ಧಾರವಾಡ |ಯುವಜನರು ರಂಗಭೂಮಿಯಿಂದ ದೂರವಾಗುತ್ತಿರುವುದು ವಿಷಾದನೀಯ: ರಜನಿ ಗರುಡ

Date:

ಕನ್ನಡ ಭಾಷೆಯ ಘನತೆಯನ್ನು ಎತ್ತಿಹಿಡಿಯುವಲ್ಲಿ ರಂಗಭೂಮಿಯ ಕೊಡುಗೆ ಮಹತ್ವದ್ದಾಗಿದೆ. ಕನ್ನಡ ಕಟ್ಟುವ ಕಾರ್ಯದಲ್ಲಿ ಅನೇಕ ಧೀಮಂತರು ಶ್ರಮಿಸಿದ್ದು, ರಂಗಭೂಮಿ ಈ ಪರಂಪರೆಯನ್ನು ಬೆಳೆಸುವ ಪ್ರಮುಖ ವೇದಿಕೆಯಾಗಿದೆ. ಆದರೆ ಇತ್ತೀಚಿನ ಯುವಜನರು ರಂಗಭೂಮಿಯತ್ತ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಟಿವಿ, ಮೊಬೈಲ್ ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಗೀಳಿಗೆ ಒಳಗಾಗಿ ತಮ್ಮ ಸಾಂಸ್ಕೃತಿಕ ನೆಲೆ ಹಾಗೂ ತಮ್ಮತನವನ್ನು ಮರೆಯುತ್ತಿರುವುದು ವಿಷಾದನೀಯ ಎಂದು ರಜನಿ ಗರುಡ ಅಭಿಪ್ರಾಯಪಟ್ಟರು.

- Advertisement -

ಧಾರವಾಡ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ನಾಡಹಬ್ಬ-2026ರ 12 ದಿನಗಳ ನಾಟಕೋತ್ಸವದ ಎಂಟನೇ ದಿನದ ಕಾರ್ಯಕ್ರಮದಲ್ಲಿ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರೈತರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದ ಡಾ. ವರ್ಗೀಸ್...

ಕುರಿಯನ್ ಅವರು ಕೇವಲ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿದ ವ್ಯಕ್ತಿಯಲ್ಲ. ರೈತರಿಗೆ ಆರ್ಥಿಕ ಸ್ವಾವಲಂಬನೆ, ಮಹಿಳೆಯರಿಗೆ ಉದ್ಯೋಗಾವಕಾಶ, ಗ್ರಾಮೀಣ ಜನರಿಗೆ ಬದುಕಿನ ಭದ್ರತೆ ಹಾಗೂ ದೇಶಕ್ಕೆ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ದೊರಕಿಸಿಕೊಟ್ಟ ದೂರದೃಷ್ಟಿಯ ನಾಯಕರು. ಭಾರತದ...

ಪಂಜಾಬ್ ಚುನಾವಣೆ | 6 ವರ್ಷಗಳ ಬಳಿಕ ಮತ್ತೆ...

2020ರ ಐತಿಹಾಸಿಕ ರೈತ ಹೋರಾಟದ ವೇಳೆ ಮುರಿದುಬಿದ್ದಿದ್ದ ಶಿರೋಮಣಿ ಅಕಾಲಿ ದಳ (SAD) ಮತ್ತು ಬಿಜೆಪಿ  ಮೈತ್ರಿ ಆರು ವರ್ಷಗಳ ಬಳಿಕ ಮತ್ತೆ ಜೀವ ಪಡೆದುಕೊಂಡಿದೆ. 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ...

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾಕ್ಷಿಗಳು ಉಲ್ಟಾ ಹೊಡೆದ ಮಾತ್ರಕ್ಕೆ...

ಪಟ್ಟಣಗೆರೆ ಶೆಡ್‌ನಲ್ಲಿದ್ದ ನಾಲ್ವರು ಪ್ರಮುಖ ಸಾಕ್ಷಿಗಳು ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿರುವುದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪ್ರತ್ಯಕ್ಷದರ್ಶಿಗಳು ಉಲ್ಟಾ ಹೊಡೆದ ಮಾತ್ರಕ್ಕೆ ದರ್ಶನ್‌ಗೆ ಕಾನೂನು ಕುಣಿಕೆಯಿಂದ ಮುಕ್ತಿ ಸಿಗುತ್ತದೆಯೇ? ಪೊಲೀಸರು...

ಕನ್ನಡವನ್ನು ಉಳಿಸುವ, ಬೆಳೆಸುವ ಹಾಗೂ ಮುಂದಿನ ತಲೆಮಾರಿಗೆ ಬಿತ್ತುವ ಕೆಲಸ ಇನ್ನಷ್ಟು ಗಟ್ಟಿಯಾಗಿ ನಡೆಯಬೇಕಿದೆ. ಯುವಜನರನ್ನು ರಂಗಭೂಮಿಯತ್ತ ಸೆಳೆಯಲು ರಂಗತರಬೇತಿ ಶಿಬಿರಗಳು, ನಾಟಕ ರಚನೆ ಹಾಗೂ ವಿಭಿನ್ನ ರಂಗ ಚಟುವಟಿಕೆಗಳನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಮೂಲಕ ಆಯೋಜಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ರಂಗ ಸಂಸ್ಥೆಗಳು ಹಾಗೂ ಕಲಾವಿದರು ಸಹಕಾರ ನೀಡಲು ಸಿದ್ಧರಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಟಗೇರಿಯ ನಾಗಪ್ಪ ಉಡಕೇರಿ ಅವರಿಗೆ ರಂಗಕಲಾ ಸನ್ಮಾನ ನೀಡಿ ಗೌರವಿಸಲಾಯಿತು.

ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಅವರು, ಸಂಗೊಳ್ಳಿ ರಾಯಣ್ಣ ನಾಟಕದಲ್ಲಿ ತಾವು ಅಭಿನಯಿಸಿದ ಪಾತ್ರದ ಸಂಭಾಷಣೆಯ ತುಣುಕುಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಿ, ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು.ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಜೇಂದ್ರ ಕಾರಂತ ರಚನೆಯ, ದಾವಣಗೆರೆಯ ಭೀಮೇಶ್ ಎಚ್.ಎನ್. ನಿರ್ದೇಶನದ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಾಟಕವನ್ನು ಬಳ್ಳಾರಿ ಜಿಲ್ಲೆಯ ಸಿರಿಗೇರಿ ಧಾತ್ರಿ ರಂಗ ಸಂಸ್ಥೆಯ ಕಲಾವಿದರು ಮನೋಜ್ಞವಾಗಿ ಪ್ರದರ್ಶಿಸಿ ಸಭಿಕರನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ವಿಶ್ವೇಶ್ವರಿ ಬಿ ಹಿರೇಮಠ,ಶೈಲಜಾ ಅಮರಶೆಟ್ಟಿ, ಶಿವಾನಂದ ಭಾವಿಕಟ್ಟಿ,ಗುರು ಹಿರೇಮಠ, ಡಾ. ಮಲ್ಲಿಕಾ ಘಂಟಿ, ಡಾ. ಅಶೋಕ ಕೋರಿ, ಸಿ.ಸಿ. ಮಹಾಜನಶೆಟ್ಟರ, ಡಾ. ವಿ.ಎಂ. ಶರಭೇಂದ್ರಸ್ವಾಮಿ, ಶಿವ ಕುಲಕರ್ಣಿ ದಂಪತಿಗಳು, ಎಲ್.ಆರ್. ಬೂದಿಹಾಳ, ಸದಾಶಿವ ಜನಗೌಡರ, ಆರ್.ಡಿ. ಗೆದ್ದೆಣ್ಣವರ, ಶ್ರೀಧರ ಗಸ್ತಿ, ಚಂದ್ರಶೇಖರ ಅಮಿನಗಡ, ಜೋಸೆಪ್ ಮಲ್ಲಾಡಿ, ಬಕ್ಕೇಶಯ್ಯ ಕಂಬಿ, ಎಂ.ಬಿ. ಹೆಗ್ಗೇರಿ, ಶಿವಲಿಂಗಪ್ಪ ಹೂಗರ, ಭೀಮಪ್ಪ ಜಾಧವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಕಟ್ಟಡ ಕಟ್ಟಿಕೊಳ್ಳಲು ಪಾಲಿಕೆಯಿಂದಲೇ ಅನುಮತಿ; ಕಾರ್ಮಿಕರು 

ಹಾಸನ ತಾಲೂಕು ಕೆ.ಆ‌ರ್. ಪುರಂ ಮೊದಲನೇ ಹಂತದಲ್ಲಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡು...

ರಾಯಚೂರು | ಶಿಕ್ಷಣ ಹಕ್ಕು ಕಾಯಿದೆ ಸಮಗ್ರ ಜಾರಿಗೆ ಆಗ್ರಹಿಸಿ ನ.26 ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ

ಶಿಕ್ಷಣ ಹಕ್ಕು ಕಾಯಿದೆಯನ್ನು ಸಮಗ್ರವಾಗಿ ಜಾರಿಗೊಳಿಸುವುದು ಹಾಗೂ ಸರ್ಕಾರಿ ಶಾಲೆಗಳ ಶಾಲಾ...

ಬೈಂದೂರು | ಜಾಮಿಯಾತುಲ್ ಫಲಾಹ್‌ನಿಂದ 40 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ಜಾಮಿಯಾತುಲ್ ಫಲಾಹ್ ಬೈಂದೂರು ಯೂನಿಟ್ ವತಿಯಿಂದ ವಿದ್ಯಾರ್ಥಿವೇತನ ವಿತರಣೆ ಹಾಗೂ ಸಮಾರೋಪ...

ಚಿಕ್ಕಮಗಳೂರು | ವಿದ್ಯಾ ಹರ್ಬ್ಸ್ ಕಾರ್ಖಾನೆಯಲ್ಲಿ ಪೋಷ್ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ

​ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ...