ಜನಸಂಖ್ಯಾ ಸಮಿತಿಯ ‘ಧರ್ಮ ಆಧಾರಿತ’ ಪ್ರಶ್ನೆಗಳಿಗೆ ಉತ್ತರಿಸಲಾಗದೆ ರಾಜ್ಯ ಸರ್ಕಾರಗಳ ಪರದಾಟ

Date:

ಜನಸಂಖ್ಯಾ ಬದಲಾವಣೆಗಳ ಕುರಿತು ಅಧ್ಯಯನ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಯು (HLCDC) ಕೇಳಿರುವ ಧರ್ಮಾವಾರು ಮಾಹಿತಿಗೆ ಉತ್ತರಿಸಲಾಗದೆ ರಾಜ್ಯ ಸರ್ಕಾರಗಳು ಕಂಗಾಲಾಗಿವೆ. ಸರ್ಕಾರಿ ಇಲಾಖೆಗಳು ಸಾಮಾನ್ಯವಾಗಿ ಧರ್ಮದ ಆಧಾರದ ಮೇಲೆ ಇಂತಹ ದತ್ತಾಂಶವನ್ನು ನಿರ್ವಹಿಸದಿರುವುದೇ ಇದಕ್ಕೆ ಕಾರಣವಾಗಿದೆ.

- Advertisement -

​ಅಕ್ರಮ ವಲಸೆ ಮತ್ತು ಇತರ ಅಸಹಜ ಕಾರಣಗಳಿಂದ ಉಂಟಾಗುತ್ತಿರುವ ಜನಸಂಖ್ಯಾ ಬದಲಾವಣೆಗಳನ್ನು ಅಧ್ಯಯನ ಮಾಡಲು ಹಾಗೂ ಇವುಗಳನ್ನು ನಿಭಾಯಿಸಲು ಸೂಕ್ತ ಕ್ರಮಗಳನ್ನು ಸೂಚಿಸಲು ಕೇಂದ್ರ ಗೃಹ ಸಚಿವಾಲಯವು ಮೇ 26ರಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನಾವ್ಲೇಕರ್ ನೇತೃತ್ವದಲ್ಲಿ ಈ ಸಮಿತಿಯನ್ನು ರಚಿಸಿತ್ತು. ಕಳೆದ 15 ವರ್ಷಗಳ ಜನನ ಮತ್ತು ವಾಹನ ನೋಂದಣಿ, ಶಾಲಾ ದಾಖಲಾತಿ, ಆಸ್ತಿ ವಹಿವಾಟು, ಜೊತೆಗೆ ಜಿಲ್ಲಾವಾರು ಧಾರ್ಮಿಕ ಕಟ್ಟಡಗಳು, ಹಾಗೂ ಆಧಾರ್, ಚುನಾವಣಾ ಗುರುತಿನ ಚೀಟಿ ಮತ್ತು ಪಡಿತರ ಚೀಟಿ ನೋಂದಣಿಯಲ್ಲಿನ ಅಸಾಮಾನ್ಯ ಏರಿಕೆಯ ಕುರಿತು ಸಮಿತಿಯು ಧರ್ಮಾವಾರು ದತ್ತಾಂಶವನ್ನು ಕೇಳಿದೆ. ಹಿಂದೂ, ಸಿಖ್, ಕ್ರಿಶ್ಚಿಯನ್, ಮುಸ್ಲಿಂ, ಪಾರ್ಸಿ ಮತ್ತು ಬೌದ್ಧ ಧರ್ಮದವರ ಕುರಿತಾಗಿ ಎಲ್ಲಾ ವಿಭಾಗಗಳಲ್ಲಿ ಮಾಹಿತಿ ನೀಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

​ದತ್ತಾಂಶ ನೀಡಲು ಸಾಂವಿಧಾನಿಕ ತೊಡಕು

ಸಮಿತಿಯು ಕೇಳಿರುವ 35 ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟಕರವಾಗಿದೆ; ಏಕೆಂದರೆ ಸಂವಿಧಾನದ ಜಾತ್ಯತೀತ ರಚನೆಯು ಧಾರ್ಮಿಕ ವರ್ಗಗಳ ಅಡಿಯಲ್ಲಿ ದತ್ತಾಂಶ ಸಂಗ್ರಹಿಸುವುದನ್ನು ನಿರ್ಬಂಧಿಸಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಗುವಿನ ಧರ್ಮವನ್ನು ನಮೂದಿಸುವ ಜನನ ನೋಂದಣಿ ಪ್ರಮಾಣಪತ್ರ, ಬಂಧಿತರಾದ ಅಥವಾ ಗಡೀಪಾರಾದ ದಾಖಲೆರಹಿತ ವಲಸಿಗರನ್ನು ಹೊರತುಪಡಿಸಿ, ಇತರ ಯಾವುದೇ ವಿಭಾಗಗಳಲ್ಲಿ ಧರ್ಮಾವಾರು ದತ್ತಾಂಶ ಲಭ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

​ಸಾಚಾರ್ ಸಮಿತಿಯ ಉಲ್ಲೇಖ

2005ರಲ್ಲಿ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ (UPA) ಸರ್ಕಾರವು ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ಪರಿಶೀಲಿಸಲು ಸಾಚಾರ್ ಸಮಿತಿಯನ್ನು ನೇಮಿಸಿತ್ತು. 2006ರಲ್ಲಿ ಪ್ರಮುಖ ಪ್ರತಿಪಕ್ಷವಾಗಿದ್ದ ಭಾರತೀಯ ಜನತಾ ಪಾರ್ಟಿ (BJP), ಸಾಚಾರ್ ಸಮಿತಿಯ ಶಿಫಾರಸುಗಳನ್ನು ವಿರೋಧಿಸಿತ್ತು ಮತ್ತು ಇದು ಧಾರ್ಮಿಕ ಕೋಟಾವನ್ನು ಉತ್ತೇಜಿಸುತ್ತದೆ ಹಾಗೂ ಸಾಮಾಜಿಕ ವಿಭಜನೆಗೆ ಕಾರಣವಾಗುತ್ತದೆ ಎಂದು ಹೇಳುವ ಮೂಲಕ ಅದರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿತ್ತು.

​ಮತಾಂತರ ಹಾಗೂ ಶಾಲಾ ದಾಖಲಾತಿ ಬಗ್ಗೆ ಪ್ರಶ್ನೆ

ಪರಿಶಿಷ್ಟ ಪಂಗಡಗಳ (ST) ಸಮುದಾಯಗಳಲ್ಲಿ ನಡೆಯುವ ಧಾರ್ಮಿಕ ಮತಾಂತರಗಳ ಕುರಿತಾದ ಗುಪ್ತಚರ ವರದಿಗಳು, ಕಾರ್ಯಾಚರಣೆಯಲ್ಲಿರುವ ಡಿಟೆನ್ಷನ್ ಸೆಂಟರ್‌ಗಳ (ಬಂಧಿಖಾನೆಗಳು) ವಿವರಗಳನ್ನು ಸಹ ಸಮಿತಿ ಕೇಳಿದೆ. ಐತಿಹಾಸಿಕ ಜನನ ದರಗಳಿಗೆ ಅಸಂಗತವಾಗಿರುವ, ಅಸಾಮಾನ್ಯ ಶಾಲಾ ದಾಖಲಾತಿಯ ಪ್ರವೃತ್ತಿಗಳನ್ನು ತೋರಿಸುವ ಜಿಲ್ಲೆಗಳ ವಿವರಗಳು ಮತ್ತು ಅದಕ್ಕೆ ಕಾರಣಗಳನ್ನು ಸಮಿತಿ ಪ್ರಶ್ನಿಸಿದೆ. ಕಳೆದ 15 ವರ್ಷಗಳಲ್ಲಿ ಸ್ಥಾಪಿಸಲಾದ ಧಾರ್ಮಿಕ ಕಟ್ಟಡಗಳ (ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು ಇತ್ಯಾದಿ) ಜಿಲ್ಲಾವಾರು ದತ್ತಾಂಶವನ್ನು, ಹಾಗೂ ಅವುಗಳನ್ನು ಗುರುತಿಸಲು ಬಳಸಿದ ಜಿಐಎಸ್ (GIS) ಮ್ಯಾಪಿಂಗ್ ತಂತ್ರಜ್ಞಾನದ ವಿವರಗಳನ್ನೂ ಕೇಳಿದೆ.

​ಚುನಾವಣಾ ಆಯೋಗದಿಂದ ಸಿಗದ ದತ್ತಾಂಶ

ಬಿಹಾರದಲ್ಲಿ ನಡೆದಿದ್ದ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision – SIR) ಪ್ರಕ್ರಿಯೆಯನ್ನು ಮೇ 27ರಂದು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್, ಮತದಾರರ ಪಟ್ಟಿಗೆ ಸೇರ್ಪಡೆ ಅಥವಾ ಪಟ್ಟಿಯಿಂದ ಕೈಬಿಡುವ ವಿಚಾರಕ್ಕೆ ಸೀಮಿತವಾಗಿ ಪೌರತ್ವವನ್ನು ಪರಿಶೀಲಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂದು ಹೇಳಿತ್ತು. 2003ರ ಮತದಾರರ ಪಟ್ಟಿಯಲ್ಲಿದ್ದು, ಆ ಬಳಿಕ ಪೌರತ್ವ ಹೊಂದಿಲ್ಲದ ಕಾರಣಕ್ಕಾಗಿ ಬಿಹಾರದ ಎಸ್‌ಐಆರ್‌ (SIR) ಪ್ರಕ್ರಿಯೆ ವೇಳೆ ಕೈಬಿಡಲ್ಪಟ್ಟವರ ಹೆಸರುಗಳನ್ನು 1955ರ ಪೌರತ್ವ ಕಾಯ್ದೆಯಡಿ ಸಕ್ಷಮ ಪ್ರಾಧಿಕಾರದ ತೀರ್ಮಾನಕ್ಕಾಗಿ ಮುಂದಿನ ನಾಲ್ಕು ವಾರಗಳೊಳಗೆ ಕೇಂದ್ರಕ್ಕೆ ಕಳುಹಿಸುವಂತೆ ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು.

​ಆದರೆ ಚುನಾವಣಾ ಆಯೋಗವು ಈ ದತ್ತಾಂಶವನ್ನು ಇನ್ನೂ ಸಮಿತಿಗೆ ಒದಗಿಸಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. “ನಮಗೆ ಇನ್ನೂ ರಾಜ್ಯ ಸರ್ಕಾರಗಳಿಂದ ಪ್ರತಿಕ್ರಿಯೆ ಬಂದಿಲ್ಲ. ಚುನಾವಣಾ ಆಯೋಗದ ಅಧಿಕಾರಿಗಳೊಂದಿಗೆ ಕಳೆದ ವಾರ ಸಭೆ ನಡೆಸಲಾಗಿದೆ. ಆದರೆ ಅಕ್ರಮವಾಗಿ ನೆಲೆಸಿರುವ ಶಂಕಿತ ವಿದೇಶಿ ಪ್ರಜೆಗಳೆಂಬ ಕಾರಣಕ್ಕೆ ಎಸ್‌ಐಆರ್‌ನಿಂದ (SIR) ಹೊರಗಿಡಲಾದ ಜನರ ದತ್ತಾಂಶವನ್ನು ಅವರು ಇನ್ನೂ ಒದಗಿಸಿಲ್ಲ,” ಎಂದು ಸಮಿತಿಯ ಸದಸ್ಯರೊಬ್ಬರು ಅನಾಮಧೇಯತೆಯ ಷರತ್ತಿನ ಮೇರೆಗೆ ತಿಳಿಸಿದ್ದಾರೆ. ದತ್ತಾಂಶ ಸಲ್ಲಿಕೆಯಲ್ಲಿನ ವಿಳಂಬದ ಕಾರಣಗಳ ಕುರಿತಾದ ಪ್ರಶ್ನೆಗಳಿಗೆ ಚುನಾವಣಾ ಆಯೋಗವು ಪ್ರತಿಕ್ರಿಯಿಸಿಲ್ಲ. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...