ಸುಂಕ ಕಡಿತ | ಬಿಲ್ಡಪ್ ಹೆಚ್ಚು, ರಿಯಾಲಿಟಿ ಬೇರೆ; ‘ಕಾಲಾಂತರದ ಸಹಜ ಬೆಲೆ ಏರಿಕೆ’ ಎಂಬ ವಾದಕ್ಕೂ ಇಲ್ಲಿದೆ ಉತ್ತರ!

Date:

ಕಚ್ಚಾ ತೈಲದ ಬೆಲೆಯನ್ನು ಹೋಲಿಸಿದರೆ ವಿಷಯ ಇನ್ನೂ ಸ್ಪಷ್ಟವಾಗುತ್ತದೆ. 2014ರ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಸುಮಾರು 100 ಡಾಲರ್‌ಗೂ ಹೆಚ್ಚು ಮಟ್ಟದಲ್ಲಿತ್ತು. ಆದರೆ ಆ ಸಮಯದಲ್ಲಿ ಪೆಟ್ರೋಲ್ ದರ ₹70-75 ಹಾಗೂ ಡೀಸೆಲ್ ದರ ₹55-60 ನಡುವೆ ಇತ್ತು. ಆದರೆ 2015ರಿಂದ ಹಲವು ವರ್ಷಗಳವರೆಗೆ ಕಚ್ಚಾ ತೈಲದ ಬೆಲೆ 40 ರಿಂದ 70 ಡಾಲರ್ ನಡುವೆ, ಅಂದರೆ 2014ಕ್ಕಿಂತ ಕಡಿಮೆ ಮಟ್ಟದಲ್ಲೇ ಇತ್ತು. ಆದರೂ ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರ ಕಡಿಮೆಯಾಗಲಿಲ್ಲ. ಬದಲಿಗೆ ಹೆಚ್ಚೇ ಆಯಿತು.

- Advertisement -

ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 13 ರೂಪಾಯಿಯಿಂದ 3 ರೂಪಾಯಿಗೆ ಹಾಗೂ ಡೀಸೆಲ್ ಮೇಲಿನ ಸುಂಕವನ್ನು 10 ರೂಪಾಯಿಯಿಂದ ಶೂನ್ಯಕ್ಕೆ ಇಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ, ಈ ಸುಂಕ ಕಡಿತದಿಂದ ಪೆಟ್ರೋಲ್-ಡೀಸೆಲ್ ದರದಲ್ಲಿ ನೇರ ಇಳಿಕೆ ಆಗುವುದಿಲ್ಲ. ಆದರೆ, ಯುದ್ಧದ ಪರಿಣಾಮದ ಬೆಲೆಯೇರಿಕೆಯ ಹೊರೆಯಿಂದ ಜನಸಾಮಾನ್ಯ ಬಚಾವ್ ಆಗ್ತಾನೆ. ಅಂದರೆ, ಇದು ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಅಲ್ಲ, ಬೆಲೆ ಏರಿಕೆಯನ್ನು ತಡೆಯುವ ಕ್ರಮ ಮಾತ್ರ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಮೂಲಗಳ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಕಾರಣ ತೈಲ ಕಂಪೆನಿಗಳು ಒತ್ತಡದಲ್ಲಿದ್ದವು. ಈ ಸಂದರ್ಭದಲ್ಲಿ ಸುಂಕ ಕಡಿತ ಮಾಡದೇ ಇದ್ದರೆ ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗುವುದು ಅನಿವಾರ್ಯವಾಗುತ್ತಿತ್ತು. ಇಂಧನ ಬೆಲೆ ಏರಿದರೆ ಅದರ ಪರಿಣಾಮ ನೇರವಾಗಿ ಜನರ ಮೇಲೆ ಬೀಳುತ್ತದೆ. ಸಾರಿಗೆ ವೆಚ್ಚ ಹೆಚ್ಚಾಗಿ, ಆಹಾರ ಪದಾರ್ಥಗಳು ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಇದರಿಂದ ಚುನಾವಣೆಯ ಮುನ್ನ ಜನರ ಅಸಮಾಧಾನ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಇದೇ ಮೋದಿ ಸರ್ಕಾರವೇ ಹಿಂದೆ ಹೆಚ್ಚಿಸಿದ್ದ ಸುಂಕವನ್ನು ಈಗ ಸ್ವಲ್ಪ ಮಟ್ಟಿಗೆ ಇಳಿಸಿ ಬೆಲೆ ಏರಿಕೆಯನ್ನು ತಡೆಯಲು ಪ್ರಯತ್ನಿಸಿದೆ. ಅಂತೂ ಯುದ್ಧದ ಕಾರಣದ ಬೆಲೆಯೇರಿಕೆಯಿಂದ ಜನಸಾಮಾನ್ಯರು ಬಚಾವ್!

ಆದರೆ, ಇದನ್ನೇ ಏನೇನೋ ಬಿಲ್ಡಪ್ ಕೊಡಲು ಬಳಸುವಾಗ ವಾಸ್ತವವೂ ಜನರಿಗೆ ಗೊತ್ತಿದ್ದರೆ ಚೆನ್ನ. ಮೋದಿ ಸರಕಾರಗಳು ಹೆಚ್ಚಿಸಿದ್ದ ಸುಂಕಗಳನ್ನು ಈಗ ಸ್ವಲ್ಪ ಇಳಿಸಿದ್ದಷ್ಟೇ. 2014ರಲ್ಲಿ ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕ ₹9.48 ಹಾಗೂ ಡೀಸೆಲ್ ಮೇಲಿನ ಸುಂಕ ₹3.56 ಮಾತ್ರವಿತ್ತು. ಅದನ್ನೇ ನರೇಂದ್ರ ಮೋದಿ ತೀವ್ರವಾಗಿ ಟೀಕೆ ಮಾಡುತ್ತಿದ್ದರು. ತನಗೆ ಇದನ್ನು ಕಡಿಮೆ ಮಾಡುವ ಸ್ಪೆಷಲ್ ತಾಕತ್ತು ಇದೆ ಎಂದು ಹೇಳಿ ಭಾಷಣ ಮಾಡುತ್ತಿದ್ದರು. ಆದರೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಲವು ಹಂತಗಳಲ್ಲಿ ಸುಂಕ ಹೆಚ್ಚಿಸಲಾಯಿತು. 2020ರ ವೇಳೆಗೆ ಪೆಟ್ರೋಲ್ ಮೇಲಿನ ಸುಂಕ ₹32.98 ಹಾಗೂ ಡೀಸೆಲ್ ಮೇಲಿನ ಸುಂಕ ₹31.83ರವರೆಗೆ ಏರಿಸಲಾಯಿತು. ಈಗ ಸುಂಕ ಕಡಿತ ಮಾಡಿದ ಬಳಿಕವೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ತೆರಿಗೆಗಳು ಗಮನಾರ್ಹ ಮಟ್ಟದಲ್ಲೇ ಉಳಿದಿವೆ. 2014 ಗಿಂತ ಈಗಲೂ ತೆರಿಗೆ ಹೆಚ್ಚು ಇದೆ ಎಂಬುದು ಸ್ಪಷ್ಟ.

ಕಚ್ಚಾ ತೈಲದ ಬೆಲೆಯನ್ನು ಹೋಲಿಸಿದರೆ ವಿಷಯ ಇನ್ನೂ ಸ್ಪಷ್ಟವಾಗುತ್ತದೆ. 2014ರ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಸುಮಾರು 100 ಡಾಲರ್‌ಗೂ ಹೆಚ್ಚು ಮಟ್ಟದಲ್ಲಿತ್ತು. ಆದರೆ ಆ ಸಮಯದಲ್ಲಿ ಪೆಟ್ರೋಲ್ ದರ ₹70-75 ಹಾಗೂ ಡೀಸೆಲ್ ದರ ₹55-60 ನಡುವೆ ಇತ್ತು. ಆದರೆ 2015ರಿಂದ ಹಲವು ವರ್ಷಗಳವರೆಗೆ ಕಚ್ಚಾ ತೈಲದ ಬೆಲೆ 40 ರಿಂದ 70 ಡಾಲರ್ ನಡುವೆ, ಅಂದರೆ 2014ಕ್ಕಿಂತ ಕಡಿಮೆ ಮಟ್ಟದಲ್ಲೇ ಇತ್ತು. ಆದರೂ ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರ ಕಡಿಮೆಯಾಗಲಿಲ್ಲ.ಬದಲಿಗೆ ಹೆಚ್ಚೇ ಆಯಿತು. ಅನೇಕ ನಗರಗಳಲ್ಲಿ ಪೆಟ್ರೋಲ್ ₹90 ದಾಟಿ ₹100 ತಲುಪಿತು. ಡೀಸೆಲ್ ಕೂಡ ₹80-90 ಮಟ್ಟ ತಲುಪಿತು.

ಈ ಬೆಲೆಯೇರಿಕೆಯ ಹಣವನ್ನು ಸಾಲ ಸಂದಾಯಕ್ಕೆ ಬಳಸಲಾಗಿದೆ ಎಂಬುದು ಒಂದು ರೀತಿಯ ಸಮರ್ಥನೆ. ಕಾಲಾಂತರದಲ್ಲಿ ಬೆಲೆಯೇರಿಕೆ ಸಹಜ ಎಂಬುದು ಇನ್ನೊಂದು ವಾದ. ಮೊದಲನೆಯದು ಅಪ್ಪಟ ಸುಳ್ಳು. ಎರಡನೆಯದು ಮುಗ್ಧತೆ ಮತ್ತು ಕುತರ್ಕ. ಕಾಲಾಂತರದಲ್ಲಿ ಬೆಲೆ ಏರಿಕೆಯಾಗುವುದು ಸಹಜವೆಂದರೆ, ಅದೇ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಕೂಡ ಏರಿಕೆಯಾಗಬೇಕಿತ್ತು. ಆದರೆ ವಾಸ್ತವದಲ್ಲಿ ಹಾಗಾಲಿಲ್ಲ. ಹಲವು ವರ್ಷಗಳ ಕಾಲ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರಗಳು ಹೆಚ್ಚುತ್ತಲೇ ಹೋದವು.

ಈಗ ಇರಾನ್ ಯುದ್ಧದ ಬಳಿಕ ಕಚ್ಚಾ ತೈಲದ ಬೆಲೆ 100 ಡಾಲರ್‌ಕ್ಕಿಂತ ಮೇಲಿನ ಮಟ್ಟದಲ್ಲಿ ತೀವ್ರ ಏರಿಳಿತ ಕಾಣುತ್ತಿದೆ. ಇದು ಒಂದು ಪ್ರಮುಖ ವಾಸ್ತವವನ್ನು ಸ್ಪಷ್ಟಪಡಿಸುತ್ತದೆ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚು ಇದ್ದರೂ ತೆರಿಗೆ ಕಡಿಮೆ ಇತ್ತು. ಅದರಿಂದ ಜನರಿಗೆ ಇಂಧನ ಕಡಿಮೆ ದರದಲ್ಲಿ ಸಿಗುತ್ತಿತ್ತು. ಆದರೆ ಮೋದಿ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ ತೆರಿಗೆ ಹೆಚ್ಚಿಸಿ ಅದರ ಪರಿಣಾಮವಾಗಿ ಜನರಿಗೆ ಇಂಧನ ದುಬಾರಿಯಾಯಿತು.

ಹೀಗಾಗಿ ಈಗ ಮಾಡಿರುವ ಸುಂಕ ಕಡಿತಕ್ಕೆ ದೊಡ್ಡ ಬಿಲ್ಡಪ್ ಅನಗತ್ಯ. ಹಿಂದೆ ಹೆಚ್ಚಿಸಿದ್ದ ಭಾರದ ಒಂದು ಭಾಗವನ್ನು ಮಾತ್ರ ಈಗ ಕಡಿತ ಮಾಡಲಾಗಿದೆ. ಕಚ್ಚಾ ತೈಲದ ಬೆಲೆ ಹೆಚ್ಚು ಇದ್ದಾಗಲೂ ಜನರ ಹೊರೆ ಕಡಿಮೆ ಮಾಡುವ ನೀತಿಯನ್ನು ಮನಮೋಹನ್ ಸಿಂಗ್ ಸರ್ಕಾರ ಅನುಸರಿಸಿತು. ಆದರೆ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ ತೆರಿಗೆ ಹೆಚ್ಚಿಸಿ ಜನರ ಮೇಲಿನ ಹೊರೆ ಹೆಚ್ಚಿಸಿದದ್ದು ಮೋದಿ ಸರ್ಕಾರ. ಈಗ ಮತ್ತೆ ಅದೇ ತೆರಿಗೆಯ ಒಂದು ಭಾಗವನ್ನು ಕಡಿತ ಮಾಡಲಾಗಿದೆ. ಹೀಗಾಗಿ, ಇದು ಮೊದಲು ಹೆಚ್ಚಿಸಿದ್ದ ಭಾರದ ಸ್ವಲ್ಪ ಭಾಗವನ್ನು ಹಿಂದಕ್ಕೆ ತೆಗೆದುಕೊಂಡ ಕ್ರಮ ಮಾತ್ರ.

WhatsApp Image 2026 02 03 at 2.27.16 PM
ಪಿಎಂ ಇಕ್ಬಾಲ್, ಕೈರಂಗಳ
+ posts

ಹವ್ಯಾಸಿ ಲೇಖಕರು, ಪತ್ರಕರ್ತರು, ಮಂಗಳೂರು

ಪೋಸ್ಟ್ ಹಂಚಿಕೊಳ್ಳಿ:

ಪಿಎಂ ಇಕ್ಬಾಲ್, ಕೈರಂಗಳ
ಪಿಎಂ ಇಕ್ಬಾಲ್, ಕೈರಂಗಳ
ಹವ್ಯಾಸಿ ಲೇಖಕರು, ಪತ್ರಕರ್ತರು, ಮಂಗಳೂರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...