ಕಾನ್‌ ಸಿನಿಮೋತ್ಸವ | ಸ್ಪರ್ಧಾತ್ಮಕ ಚಿತ್ರಗಳ ಪ್ರದರ್ಶನದೊಂದಿಗೆ ಚಿತ್ರಹಬ್ಬ ಕಳೆಗಟ್ಟುತ್ತಿದೆ

Date:

ಸ್ಪರ್ಧಾತ್ಮಕ ಚಿತ್ರಗಳಲ್ಲದೆ ತನ್ನ ವಿಶೇಷ ಕ್ಲಾಸಿಕ್‌ ಚಿತ್ರಗಳ ಪ್ರದರ್ಶನದಿಂದ ಈ ವರ್ಷದ ಚಿತ್ರೋತ್ಸವ ಎಲ್ಲರ ಗಮನ ಸೆಳೆದಿದೆ. ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ನಡೆಯಲಿರುವ ಚಿತ್ರೋತ್ಸವಗಳಲ್ಲಿ ಭಾಗಿಯಾಗುವ ಚಿತ್ರಗಳ ಪರಿಚಯ, ಈ ಚಿತ್ರೋತ್ಸವದಲ್ಲಿ ಆಗಲಿದೆ. ಮೇ 12ರಂದು ಆರಂಭವಾದ ಚಿತ್ರೋತ್ಸವ ಮೇ 23ರವರೆಗೆ ನಡೆಯಲಿದೆ.

- Advertisement -

ಜಗತ್ತಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಒಂದಾದ ಕಾನ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಿನ್ನೆ (ಮೇ ೧೨) ತೆರೆ ಮೇಲೆದ್ದಿದೆ. ಹನ್ನೊಂದು ದಿನಗಳ ಕಾಲ ನಡೆಯಲಿರುವ ದೃಶ್ಯೋತ್ಸವ ಜಗತ್ತಿನ ಚಲನಚಿತ್ರ ಮಾಧ್ಯಮದ ಎಲ್ಲರ ಗಮನ ಸೆಳೆಯುತ್ತಿದೆ. ಒಂದರ್ಥದಲ್ಲಿ ಇದು ಒಂದು ಸಾಂಸ್ಕೃತಿಕ ಹಬ್ಬವೆಂದೇ ಪರಿಗಣಿಸಬಹುದು. ಇದು ಕಾನ್ ನ ಎಪ್ಪತೊಂಭತ್ತನೇ ಚಿತ್ರೋತ್ಸವ. ಈ ತಿಂಗಳ 23ರವರೆಗೆ ನಡೆಯಲಿದೆ. ಜಗತ್ತಿನ ಎಲ್ಲ ರಾಷ್ಟ್ರಗಳ ಚಿತ್ರೋದ್ಯಮದ ಗಣ್ಯರು, ಈಗಾಗಲೇ ಫ್ರೆಂಚ್‌ ರಿವೇರಾದ ಕಾನ್ಸ್‌ ನಲ್ಲಿ ಬಂದು ಸೇರಿದ್ದಾರೆ. ಎಂದಿನಂತೆ ಕೆಂಪು ಹಾಸಿನ ಸ್ವಾಗತಕ್ಕೆ ಕಾನ್‌ ಸಿದ್ಧವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಈ ಬಾರಿ ದಕ್ಷಿಣ ಕೊರಿಯಾದ ಚಿತ್ರ ನಿರ್ದೇಶಕ ಪಾರ್ಕ್-ಚಾನ್-ವುಕ್‌ ತೀರ್ಪುಗಾರರ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇವರ ಜೊತೆಯಲ್ಲಿ ಡೆಮಿ ಮೂರ್‌, ಖ್ಲೋ ಝಾವೋ, ಸ್ಟೆಲ್ಲನೆ ಸ್ಕರ್ಸ್ಗಾರ್ಡ್‌ ತೀರ್ಪಗಾರರ ಸಮಿತಿಯ ಸದಸ್ಯರಾಗಿರುತ್ತಾರೆ. ಫ್ರೆಂಚ್‌ ಚಲನಚಿತ್ರ ನಿರ್ದೇಶಕ ಪಿಯರೆ ಸಾಲ್ವದೋರಿ ಅವರ Electric Kiss ಈ ಚಿತ್ರೋತ್ಸದ ಉದ್ಘಾಟನಾ ಚಿತ್ರವಾಗಲಿದೆ. ಸ್ಪರ್ಧಾತ್ಮಕ ಚಿತ್ರಗಳ ಪ್ರದರ್ಶನದೊಂದಿಗೆ ಚಿತ್ರೋತ್ಸವ ಆರಂಭವಾಗಲಿದೆ. ಈ ಬಾರಿ ಹಿರೋಕಾಲು ಕೋರೆ-ಎದಾ ಹಾಗೂ ಕ್ರಿಶ್ಚಿಯನ್‌ ಮುಂಗು ಅವರ ಚಿತ್ರಗಳು ಸೇರಿದಂತೆ 22 ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಈ ಬಾರಿಯ ಚಿತ್ರೋತ್ಸವದಲ್ಲಿ ಪೀಟರ್‌ ಜಾಕ್ಸನ್‌ ಮತ್ತು ಬಾರ್ಬರಾ ಸ್ತ್ರಿಸಾಂದ್‌ ಅವರನ್ನು ಗೌರವಿಸಲಾಗುತ್ತಿದೆ. ಈ ಚಿತ್ರೋತ್ಸದಲ್ಲಿ ಸುಮಾರು 15,000 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಎಂದು ಚಿತ್ರೋತ್ಸವ ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

park
ತೀರ್ಪುಗಾರರ ಸಮಿತಿಯ ಅಧ್ಯಕ್ಷ ಪಾರ್ಕ್-ಚಾನ್-ವುಕ್‌

ಈ ಬಾರಿ ಪ್ರದರ್ಶನಗೊಳ್ಳಲಿರುವ Electrical Kiss ಯುವ ಚಿತ್ರಕಾರನೊಬ್ಬನನ್ನು ಕುರಿತಾದದ್ದು. 1928ರಲ್ಲಿ ಪ್ಯಾರಿಸ್ ನಲ್ಲಿ ಬದುಕಿದ ಆಂತೋಯಿನೆ ಬಾಲೆಸ್ತ್ರೋ ತನ್ನ ಪತ್ನಿಯನ್ನು ಕಳೆದುಕೊಂಡ ನಂತರ ಚಿತ್ರಗಳನ್ನು ರಚಿಸಲಾಗದ ಸ್ಥಿತಿ ತಲುಪಿದ್ದಾನೆ. ಇಂಥ ಮನಸ್ಥಿತಿಯಲ್ಲಿರುವಾಗಲೇ, ಸುಷುಪ್ತ ಸ್ಥಿತಿಯಲ್ಲಿ ತನ್ನ ಪತ್ನಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾನೆ. ಆದರೆ, ವಾಸ್ತವದಲ್ಲಿ ತನ್ನ ಮನೆಯಲ್ಲಿ ಆಹಾರ ಕದಿಯಲು ಬಂದಿದ್ದ ಸುಝಾನೆ ಎಂಬ ಕೆಲಸಗಾರ್ತಿಯೊಂದಿಗೆ ಸಂವಾದಿಸುತ್ತಿರುತ್ತಾನೆ. ಆಂತೋನಿ ಈ ಸಂವಾದದಿಂದ ಚೇತರಿಸಿಕೊಳ್ಳುತ್ತಾನೆ. ಆದರೆ ತನ್ನನ್ನು ಬಳಸಿಕೊಳ್ಳುತ್ತಿರುವ ಸುಝಾನೆಯ ಪ್ರೀತಿಯಲ್ಲಿ ಬೀಳುತ್ತಾನೆ. ಈ ಚಿತ್ರ ಈ ಬಾರಿಯ ಕಾನ್‌ ಚಿತ್ರೋತ್ಸವದಲ್ಲಿ ಎಲ್ಲರ ಗಮನ ಸೆಳೆದಿದೆ. ಇವಲ್ಲದೆ The Man I Love ಹಾಗೂ Father land ಚಿತ್ರಗಳಿಗಾಗಿ ಪ್ರೇಕ್ಷಕರು ನಿರೀಕ್ಷಿಸುತ್ತಿದ್ದಾರೆ.

ಇದರೊಂದಿಗೆ ಪೆದ್ರೋ ಅಲ್ಮದೋವೋರ್‌ ಅವರ Bitter Christmas  ಅಸ್ಗರ್‌ ಫರ್ಹಾದಿ ಅವರ Parallel Tales ಹಿರೋಕಾಲು ಕೋರೆ-ಎದಾ  ಅವರ Sheep in the Box  ಪಾವೋಲ್‌ ಪಾವ್ಲಿಕೋವಸ್ಕಿ ಅವರ Father Land ಕ್ರಿಶ್ಚಿಯನ್‌ ಮುಂಗಿಯು, ಹಮಾಗಾಚಿ ಹಾಗೂ ಇರಾ ಸ್ಯಾಚೆಸ್‌ ಅವರ ಚಿತ್ರಗಳು, ಈ ವರ್ಷದ ಪ್ರಮುಖ ಆಕರ್ಷಣೆ. ಅಲ್ಲದೆ, ಈ ಬಾರಿ ಅಂತಾರಾಷ್ಟ್ರೀಯ ಹಾಗೂ ಕಲಾತ್ಮಕ ವರ್ಗದ ಪ್ರೇಕ್ಷಕರನ್ನು ಆಕರ್ಷಿಸುವ ಚಿತ್ರಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ. ಇತ್ತೀಚೆಗೆ ಕೇಳಿಬರುತ್ತಿರುವ ಟೀಕೆಗಳ ಹಿನ್ನೆಲೆಯಲ್ಲಿ ಹಾಲಿವುಡ್ ನ ಮೇಲೆ ಕಡಿಮೆ ಒತ್ತು ನೀಡಲಾಗುತ್ತಿದೆ. ಕಲಾತ್ಮಕ ಮತ್ತು ಪ್ರಯೋಗಾತ್ಮಕ ಚಿತ್ರಗಳ ಮೇಲೆ ಒತ್ತು ನೀಡಲಾಗುತ್ತಿದೆ.

ಸ್ಪರ್ಧಾತ್ಮಕ ಚಿತ್ರಗಳಲ್ಲದೆ ತನ್ನ ವಿಶೇಷ ಕ್ಲಾಸಿಕ್‌ ಚಿತ್ರಗಳ ಪ್ರದರ್ಶನದಿಂದ ಈ ವರ್ಷದ ಚಿತ್ರೋತ್ಸವ ಎಲ್ಲರ ಗಮನ ಸೆಳೆದಿದೆ. ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ನಡೆಯಲಿರುವ ಚಿತ್ರೋತ್ಸವಗಳಲ್ಲಿ ಭಾಗಿಯಾಗುವ ಚಿತ್ರಗಳ ಪರಿಚಯ, ಈ ಚಿತ್ರೋತ್ಸವದಲ್ಲಿ ಆಗಲಿದೆ.

ಒಂದು ಸಂಗತಿಯಂತೂ ನಿಜ. The Festival de Cannes  ಎಂದು ಇಲ್ಲಿ ಗುರುತಿಸುವ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಒಂದು ರೀತಿಯಲ್ಲಿ ಸಾಂಸ್ಕೃತಿಕ ಹಬ್ಬ ಹಾಗೂ ಸಿನಿಮಾ ಸಂತೆ. ಸಿನಿಮಾಗಳನ್ನು ನಿರ್ಮಿಸುವ ದೇಶಗಳಿಗೆ ಇದೊಂದು ರೀತಿಯಲ್ಲಿ ಸಿನಿಮಾ ಕಾಶಿ. ಈ ಚಿತ್ರೋತ್ಸವ ಆರಂಭವಾದದ್ದು 1946ರಲ್ಲಿ. ಅಂದರೆ ಆ ವರ್ಷ official ಆಗಿ ಚಿತ್ರೋತ್ಸವ ಆರಂಭವಾಯಿತು. ಆದರೆ, ಇಂಥ ಚಿತ್ರೋತ್ಸವವೊಂದರ ಬೀಜ ಹುಟ್ಟುಹಾಕಿದ್ದು 1938ರಲ್ಲಿ. 1938ರ ಜುಲೈನಲ್ಲಿ ವೆನಿಸ್‌ ಮೋಸ್ತ್ರದಲ್ಲಿ ಮೊದಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಯಿತು. ಆ ವರ್ಷದ ಚಿತ್ರೋತ್ಸವ ಮಹಾಯುದ್ಧಪೂರ್ವದಲ್ಲಿ ವಿಶ್ವದ ಸಿನಿಮಾ ನಿರ್ಮಿಸುವ ದೇಶಗಳು ಒಟ್ಟಾಗಿ ಚಿತ್ರೋತ್ಸವವನ್ನು ಹಮ್ಮಿಕೊಂಡಿದ್ದವು. ಆ ವರ್ಷ ಫ್ರಾನ್ಸ್‌ ಸಾಕಷ್ಟು ಚಿತ್ರಗಳನ್ನು ಪ್ರದರ್ಶಿಸಿತು. ಆ ವರ್ಷದ ತೀರ್ಪುಗಾರರ ಮುಖ್ಯಸ್ಥರಾಗಿದ್ದವರು ಫಿಲಿಪ್‌ ಎರ್ಲಾಂಗರ್.‌ ತೀರ್ಪುಗಾರರು ಸರ್ವಾನುಮತದಿಂದ ಅಮೆರಿಕನ್‌ ಚಿತ್ರವೊಂದನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರು. ಆದರೆ, ಆಗ ಹಿಟ್ಲರ್ ನ ಒತ್ತಾಯಕ್ಕೆ ಮಣಿದು, ಲೆನಿ ರಿಫೆನ್ಸ್ಥಾಲ್‌ ಅವರ propaganda ಚಿತ್ರವಾದ ಒಲಂಪಿಯಾ ಮತ್ತು, ಇಟಲಿಯ Luciano Serŗa Pilot ಚಿತ್ರಗಳು ಪ್ರಶಸ್ತಿಗಳನ್ನು “ಗೆದ್ದುಕೊಂಡವು” ಎನ್ನಬಹುದು. ಇದರಿಂದಾಗಿ ಪ್ರಜಾಪ್ರಭುತ್ವ ದೇಶಗಳಾದ ಫ್ರಾನ್ಸ್‌, ಅಮೆರಿಕ ಹಾಗಿ ಬ್ರಿಟನ್‌ ಮೋಸ್ತ್ರಾದಿಂದ ಹೊರಬಂದವು. ಚಿತ್ರೋತ್ಸವದ ಕೊನೆಯ ದಿನದಂದು ರೈಲಿನಲ್ಲಿ ಪ್ರಾನ್ಸ್ ಗೆ ಹಿಂದಿರುಗುತ್ತಿದ್ದ Phillippe Erlanger ಮೋಸ್ತ್ರಾದಿಂದ ದೂರಬಂದು ರಾಜಕೀಯ ಒತ್ತಡಗಳಿಂದ ಹೊರತಾದ, ಯಾವುದೇ ಪ್ರಭಾವಕ್ಕೆ ಬಗ್ಗದ್ ದೃಶ್ಯ ಸಂಸ್ಕೃತಿಗೆ ಧಕ್ಕೆ ಬಾರದ ರೀತಿಯಲ್ಲಿ ಚಿತ್ರೋತ್ಸವವೊಂದನ್ನು ಸಂಘಟಿಸುವ ತೀರ್ಮಾನ ತೆಗೆದುಕೊಂಡು. ಆಗ ಹೆಚ್ಚಿನ ಮಂದಿ ಆಸಕ್ತಿ ತೋರಲಿಲ್ಲವಾದರೂ, ಫ್ರೆಂಚ್‌ ಚಿತ್ರೋತ್ಸವ ಈ ಹೊಣೆಯನ್ನು ಹೊರಲು ಮುಂದಾಯಿತು. ಆಗ ನಡೆದದ್ದೇ ಈ ಕಾನ್‌ ಚಿತ್ರೋತ್ಸವ. ಮೊದಲ ಚಿತ್ರೋತ್ಸವ ನಡೆದದ್ದು Municipal Casinoವೊಂದರ ಹಾಲ್‌ ನಲ್ಲಿ. ಆಗ ಅದರ ನೇತೃತ್ವ ವಹಿಸಿದವರು ಸಿನಿಮಾಟೋಗ್ರಫಿಯ ಪಿತಾಮಹ ಲೂಯಿಸ್‌ ಲ್ಯೂಮಿಯೇರೆ. ಈ ಉತ್ಸವ Georges Huisman ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

the man i love
The Man I Love ದೃಶ್ಯ

ಈಗ ಭಾರತದಲ್ಲಿ ರಾಜಕೀಯ ಪ್ರೇರಿತ ಹಾಗೂ, Propaganda ಚಿತ್ರಗಳಿಗೆ ಮಣೆ ಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಮಲೆತು ನಿಂತಿರುವ ಕೇರಳ ಸರ್ಕಾರ ಮಾತ್ರ ಯಾವ ರಾಜಕೀಯ ಪ್ರಭಾವ ಮತ್ತು ಪ್ರಜಾಸತ್ತಾತ್ಮಕ ಧೋರಣೆಗಳಿಗೆ ಬದ್ಧವಾದ ಚಿತ್ರೋತ್ಸವ ನಡೆಸುತ್ತಿದೆ ಎಂದು ಹೇಳಬಹುದು. ಈ ಮಾದರಿಯನ್ನು ಮತ್ತೆ ಕೆಲವು ರಾಜ್ಯಗಳು ಅನುಸರಿಸದೆ ಬೇರೆ ಮಾರ್ಗವಿಲ್ಲ ಎಂದೆನ್ನಿಸುತ್ತದೆ. ಈ ಕಾನ್‌ ಚಿತ್ರೋತ್ಸವಕ್ಕೆ ತೆರಳಿರುವ ಕರ್ನಾಟಕ ಸರ್ಕಾರದ ಪ್ರತಿನಿಧಿಗಳು ಏನನ್ನು ಕಲಿತು ಬಂದು, ಏನೇನನ್ನು ಜಾರಿಗೊಳಸುತ್ತಾರೆ ಎಂದು ತಿಳಿಯಲು 2027ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕಾಗಿ ಕಾಯಬೇಕಾಗಿದೆ.

IMG 20251121 WA0005
ಮುರಳೀಧರ ಖಜಾನೆ
+ posts

ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮುರಳೀಧರ ಖಜಾನೆ
ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ ಕಂಗಾಲಾದ ಬಡ ಕಾರ್ಮಿಕರು

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM...

4 ವರ್ಷದಲ್ಲಿ BJP, NPFಗೆ ಹಾರಿದ 111 ಜನಪ್ರತಿನಿಧಿಗಳು; ಎಡಿಆರ್‌ ವರದಿ

2022ರಿಂದ 2026ರ ಅವಧಿಯಲ್ಲಿ ಚುನಾವಣೆ ಗೆದ್ದ ಬಳಿಕ ಒಟ್ಟು 111 ಹಾಲಿ...

ನಕಲಿ ಔಷಧ ಜಾಲ ಭೇದಿಸಿದ ಎಸ್‌ಐಟಿ: ಅಜರ್‌ಬೈಜಾನ್‌ಗೆ ಪರಾರಿಯಾಗಿದ್ದ ಕಿಂಗ್‌ಪಿನ್‌ ಪ್ರಶಾಂತ್‌ ಸೆರೆ

ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಔಷಧ...

ಉದ್ಯೋಗ ಮಾಹಿತಿ | ರೈಲ್ವೆಯಲ್ಲಿ 590 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಭಾರತೀಯ ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ ಖಾಲಿ ಇರುವ ಪ್ಯಾರಾಮೆಡಿಕಲ್ ವಿಭಾಗದ...