ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ಜಂತರ್‌ ಮಂತರ್‌ನಲ್ಲಿ ವರದಿಗಾರರಿಗೂ ಪೊಲೀಸರ ನಿರ್ಬಂಧ

Date:

ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ಮೊಳೆಗಳು, ಬ್ಯಾರಿಕೇಡ್‌ಗಳು ಹಾಗೂ ಕಬ್ಬಿಣದ ಸರಳುಗಳಿಂದ ಭದ್ರಕೋಟೆಯನ್ನೇ ರಚಿಸಿದ್ದಾರೆ. ಸಿಜೆಪಿಯ ಪ್ರಮುಖ ನಾಯಕರು ಸೇರಿದಂತೆ ಪ್ರತಿಭಟನಾಕಾರರನ್ನು ಮಾರ್ಗಮಧ್ಯೆಯೇ ಬಂಧಿಸುತ್ತಿದ್ದಾರೆ. ಇದೀಗ, ಪ್ರತಿಭಟನೆಯನ್ನು ಸುದ್ದಿ ಮಾಡಲು ಜಂತರ್ ಮಂತರ್‌ಗೆ ತರಳಿರುವ ಮಾಧ್ಯಮ ಸಿಬ್ಬಂದಿಗಳನ್ನೂ ಪೊಲೀಸರು ಮಾನವ ಸರಪಳಿಯನ್ನು ನಿರ್ಮಿಸಿಕೊಂಡು ತಡೆಯುತ್ತಿದ್ದಾರೆ. ವರದಿ ಮಾಡಲು ಅವಕಾಶ ಕೊಡದೆ, ಹಿಮ್ಮೆಟ್ಟುವ ಕೃತ್ಯ ಎಸಗುತ್ತಿದ್ದಾರೆ.

- Advertisement -

ವರದಿಗಳ ಪ್ರಕಾರ, ಸ್ಥಳದಲ್ಲಿ ಪೊಲೀಸರು ಮತ್ತು ಕೇಂದ್ರೀಯ ಸಶಸ್ತ್ರ ಪೋಲಿಸ್ ಪಡೆ (CAPF) ಸಿಬ್ಬಂದಿ ಸಾಲಾಗಿ ನಿಂತು ಬ್ಯಾರಿಕೇಡ್‌ಗಳ ಮುಂದೆ ಮಾನವ ಸರಪಳಿ ರಚಿಸಿದ್ದು, ಮಾಧ್ಯಮದವರು ಘಟನಾ ಸ್ಥಳಕ್ಕೆ ಹತ್ತಿರ ಹೋಗದಂತೆ ತಡೆಯುತ್ತಿದ್ದಾರೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ತಮ್ಮ ಧೋರಣೆಯನ್ನು ಸಮರ್ಥಿಸಿಕೊಂಡಿರುವ ಪೊಲೀಸರು, ಪ್ರತಿಭಟನಾ ಸ್ಥಳಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ತಮ್ಮ ಮೊದಲ ಆದ್ಯತೆಯಾಗಿದೆ. ಪ್ರತಿಭಟನಾಕಾರರೊಂದಿಗೆ ಮಾಧ್ಯಮದವರು ಬೆರೆತು ಗೊಂದಲ ಅಥವಾ ಕಾಲ್ತುಳಿತ ಉಂಟಾಗದಂತೆ ತಡೆಯಲು ಮತ್ತು ಅನಧಿಕೃತವಾಗಿ ಲೈವ್‌ಸ್ಟ್ರೀಮಿಂಗ್ ಅಥವಾ ವೀಡಿಯೋ ಚಿತ್ರೀಕರಣ ಮಾಡುವವರನ್ನು ಗುರುತಿಸಿ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಕನ್ನಾಟ್ ಪ್ಲೇಸ್ ಮತ್ತು ಜಂತರ್ ಮಂತರ್ ಪ್ರದೇಶದಾದ್ಯಂತ ಪೋಲಿಸ್ ಭದ್ರಕೋಟೆ ರಚಿಸಿಕೊಂಡಿದ್ದಾರೆ. ಮೆಟ್ರೋ ಮತ್ತು ಸಂಚಾರ ಮಾರ್ಗಗಳಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ಸಿಜೆಪಿ ಪ್ರತಿಭಟನೆಗೂ ಮುನ್ನವೇ ದೆಹಲಿಯಲ್ಲಿ 1,000 ಮಂದಿ ಬಂಧನ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ನವಿ ಪಿಳ್ಳೈಗೆ ಒಲಿದ ಶಾಂತಿ ಪುರಸ್ಕಾರ

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು...

ನಮ್ಮ‌ ಪ್ರಸ್ತಾಪಗಳನ್ನು ರಾಷ್ಟ್ರಪತಿ ನಿರಾಕರಿಸಿದ್ದು ಅಚ್ಚರಿ ಮೂಡಿಸಿದೆ, ಸಾಕ್ಷ್ಯ ಕೇಳಿದ್ದಾರೆ – ಕೊಡುತ್ತೇವೆ: ರಾಹುಲ್ ಗಾಂಧಿ

ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಿರುವ ಕುರಿತು ನಾವು ಎತ್ತಿರುವ ವಿಷಯವನ್ನು...

ರಾಷ್ಟ್ರಪತಿ ಭವನದತ್ತ ‘ಇಂಡಿಯಾ’ ಒಕ್ಕೂಟದ ಮೆರವಣಿಗೆ, ವಿಜಯ್ ಚೌಕ್‌ನಲ್ಲಿ ದಿಢೀರ್ ಧರಣಿ

​ಎಸ್.ಐ.ಆರ್. ನಲ್ಲಿ (SIR) ಭಾರಿ ಅಕ್ರಮಗಳು ನಡೆದಿವೆ ಎಂದು ಗಂಭೀರವಾಗಿ ಆರೋಪಿಸಿರುವ...