GMPL ಘಟಕದಿಂದ ಪರಿಸರಕ್ಕೆ ಕುತ್ತು: ಜನವಸತಿ ಪ್ರದೇಶದಲ್ಲಿ ವಿಷ ಬೂದಿಯ ಮಳೆ!

Date:

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬಜ್ಪೆ ಶಾಂತಿಗುಡ್ಡೆ ಪರಿಸರದ ಜನರು ಕೆಲವು ದಿನಗಳಿಂದ ಆತಂಕದಿಂದಲೇ ಬದುಕನ್ನು ಸಾಗಿಸುವಂತಾಗಿದೆ. ತಮ್ಮ ಪರಿಸರ ವಿಶೇಷ ಆರ್ಥಿಕ ವಲಯವಾಗಿದ್ದರೂ, ಪರಿಸರದ ಮನೆಗಳ ಅಂಗಳ, ಬಾವಿಗಳ ನೀರಿಗೂ ಮಾಲಿನ್ಯದ ಭೀತಿ ಉಂಟಾಗತೊಡಗಿದೆ. ಇಲ್ಲಿನ ನಿವಾಸಿಗಳಿಗೆ ಮಾತ್ರ ದಿನನಿತ್ಯ ಅಪಾಯಕಾರಿ ರಾಸಾಯನಿಕ ಕಣಗಳಿಂದ ತಮ್ಮ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿ ಅಪಾಯಕ್ಕೆ ಸಿಲುಕಿದೆ.

ಮಂಗಳೂರು ವಿಶೇಷ ಆರ್ಥಿಕ ವಲಯದ (MSEZ) ವ್ಯಾಪ್ತಿಯಲ್ಲಿರುವ ಗೇಲ್ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (GMPL) ಘಟಕದಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯದ ಕುರಿತು ಸ್ಥಳೀಯ ನಿವಾಸಿಗಳ ಆತಂಕ ಮತ್ತಷ್ಟು ತೀವ್ರಗೊಂಡಿದೆ. ಕೆಲವು ದಿನಗಳಿಂದ ರಾತ್ರಿಯಲ್ಲಿ ಘಟಕದಿಂದ ಹೊರಬಂದಿರುವುದಾಗಿ ಸ್ಥಳೀಯರು ಆರೋಪಿಸಿರುವ ಅಪಾಯಕಾರಿ ರಾಸಾಯನಿಕ ಕಣಗಳು ಸುತ್ತಮುತ್ತಲಿನ ಜನವಸತಿ ಪ್ರದೇಶಗಳ ಮನೆಗಳು, ಅಂಗಳಗಳು ಹಾಗೂ ಕುಡಿಯುವ ನೀರಿನ ಬಾವಿಗಳಲ್ಲಿ ಬಿದ್ದಿವೆ ಎನ್ನಲಾಗಿದ್ದು, ಸಾರ್ವಜನಿಕ ಆರೋಗ್ಯ ಮತ್ತು ಕುಡಿಯುವ ನೀರಿನ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.

- Advertisement -

PTA ಉತ್ಪಾದನಾ ಘಟಕವಾಗಿರುವ GMPLನಲ್ಲಿ ರಾತ್ರಿ ವೇಳೆ ನಿರಂತರವಾಗಿ ದೊಡ್ಡ ದೊಡ್ಡ ಶಬ್ದ ಉಂಟಾಗುವುದು, ಹೊಗೆ ಮತ್ತು ಧೂಳಿನ ಹೊರಸೂಸುವಿಕೆ ಹಾಗೂ ಫಲ್ಗುಣಿ ನದಿಯ ಜಲಮೂಲಗಳಿಗೆ ಕಲುಷಿತ ನೀರು ಸೇರುತ್ತಿದೆ ಎಂಬ ದೂರುಗಳು ಕಳೆದ ಹಲವು ತಿಂಗಳುಗಳಿಂದ ಕೇಳಿಬರುತ್ತಿವೆ. ಸಂಬಂಧಪಟ್ಟ ಇಲಾಖೆಗಳು ಮತ್ತು ಜಿಲ್ಲಾಡಳಿತದ ಗಮನಕ್ಕೆ ಹಲವು ಬಾರಿ ಈ ವಿಚಾರಗಳನ್ನು ತಂದಿದ್ದರೂ, ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂಬುದು ಸ್ಥಳೀಯರ ಆಕ್ರೋಶವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೆಕ್ಕೆಜೋಳಕ್ಕೆ ಉತ್ತಮ ಬೆಲೆ: ಬರದಿಂದ ಉತ್ಪಾದನೆ ಶೇ.33ರಷ್ಟು ಕುಸಿತ,...

ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ ಈ ಬಾರಿ ಮೆಕ್ಕೆಜೋಳದ ಬೆಲೆ ಏರಿಕೆ ಪ್ರಮುಖ ಚರ್ಚೆಯ ವಿಷಯವಾಗಿದೆ. ಮುಂಗಾರು ಮಳೆ ಕೈಕೊಟ್ಟು, ಬಿತ್ತನೆ ಪ್ರದೇಶ ಕುಸಿದು, ಬೆಳೆದ ಬೆಳೆಯೂ ಒಣಹವೆಯಿಂದ ಹಾನಿಗೊಳಗಾದ ಪರಿಣಾಮ ಮೆಕ್ಕೆಜೋಳದ ಉತ್ಪಾದನೆ...

ಯುಪಿ ಚುನಾವಣೆ | ಬಿಜೆಪಿಯ ಹಿಂದುತ್ವದ ಅಸ್ತ್ರಕ್ಕೆ ಎಸ್‌ಪಿ...

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ಕೇವಲ ಕೆಲವೇ ತಿಂಗಳುಗಳು ಬಾಕಿ ಇವೆ. ಆ ರಾಜ್ಯದ ರಾಜಕೀಯ ರಂಗದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ. ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ, ಮಾಜಿ ಮುಖ್ಯಮಂತ್ರಿ...

ಪಾತಾಳ ಸೀಳಿ ಪೈರಾಗಿ ಎದ್ದವನು: ಕನ್ನಡ ಮನಸ್ಸಿನಲ್ಲಿ ಬಲೀಂದ್ರನ...

ಸತ್ಯನಿಷ್ಠೆ, ಮಹೋದಾರತೆ ಮತ್ತು ಶ್ರಮಸಂಸ್ಕೃತಿಯ ಫಲವಂತಿಕೆಯಾಗಿ ಸಾವನ್ನು ಗೆದ್ದು ಜನಮಾನಸದಲ್ಲಿ ನೆಲೆಗೊಂಡಿರುವ ಬಲಿ ಕೇವಲ ಸೋಲಿನ ಸಂಕೇತವಲ್ಲ; ಆತ ಚಾರಿತ್ರಿಕವಾಗಿ ಪ್ರಭುತ್ವದ ವಂಚನೆಯನ್ನು ಬಯಲು ಮಾಡುವ ಜೀವಂತ ಪ್ರತಿರೋಧ. ಊರಿಗೆಲ್ಲ ದೀಪಾವಳಿಯು ಬೆಳಕಿನ ಸಂಭ್ರಮವಾದರೆ,...

PTA ಉತ್ಪಾದನೆಯಲ್ಲಿ ಬಳಸುವ ರಾಸಾಯನಿಕಗಳ ಬಗ್ಗೆ ಗಂಭೀರ ಆತಂಕ: PTA (ಪ್ಯುರಿಫೈಡ್ ಟೆರೆಫ್ತಾಲೂಕ್ ಆಮ್ಲ – Purified Terephthalic Acid) ಉತ್ಪಾದನಾ ಪ್ರಕ್ರಿಯೆಯಲ್ಲಿ ಪ್ಯಾರಾಕ್ಸಿಲೀನ್, ಅಸಿಟಿಕ್ ಆಸಿಡ್ ಹಾಗೂ ಕೋಬಾಲ್ಟ್ ಮತ್ತು ಮ್ಯಾಂಗನೀಸ್ ಆಧಾರಿತ ವೇಗವರ್ಧಕಗಳಂತಹ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಕೆಲವು ರಾಸಾಯನಿಕಗಳು ನಿರ್ದಿಷ್ಟ ಪ್ರಮಾಣದಲ್ಲಿ ಅಥವಾ ನಿರ್ದಿಷ್ಟ ರೀತಿಯ ಸಂಪರ್ಕದಲ್ಲಿ ಮಾನವನ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುವ ಗುಣಲಕ್ಷಣಗಳನ್ನು ಹೊಂದಿವೆ.

ಕೆಲವು ರಾಸಾಯನಿಕಗಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಉಸಿರಾಟದ ತೊಂದರೆ, ಚರ್ಮ ಮತ್ತು ಕಣ್ಣಿನ ಹಾನಿ ಹಾಗೂ ಇತರ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಕೆಲವು ನಿರ್ದಿಷ್ಟ ರಾಸಾಯನಿಕಗಳ ದೀರ್ಘಕಾಲೀನ ಒಡ್ಡಿಕೊಳ್ಳುವಿಕೆ ಕ್ಯಾನ್ಸರ್ ಅಪಾಯಕ್ಕೂ ಸಂಬಂಧಿಸಿರಬಹುದು. ಆದರೆ ಪ್ರಸ್ತುತ ಮನೆಗಳ ಮೇಲೆ ಬಿದ್ದಿರುವ ಕಣಗಳಲ್ಲಿ ಈ ರಾಸಾಯನಿಕಗಳು ಇವೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದ್ದರಿಂದ ಅವುಗಳ ನಿಖರ ಸಂಯೋಜನೆ, ವಿಷಕಾರಿ ಗುಣಲಕ್ಷಣ ಮತ್ತು ಆರೋಗ್ಯದ ಮೇಲಿನ ಪರಿಣಾಮಗಳನ್ನು ತಕ್ಷಣವೇ ವೈಜ್ಞಾನಿಕವಾಗಿ ಪರೀಕ್ಷಿಸುವುದು ಅತ್ಯಗತ್ಯವಾಗಿದೆ.

ಇತ್ತೀಚಿನ ಒಂದು ರಾತ್ರಿಯಲ್ಲಿ ಸಂಭವಿಸಿರುವ ಘಟನೆಯಿಂದ ಮನೆಗಳ ಮೇಲ್ಛಾವಣಿ, ಅಂಗಳ, ಸುತ್ತಮುತ್ತಲಿನ ಪ್ರದೇಶಗಳು ಮತ್ತು ಕುಡಿಯುವ ನೀರಿನ ಬಾವಿಗಳ ಮೇಲೆ ಕಣಗಳು ಬಿದ್ದಿರುವುದಾಗಿ ನಿವಾಸಿಗಳು ತಿಳಿಸಿದ್ದಾರೆ. ಈ ಕಣಗಳು ಕೇವಲ ಸಾಮಾನ್ಯ ಧೂಳೇ ಅಥವಾ ಅಪಾಯಕಾರಿ ರಾಸಾಯನಿಕ ಮಿಶ್ರಣವೇ ಎಂಬುದನ್ನು ನಿರ್ಲಕ್ಷಿಸದೇ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ. ಆದರೆ ಅಧಿಕಾರಿಗಳು ಇಂತಹ ಕಾರ್ಯಕ್ಕೆ ಕೈ ಹಾಕದಿರುವುದ ವಿಪರ್ಯಾಸವೇ ಸರಿ.

ವಿಶೇಷವಾಗಿ ಕುಡಿಯುವ ನೀರಿನ ಬಾವಿಗಳಲ್ಲಿ ಇಂತಹ ಕಣಗಳು ಬಿದ್ದಿದ್ದರೆ, ಅವುಗಳ ಮೂಲಕ ಜನರ ದೇಹಕ್ಕೆ ರಾಸಾಯನಿಕಗಳು ಪ್ರವೇಶಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕಾಗಿದೆ. ತಕ್ಷಣ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸದಿದ್ದರೆ ಸಾರ್ವಜನಿಕ ಆರೋಗ್ಯಕ್ಕೆ ಉಂಟಾಗಬಹುದಾದ ಅಪಾಯದ ಪ್ರಮಾಣವನ್ನು ನಿರ್ಧರಿಸುವುದು ಕೂಡಾ ಕಷ್ಟಸಾಧ್ಯವಾಗುತ್ತವೆ.

Red Category ಕೈಗಾರಿಕಾ ಘಟಕದ ಸುರಕ್ಷತೆ ಪ್ರಶ್ನೆ: ಪೆಟ್ರೋಕೆಮಿಕಲ್ ಕೈಗಾರಿಕೆಗಳು CPCB (ಸೆಂಟ್ರಲ್ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್) ಯ ಕೈಗಾರಿಕಾ ವರ್ಗೀಕರಣದಲ್ಲಿ Red Category ಅಡಿಯಲ್ಲಿ ಬರುತ್ತವೆ. ಇಂತಹ ಘಟಕಗಳಲ್ಲಿ ವಾಯುಮಾಲಿನ್ಯ, ತ್ಯಾಜ್ಯನೀರು, ಅಪಾಯಕಾರಿ ರಾಸಾಯನಿಕಗಳ ನಿರ್ವಹಣೆ ಮತ್ತು ತುರ್ತು ಸುರಕ್ಷತಾ ವ್ಯವಸ್ಥೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ಅಗತ್ಯವಿರುತ್ತದೆ. ಆದರೂ GMPL ಸುತ್ತಮುತ್ತ ಪದೇಪದೇ ಮಾಲಿನ್ಯದ ದೂರುಗಳು ಕೇಳಿಬರುತ್ತಿರುವುದು ಪರಿಸರ ನಿಯಂತ್ರಣ ವ್ಯವಸ್ಥೆಯ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ಹಿನ್ನೆಲೆಯಲ್ಲಿ GMPL ಘಟಕದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಜನವಸತಿ ಪ್ರದೇಶದ ಸುರಕ್ಷತೆಯನ್ನು ಖಚಿತಪಡಿಸಬೇಕೆಂಬ ಪ್ರಮುಖ ಉದ್ದೇಶದೊಂದಿಗೆ ಸ್ಥಳೀಯರು ಹೋರಾಟ ಸಮಿತಿಯನ್ನು ರಚಿಸಿ ನಿರಂತರ ಹೋರಾಟಗಳನ್ನೂ ರೂಪಿಸಿಕೊಂಡು ಬಂದಿವೆ. ಹಾಗಿದ್ದರೂ ಅಧಿಕಾರಿಗಳಿಂದ ಯಾವುದೇ ರೀತಿಯ ಸೂಕ್ತ ಸ್ಪಂದನೆ ಸಿಗದಿರುವುದು ಸ್ಥಳೀಯರನ್ನು ಮತ್ತಷ್ಟು ಆಕ್ರೋಶಬರಿತರನ್ನಾಗಿಸಿದೆ.

3ee799df 80d8 4b43 b8c5 cfcf9a5ff7ab

ಈ ಕುರಿತು ಈದಿನ.ಕಾಮ್ ಜೊತೆಗೆ ಮಾತನಾಡಿದ ನಾಗರಿಕ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸಿರಾಜ್ ಹುಸೈನ್ “ಸರಕಾರವು ಕೈಗಾರಿಕಾ ಸಂಸ್ಥೆಗಳನ್ನು ಆರಂಭಿಸುವ ಮೊದಲು ಅಲ್ಲಿನ ಒಂದು ಪ್ರದೇಶದಲ್ಲಿ ಒಂದು ಕಿ.ಮೀ ವಿಸ್ತೀರ್ಣದಲ್ಲಿ ಗ್ರೀನ್ ಝೋನ್ ನಿರ್ಮಿಸಬೇಕು. ಗ್ರೀನ್ ಝೋನ್ ಇಲ್ಲದೇ ನಿಯಮಗಳನ್ನು ಗಾಳಿಗೆ ತೂರಿ ಕಾರ್ಖಾನೆಗಳನ್ನು ತೆರೆದಿರುವುದರಿಂದ ಈ ರೀತಿಯ ಸಮಸ್ಯೆಗಳು ಉಂಟಾಗಿವೆ. ಶಾಂತಿಗುಡ್ಡೆ ಪ್ರದೇಶದಲ್ಲಿ ಉಂಟಾದ ಸಮಸ್ಯೆಉ ವಿರುದ್ದ ನಾವು ಹೋರಾಟ ಮಾಡಿದಾಗ ಸ್ವತಃ GMPL ಸಂಸ್ಥೆಯವರೂ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದರೆ ಇಲ್ಲಿನ ರಾಜಕಾರಣಿಗಳು, ಜನಪ್ರಧಿನಿಗಳು ಕಂಪೆನಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಇಲ್ಲಿನ ಜನರ ಗೋಳು ಕೇಳುವಂತಾಗಿದೆ. ಸದ್ಯ ಜಿಲ್ಲಾಧಿಕಾರಿಗೆ ನಮ್ಮ ಸಮಸ್ಯೆ ಮನವರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಇತ್ಯರ್ಥಪಡಿಸದಿದ್ದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಲಿದ್ದೇವೆ” ಎಂದು ಹೇಳಿದ್ದಾರೆ‌.

ಜನವಸತಿ ಪ್ರದೇಶದ ಸುರಕ್ಷತೆಯನ್ನು ಖಚಿತಪಡಿಸುವುದು ಆಡಳಿತದ ಜವಾಬ್ದಾರಿಯಾಗಿರುವುದರಿಂದಲೇ ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಈ ಗಂಭೀರ ವಿಚಾರದಲ್ಲಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೇ ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ಜನರ ಆರೋಗ್ಯ, ಕುಡಿಯುವ ನೀರು ಮತ್ತು ಮುಂದಿನ ಪೀಳಿಗೆಯ ಸುರಕ್ಷತೆಯನ್ನು ಬಲಿಕೊಡಬೇಕೇ ? ಎನ್ನುವುದು ಸ್ಥಳಿಯರ ಪ್ರಶ್ನೆಯಾಗಿದೆ.

IMG 20261105 WA0002
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಕ್ಷಿಣ ಕನ್ನಡ | ವಜಾಗೊಂಡ ಮಹಿಳಾ ಗುತ್ತಿಗೆ ಕಾರ್ಮಿಕರೊಂದಿಗೆ ದೀಪಾವಳಿ ಆಚರಿಸಿದ ನಾಗರಿಕ ಹೋರಾಟ ಸಮಿತಿ

ಉದ್ಯೋಗದಿಂದ ವಜಾಗೊಂಡು ಸುರತ್ಕಲ್ ಬಾಳದಲ್ಲಿರುವ HPCL ಬಾರಿಸಿಟ್ಲಿಂಗ್ ಘಟಕದ ಮುಂಭಾಗ 70...

ಚಿಂತಾಮಣಿ |ಪತ್ರಕರ್ತರ ಧ್ವನಿಯಾಗಿ ಅಸ್ಲಾಂ ಪಾಷಾ:ನೂತನ ತಾಲ್ಲೂಕು ಅಧ್ಯಕ್ಷರಿಗೆ ಹಿತೈಷಿಗಳಿಂದ ಗೌರವ ಸನ್ಮಾನ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ...