ಬಿಹಾರ ಚುನಾವಣೆ | ನಿತೀಶ್ ಕುಮಾರ್ ಮತ್ತು ಬಿಜೆಪಿಯ ಸ್ವಯಂ ಸೋಲು

Date:

ಬಿಜೆಪಿಗರ ಪ್ರಚಾರದ ವರಸೆ ಬದಲಾಗಿವೆ. ಮುಖ್ಯಮಂತ್ರಿ ಹುದ್ದೆಯಲ್ಲಿ ನಿತೀಶ್ ಅವರ ಹೆಸರು ಹೇಳುವುದನ್ನು ಮರೆಮಾಚುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ಕೇಂದ್ರಿತ ಪ್ರಚಾರಕ್ಕೆ ಆದ್ಯತೆ ನೀಡಿದ್ದವರು, ಬಿಹಾರ ಚುನಾವಣೆಯಲ್ಲಿ ನಿತೀಶ್ ನಾಯಕತ್ವವನ್ನು ಬಿಂಬಿಸಲು ಹಿಂಜರಿಯುತ್ತಿದ್ದಾರೆ.

ಬುದ್ಧಿವಂತರಾಗಿ ಕಾಣಿಸಿಕೊಳ್ಳುವ ಪ್ರಯತ್ನವು ಬಹುತೇಕ ಸಮಯಗಳಲ್ಲಿ ಸಾಮಾನ್ಯವಾಗಿ ಮೂರ್ಖತನದಂತೆ ಕಾಣುತ್ತವೆ. ಇದನ್ನು ಚಾಣಾಕ್ಷ ರಾಜಕಾರಣಿಗಿಂತ ಯಾರೂ ಚೆನ್ನಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಆ ಚಾಣಾಕ್ಷರಲ್ಲಿ ನಿತೀಶ್ ಕುಮಾರ್‌ ಅವರನ್ನು ಮೀರಿಸುವವರು ಯಾರಿದ್ದಾರೆ? ರಾಜಕೀಯ ಕ್ಷೇತ್ರದಲ್ಲಿ ಅಪರೂಪದ ಬಿಂದುವಾಗಿರುವ ಅವರು, ಆಡಳಿತ ಮತ್ತು ವಿರೋಧ ಪಕ್ಷದ ಮೈತ್ರಿಕೂಟಗಳೊಂದಿಗೆ ಸೇರಿ ಮುಖ್ಯಮಂತ್ರಿಯಾಗಬಹುದಾದ ಏಕೈಕ ವ್ಯಕ್ತಿ. ಆ ಕಾರಣದಿಂದಲೇ ಎರಡು ದಶಕಗಳ ಮುಖ್ಯಮಂತ್ರಿಯೂ, ಸುಮಾರು ನಾಲ್ಕು ದಶಕಗಳ ಪ್ರಬಲ ರಾಜಕಾರಣಿಯೂ ಆಗಿ ಉಳಿದಿದ್ದಾರೆ.

- Advertisement -

ಮಾಧ್ಯಮ ಮತ್ತು ಪಕ್ಷದದೊಳಗಿನ ಮಾತುಗಾರರಿಂದ ಕೃತಕವಾಗಿ ರೂಪುಗೊಂಡ ನಕಲಿ ಚಾಣಕ್ಯರು, ಈ ರಾಜಕೀಯ ಯುದ್ಧಭೂಮಿಯಲ್ಲಿ ನಿತೀಶ್ ಏನು ಹೇಳುತ್ತಾರೆ ಮತ್ತು ಮಾಡುತ್ತಾರೆ ಎಂಬುದನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳಬೇಕು. ಏಕನಾಥ್ ಶಿಂದೆಯಂತಹ ಅರೆಬೆಂದ ನಾಯಕ ಮತ್ತು ನಿತೀಶ್ ಕುಮಾರ್‌ನಂತಹ ಅನುಭವಿ ರಾಜಕಾರಣಿಯ ನಡುವಿನ ವ್ಯತ್ಯಾಸವು ನಿಜವಾದ ಚಾಣಕ್ಯನಿಗೆ ತಿಳಿದಿರುತ್ತದೆ. ನಿತೀಶ್ ಕುಮಾರ್ ಮೋಸಕ್ಕೆ ಬಲಿಯಾಗುವ ರೀತಿಯಲ್ಲಿ ಕಾಣುತ್ತಾರೆಂದು ಭಾವಿಸಿದರೆ, ಅವರು ಬುದ್ಧಿವಂತರಲ್ಲ ಎಂದಲ್ಲ. ನಿತೀಶ್ ತಮ್ಮ ಮಾಸ್ಟರ್‌ಸ್ಟ್ರೋಕ್‌ಗಳನ್ನು ಪ್ರಚುರ ಪಡಿಸಲು ಟಿವಿ ಆಂಕರ್‌ಗಳು ಅಗತ್ಯವಿಲ್ಲ ಎಂಬುದನ್ನು ಇತಿಹಾಸವು ಜಗತ್ತಿಗೆ ಮತ್ತು ಅಮಿತ್ ಶಾಗೆ ತಿಳಿಹೇಳುತ್ತದೆ. ಅವರ ಶಾಂತ, ಸೂಕ್ಷ್ಮವಾದ ಮಾಸ್ಟರ್‌ಸ್ಟ್ರೋಕ್‌ಗಳ ಬಲಿಪಶುಗಳು ದೇಶಾದ್ಯಂತ – ಲಾಲು ಪ್ರಸಾದ್ ಯಾದವ್‌ನಿಂದ ರಾಹುಲ್ ಗಾಂಧಿಯವರೆಗೆ ಮತ್ತು ದಿವಂಗತ ಜಾರ್ಜ್ ಫರ್ನಾಂಡಿಸ್‌ನಿಂದ ನರೇಂದ್ರ ಮೋದಿಯವರೆಗೆ – ಇದ್ದಾರೆ. ಬಿಹಾರದಲ್ಲಿಯೂ ಚುನಾವಣೆಗಳು ನಡೆಯುವುದು ಮುಖ್ಯಮಂತ್ರಿ ಆಯ್ಕೆಗಲ್ಲ, ವಿರೋಧ ಪಕ್ಷದ ನಾಯಕ ಯಾರು ಎಂಬುದನ್ನು ನಿರ್ಧರಿಸಲು ಎಂಬ ನಿಗೂಢ ರಾಜಕೀಯ ಸತ್ಯವು ಗುಜರಾತ್‌ಗೆ ತಲುಪಿರಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಅದ್ದರಿಂದ, ಬಿಜೆಪಿಗರ ಪ್ರಚಾರದ ವರಸೆ, ಘೋಷಣೆಗಳು ಬದಲಾಗಿವೆ. “ನೈ ರಫ್ತಾರ್ ಸೆ ಚಲೇಗಾ ಬಿಹಾರ್/ಫಿರ್ ಆಯೇಗಿ ಎನ್‌ಡಿಎ ಸರ್ಕಾರ್ (ಬಿಹಾರ್ ಈಗ ಹೊಸ ವೇಗದಲ್ಲಿ ಚಲಿಸುತ್ತದೆ/ಎನ್‌ಡಿಎ ಸರ್ಕಾರ ಮರಳುತ್ತದೆ)” ಎಂಬ ಘೋಷಣೆಯನ್ನು ಪ್ರಧಾನಿ ಮೋದಿ ಘೋಷಿಸುವಾಗ, ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ನಿತೀಶ್ ಅವರ ಹೆಸರು ಹೇಳುವುದನ್ನು ಮರೆಮಾಚಿದರು. ಅವರ ಘೋಷಣೆಯು “ಬಿಹಾರ್ ಮೇ ಬಹಾರ್ ಹೈ/ನಿತೇಶೇ ಕುಮಾರ್ ಹೈ (ಬಿಹಾರ್‌ನಲ್ಲಿ ವಸಂತಕಾಲವಿದೆ /ಇಗೋ ನಿತೀಶ್ ಕುಮಾರ್ ಮರಳುತ್ತಿದ್ದಾರೆ)” ಎಂಬುದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಮೋದಿ ಕೇಂದ್ರಿತ ಪ್ರಚಾರಕ್ಕೆ ಆದ್ಯತೆ ನೀಡಿದ್ದ ಬಿಜೆಪಿ, ಬಿಹಾರ ಚುನಾವಣೆಯಲ್ಲಿ ನಿತೀಶ್ ನಾಯಕತ್ವವನ್ನು ಬಿಂಬಿಸಲು ಹಿಂಜರಿಯುತ್ತಿದೆ.

ನಿತೀಶ್ ಅವರ ಜೆಡಿಯುನಲ್ಲಿರುವ ಬಿಜೆಪಿ ಏಜೆಂಟರ ನೆರವಿನಿಂದ ಚಾಣಾಕ್ಷ/ಕುತಂತ್ರಿ ಮುಖ್ಯಮಂತ್ರಿಯನ್ನು (ನಿತೀಶ್‌) ಸಂಪೂರ್ಣವಾಗಿ ಬಿಜೆಪಿಯ ನಿಯಂತ್ರಣಕ್ಕೆ ತರಲಾಗಿದೆ. ನಿತೀಶ್‌ ಉತ್ಸಾಹಭರಿತ ಯೋಧನಾಗಿ ಭವಿಷ್ಯದಲ್ಲಿ ಪ್ರತಿದಾಳಿ ಮಾಡುವ ಸ್ಥಿತಿಯಲ್ಲಿರಲಿಲ್ಲ ಎಂದು ಬಿಜೆಪಿಗರು ಭಾವಿಸಿದ್ದಾರೆ. ಆದರೆ, ಕೆಲವು ರಾಜಕೀಯ ಪಕ್ಷಗಳು ಈ ಊಹೆಯನ್ನು ಅಲ್ಲಗಳೆದಿವೆ. ದೈಹಿಕ ದೌರ್ಬಲ್ಯಗಳ ಹೊರತಾಗಿಯೂ ನಿತೀಶ್ ಕುಮಾರ್ ತಮ್ಮ ಮುಖ್ಯಮಂತ್ರಿ ಕಿರೀಟವನ್ನು ರಕ್ಷಿಸಿಕೊಳ್ಳಲು ಸಮರ್ಥರಾಗಿದ್ದಾರೆ ಎಂದು ನಂಬಿವೆ. ಒಂದು ವೇಳೆ, ಬಿಜೆಪಿ ಲಾಲು ಯಾದವ್ ಅವರೊಂದಿಗೆ ಹಿಂಬಾಗಿನ ಮೈತ್ರಿ ಮಾಡಿಕೊಂಡು, ಹೊಸ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸಲು ಯತ್ನಿಸಿದರೆ, ಅಂತಹ ತಂತ್ರಗಳನ್ನು ನಿತೀಶ್‌ ಕೆಡವುತ್ತಾರೆ ಎಂದೂ ಹಲವರು ಭಾವಿಸಿದ್ದಾರೆ.

ಬಿಜೆಪಿಯನ್ನೇ ಕೈಬಿಟ್ಟು ನಿತೀಶ್‌ ಪರ್ಯಾಯ ಸರ್ಕಾರ ರಚಿಸಲು ಅಂದರೆ, ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಯೊಂದಿಗೆ ಕೂಡಿ ಸರ್ಕಾರ ರಚಿಸಲು ಸಾಧ್ಯವಾಗದೇ ಇದ್ದರೆ, ಮಾತ್ರವೇ ನಿತೀಶ್‌ರನ್ನು ಹೊರಗಿಡುವ ಬಿಜೆಪಿಯ ತಂತ್ರ ಫಲಿಸಬಹುದು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಆರ್‌ಜೆಡಿ ಮತ್ತು ಜೆಡಿಯು ಪರಸ್ಪರರ ಮೇಲೆ ತೀವ್ರ ದಾಳಿ ಮಾಡುತ್ತಿಲ್ಲ. ಗಂಭೀರ ಕೆಸರೆರಚಾಟದಲ್ಲಿ ತೊಡಗಿಲ್ಲ. ಬದಲಾಗಿ, ಜೆಡಿಯು ಪ್ರಚಾರವು ಬಿಜೆಪಿಯ ಕಠಿಣ ‘ಚಂಗಲ್ ರಾಜ್‌’ ನಿರೂಪಣೆಗಿಂತ ಸಂಪೂರ್ಣ ಭಿನ್ನವಾಗಿದೆ. ಇದು. ಚುನಾವಣಾ ನಂತರದ ತಂತ್ರಗಳಿಗೆ ನೆರವಾಗುವ ಸಾಧ್ಯತೆಗಳೂ ಇವೆ.

ಆದಾಗ್ಯೂ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್‌ ಕನಿಷ್ಠ ಬಹುಮತದ ಗಡಿ ದಾಟಲು ಸಾಧ್ಯವಾಗದಿದ್ದರೆ ಮಾತ್ರವೇ ಈ ಎಲ್ಲ ತಂತ್ರಗಳು ಕಾರ್ಯರೂಪಕ್ಕೆ ಬರುತ್ತವೆ. ವಾಸ್ತವದಲ್ಲಿ, ಈ ಬಾರಿಯ ಚುನಾವಣೆಯು ಕಠಿಣ ಸ್ಪರ್ಧೆಯಾಗಿದೆ. ಮಹಾಘಟಬಂಧನ್‌ ಪರವಾದ ಅಲೆ ಇದೆ ಎಂಬುದು ಕಂಡುಬರುತ್ತಿದೆ. ಆದಾಗ್ಯೂ, ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಸೃಷ್ಟಿಸಿ ಗೊಂದಲದಿಂದ ಕೊಂಚ ಅಡ್ಡಿಯಾಗಿಬಹುದು. ಆದರೆ, ಅದನ್ನು ಸರಿಯಾಗಿ ನಿಭಾಯಿಸಿದರೆ, ಒಗ್ಗಟ್ಟಿನ ಪ್ರಚಾರ ಮಾಡಿದರೆ, ಯಶಸ್ಸು ಮಹಾಘಟಬಂಧನ್‌ ಪಾಲಾಗಲಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.

“ವೇಗವಾಗಿ ಚಲಿಸುವ ವಂದೇ ಭಾರತ್ ರೈಲುಗಳು ಈಗ ಬಿಹಾರದಲ್ಲಿ ಓಡುತ್ತವೆ” ಎಂದು ಅಕ್ಟೋಬರ್ 24 ರ ಮಧ್ಯಾಹ್ನ ಸಮಷ್ಟಿಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಮೋದಿ ಹೆಮ್ಮೆಯಿಂದ ಹೇಳಿಕೊಂಡರು. ವೇಗದ ರೋಮಾಂಚನವು ಕೇಳುತ್ತಿದೆ; ಗಂಟೆಗೆ 350 ಕಿ.ಮೀ ವೇಗದಲ್ಲಿ ಓಡುವ ಜಪಾನ್ ಮತ್ತು ಚೀನಾದ ರೈಲುಗಳು ನಮ್ಮನ್ನು ಆಕರ್ಷಿಸಲಿಲ್ಲವೇ? ಆದರೆ, ಗಂಟೆಗೆ 130 ಕಿ.ಮೀ ವೇಗದಲ್ಲಿ ಓಡುವ ವಂದೇ ಭಾರತ್ ಭಾರತೀಯರಲ್ಲಿ ಹೆಮ್ಮೆಯ ಭಾವನೆಯನ್ನು ಹುಟ್ಟುಹಾಕುತ್ತದೆಯೇ?

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಸ್ಪರ್ಧೆಯಿಂದ ಹೊರಗುಳಿದ ಪ್ರಶಾಂತ್ ಕಿಶೋರ್ ತಂತ್ರವೇನು?

ಕೆಲವೊಮ್ಮೆ ಸತ್ಯಗಳು ಸಾಕಷ್ಟು ಮೋಡಿ ಮಾಡದಿದ್ದರೆ ಅವುಗಳಿಗೆ ಮಸಾಲೆ ಹಾಕಬೇಕು. “ಬಿಹಾರದ ಪ್ರತಿಯೊಂದು ಜಿಲ್ಲೆಯೂ ತನ್ನದೇ ಯುವಜನರ ಮಾಲೀಕತ್ವದಲ್ಲಿ ಸ್ಟಾರ್ಟ್ಅಪ್ ಕಂಪನಿಗಳನ್ನು ಹೊಂದುವ ದಿನ ದೂರವಿಲ್ಲ” ಎಂದು ಪ್ರಧಾನಿ ಆತುರದಲ್ಲಿ ಅಬ್ಬರಿಸಿದರು. 10 ವರ್ಷಗಳ ಹಿಂದೆ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಪಾವತಿಯಾಗುತ್ತದೆ ಎಂಬ ವಂಚನೆಯ ಅಮಿಷದೊಂದಿಗೆ ಬದುಕಲು ಕಲಿತ ಜನರು ಮೋದಿಯ ಈ ಭಾಷಣಕ್ಕೂ ಚಪ್ಪಾಳೆ ತಟ್ಟಿದರು.

ಅದೇ ಭಾಷಣದಲ್ಲಿ ಮೋದಿ, ನೆರೆದಿದ್ದವರಲ್ಲಿ ತಮ್ಮ ಮೊಬೈಲ್ ಫೋನ್‌ಗಳ ಟಾರ್ಚ್ ಅನ್ನು ಆನ್ ಮಾಡಲು ಕೇಳಿಕೊಂಡರು. ಬಳಿಕ, “ಜಬ್ ಇಟ್ನಿ ಲೈಟ್ ಹೈ ತೋ ಲಾಲ್ತೆನ್ ಚಾಹಿಯೇ ಕ್ಯಾ (ಇಷ್ಟು ದೀಪಗಳಿರುವಾಗ, ನಮಗೆ ನಿಜವಾಗಿಯೂ ಲ್ಯಾಂಟರ್ನ್ ಅಗತ್ಯವಿದೆಯೇ)?” ಪಂಚಿಂಗ್‌ ಡೈಲಾಗ್‌ ಹೊಡೆದರು. ಪ್ರಮುಖ ಪ್ರತಿಸ್ಪರ್ಧಿ ಆರ್‌ಜೆಡಿಯ ಚಿಹ್ನೆ ‘ಲ್ಯಾಂಟರ್ನ್’ಅನ್ನು ಉದ್ದೇಶಿಸಿ ಅವರು ಈ ಘೋಷಣೆ ಹೊರಬಿದ್ದಿತು. ಸ್ಯಕ್ಕೆ, ಈ ಬಾರಿಯ ಚುನಾಣಾ ಪ್ರಚಾರಗಳಲ್ಲಿ, ಮಂಗಳಸೂತ್ರವಿಲ್ಲ, ಮುಜ್ರಾ ಇಲ್ಲ, ಹೆಚ್ಚು ಮಕ್ಕಳನ್ನು ಹೆರುವವರು ಇಲ್ಲ – ಇದೇ ಸಂತೋಷದಾಯಿ.

ಆದಾಗ್ಯೂ, ಪ್ರಧಾನಿ ಮೋದಿ ಅವರು ಪೆಲೆಟ್‌ಗಳು, ಪಿಸ್ತೂಲ್‌ಗಳು, ಡಬಲ್ ಬ್ಯಾರೆಲ್ ಗನ್‌ಗಳು ಹಾಗೂ ಅಪಹರಣಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಮೋದಿ ಅವರು ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ, ‘ಜಂಗಲ್ ರಾಜ್’ ಮರಳುತ್ತದೆ. ಬಿಹಾರವು ಜಂಗಲ್‌ ರಾಜ್ಅನ್ನು 100 ವರ್ಷವಾದರೂ ಮರೆಯುವುದಿಲ್ಲ ಎಂದರು. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು “ಆರ್ ಎಂದರೆ ರಂಗದಾರಿ. ಜೆ ಎಂದರೆ ಜಂಗಲ್ ರಾಜ್. ಡಿ ಎಂದರೆ ದಾದಾಗಿರಿ. ಆರ್‌ಜೆಡಿ ಎಂದರೆ ಅಪರಾಧ, ವಿನಾಶ ಮತ್ತು ದುರಾಡಳಿತ” ಎಂದು ಬಣ್ಣಿಸಿದರು. ಬಿಹಾರವು ಉದ್ಯೋಗ, ಶಿಕ್ಷಣ ಹಾಗೂ ಆರೋಗ್ಯ ರಕ್ಷಣೆಯಂತಹ ಮೂಲಭೂತ ಸೌಲಭ್ಯಗಳಿಗಾಗಿ ಎದುರು ನೋಡುತ್ತಿದೆ ಎಂಬುದನ್ನು ಮರೆಮಾಚಲು ಈ ಜಂಗಲ್ ರಾಜ್‌ಅನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ.

ಮೋದಿ ಮತ್ತು ಬಿಜೆಪಿ ಭಾಷಣಗಳು ಅರ್ಥೈಸುವುದೇನು?
ಬುಲೆಟ್‌ ರೈಲು ಗುಜರಾತ್‌ನಲ್ಲಿದೆ; ಆದರೆ, ಅದರ ವೇಗವನ್ನು ನೋಡಿ ಬಿಹಾರದವರು ಆನಂದಿಸಿ,
ಗುಜರಾತ್‌ನಲ್ಲಿ ಕೈಗಾರಿಕೆಗಳಿವೆ; ಅದನ್ನು ನೋಡಿ ಖುಷಿ ಪಡಿ,
ನಿಮಗೆ ವಂದೇ ಭಾರತ್ ರೈಲು ಸಿಕ್ಕಿದೆ; ಪ್ರಯಾಣಿಸಿ ಮತ್ತು ವಲಸೆಯನ್ನು ತೀವ್ರಗೊಳಿಸಿ.

ಇದೆಲ್ಲದರ ನಡುವೆ, ನಿತೀಶ್‌ರನ್ನು ಮುಖ್ಯಮಂತ್ರಿ ಮುಖ ಎಂಬುದರಿಂದ ಹೊರಗಿಡುವ ಬಿಜೆಪಿಯ ತಂತ್ರ, ಬಿಜೆಪಿಯನ್ನೇ ಹೊರಗಿಟ್ಟು ಸರ್ಕಾರ ರಚಿಸಬಲ್ಲೆ ಎಂಬ ನಿತೀಶ್‌ ವಿಶ್ವಾಸವು ಎನ್‌ಡಿಎ ಮೈತ್ರಿಯೊಳಗೆ ಬಿಕ್ಕಟ್ಟು ಸೃಷ್ಟಿಸುತ್ತಿದೆ. ಬಿಜೆಪಿ-ಜೆಡಿಯು ಹಗ್ಗಾಜಗ್ಗಾಟವು ಸ್ವತಃ ತಮ್ಮ ಸೋಲುಗಳಿಗೆ ಕಾರಣವಾಗುತ್ತವೆ. ಇದು ಈಗ ಚುನಾವಣಾ ಕಣದಲ್ಲಿ ಕಾಣುತ್ತಿದೆ.

ಮೂಲ: ದಿ ವೈರ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...

ಬದ್ಧವೈರಿಗಳನ್ನು ಬೆಸೆದ ಚುನಾವಣಾ ಆಯೋಗದ ವಿವಾದ: ಒಡಕು ಮರೆತು ಮತ್ತೆ ಒಂದಾಗುತ್ತಿದೆಯೇ ‘ಇಂಡಿಯಾ’ ಒಕ್ಕೂಟ?

ಚುನಾವಣಾ ಆಯೋಗದೊಳಗಿನ ಆಂತರಿಕ ಒಡಕು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್: 500ಕ್ಕೆ ಹೆಚ್ಚಿಸಲು ಆಗ್ರಹ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು...