸ್ಫೋಟಕ ವಸ್ತುವಿನಿಂದ...

ಏಷ್ಯನ್ ಗೇಮ್ಸ್: ಬಿಲ್ಲುಗಾರಿಕೆಯಲ್ಲಿ ಇತಿಹಾಸ ಬರೆದ 17 ವರ್ಷದ ಕುಂಕುಮ್‌ಗೆ ಬಂಗಾರ!

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನ 15ನೇ ದಿನ...

ಬೀದರ್‌ | ಎಚ್‌ಐವಿ ಬಾಧಿತರು ಆತಂಕಕ್ಕೊಳಗಾಗದೆ ನಿಯಮಿತ ಔಷಧಿ ಸೇವಿಸಿ

ಎಚ್‌ಐವಿ ಬಾಧಿತರು ಯಾವುದೇ ರೀತಿಯ ಭಯ, ಆತಂಕಕ್ಕೆ ಒಳಗಾಗದೆ ವೈದ್ಯರ ಸಲಹೆಯಂತೆ...

ಬೀದರ್‌ | ಗಾಂಧೀ ಜಯಂತಿ : ಪೌರಕಾರ್ಮಿಕರಿಗೆ ಉಪಹಾರ ವಿತರಣೆ

ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಆಮ್ ಆದ್ಮಿ ಪಕ್ಷದ ಇಂಜಿನಿಯರಿಂಗ್ ವಿಂಗ್...