ಬಂಗಾಳ | TMCಯೊಳಗೆ ವಿಘಟನೆ ಸೃಷ್ಟಿಸಿದ BJP; ತಲ್ಲಣಗೊಂಡಿದೆ ದೀದಿ ಸಾಮ್ರಾಜ್ಯ!

Date:

ಯಾವ ಹಾದಿಯಲ್ಲಿ ನಾವು ಅಧಿಕಾರ ಹಿಡಿಯುತ್ತೇವೆಯೋ, ಅದೇ ಹಾದಿಯಲ್ಲೇ ನಮ್ಮ ಪತನವೂ ಆರಂಭವಾಗುತ್ತದೆ’ ಎಂಬ ರಾಜಕೀಯ ಸತ್ಯವನ್ನು ಪಶ್ಚಿಮ ಬಂಗಾಳ ಒತ್ತಿ ಹೇಳುತ್ತಿದೆ.

ಪಶ್ಚಿಮ ಬಂಗಾಳದ ರಾಜಕಾರಣವು ಮತ್ತೊಮ್ಮೆ ಐತಿಹಾಸಿಕ ತಿರುವಿಗೆ ಸಾಕ್ಷಿಯಾಗಿದೆ. 15 ವರ್ಷಗಳ ಕಾಲ ಮಮತಾ ಬ್ಯಾನರ್ಜಿ ಅವರ ವರ್ಚಸ್ಸಿನ ಅಡಿಯಲ್ಲಿ ಮೆರೆದಿದ್ದ ಟಿಎಂಸಿ ಸಾಮ್ರಾಜ್ಯ ಮುರಿದಿದೆ. ಪಕ್ಷವು 2026ರ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸೋಲುಂಡ ಬಳಿಕ, ತೀವ್ರ ಆಂತರಿಕ ಬಿಕ್ಕಟ್ಟು ಮತ್ತು ವಿಘಟನೆಯನ್ನು ಎದುರಿಸುತ್ತಿದೆ. ಪಕ್ಷದೊಳಗೆ ಭಿನ್ನಮತಗಳು ಭುಗಿಲೆದ್ದಿದ್ದು, ಸರಣಿ ರಾಜೀನಾಮೆಗಳು ಮತ್ತು ಬಿಜೆಪಿ ಎಡೆಗೆ ಪಕ್ಷಾಂತರ ಪರ್ವ ಆರಂಭವಾಗಿದೆ. ನಿನ್ನೆವರೆಗೂ ದೀದಿಯ ಬೆನ್ನಿಗೆ ನಿಂತಿದ್ದ ನಾಯಕರು, ಕೌನ್ಸಿಲರ್‌ಗಳು ಹಾಗೂ ಶಾಸಕರು ಈಗ ಅಧಿಕಾರದಲ್ಲಿರುವ ಬಿಜೆಪಿಗೆ ಗುಳೆಹೊರಟಿದ್ದಾರೆ.

- Advertisement -

ಇದು ಕೇವಲ ಒಂದು ರಾಜಕೀಯ ಸೋಲಿನ ನಂತರದ ಸಾಮಾನ್ಯ ಹತಾಶೆಯಲ್ಲ; ಬದಲಿಗೆ ಬಂಗಾಳದ ರಾಜಕೀಯ ಇತಿಹಾಸದ ಚಕ್ರವೇ ಇಂತಹದೊಂದು ಮಾದರಿಯನ್ನು ಹೊಂದಿದೆ. 2011ರಲ್ಲಿ 34 ವರ್ಷಗಳ ಕಮ್ಯುನಿಸ್ಟ್ (ಎಡರಂಗ) ಆಡಳಿತವನ್ನು ಧೂಳೀಪಟ ಮಾಡಿ ಮಮತಾ ಬ್ಯಾನರ್ಜಿ ಇದೇ ರೀತಿ ಅಧಿಕಾರಕ್ಕೆ ಬಂದಾಗ, ಅಂದಿನ ಸಿಪಿಐ(ಎಂ) ಪಕ್ಷವೂ ಸರಣಿ ರಾಜೀನಾಮೆಗಳನ್ನು ಎದುರಿಸಿತ್ತು. ಒಂದೇ ರಾತ್ರಿಯಲ್ಲಿ ನೆಲಕಚ್ಚಿತ್ತು. ಅದೇ ಇತಿಹಾಸ ಈಗ ಟಿಎಂಸಿಯಲ್ಲಿ ಮರುಕಳಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಬಂಗಾಳ ಚುನಾವಣಾ ಫಲಿತಾಂಶ ಪ್ರಕಟವಾಗಿ, ಬಿಜೆಪಿ ಸರ್ಕಾರ ರಚಿಸಿ ಇನ್ನೂ ಮೂರ್ನಾಲ್ಕು ವಾರಗಳಷ್ಟೇ ಕಳೆದಿವೆ. ಸೋಲುಂಡ ಟಿಎಂಸಿಯ ತಳಮಟ್ಟದ ಸಾಂಸ್ಥಿಕ ಶಕ್ತಿ ಕುಸಿಯತೊಡಗಿದೆ. ರಾಜ್ಯದ ವಿವಿಧ ಮುನ್ಸಿಪಾಲಿಟಿಗಳಲ್ಲಿನ (ನಗರಸಭೆ/ಪುರಸಭೆ) ಸುಮಾರು 100ಕ್ಕೂ ಹೆಚ್ಚು ಟಿಎಂಸಿ ಕೌನ್ಸಿಲರ್‌ಗಳು ಒಟ್ಟಾಗಿ ರಾಜೀನಾಮೆ ನೀಡುವ ಮೂಲಕ ಪಕ್ಷಕ್ಕೆ ಭಾರಿ ಆಘಾತ ನೀಡಿದ್ದಾರೆ. ಮುಖ್ಯವಾಗಿ, ಉತ್ತರ 24 ಪರಗಣ ಮತ್ತು ಕೈಗಾರಿಕಾ ವಲಯದ ಪ್ರಮುಖ ನಗರಸಭೆಗಳಲ್ಲಿ ಟಿಎಂಸಿ ನಿಯಂತ್ರಣ ಹಳಿತಪ್ಪಿದೆ. ಭಟ್ಪಾರಾ ಮುನ್ಸಿಪಾಲಿಟಿಯ 35 ಕೌನ್ಸಿಲರ್‌ಗಳ ಪೈಕಿ ಅಧ್ಯಕ್ಷೆ ರೇಬಾ ರಹಾ ಸೇರಿದಂತೆ 30 ಕೌನ್ಸಿಲರ್‌ಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಷ್ಟೇ ಅಲ್ಲದೆ, ಹಾಲಿಸಹರ್, ಕಾಂಚ್ರಾಪಾರಾ, ಗರುಲಿಯಾ ಹಾಗೂ ಡೈಮಂಡ್ ಹಾರ್ಬರ್‌ನಂತಹ ಟಿಎಂಸಿಯ ಭದ್ರಕೋಟೆಗಳಾಗಿದ್ದ ಮುನ್ಸಿಪಾಲಿಟಿಗಳಲ್ಲಿ ಪಕ್ಷದ ಕೌನ್ಸಿಲರ್‌ಗಳು ಸಾಮೂಹಿಕವಾಗಿ ಹೊರನಡೆದಿದ್ದಾರೆ.

ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಗಮನಿಸಿ: ನಿಮ್ಮ ಗ್ಯಾರಂಟಿ ಯೋಜನೆ, ಸರ್ಕಾರಿ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತದೆ ‘ಎಸ್‌ಐಆರ್’

ರಾಜೀನಾಮೆ ನೀಡಿದ ಜನಪ್ರತಿನಿಧಿಗಳು ಒಂದೇ ಥರನಾದ ವಾದ ಮುಂದಿಡುತ್ತಿದ್ದಾರೆ; “ಪಕ್ಷವು ಸೋಲಿನ ನಂತರ ನಮಗೆ ಯಾವುದೇ ಸೂಕ್ತ ಮಾರ್ಗದರ್ಶನ ನೀಡುತ್ತಿಲ್ಲ. ನೌಕರರಿಗೆ ಸಂಬಳ ನೀಡಲೂ ಸ್ಥಳೀಯ ಸಂಸ್ಥೆಗಳಲ್ಲಿ ಅನುದಾನವಿಲ್ಲ” ಎನ್ನುತ್ತಿದ್ದಾರೆ.

ಆದರೆ, ಇದರ ಹಿಂದಿರುವ ಅಸಲಿ ಸತ್ಯವೇ ಬೇರೆಯಿದೆ. ಸುವೇಂದು ಅಧಿಕಾರಿ ನೇತೃತ್ವದ ಹೊಸ ಸರ್ಕಾರವು ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಅಕ್ರಮಗಳ ಬಗ್ಗೆ ತನಿಖೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. ತನಿಖೆಗಳ ಹೆಸರಿನಲ್ಲಿ ತನಿಖಾ ಸಂಸ್ಥೆಗಳನ್ನು ಛೂಬಿಟ್ಟು, ಕಿರುಕುಳ ನೀಡುತ್ತಾರೆಂದು ಭೀತರಾಗಿರುವ ಹಲವು ಕೌನ್ಸಿಲರ್‌ಗಳು ಕಚೇರಿಗಳಿಗೆ ಬರುವುದನ್ನೇ ನಿಲ್ಲಿಸಿ­ದ್ದಾರೆ. ಹಲವು ನಗರಸಭೆ, ಪಾಲಿಕೆಗಳಿಗೆ ಹೊಸ ಸರ್ಕಾರವು ಆಡಳಿತಾಧಿಕಾರಿಗಳನ್ನು ನೇಮಿಸುತ್ತಿದೆ. ಹಲವರು ಟಿಎಂಸಿ ತೊರೆದು, ಬಿಜೆಪಿಯ ವಾಷಿಂಗ್‌ ಮಷೀನ್‌ನಲ್ಲಿ ತಮ್ಮ ಕೃತ್ಯಗಳನ್ನು ತೊಳೆದುಕೊಂಡು ಕ್ಲೀನ್‌ಚಿಟ್ ಪಡೆಯಲು ಹೊರಟಿದ್ದಾರೆ.

ಟಿಎಂಸಿಯ ಈ ವಿಘಟನೆ ಕೇವಲ ಮುನ್ಸಿಪಾಲಿಟಿ ಅಥವಾ ತಳಮಟ್ಟದ ನಾಯಕರಿಗೆ ಸೀಮಿತವಾಗಿಲ್ಲ. ಅದು ಪಕ್ಷದ ಅತ್ಯುನ್ನತ ಸ್ತರಕ್ಕೂ ತಲುಪಿದೆ. ಇತ್ತೀಚೆಗೆ, ಟಿಎಂಸಿ ಹಿರಿಯ ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಅವರು ಪಕ್ಷದಲ್ಲಿ ತಮಗಿದ್ದ ಬಾರಾಸತ್ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾತ್ರವಲ್ಲದೆ, ಸುವೇಂದು ಅಧಿಕಾರಿ ಅವರು ಕಲ್ಯಾಣಿಯಲ್ಲಿ ಕರೆದಿದ್ದ ಉನ್ನತ ಮಟ್ಟದ ಆಡಳಿತಾತ್ಮಕ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದಾರೆ. ಅವರೊಂದಿಗೆ ದೆಗಂಗಾ, ಸ್ವರೂಪನಗರ ಮತ್ತು ಹಾರೋವಾ ಭಾಗದ ಕನಿಷ್ಠ ಆರು ಮಂದಿ ಟಿಎಂಸಿ ಶಾಸಕರು ಕೂಡ ಸಿಎಂ ಸುವೇಂದು ಅಧಿಕಾರಿ ಸಭೆಯಲ್ಲಿ ಹಾಜರಾಗಿದ್ದಾರೆ. ತಾವೆಲ್ಲರೂ ಬಿಜೆಪಿ ಸೇರುವ ಸೂಚನೆ ನೀಡಿದ್ದಾರೆ.

ಕಾಕೋಲಿ ಘೋಷ್ ಅವರು ಪಕ್ಷದ ಹೈಕಮಾಂಡ್ ಮತ್ತು ಟಿಎಂಸಿಯ ರಾಜಕೀಯ ಸಲಹಾ ಸಂಸ್ಥೆ ‘ಐ-ಪ್ಯಾಕ್’ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಇಂತಹ ಏಜೆನ್ಸಿಗಳಿಂದ ಪಕ್ಷವನ್ನು ಕಟ್ಟುವುದು ಸಾಧ್ಯವಿಲ್ಲ. ಇವು ಇಡೀ ಪಕ್ಷವನ್ನು ಹಾಳುಗೆಡವಿವೆ” ಎಂದು ಅವರು ಮಮತಾ ಬ್ಯಾನರ್ಜಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇಷ್ಟೇ ಅಲ್ಲದೆ, ಇತ್ತೀಚೆಗೆ ಬಿಜೆಪಿ ಸರ್ಕಾರದ ಬುಲ್ಡೋಜರ್ ಕ್ರಮ ಹಾಗೂ ಹಿಂಸಾಚಾರದ ವಿರುದ್ಧ ಟಿಎಂಸಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹಕ್ಕೆ ಪಕ್ಷದ 80 ಶಾಸಕರ ಪೈಕಿ ಕೇವಲ 36 ಶಾಸಕರು ಮಾತ್ರ ಹಾಜರಾಗಿದ್ದರು. 44 ಮಂದಿ ಗೈರಾಗಿದ್ದರು. ಅವರ ಗೈರುಹಾಜರಿಯು, ಶಾಸಕರು ದೀದಿಯ ನಾಯಕತ್ವದಿಂದ ಎಷ್ಟು ದೂರ ಸರಿಯುತ್ತಿದ್ದಾರೆ ಎಂಬುದಕ್ಕೆ ಕನ್ನಡಿ ಹಿಡಿದಿದೆ.

ಈ ಲೇಖನ ಓದಿದ್ದೀರಾ?: ಮುಖ್ಯಮಂತ್ರಿ ಬದಲಾವಣೆ: ಏನಾಗಲಿದೆ ಸರ್ಕಾರದ ಭವಿಷ್ಯ?

ಮುಖ್ಯವಾಗಿ, ಟಿಎಂಸಿಯ ಅತ್ಯಂತ ಶಕ್ತಿಶಾಲಿ ಕೇಂದ್ರವಾಗಿದ್ದ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (KMC) ಕೂಡ ಈಗ ಆಂತರಿಕ ಜಗಳದಿಂದ ಜರ್ಜರಿತವಾಗಿದೆ. ಮಮತಾ ಬ್ಯಾನರ್ಜಿ ಅವರ ಸೋದರಳಿಯ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಸೇರಿದ 17 ಆಸ್ತಿಗಳು ಅಕ್ರಮವಾಗಿವೆ. ಅವುಗಳನ್ನು ಉರುಳಿಸುತ್ತೇವೆಂದು ಪಾಲಿಕೆಯು ನೋಟಿಸ್‌ ಹೊರಡಿಸಿದ್ದು, ಪಕ್ಷದ ಒಳಗಿನ ಜಗಳ ಬೀದಿಗೆ ಬಂದಿದೆ. ಇದು ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಮತ್ತು ಅಭಿಷೇಕ್ ಬ್ಯಾನರ್ಜಿ ನಡುವಿನ ಮುಸುಕಿನ ಗುದ್ದಾಟವನ್ನು ಬಹಿರಂಗಪಡಿಸಿದೆ.

‘ನೋಟಿಸ್ ಜಾರಿಯಿಂದ ತೀವ್ರ ಅಸಮಾಧಾನಗೊಂಡಿರುವ ಮಮತಾ ಬ್ಯಾನರ್ಜಿ ಅವರು ಮೇಯರ್ ಫಿರ್ಹಾದ್ ಹಕೀಮ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಕೀಮ್ ಅವರು ತಮ್ಮ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ’ ಎಂಬ ವದಂತಿಗಳು ಹರಡಿವೆ.

ಇದೆಲ್ಲವೂ, ಹಲವೆಡೆ ಅಧಿಕಾರದಲ್ಲಿರುವವರ ಸಾಮೂಹಿಕ ಪಕ್ಷಾಂತರ ಮತ್ತು ಶಾಸಕ-ಸಂಸದರ ಗೈರು, ದೂರ ಉಳಿವಿಯುವಿಕೆಯು ಅವರೆಲ್ಲರೂ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ ಎಂಬುದರ ಸೂಚನೆ ತೋರಿಸಿದೆ. ಸದ್ಯದ ಬಂಗಾಳದಲ್ಲಿ, ಸೈದ್ಧಾಂತಿಕ ನಿಷ್ಠೆಗಿಂತ ‘ಅಧಿಕಾರ ಕೇಂದ್ರ’ ಎಲ್ಲಿದೆಯೋ ಅಲ್ಲಿಗೆ ತಳಮಟ್ಟದ ಕಾರ್ಯಕರ್ತರು ಮತ್ತು ನಾಯಕರು ಸಾಮೂಹಿಕವಾಗಿ ವಲಸೆ ಹೋಗುತ್ತಿದ್ದಾರೆ.

ಅಂದಹಾಗೆ, 2011ರಲ್ಲಿ ದೀದಿ ಅಧಿಕಾರಕ್ಕೆ ಬಂದಾಗ, ಕಮ್ಯುನಿಸ್ಟ್ ಪಕ್ಷದ ಅಡಿಯಲ್ಲಿ ದಶಕಗಳ ಕಾಲ ದರ್ಬಾರ್ ಮಾಡಿದ್ದ ಸ್ಥಳೀಯ ನಾಯಕರು ಕೂಡ ಒಂದೇ ವಾರದಲ್ಲಿ ಕೆಂಪು ಬಾವುಟವನ್ನು ಕೆಳಗಿಳಿಸಿ ಟಿಎಂಸಿಯ ಜೋಡಿಕಮಲದ ಬಾವುಟ ಹಿಡಿದಿದ್ದರು. ಇಂದು, ಅದೇ ಇತಿಹಾಸ ಮರುಕಳಿಸುತ್ತಿದೆ. ಟಿಎಂಸಿಯ ಈ ಭೀಕರ ಪತನಕ್ಕೆ ಎರಡು ಪ್ರಮುಖ ಕಾರಣಗಳನ್ನು ವಿಶ್ಲೇಷಕರು ಗುರುತಿಸಿದ್ದಾರೆ;

1. ಭ್ರಷ್ಟಾಚಾರದ ತನಿಖೆ ಹೆಸರಿನಲ್ಲಿ ದೌರ್ಜನ್ಯ: ಶೈಕ್ಷಣಿಕ ನೇಮಕಾತಿ ಹಗರಣ ಮತ್ತು ಪಾಲಿಕೆಗಳ ಅಕ್ರಮ ವಹಿವಾಟುಗಳಿಗೆ ಸಂಬಂಧಿಸಿದಂತೆ ಇಡಿ ಮತ್ತು ಸಿಬಿಐ ತನಿಖೆಗಳು ಬಿಗಿಗೊಂಡಿವೆ. ಮಾಜಿ ಸಚಿವ ಸುಜಿತ್ ಬೋಸ್ ಸೇರಿದಂತೆ ಹಲವರು ಈಗಾಗಲೇ ಜೈಲು ಪಾಲಾಗಿದ್ದಾರೆ. ಹೊಸ ಬಿಜೆಪಿ ಸರ್ಕಾರವು ಇನ್ನುಳಿದವರ ಪಟ್ಟಿಯನ್ನು ಸಿದ್ಧಪಡಿಸುತ್ತಿರುವುದರಿಂದ, ಜೈಲು ಶಿಕ್ಷೆಯಿಂದ ಪಾರಾಗಲು ನಾಯಕರು ಬಿಜೆಪಿಗೆ ಶರಣು ಹೋಗುತ್ತಿದ್ದಾರೆ.

2. ನಾಯಕತ್ವದ ಬಿಕ್ಕಟ್ಟು -ಅಭಿಷೇಕ್ vs ಹಳಬರು: ಪಕ್ಷದಲ್ಲಿ ಮಮತಾ ಬ್ಯಾನರ್ಜಿ ನಂತರ ಅಭಿಷೇಕ್ ಬ್ಯಾನರ್ಜಿ ಅವರಿಗೆ ಸಂಪೂರ್ಣ ಮಣೆ ಹಾಕುತ್ತಿರುವುದು ಹಿರಿಯ ನಾಯಕರಿಗೆ ದೀರ್ಘಕಾಲದಿಂದ ಅಸಮಾಧಾನ ತಂದಿತ್ತು. ಈಗ ಪಕ್ಷವು ಸೋಲುಂಡ ಬಳಿಕ, ಈ ಅಸಮಾಧಾನ ಬಂಡಾಯದ ರೂಪ ಪಡೆದಿದೆ. ಸೋತ ಪಕ್ಷದಲ್ಲಿ ಬಲಕ್ಕಾಗಿ ಕಿತ್ತಾಡುವುದಕ್ಕಿಂತ ಗೆದ್ದೆತ್ತಿನ ಬಾಲ ಹಿಡಿಯುವುದೇ ಲೇಸೆಂದು ಹಲವರು ಬಿಜೆಪಿ ಎಡೆಗೆ ಮುಖಮಾಡಿದ್ದಾರೆ.

ಚುನಾವಣೆ ಮತ್ತು ಎಸ್‌ಐಆರ್‌ ಪ್ರಕ್ರಿಯೆ ಸಮಯದಲ್ಲಿ ಮಮತಾ ಬ್ಯಾನರ್ಜಿ ಅವರು ದಿಟ್ಟ ಹೋರಾಟ ನಡೆಸಿದ್ದರು. ಪ್ರತಿ ಬೂತ್‌ ಮಟ್ಟದಲ್ಲಿಯೂ ತಳಮಟ್ಟದ ಕಾರ್ಯಕರ್ತರನ್ನು ಸಜ್ಜುಗೊಳಿಸಿ ಎಸ್‌ಐಆರ್‌ ವಿರುದ್ಧ ಪ್ರಬಲವಾಗಿ ಹೋರಾಡಿದ್ದರು. ಆದರೂ, ಟಿಎಂಸಿ ಸೋಲುಂಡಿತು. ಇದು ಪಕ್ಷದ ಸೋಲಲ್ಲ, ಬಿಜೆಪಿಯ ವಾಮಮಾರ್ಗದ ಗೆಲುವು ಎಂದು ಮಮತಾ ಸೇರಿದಂತೆ ಹಲವು ಹೇಳುತ್ತಿದ್ದಾರೆ. ಆದಾಗ್ಯೂ, ಪಕ್ಷ ಈಗ ಬಿಕ್ಕಟ್ಟನ್ನು ಎದುರಿಸುತ್ತಿದೆ. ‘ಯಾವ ಹಾದಿಯಲ್ಲಿ ನಾವು ಅಧಿಕಾರ ಹಿಡಿಯುತ್ತೇವೆಯೋ, ಅದೇ ಹಾದಿಯಲ್ಲೇ ನಮ್ಮ ಪತನವೂ ಆರಂಭವಾಗುತ್ತದೆ’ ಎಂಬ ರಾಜಕೀಯ ಸತ್ಯಕ್ಕೆ ಪಶ್ಚಿಮ ಬಂಗಾಳದ ಪ್ರಸ್ತುತ ಪರಿಸ್ಥಿತಿ ಸಾಕ್ಷಿಯಾಗಿ ನಿಂತಿದೆ.

ಪಕ್ಷದ ಒಗ್ಗಟ್ಟನ್ನು ಕಾಪಾಡಿಕೊಳ್ಳಲು ಮಮತಾ ಬ್ಯಾನರ್ಜಿ ತುರ್ತು ಸಭೆಗಳನ್ನು ನಡೆಸುತ್ತಿದ್ದಾರೆ. ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ. ಅಂತೆಯೇ, ‘ಹೋಗುವವರು ಹೋಗಬಹುದು, ಇರುವವರು ಒಟ್ಟಾಗಿ ಹೋರಾಡೋಣ’ ಎಂಬ ಸ್ಪಷ್ಟ ಮತ್ತು ಧೈರ್ಯದ ಮಾತುಗಳನ್ನು ರವಾನಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುಪ್ರೀಂ ಆದೇಶ ಉಲ್ಲಂಘನೆ: ಕಾನೂನುಬಾಹಿರ ವಶಕ್ಕೆ ತಡೆ ಇದ್ದರೂ 100ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ!

ರಾಜಧಾನಿ ದೆಹಲಿಯಲ್ಲಿ ಕನ್ಹಾಟ್ ಪ್ಲೇಸ್ ಹಾಗೂ ಜಂತರ್ ಮಂತರ್ ಸುತ್ತಮುತ್ತ ನಡೆಯುತ್ತಿರುವ...

ಗ್ಯಾನೂ ವಿರುದ್ಧ ಪ್ರತಿಭಟನೆ: ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಬಂಧನ

ದೆಹಲಿಯಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಭಾನುವಾರವೂ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿ, ಯುವತಿಯರ ಮೇಲೆ ಹಲ್ಲೆ; ನಾಲ್ವರು RSS ಗೂಂಡಾಗಳ ಬಂಧನ

ದೆಹಲಿಯಲ್ಲಿ ನಡೆದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು...