IT ದೈತ್ಯರನ್ನೂ ಬೆದರಿಸಿದ AI; ಕೋಕಾ-ಕೋಲಾ, ವಾಲ್‌ಮಾರ್ಟ್ CEOಗಳ ರಾಜಿನಾಮೆಗೆ ಅಸಲಿ ಕಾರಣವೇನು?

Date:

ಉದ್ಯಮ ಲೋಕದಲ್ಲಿ AI ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದಂತೆ, ಆರಂಭಿಕ ಹಂತದ (Entry-level) ಉದ್ಯೋಗಗಳಿಗೆ ಮಾತ್ರ ಕುತ್ತು ಬರಲಿದೆ ಎಂಬ ಆತಂಕವಿತ್ತು. ಆದರೆ, ಈಗಿನ ವಿದ್ಯಮಾನಗಳನ್ನು ನೋಡಿದರೆ ಬಹುರಾಷ್ಟ್ರೀಯ ಕಂಪನಿಗಳ ಉನ್ನತ ಮಟ್ಟದ ಅಧಿಕಾರಿಗಳೂ ಈ ಬದಲಾವಣೆಯಿಂದ ಹೊರಗುಳಿದಿಲ್ಲ ಎಂಬುದು ಗೊತ್ತಾಗುತ್ತಿದೆ. ಜೊತೆಗೆ ಇದು ಆತಂಕಕ್ಕೂ ಕಾರಣವಾಗಿದೆ.

- Advertisement -

ವಿಶ್ವದ ದೈತ್ಯ ಕಂಪನಿಗಳಾದ ಕೋಕಾ-ಕೋಲಾ ಮತ್ತು ವಾಲ್‌ಮಾರ್ಟ್ ಮುಖ್ಯಸ್ಥರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು AI ತಂತ್ರಜ್ಞಾನದ ವೇಗದ ಬೆಳವಣಿಗೆಯೇ ಮುಖ್ಯ ಕಾರಣ ಎಂದು ಬಹಿರಂಗಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಹೌದು! ಸಿಎನ್‌ಬಿಸಿಗೆ (CNBC) ನೀಡಿದ ಸಂದರ್ಶನದಲ್ಲಿ ಕೋಕಾ-ಕೋಲಾದ ಸಿಇಒ ಜೇಮ್ಸ್ ಕ್ವಿನ್ಸಿ ಮಾತನಾಡಿ, “AI ಮತ್ತು Gen-AI ಯುಗಕ್ಕೆ ಮುನ್ನ ನನ್ನ ನೇತೃತ್ವದಲ್ಲಿ ಕಂಪನಿಯು ಉತ್ತಮ ಪ್ರಗತಿ ಸಾಧಿಸಿದೆ. ಆದರೆ, ಈಗ ಉದ್ಯಮದಲ್ಲಿ ‘ಹೊಸ ಬದಲಾವಣೆ’ ಕಾಣಿಸಿಕೊಳ್ಳುತ್ತಿದೆ. ಈ ಹಂತದಲ್ಲಿ ಕಂಪನಿಯನ್ನು ಮುನ್ನಡೆಸಲು ಹೊಸ ಶಕ್ತಿಯುಳ್ಳ ನಾಯಕತ್ವದ ಅಗತ್ಯವಿದೆ ಎಂದು ನನಗೆ ಅನ್ನಿಸಿತು” ಎಂದು ಹೇಳಿರುವುದಾಗಿ ವರದಿಯಾಗಿದೆ.

image 2026 03 28T172857.834

2017ರಿಂದ ಕಂಪನಿಯನ್ನು ಮುನ್ನಡೆಸುತ್ತಿದ್ದ ಕ್ವಿನ್ಸಿ, ಈ ತಿಂಗಳ ಕೊನೆಯಲ್ಲಿ ತಮ್ಮ ಸ್ಥಾನವನ್ನು ಹಾಲಿ ಸಿಒಒ (COO) ಹೆನ್ರಿಕ್ ಬ್ರಾನ್ ಅವರಿಗೆ ಬಿಟ್ಟುಕೊಡಲಿದ್ದಾರೆ. “ಮುಂದಿನ ಬೆಳವಣಿಗೆಗೆ ಮೈದಾನದಲ್ಲಿ ಉತ್ತಮ ತಂಡವನ್ನು ಇಳಿಸುವುದು ನನ್ನ ಜವಾಬ್ದಾರಿ. ಹಾಗಾಗಿ ಹೊಸಬರಿಗೆ ಅವಕಾಶ ನೀಡುವ ಸಮಯ ಬಂದಿದೆ ಎಂದು ನಾನು ನಿರ್ಧರಿಸಿದೆ”, ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

ಇದೇ ವರ್ಷದ ಜನವರಿಯಲ್ಲಿ ನಿವೃತ್ತರಾದ ವಾಲ್‌ಮಾರ್ಟ್ ಸಿಇಒ ಡೌಗ್ ಮೆಕ್ ಮಿಲನ್ ಕೂಡ ಇದೇ ರೀತಿಯ ಅಭಿಪ್ರಾಯ ಹಂಚಿಕೊಂಡಿದ್ದಾರೆ. “‌AI ತಂತ್ರಜ್ಞಾನದ ಮೂಲಕ ನಾನು ಹೊಸ ಬದಲಾವಣೆಯನ್ನು ಪ್ರಾರಂಭಿಸಬಹುದಷ್ಟೇ, ಆದರೆ ಅದನ್ನು ಪೂರ್ಣಗೊಳಿಸಲು ನನ್ನಿಂದ ಸಾಧ್ಯವಿಲ್ಲ ಎಂದು ನನಗೆ ಒಂದು ವರ್ಷದ ಹಿಂದೆಯೇ ಅನ್ನಿಸತೊಡಗಿತ್ತು. AI ಶಾಪಿಂಗ್ ಮತ್ತು ಏಜೆಂಟಿಕ್ ಕಾಮರ್ಸ್‌ನ ಭವಿಷ್ಯವನ್ನು ಗಮನಿಸಿದಾಗ, ಈಗಲೇ ಸ್ಥಾನದಿಂದ ಕೆಳಗಿಳಿಯುವುದು ಸೂಕ್ತ ಎಂದು ನಿರ್ಧರಿಸಿದೆ” ಎಂದು ತಿಳಿಸಿದ್ದಾರೆ.

ಒಂದೆಡೆ ಸಿಇಒಗಳು ತಮ್ಮ ಸ್ಥಾನ ತ್ಯಜಿಸುತ್ತಿದ್ದರೆ, ಇನ್ನೊಂದೆಡೆ ಸಾಮಾನ್ಯ ಉದ್ಯೋಗಿಗಳ ಭವಿಷ್ಯ ಇನ್ನಷ್ಟು ಅನಿಶ್ಚಿತವಾಗುತ್ತಿದೆ. ಆಂಥ್ರೋಪಿಕ್ (Anthropic) ಸಿಇಒ ಡಾರಿಯೊ ಅಮೋಡೆ ಅವರ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಶೇ 50ರಷ್ಟು ಬಿಳಿ ಕಾಲರ್ (White-collar) ಉದ್ಯೋಗಗಳು AI ಪಾಲಾಗಲಿವೆ.

“ವಿಶೇಷವಾಗಿ ಕಾನೂನು ಸಂಸ್ಥೆಗಳಲ್ಲಿ ದಾಖಲೆಗಳ ಪರಿಶೀಲನೆ, ಕನ್ಸಲ್ಟಿಂಗ್, ಆಡಳಿತ ಮತ್ತು ಹಣಕಾಸು ವಿಭಾಗಗಳಲ್ಲಿ ಪುನರಾವರ್ತಿತ ಕೆಲಸಗಳನ್ನು ಮಾಡುವವರ ಉದ್ಯೋಗಕ್ಕೆ ಸಂಚಕಾರ ಬರಲಿದೆ. ಕಂಪನಿಗಳು ವೆಚ್ಚ ಕಡಿಮೆ ಮಾಡಲು ಮಾನವ ಉದ್ಯೋಗಿಗಳ ಬದಲಿಗೆ AI ಮೊರೆ ಹೋಗಲಿವೆ” ಎಂದು ಅಮೋಡೆ ಎಚ್ಚರಿಸಿದ್ದಾರೆ.

ಭಾರತವು ಇಂದು ವಿಶ್ವದ ಅತಿದೊಡ್ಡ ಐಟಿ (IT) ಮತ್ತು ಸೇವಾ ವಲಯದ ಕೇಂದ್ರವಾಗಿ ಗುರುತಿಸಿಕೊಂಡಿದೆ. ಈ ಕಾರಣದಿಂದಲೇ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ AI ಕ್ರಾಂತಿಯ ನೇರ ಪ್ರಭಾವ ಭಾರತದ ಉದ್ಯೋಗಿಗಳ ಮೇಲೆ ಹೆಚ್ಚಾಗಿರಲಿದೆ. ಟಿಸಿಎಸ್ (TCS), ಇನ್ಫೋಸಿಸ್ ಮತ್ತು ವಿಪ್ರೋದಂತಹ ದೈತ್ಯ ಕಂಪನಿಗಳು ಈಗಾಗಲೇ ತಮ್ಮ ಉದ್ಯೋಗಿಗಳಿಗೆ AI ತರಬೇತಿ ನೀಡಲು ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿವೆ. ಈ ಬದಲಾವಣೆಯು ವಿಶೇಷವಾಗಿ ವೃತ್ತಿಜೀವನವನ್ನು ಈಗ ತಾನೆ ಆರಂಭಿಸುತ್ತಿರುವ ಹೊಸಬರ (Freshers) ಮೇಲೆ ಹೆಚ್ಚಿನ ಒತ್ತಡ ಹೇರಲಿದೆ. ಇನ್ನು ಮುಂದೆ ಕೇವಲ ಸಾಫ್ಟ್‌ವೇರ್ ಕೋಡಿಂಗ್ ತಿಳಿದಿದ್ದರೆ ಸಾಲದು, ಅದರೊಂದಿಗೆ AI ಕೌಶಲಗಳನ್ನು ಮೈಗೂಡಿಸಿಕೊಳ್ಳದಿದ್ದರೆ ಐಟಿ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ದುಸ್ತರವಾಗಲಿದೆ.

image 2026 03 28T170245.821

ಭಾರತದ ಆರ್ಥಿಕತೆಗೆ ದೊಡ್ಡ ಬಲ ನೀಡುತ್ತಿರುವ ಬಿಪಿಒ (BPO) ಮತ್ತು ಕೆಪಿಒ (KPO) ವಲಯಗಳ ಮೇಲೂ AI ಕರಿನೆರಳು ಬೀಳಲಿದೆ. ಗ್ರಾಹಕ ಸೇವೆ, ಡೇಟಾ ಎಂಟ್ರಿ ಮತ್ತು ಸಾಮಾನ್ಯ ಆಡಳಿತಾತ್ಮಕ ಕೆಲಸಗಳು ಇನ್ನು ಮುಂದೆ ಮನುಷ್ಯರ ಬದಲಿಗೆ ಚಾಟ್‌ಬಾಟ್‌ಗಳು ಮತ್ತು AI ಅಲ್ಗಾರಿದಮ್‌ಗಳ ಪಾಲಾಗಲಿವೆ. ಇದರಿಂದಾಗಿ ಕಡಿಮೆ ಕೌಶಲದ ಅಗತ್ಯವಿರುವ ಉದ್ಯೋಗಗಳು ಗಣನೀಯವಾಗಿ ಕಡಿತಗೊಳ್ಳುವ ಭೀತಿ ಎದುರಾಗಿದೆ.

ಇದನ್ನೂ ಓದಿ: ಜಪಾನಿಯರ ದೀರ್ಘಾಯುಷ್ಯದ ಗುಟ್ಟು- ‘ಇಕಿಗಾಯ್‌’; ಈ ಕಲೆ ನಮಗೂ ಸಿದ್ಧಿಸಬಹುದು!

ಈ ಬದಲಾವಣೆಗಳ ಹಿನ್ನೆಲೆಯಲ್ಲಿ ಉದ್ಯಮ ತಜ್ಞರು ಮತ್ತು ವಿಶ್ಲೇಷಕರು ಎರಡು ಪ್ರಮುಖ ದಾರಿಗಳನ್ನು ಗುರುತಿಸಿದ್ದಾರೆ. ‘ಅಪ್‌ಸ್ಕಿಲ್ಲಿಂಗ್ ಅಥವಾ ಎಕ್ಸಿಟ್’. ನೀವು ಕಂಪನಿಯ ಸಿಇಒ ಆಗಿರಲಿ ಅಥವಾ ಸಾಮಾನ್ಯ ಉದ್ಯೋಗಿಯಾಗಿರಲಿ, ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವುದು ಅನಿವಾರ್ಯ. AI ತಂತ್ರಜ್ಞಾನವನ್ನು ತಮ್ಮ ಕೆಲಸಕ್ಕೆ ಪೂರಕವಾದ ಸಾಧನವಾಗಿ ಬಳಸಿಕೊಳ್ಳುವ ‘ಅಪ್‌ಸ್ಕಿಲ್ಲಿಂಗ್’ (Upskilling) ಹಾದಿ ಹಿಡಿಯುವುದು ಮೊದಲ ಆಯ್ಕೆ. ಹೊಸ ತಂತ್ರಜ್ಞಾನಗಳನ್ನು ಕಲಿಯಲು ಉತ್ಸುಕರಾಗಿರುವವರಿಗೆ ಮಾತ್ರ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಭವಿಷ್ಯವಿದೆ.

ಇನ್ನೊಂದೆಡೆ, ಬದಲಾವಣೆಗೆ ಒಗ್ಗಿಕೊಳ್ಳಲು ಸಾಧ್ಯವಾಗದವರಿಗೆ ಅಥವಾ ತಂತ್ರಜ್ಞಾನದ ವೇಗದೊಂದಿಗೆ ಓಡಲು ಕಷ್ಟಪಡುವವರಿಗೆ ‘ಎಕ್ಸಿಟ್’ (Exit) ಅಂದರೆ ನಿರ್ಗಮನವೇ ಅಂತಿಮ ದಾರಿಯಾಗಲಿದೆ. ಕೋಕಾ-ಕೋಲಾದಂತಹ ದೈತ್ಯ ಕಂಪನಿಗಳ ಸಿಇಒಗಳೇ ಈ ಸತ್ಯವನ್ನು ಒಪ್ಪಿಕೊಂಡು ಗೌರವಯುತವಾಗಿ ತಮ್ಮ ಸ್ಥಾನಗಳನ್ನು ತ್ಯಜಿಸುತ್ತಿರುವುದು ಉದ್ಯಮ ಲೋಕಕ್ಕೆ ಒಂದು ದೊಡ್ಡ ಪಾಠವಾಗಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಜಾದಲ್ಲಿ ಮೃತರ ಸಂಖ್ಯೆ 74,000 ದಾಟಿದೆ: ಆರೋಗ್ಯ ಸಚಿವಾಲಯ

ಇಸ್ರೇಲ್ ನಡೆಸುತ್ತಿರುವ ದೀರ್ಘಕಾಲದ ಕ್ರೌರ್ಯದಿಂದಾಗಿ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ 74,000...

ಅಸ್ಸಾಂ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ನಮ್ಮ ಬಂಧನ: ಸಿಜೆಪಿ ನಾಯಕ ಅಶುತೋಷ್ ರಂಕಾ ಆರೋಪ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಹ-ಸಂಚಾಲಕ ಅಶುತೋಷ್ ರಂಕಾ ಮತ್ತು ಅವರ...

ದಕ್ಷಿಣ ಆಫ್ರಿಕಾದ ಹಲವೆಡೆ ಸಾಮೂಹಿಕ ಗುಂಡಿನ ದಾಳಿ; 27 ಮಂದಿ ಭೀಕರ ಸಾವು

ದಕ್ಷಿಣ ಆಫ್ರಿಕಾದ ವಿವಿಧ ಪಟ್ಟಣಗಳಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು,...