ಬಿಜೆಪಿ ಕೋಮುದ್ವೇಷದ ಪರಮಾವಧಿ; ಅಕ್ರಮ ವಲಸಿಗರ ʼಕೈದು ಕೇಂದ್ರʼ ಕೈಪಿಡಿಯಲ್ಲಿದೆ ಭಯಾನಕ ಸಂಗತಿ!

Date:

ಭಾರತದ ಆಂತರಿಕ ಭದ್ರತೆ ಮತ್ತು ವಲಸೆ ನೀತಿಯ ಹೆಸರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ದೇಶದ ಪ್ರಜಾಪ್ರಭುತ್ವದ ಆಶಯಗಳನ್ನು ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ತತ್ವಗಳನ್ನು ತೀವ್ರವಾಗಿ ಪರೀಕ್ಷಿಸುತ್ತಿವೆ. ವಿಶೇಷವಾಗಿ, ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುತ್ತೇವೆಂಬ ಹೆಸರಿನಲ್ಲಿ, ಮುಸ್ಲಿಮರ ಮೇಲೆ ತೀವ್ರ ದಾಳಿ, ಕಿರುಕುಳ ನಡೆಯುತ್ತಿದೆ. ಇದೀಗ, ಅನುಮಾನಿತರನ್ನು ಅಥವಾ ಕೇಂದ್ರವೇ ‘ಅಕ್ರಮ ವಲಸಿಗ’ರೆಂದು ಹಣೆಪಟ್ಟಿ ಕಟ್ಟುವವರನ್ನು ಬಂಧಿಸಿಡಲು ದೇಶಾದ್ಯಂತ ‘ಕೈದು ಕೇಂದ್ರಗಳನ್ನು’ (Detention Centres) ಸ್ಥಾಪಿಸಲು ಮುಂದಾಗಿದೆ. ಅದಕ್ಕಾಗಿ, ಕೇಂದ್ರ ಗೃಹ ಸಚಿವಾಲಯವು ‘ಮಾದರಿ ಕೈಪಿಡಿ’ ಹೊರಡಿಸಿದ್ದು, ಅದು) ತೀವ್ರ ಚರ್ಚೆಗೆ ಗ್ರಾಸವಾಗಿದೆ.

- Advertisement -

ಕೇಂದ್ರ ಸರ್ಕಾರದ ನಿರ್ಧಾರ, ಧೋರಣೆ ಹಾಗೂ ಈ ಕೈಪಿಡಿಯನ್ನು ವಿರೋಧ ಪಕ್ಷಗಳು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ವಿರೋಧಿಸಿದ್ದಾರೆ. ಇದು, ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಬಿಜೆಪಿಯ ನಿರ್ದಿಷ್ಟ ರಾಜಕೀಯದ ಕಾರ್ಯಸೂಚಿಯ ಭಾಗವೆಂದು ಟೀಕಿಸುತ್ತಿದ್ದಾರೆ. ಇದು ಮೇಲ್ನೋಟಕ್ಕೆ ದೇಶದಲ್ಲಿ ಕಾನೂನುಬಾಹಿರವಾಗಿ ನೆಲೆಸಿರುವ ವಿದೇಶಿಯರನ್ನು ಗಡೀಪಾರು ಮಾಡುವ ತಾಂತ್ರಿಕ ಪ್ರಕ್ರಿಯೆಯಂತೆ ಕಂಡರೂ, ಇದರ ಆಳದಲ್ಲಿ ಅಡಗಿರುವ ಸಾಮಾಜಿಕ ಮತ್ತು ಮಾನವೀಯ ಆಯಾಮಗಳು ಕಳವಳಕಾರಿಯಾಗಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಯಾವುದೇ ದೇಶಕ್ಕೆ ತನ್ನ ಗಡಿಗಳನ್ನು ರಕ್ಷಿಸಿಕೊಳ್ಳುವ ಮತ್ತು ಅಕ್ರಮ ನುಸುಳುವಿಕೆಯನ್ನು ತಡೆಯುವ ಸಾರ್ವಭೌಮ ಹಕ್ಕಿರುತ್ತದೆ. ಇದನ್ನು ಯಾರೂ ನಿರಾಕರಿಸಲಾಗದು. ಆದರೆ, ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (NRC) ಪ್ರಕ್ರಿಯೆಗಳ ಬೆನ್ನಲ್ಲೇ ಈ ಕೈದು ಕೇಂದ್ರಗಳ ಸ್ಥಾಪನೆಗೆ ವೇಗ ನೀಡಿರುವುದು ಸಾರ್ವಜನಿಕರಲ್ಲಿ ಭೀತಿಯನ್ನು ಸೃಷ್ಟಿಸಿದೆ. ವಿಮರ್ಶಕರ ಪ್ರಕಾರ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಈ ವಿಷಯವನ್ನು ಕೇವಲ ಭದ್ರತೆಯ ದೃಷ್ಟಿಕೋನದಿಂದ ನೋಡದೆ, ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಅನ್ನು ಕ್ರೋಡೀಕರಿಸಲು ಬಳಸಿಕೊಳ್ಳುತ್ತಿದೆ. ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶಿ ಮುಸ್ಲಿಂ ವಲಸಿಗರನ್ನು ದೇಶದ ಭದ್ರತೆಗೆ ಇರುವ ಏಕೈಕ ಆಪತ್ತು ಎಂಬಂತೆ ಬಿಂಬಿಸುವ ಮೂಲಕ ಸಮಾಜದಲ್ಲಿ ಧ್ರುವೀಕರಣದ ರಾಜಕಾರಣವನ್ನು ಪ್ರಚೋದಿಸುತ್ತಿದೆ. ಭಾರತೀಯ ಮುಸ್ಲಿಮರಿಗೆ ರೋಹಿಂಗ್ಯಾ ಅಥವಾ ಬಾಂಗ್ಲಾದೇಶಿಗಳೆಂದು ಹಣೆಪಟ್ಟಿ ಕಟ್ಟಿ, ಈ ಬಂಧನ ಕೇಂದ್ರಗಳಿಗೆ ದೂಡುವ ಹುನ್ನಾರವೂ ಇದೆ.

ಯಾಕೆಂದರೆ, ಭಾರತದಲ್ಲಿ ಜನಿಸಿದ, ಆದರೆ ಅನಕ್ಷರತೆ ಅಥವಾ ಬಡತನದ ಕಾರಣದಿಂದಾಗಿ ತಲೆಮಾರುಗಳ ಹಿಂದಿನ ಜನನ ಪ್ರಮಾಣಪತ್ರಗಳಂತಹ ಸೂಕ್ತ ದಾಖಲೆಗಳನ್ನು ಈ ದೇಶದ ಲಕ್ಷಾಂತರ ಬಡ ನಾಗರಿಕರು, ವಿಶೇಷವಾಗಿ ಗ್ರಾಮೀಣ ಭಾಗದ ಮುಸ್ಲಿಮರು ಮತ್ತು ಹಿಂದುಳಿದ ವರ್ಗಗಳ ಜನರು ಹೊಂದಿಲ್ಲ. ಅವರೆಲ್ಲರೂ ಈ ಪ್ರಕ್ರಿಯೆಯ ಸುಳಿಗೆ ಸಿಲುಕಿ ಕಿರುಕುಳ ಅನುಭವಿಸುವ ದೊಡ್ಡ ಅಪಾಯವಿದೆ.

ಕೇಂದ್ರ ಸರ್ಕಾರದ ‘ಕೈಪಿಡಿ’ ಮತ್ತು 30 ದಿನಗಳ ಕಠಿಣ ನಿರ್ದೇಶನ

ಕೇಂದ್ರ ಗೃಹ ಸಚಿವಾಲಯವು ‘ಮಾದರಿ ಕೈದು ಕೇಂದ್ರಗಳ ಕೈಪಿಡಿ’ಯನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಿದೆ. ಇದು, ಕೈದು ಕೇಂದ್ರಗಳ ನಿರ್ವಹಣೆ ಮತ್ತು ಕಾರ್ಯಾಚರಣೆಯ ಸಂಪೂರ್ಣ ನಿಯಮಾವಳಿಗಳನ್ನು ಒಳಗೊಂಡಿದೆ. ಈ ಕೈಪಿಡಿಯ ಅತ್ಯಂತ ಪ್ರಮುಖ ಮತ್ತು ಕಠಿಣವಾದ ನಿರ್ದೇಶನವೆಂದರೆ—ಅಕ್ರಮ ವಲಸಿಗರು ಅಥವಾ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ ಕೈದು ಮಾಡಿದ 30 ದಿನಗಳ ಒಳಗಾಗಿ ಅವರನ್ನು ಅವರ ತಾಯ್ನಾಡಿಗೆ ವಾಪಸ್ ಕಳುಹಿಸುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರಗಳು ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.

ಆದರೆ, ಪ್ರಾಯೋಗಿಕವಾಗಿ ಇದು ಅತ್ಯಂತ ಜಟಿಲವಾದ ಪ್ರಕ್ರಿಯೆಯಾಗಿದೆ. ಏಕೆಂದರೆ, ಒಬ್ಬ ವ್ಯಕ್ತಿಯನ್ನು ಕಾನೂನುಬಾಹಿರ ವಲಸಿಗ ಎಂದು ಘೋಷಿಸಿದ ತಕ್ಷಣ ಆತನನ್ನು ಬೇರೆ ದೇಶಕ್ಕೆ ಕಳುಹಿಸಲು ಸಾಧ್ಯವಿಲ್ಲ. ಯಾಕೆಂದರೆ, ಮೊದಲಿಗೆ, ಬಂಧಿತರು ಭಾರತೀಯರಲ್ಲ ಎಂಬುದನ್ನು ಸರ್ಕಾರಗಳು ಸಾಬೀತು ಮಾಡಬೇಕು. ನಂತರ, ಸಂಬಂಧಪಟ್ಟ ದೇಶದ ರಾಯಭಾರ ಕಚೇರಿಯು ಆ ವ್ಯಕ್ತಿ ತಮ್ಮ ದೇಶದ ಪ್ರಜೆ ಹೌದೇ/ಇಲ್ಲವೇ ಎಂಬುದನ್ನು ಪರಿಶೀಲಿಸಿ, ಒಪ್ಪಿಗೆ ನೀಡಬೇಕಾಗುತ್ತದೆ. ಈ ರಾಷ್ಟ್ರೀಯತೆ ದೃಢೀಕರಣದ ಪ್ರಕ್ರಿಯೆಯು ಹಲವು ತಿಂಗಳುಗಳು ಅಥವಾ ವರ್ಷಗಳ ಕಾಲ ತೆಗೆದುಕೊಳ್ಳುತ್ತದೆ. ಆ ದೀರ್ಘಾವಧಿ ಕಾಲ ಬಂಧಿತರು ಜೈಲು ಕಂಬಿಗಳ ಹಿಂದೆ ಕೊಳೆಯಬೇಕಾಗುತ್ತದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಗೆ ದಾರಿ ಮಾಡಿಕೊಡಬಹುದು ಎಂಬ ಆತಂಕ ತಜ್ಞರಲ್ಲಿದೆ.

 ಕೈದು ಕೇಂದ್ರಗಳು ಮತ್ತು ದೌರ್ಜನ್ಯ

ಕೇಂದ್ರ ಸರ್ಕಾರದ ಕೈಪಿಡಿಯ ಪ್ರಕಾರವೇ ಕೈದು ಕೇಂದ್ರಗಳನ್ನು ನಿರ್ಮಿಸಲು ಸೂಚಿಸಲಾಗಿದೆ. ಹಾಗೆ ನೋಡಿದರೆ, ಈ ಹಿಂದೆ ಅಕ್ರಮ ವಲಸಿಗರನ್ನು ಸಾಮಾನ್ಯ ಕಾರಾಗೃಹಗಳಲ್ಲೇ ಇರಿಸಲಾಗುತ್ತಿತ್ತು. ಆದರೆ, ಹೊಸ ನಿಯಮದ ಪ್ರಕಾರ, ಈ ಕೈದು ಕೇಂದ್ರಗಳನ್ನು ಸಾಮಾನ್ಯ ಜೈಲಿನ ಆವರಣದಿಂದ ಸಂಪೂರ್ಣವಾಗಿ ಹೊರಗೆ, ಪ್ರತ್ಯೇಕ ಜಾಗದಲ್ಲಿ ನಿರ್ಮಿಸಲಾಗುತ್ತಿದೆ.

ಈ ಕೇಂದ್ರಗಳಲ್ಲಿ ಸಾಮಾನ್ಯ ಜೈಲುಗಳಿಗಿಂತಲೂ ಭಾರೀ ಕಣ್ಗಾವಲು ಮತ್ತು ಭದ್ರತೆ ಇರಲಿದೆ. ಕೇಂದ್ರದ ಸುತ್ತಲೂ ಕನಿಷ್ಠ 10 ಅಡಿ ಎತ್ತರದ ಬಲಿಷ್ಠ ಗಡಿ ಗೋಡೆಗಳು, ಅದರ ಮೇಲೆ ದಟ್ಟವಾದ ಮುಳ್ಳುತಂತಿಯ ಬೇಲಿ, ಸಿಸಿ ಕ್ಯಾಮೆರಾಗಳು ಹಾಗೂ ದಿನದ 24 ಗಂಟೆಯೂ ಶಸ್ತ್ರಸಜ್ಜಿತ ಸಶಸ್ತ್ರ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ಅಧಿಕಾರಿಗಳ ಅನುಮತಿಯಿಲ್ಲದೆ, ಬಂಧಿತರು ಎಲ್ಲಿಯೂ ಸುಳಿದಾಡಂತೆ ನಿರ್ಬಂಧ ಹೇರಲಾಗುತ್ತದೆ.

ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಗಮನಿಸಿ: ನಿಮ್ಮ ಗ್ಯಾರಂಟಿ ಯೋಜನೆ, ಸರ್ಕಾರಿ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತದೆ ‘ಎಸ್‌ಐಆರ್’

ಈಗಾಗಲೇ, ಈ ಬಂಧನ ಕೇಂದ್ರಗಳು ಅಸ್ಸಾಂನಲ್ಲಿ ಕಾರ್ಯನಿರ್ವಹಿಸುತ್ತಿವೆ. ಫಾರಿನರ್ಸ್ ಟ್ರಿಬ್ಯೂನಲ್‌’ನ ತಾಂತ್ರಿಕ ದೋಷದ ಕಾರಣದಿಂದಾಗಿ ಸುಮಿ ಗೋಸ್ವಾಮಿ ಎಂಬವರನ್ನು 2023ರಲ್ಲಿ ಅಸ್ಸಾಂನ ಗೋಲ್‌ಪಾರಾ ಜಿಲ್ಲೆಯ ಮಾಟಿಯಾ ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು. ಸುಮಾರು ಮೂರು ದಿನಗಳ ಕಾಲ ಬಂಧನ ಕೇಂದ್ರದಲ್ಲಿದ್ದ ಆಕೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಬಂಧನ ಕೇಂದ್ರದಿಂದ ಹೊರಬಂದ ಆಕೆ, ತಾವು ನೋಡಿದ ಮತ್ತು ಅನುಭವಿಸಿದ ಭಯಾನಕತೆಯನ್ನು ಬಿಚ್ಚಿಟ್ಟಿದ್ದರು. ಅವರು ಹೇಳುವಂತೆ; “ಒಂದು ಸೆಲ್‌ನಲ್ಲಿ ಸುಮಾರು 14 ರಿಂದ 15 ಜನರಿದ್ದರು. ಒಂದು ಅಟ್ಯಾಚ್ಡ್ ಬಾತ್ರೂಮ್ ಇತ್ತು. ನಾನು ಅಲ್ಲಿಗೆ ಹೋದ ಮೊದಲ ದಿನ, ಸ್ನಾನಗೃಹಗಳ ಬಾಗಿಲುಗಳು ಅರ್ಧ ಮಾತ್ರ ನಿರ್ಮಿಸಲ್ಪಟ್ಟಿರುವುದನ್ನು ನೋಡಿ, ಆಶ್ಚರ್ಯವಾಯಿತು. ಅಲ್ಲಿ ನಿಮ್ಮ ಮುಖವನ್ನು ಹೊರಗಿನಿಂದ ನೋಡಬಹುದು. ಒಬ್ಬ ಅಧಿಕಾರಿಯನ್ನು ಕೇಳಿದಾಗ, ಕೈದಿಗಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಿರ್ಬಂಧಿಸಲು ಆ ರೀತಿಯಲ್ಲಿ ನಿರ್ಮಿಸಲಾಗಿದೆ ಎಂದರು.  ಸ್ನಾನಗೃಹದಲ್ಲಿ ದುರ್ವಾಸನೆ ಬರುತ್ತಿತ್ತು. ಅಲ್ಲಿ ವಾಸಿಸುವುದು ಅಸಹನೀಯವಾಗಿದೆ. ನನಗೆ ಸತತ ಎರಡು ರಾತ್ರಿ ನಿದ್ರೆ ಬರಲಿಲ್ಲ. ನಾನು ಇಡೀ ರಾತ್ರಿ ಕುಳಿತಿದ್ದೆ. ಅವರು ನನಗೆ ಒದಗಿಸಿದ ಹಾಸಿಗೆಯಂತಿರುವ ವಸ್ತುಗಳನ್ನು ನಾನು ನನ್ನ ಜೀವನದಲ್ಲಿ ಎಂದೂ ಬಳಕೆ ಮಾಡಿರಲಿಲ್ಲ. ಅಷ್ಟು ಕಳಪೆಯಾಗಿತ್ತು” ಎಂದು ಹೇಳಿದ್ದರು.

 “ನಾನಿದ್ದ ಸೆಲ್‌ನಲ್ಲಿ ಮತ್ತೊಬ್ಬ ಮಹಿಳೆ ಇದ್ದರು. ಆಕೆ ಹತ್ತು ವರ್ಷಗಳಿಂದ ಅಲ್ಲಿರುವುದಾಗಿ ಹೇಳಿದಾಗ ನನಗೆ ಆಘಾತವಾಯಿತು. ನಾನು ಅಲ್ಲಿ ಶಾಶ್ವತವಾಗಿ ವಾಸಿಸಬೇಕಾದರೆ ನಾನು ಜೀವಂತವಾಗಿರಲು ಸಾಧ್ಯವೇ ಇಲ್ಲ. ಎಲ್ಲ ಬಂಧಿತರು ಕೆಳದರ್ಜೆಯ ಪರಿಸ್ಥಿತಿಗಳಲ್ಲಿ ಬದುಕುತ್ತಿದ್ದಾರೆ. ಲೈಂಗಿಕ ದೌರ್ಜನ್ಯ ಮತ್ತು ಬಲವಂತದ ಗರ್ಭಪಾತ ಸೇರಿದಂತೆ ಮಹಿಳೆಯರು ಇನ್ನೂ ಕೆಟ್ಟ ಪರಿಸ್ಥಿತಿಗಳನ್ನು ಅನುಭವಿಸುತ್ತಾರೆ” ಎಂದು ಬಂಧನ ಕೇಂದ್ರಗಳ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.

ಅಂತಹ ಬಂಧನ ಕೇಂದ್ರಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಬೇರ್ಪಡಿಸಿ ಇರಿಸಲಾಗುತ್ತಿತ್ತು. ಇದರಿಂದ, ಕುಟುಂಬಗಳು ಛಿದ್ರವಾಗುತ್ತಿದ್ದವು. ಈಗಿನ ಪೈಪಿಡಿಯಲ್ಲಿ ಕೆಲವು ಮಾರ್ಪಾಡುಗಳಿದ್ದು, ಲಿಂಗಾಧಾರಿತವಾಗಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಬ್ಲಾಕ್‌ಗಳನ್ನು ನಿರ್ಮಿಸಲಾಗುತ್ತದೆ. ಜೊತೆಗೆ, ಒಂದೇ ಕುಟುಂಬದ ಸದಸ್ಯರನ್ನು ಒಟ್ಟಿಗೆ ಒಂದೇ ಕೇಂದ್ರದಲ್ಲಿ ಇರಿಸಲು ವ್ಯವಸ್ಥೆ ಇರಲಿದೆ ಎಂದು ತಿಳಿಸಿದೆ.

ಕೈಪಿಡಿಯಲ್ಲಿ, ಮಾನವ ಘನತೆಗೆ ತಕ್ಕಂತೆ ಬದುಕಲು ಅಗತ್ಯವಿರುವ ಗಾಳಿ, ಬೆಳಕಿನ ವ್ಯವಸ್ಥೆ ಇರುವ ಕೊಠಡಿಗಳು, ಶುದ್ಧ ಕುಡಿಯುವ ನೀರು, ಶೌಚಾಲಯ ಮತ್ತು ವಿದ್ಯುತ್ ಸೌಲಭ್ಯ ಇರಬೇಕು. ಮಕ್ಕಳಿಗಾಗಿ ಶಿಶುಪಾಲನಾ ಕೇಂದ್ರ ಮತ್ತು ಸ್ಥಳೀಯ ಶಾಲೆಗಳ ನೆರವಿನಿಂದ ಪ್ರಾಥಮಿಕ ಶಿಕ್ಷಣದ ಸೌಲಭ್ಯ ಒದಗಿಸಬೇಕು ಎಂದು ಹೇಳಲಾಗಿದೆ. ಆದರೆ, ಪ್ರಸ್ತುತ ದೇಶದ ಜೈಲುಗಳ ಪರಿಸ್ಥಿತಿ ನೋಡಿದರೆ, ದೇಶದ ಪ್ರಜೆಗಳೆಂದು ಗುರುತಿಸಿದವರನ್ನೇ ಸರ್ಕಾರಗಳು ಹೀನಾಯವಾಗಿ ನಡೆಸಿಕೊಳ್ಳುತ್ತವೆ. ಹೀಗಿರುವಾಗಿ, ಅಕ್ರಮ ವಲಸಿಗರೆಂದು ಹಣೆಪಟ್ಟಿ ಕಟ್ಟಿ, ಬಂಧಿಸುವವರಿಗೂ ಈ ಸೌಲಭ್ಯಗಳು ಲಭಿಸಲು ಸಾಧ್ಯವೇ ಎಂಬ ವಾಸ್ತವತೆ ಕಣ್ಣ ಮುಂದಿದೆ. ಜೊತೆಗೆ, ಪೊಲೀಸರಿಗೆ ಸಿಗುವ ಮಿತಿಯಿಲ್ಲದ ಅಧಿಕಾರವು ಸಾಮಾನ್ಯ ಜನರ ಮೇಲಿನ ದೌರ್ಜನ್ಯಕ್ಕೆ ಕಾರಣವಾಗಬಹುದು ಎಂದು ಮಾನವ ಹಕ್ಕು ಹೋರಾಟಗಾರರು ಅತಂಕ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರವು ಎಸ್‌ಐಆರ್ ಮೂಲಕ ಎನ್‌ಅರ್‌ಸಿಯನ್ನು ಹಿಂಬಾಗಿಲಿನಿಂದ ಜಾರಿಗೊಳಿಸುತ್ತಿದೆ. ಮೊದಲು ಜನರನ್ನು ಮತಪಟ್ಟಿಯಿಂದ ಹೊರಹಾಕಿ, ಬಳಿಕ ಅವರನ್ನು ದೇಶದ ಪೌರರೇ ಅಲ್ಲವೆಂದು ಹಣೆಪಟ್ಟಿ ಕಟ್ಟುತ್ತದೆ. ಬಳಿಕ, ಅವರನ್ನು ಈ ಕೈದು ಕೇಂದ್ರಗಳಿಗೆ ದೂಡಿ, ಹಿಂಸಿಸುತ್ತದೆ. ಈ ದೌರ್ಜನ್ಯಕ್ಕೆ ಮೊದಲಿಗೆ ಬಲಿಯಾಗುವವರ ಮುಸ್ಲಿಮರೇ ಆದರೂ, ಅವರ ಜೊತೆಗೆ, ಬಡವರು, ದಲಿತರು ಸೇರಿದಂತೆ ತಳಸಮುದಾಯಗಳ ಜನರೂ ತುತ್ತಾಗಲಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿಯಲ್ಲಿ ಅ.30ರಿಂದ ನ.1ರವರೆಗೆ ಎಸ್‌ಎಫ್‌ಐ ರಾಜ್ಯ ಸಮ್ಮೇಳನ

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಸಮ್ಮೇಳನವು...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...