‘ವಾಟ್ಸ್‌ಆ್ಯಪ್ ಇತಿಹಾಸ’: ‘ರಾಷ್ಟ್ರಗೀತೆ’ ಕುರಿತು ಸುಳ್ಳು ಹೇಳಿದ ಬಿಜೆಪಿ ಸಂಸದ ಕಾಗೇರಿಗೆ ಪ್ರಿಯಾಂಕ್‌ ಪಾಠ

Date:

ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ವನ್ನು ಬ್ರಿಟಿಷರನ್ನು ಸ್ವಾಗತಿಸಲು ಬರೆಯಲಾಗಿದೆ. ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕು ಎಂಬ ಬಿಜೆಪಿ ಸಂಸದ, ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆಗೆ ಸಚಿವ ಪ್ರಿಯಾಂಕ್‌ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕಾಗೇರಿ ತಿಳಿದುದು ‘ವಾಟ್ಸ್‌ಆ್ಯಪ್ ಇತಿಹಾಸದ ಪಾಠ’, ಇದು ಸಂಪೂರ್ಣ ಅಸಂಬದ್ಧ ಎಂದು ಹೇಳಿದ್ದಾರೆ.

- Advertisement -

ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕಾಗೇರಿ, “ಇತಿಹಾಸವನ್ನು ಕೆದಕಲು ಹೋಗುವುದಿಲ್ಲ. ಆದರೆ, ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕೆಂದು ಬಲವಾದ ಒತ್ತಾಯವಿತ್ತು. ಆದಾಗ್ಯೂ, ನಮ್ಮ ಪೂರ್ವಜರು ವಂದೇ ಮಾತರಂ ಜೊತೆಗೆ, ಬ್ರಿಟಿಷರನ್ನು ಸ್ವಾಗತಿಸಲು ರಚಿಸಲಾದ ‘ಜನ ಗಣ ಮನ’ವನ್ನು ಸಹ ಸೇರಿಸಬೇಕೆಂದು ನಿರ್ಧರಿಸಿದರು. ಇಂದು, ನಾವು ಅದನ್ನು ಸ್ವೀಕರಿಸಿದ್ದೇವೆ. ಅದನ್ನು ಅನುಸರಿಸುತ್ತಿದ್ದೇವೆ” ಎಂದು ಹೇಳಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಪ್ರಿಯಾಂಕ್‌ ಖರ್ಗೆ, ಇದೊಂದು ಆರ್‌ಎಸ್‌ಎಸ್‌ನ ವಾಟ್ಸ್‌ಆ್ಯಪ್ ಯೂನಿರ್ವಸಿಟಿ ಕಲಿಸಿರುವ ಇತಿಹಾಸದ ಪಾಠ ಎಂದಿದ್ದಾರೆ. “ಬಿಜೆಪಿ ಸಂಸದ ಕಾಗೇರಿ ಅವರು ಈಗ ನಮ್ಮ ರಾಷ್ಟ್ರಗೀತೆ ‘ಬ್ರಿಟಿಷರಿಗಾಗಿ’ ಬರೆದದ್ದು ಎನ್ನುತ್ತಿದ್ದಾರೆ. ಇದು ಸಂಪೂರ್ಣವಾಗಿ ಅಸಂಬದ್ದವಾದ ಹೇಳಿಕೆ. ಟ್ಯಾಗೋರ್ ಅವರು 1911ರಲ್ಲಿ ‘ಭಾರೋತೋ ಭಾಗ್ಯೋ ಬಿಧಾತ’ ಎಂಬ ಸ್ತುತಿಗೀತೆಯನ್ನು ಬರೆದರು; ಅದರ ಮೊದಲ ಚರಣ ಜನ ಗಣ ಮನವಾಯಿತು. ಇದನ್ನು ಮೊದಲು 1911ರ ಡಿಸೆಂಬರ್ 27ರಂದು ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸಮಾವೇಶದಲ್ಲಿ ಹಾಡಲಾಯಿತು. ಯಾವುದೇ ರಾಜ ಗೌರವಕ್ಕಾಗಿ ಬರೆದದ್ದು ಅಥವಾ ಹಾಡಿದ್ದಲ್ಲ” ಎಂದು ಪ್ರಿಯಾಂಕ್‌ ಖರ್ಗೆ ನೈಜ ಇತಿಹಾಸವನ್ನು ವಿವರಿಸಿದ್ದಾರೆ. ಕಾಗೇರಿ ಅವರಿಗೆ ನಿಜ ಇತಿಹಾಸದ ಪಾಠ ಮಾಡಿದ್ದಾರೆ.

“ಸಂಸದರು ಇತಿಹಾಸವನ್ನು ಮರುಪರಿಶೀಲಿಸಲು ಬಯಸುವುದಿಲ್ಲ ಎಂದಿದ್ದಾರೆ. ಆದರೆ, ಪ್ರತಿಯೊಬ್ಬ ಬಿಜೆಪಿ, ಆರ್‌ಎಸ್‌ಎಸ್ ನಾಯಕರು, ಕಾರ್ಯಕರ್ತರು ಹಾಗೂ ‘ಸ್ವಯಂಸೇವಕರು’ ಆರ್‌ಎಸ್‌ಎಸ್‌ ಮುಖವಾಣಿ ಆರ್ಗನೈಸರ್‌ನ ಸಂಪಾದಕೀಯಗಳನ್ನು ಓದುವ ಮೂಲಕ ಇತಿಹಾಸವನ್ನು ಪುನರ್ವಿಮರ್ಶಿಸಬೇಕು. ಸಂವಿಧಾನ, ತ್ರಿವರ್ಣ ಧ್ವಜ ಹಾಗೂ ರಾಷ್ಟ್ರಗೀತೆಯನ್ನು ಅಗೌರವಿಸುವ ದೊಡ್ಡ ಸಂಪ್ರದಾಯವನ್ನು ಆರ್‌ಎಸ್‌ಎಸ್‌ ಹೊಂದಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಈ ವೈಆರ್‌ಎಸ್‌ಎಸ್ (ವೈರಸ್‌) ಅನ್ನು ಗುಣಪಡಿಸಬೇಕಿದೆ” ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ರಾಷ್ಟ್ರಗೀತೆ ಕುರಿತು ಸಂಘಪರಿವಾರದ ನಿರಂತರ ವಿವಾದ

ರಾಷ್ಟ್ರಗೀತೆ ಕುರಿತು ಆರ್‌ಎಸ್‌ಎಸ್‌ ಮತ್ತು ಬಲಪಂಥೀಯವಾದಿಗಳು ನಿರಂತರವಾಗಿ ಸುಳ್ಳು ಹರಡುತ್ತಲೇ ಬಂದಿದ್ದಾರೆ. ಆದರೆ, ಇತಿಹಾಸವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿಲ್ಲ. 1911ರ ಡಿಸೆಂಬರ್ 11ರಂದು ರವೀಂದ್ರನಾಥ ಟ್ಯಾಗೋರ್ ಅವರು ‘ಭಾರೋತೋ ಭಾಗ್ಯೋ ಬಿಧಾತ’ವನ್ನು ಬರೆದರು. ಆದರೆ, ಅವರು ಬರೆದ ಮರುದಿನವೇ, ಕಿಂಗ್ ಜಾರ್ಜ್-V ಅನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಲು ಬ್ರಿಟಿಷರು ‘ದೆಹಲಿ ದರ್ಬಾರ್’ ಆಯೋಜಿಸಿದ್ದರು. ಆ ಕಾರಣದಿಂದಾಗಿ, ರಾಷ್ಟ್ರಗೀತೆಯನ್ನು ಕಿಂಗ್‌ ಜಾರ್ಜ್‌-Vನನ್ನು ಸ್ವಾಗತಿಸುವುದಕ್ಕಾಗಿ ಬರೆಯಲಾಗಿದೆ ಎಂದು ತಪ್ಪಾಗಿ ಸಂಘಪರಿವಾರ ಅರ್ಥೈಸಿ ಅಪಪ್ರಚಾರ ಮಾಡುತ್ತಿದೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಸಾಧನೆಗಳೇ ಇಲ್ಲ; ವಿಪಕ್ಷ ನಾಯಕರ ವೈಯಕ್ತಿಕ ಟೀಕೆಗೆ ಜೋತು ಬಿದ್ದ ಬಿಜೆಪಿ

ಆದಾಗ್ಯೂ, ಈ ಗೀತೆಯನ್ನು ಟ್ಯಾಗೋರ್ ಅವರು ಅಂದೇ ಹಾಡಿರಲಿಲ್ಲ. ಈ ಗೀತೆಯನ್ನು ಮೊದಲು ಹಾಡಿದ್ದು, ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಚಳವಳಿಯ ಭಾಗವಾಗಿ 1911ರ ಡಿಸೆಂಬರ್ 28ರಂದು ಆಯೋಜಿಸಲಾಗಿದ್ದ ಕಾಂಗ್ರೆಸ್‌ ಅಧಿವೇಶನದಲ್ಲಿ ಮೊದಲ ಬಾರಿಗೆ ಹಾಡಲಾಯಿತು. ಆ ನಂತರ, 1912ರ ಫೆಬ್ರವರಿಯಲ್ಲಿ ಆದಿ ಬ್ರಹ್ಮ ಸಮಾಜದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ 2ನೇ ಬಾರಿಗೆ ಹಾಡಲಾಯಿತು.

ಗೀತೆಯಲ್ಲಿರುವ ‘ಅಧಿನಾಯಕ’ ಎಂಬ ಪದದ ಕಾರಣಕ್ಕಾಗಿ ವಿವಾದವನ್ನು ಸೃಷ್ಟಿಸಲಾಗಿದೆ. ಆದರೆ, ಈ ಬಗ್ಗೆ 1937ರಲ್ಲಿ ಸ್ವತಃ ಟ್ಯಾಗೋರ್ ಅವರೇ ಪತ್ರವೊಂದರಲ್ಲಿ ಸ್ಪಷ್ಟನೆ ನೀಡಿದ್ದರು. “5ನೇ, 6ನೇ ಅಥವಾ ಯಾವುದೇ ಜಾರ್ಜ್‌ಗಳ ಆಡಳಿತದಲ್ಲಿ ಮಾನವನ ಹಣೆಬರಹವನ್ನು ರೂಪಿಸಲು ಸಾಧ್ಯವಿಲ್ಲ. ‘ಜನ ಗಣ ಮನ’ ಗೀತೆಯಲ್ಲಿ ನಾನು ಉಲ್ಲೇಖಿಸಿದ್ದು, ಭಾರತದ ಹಣೆಬರಹವನ್ನು ರೂಪಿಸುವವನು, ಎಲ್ಲ ಏಳುಬೀಳುಗಳ ನಡುವೆ ದೇಶಕ್ಕೆ ದಾರಿ ತೋರುವವನು, ಮಾರ್ಗದರ್ಶನ ಮಾಡುವವನು ಎಂಬುದಾಗಿಯೇ ಹೊರತು, ಬ್ರಿಟಿಷ್ ದೊರೆಗಳಿಗಾಗಿ ಅಲ್ಲ” ಎಂದು ಸ್ಪಷ್ಟವಾಗಿ ವಿವರಿಸಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿ ಪ್ರತಿಭಟನೆ ವೇಳೆ ವಕೀಲರ ಬಂಧನ: ಮಧ್ಯಪ್ರವೇಶಿಸಿ ಬಿಡುಗಡೆಗೆ ಸೂಚಿಸಿದ ಸುಪ್ರೀಂ ಕೋರ್ಟ್

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ನ್ಯಾಯಮೂರ್ತಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ...

ದೆಹಲಿ ಸಿಜೆಪಿ ಹೋರಾಟಕ್ಕೆ ಎಸ್‌ಐಆರ್ ವಿರೋಧಿ ಒಕ್ಕೂಟ ಬೆಂಬಲ: ರಾಜ್ಯಾದ್ಯಂತ ಪಂಜಿನ ಮೆರವಣಿಗೆಗೆ ಕರೆ

ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ...

ಪ್ರತಿಭಟನೆಗೆ ವಾಂಗ್‌ಚುಕ್ ಬೆಂಬಲ: ಲಡಾಖ್‌ನ ‘ನೀರಿನ ಜೈವಿಕ ಬಾಂಬ್‌ಗಳ’ ಕಡೆಗೆ ಗಮನ ಹರಿಸಲು ಮನವಿ

ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜಂತರ್ ಮಂತರ್‌ನಲ್ಲಿ ಆಯೋಜಿಸಲಾಗಿರುವ ಬೃಹತ್...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ ನಂಬಿಕೆಯ ಬಿಕ್ಕಟ್ಟು

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ....