ವಿಕ್ಷಿಪ್ತ ವ್ಯಕ್ತಿತ್ವದ, ಅಲೆಮಾರಿ ಚಿತ್ರಕರ್ತ ಜಾನ್‌ ಅಬ್ರಾಹಂರ ʼಅಮ್ಮ ಅರಿಯನ್‌ʼಗೆ ಕ್ಯಾನ್ಸ್‌ ಗೌರವ

Date:

1986ರಲ್ಲಿ ಬಿಡುಗಡೆಯಾದಾಗ ಭಾರತೀಯ ಚಿತ್ರರಂಗದಲ್ಲಿ ತಲ್ಲಣ ಉಂಟುಮಾಡಿದ ಚಿತ್ರ ಮಲಯಾಳಂನ ʼಅಮ್ಮ ಅರಿಯನ್‌ʼʼ. ʼಮಲೆಯಾಳಂ ಭಾಷೆಯಲ್ಲಿ ʼಅಮ್ಮ ಅರಿಯನ್‌ʼ ಎಂದರೆ ʼಅಮ್ಮನಿಗೊಪ್ಪಿಸಿದ ವರದಿʼ ಎಂದರ್ಥ. ಮೇ 12 ರಿಂದ 23 ರವರೆಗೆ ಫ್ರಾನ್ಸ್‌ ದೇಶದ ಕಾನ್‌ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜಾನ್‌ ಅಬ್ರಾಹಂ ನಿರ್ದೇಶನದ ಈ ಚಿತ್ರ ಕ್ಲಾಸಿಕ್‌ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ.

- Advertisement -

ಕಳೆದ ಐದು ವರ್ಷಗಳಿಂದ ಸತತವಾಗಿ ಭಾರತದ ಕ್ಲಾಸಿಕ್‌ ಚಿತ್ರಗಳು ಕಾನ್ಸ್‌ ಚಿತ್ರೋತ್ಸವದಲ್ಲಿ, ಆ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿರುವುದು 113 ವರ್ಷಗಳ ಇತಿಹಾಸವಿರುವ ದೇಶದ ಚಿತ್ರರಂಗಕ್ಕೆ ಸಂದಿರುವ ಗೌರವ ಎಂದು ಭಾವಿಸಬಹುದು. ಮೇ 12ರಿಂದ 23ರವರೆಗೆ ಫ್ರಾನ್ಸ್‌ ದೇಶದ ಕಾನ್‌ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕ್ಲಾಸಿಕ್‌ ವಿಭಾಗದಲ್ಲಿ ಮಲಯಾಳಂ ಚಲನಚಿತ್ರ ʼಅಮ್ಮ ಅರಿಯನ್‌ʼ ಪ್ರದರ್ಶನಗೊಳ್ಳಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

1986ರಲ್ಲಿ ಬಿಡುಗಡೆಯಾದಾಗ ಭಾರತೀಯ ಚಿತ್ರರಂಗದಲ್ಲಿ ತಲ್ಲಣ ಉಂಟುಮಾಡಿದ ಚಿತ್ರ ʼಅಮ್ಮ ಅರಿಯನ್‌ʼʼ. ಈ ಪತ್ರಕರ್ತ ಆ ಕಾಲದಲ್ಲಿ ಈ ಚಿತ್ರ ನೋಡಿದಾಗ ಬೆಚ್ಚಿಬೀಳಿಸಿದ ಚಿತ್ರವದು. ಭಾರತದ ರಾಜಕಾರಣದ ಮೇಲೆ ಅದರಲ್ಲಿಯೂ, ನಕ್ಸಲೈಟ್‌ ಸಿದ್ಧಾಂತಗಳ ಮೇಲೆ ಬೆಳಕು ಚೆಲ್ಲಿದ ಈ ಚಿತ್ರವನ್ನು ತಯಾರಿಸಿದವರು ʼಒಡೆಸ್ಸಾ ಕಲೆಕ್ಟೀವ್‌ʼ ಎಂಬ ಚಿಂತಕರ ಗುಂಪು. ಈ ತಂಡ ಹಳ್ಳಿ ಹಳ್ಳಿಗಳಲ್ಲಿ ತಿರುಗಿ, ಬೀದಿ ನಾಟಕ ಪ್ರದರ್ಶಿಸಿ, ಆ ಮೂಲಕ ಜನರಿಂದ ಸಂಗ್ರಹಿಸಿದ ಹಣದಲ್ಲಿ ನಿರ್ಮಿಸಿದ ಚಿತ್ರ. ದುರಾದೃಷ್ಟಕರ ಸಂಗತಿಯೆಂದರೆ, ಈ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಜಾನ್‌ ಅಬ್ರಾಹಂ ಈ ಲೋಕದಿಂದ ನಿರ್ಗಮಿಸಿ, ಲಕ್ಷಾಂತರ ಅವರ ಚಿತ್ರಗಳ ಅಭಿಮಾನಿಗಳನ್ನು ಅನಾಥರನ್ನಾಗಿಸಿದರು. ಜಾನ್‌ ನಿಧನರಾದದ್ದು ಕೂಡ ಒಂದು ದುರಂತ. ಗೆಳೆಯರ ಪ್ರಕಾರ ಅವರು ಮನೆಯ ಸೋರುವ ಛಾವಣಿಯನ್ನು ಸರಿಪಡಿಸಲು ಮೇಲೆ ಹತ್ತಿದ್ದಾಗ ಕಾಲು ಜಾರಿ ಕೊಳ್ಳಕ್ಕೆ ಬಿದ್ದು ಅಸುನೀಗಿದರು.

ಜಾನ್‌ ಅಬ್ರಾಹಂ ಬಗ್ಗೆ ಸ್ವಲ್ಪ ವಿವರ ನೀಡುವುದು ಇಲ್ಲಿ ಅಗತ್ಯ. ಇಲ್ಲದಿದ್ದರೆ, ಈ ಮಹಾ ಚಿತ್ರಕರ್ತನನ್ನು, ಇಂದಿನ ಬಾಲಿವುಡ್‌ ನಟ, ಚಲನಚಿತ್ರ ನಿರ್ಮಾಪಕ ಜಾನ್‌ ಅಬ್ರಾಹಂ ಎಂದು ಇಂದಿನ ತಲೆಮಾರು ತಪ್ಪಾಗಿ ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ. ನಾನು ಹೇಳುತ್ತಿರುವ ಜಾನ್‌ ಅಬ್ರಾಹಂ ಹುಟ್ಟಿದ್ದು 1937ರಲ್ಲಿ. ತಂದೆ ಮಲೆಯಾಳಿ ಕ್ರಿಶ್ಚಿಯನ್‌, ತಾಯಿ ಪಾರ್ಸಿ ಜನಾಂಗಕ್ಕೆ ಸೇರಿದವರು. ಈ ಮಲೆಯಾಳಂ ಚಲನಚಿತ್ರಕರ್ತ ಜಾನ್‌ ಅಬ್ರಾಹಂ ಬದುಕಿದ್ದು ಕೇವಲ ನಲವತ್ತೊಂಭತ್ತು ವರ್ಷ. ಈತ ತೀರಿಕೊಂಡಿದ್ದು 1987ರಲ್ಲಿ. ಮೊದಲು ನಿರ್ದೇಶಿಸಿದ್ದು ಸಾಕ್ಷ್ಯಚಿತ್ರ ʼಕೊಯ್ನಾ ನಗರ್‌ ʼ ಮತ್ತೆ 1969ರಲ್ಲಿ ʼಪ್ರಿಯಾ ಮತ್ತು ಹೈಡ್ಸ್‌ ಅಂಡ್‌ ಸ್ಟ್ರಿಂಗ್ಸ್‌ ಎಂಬ ಎರಡು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿ ತನ್ನ ಛಾಪು ಮೂಡಿಸಿದ್ದರು. ಇವರ ಮೊದಲ ಕಥಾಚಿತ್ರ ʼವಿದ್ಯಾರ್ಥಿಕಾಲೇ ಇಥಿಲೇ ಇಥಿಲೇʼ (ವಿದ್ಯಾರ್ಥಿಗಳು ಈ ದಾರಿಯಲ್ಲಿ ಎಂದರ್ಥ). ನಂತರ ನಿರ್ದೇಶಿಸಿದ ಚಿತ್ರ, ಭಾರತೀಯ ಚಿತ್ರರಂಗದಲ್ಲಿ ಆತ ತನ್ನದೇ ಛಾಪು ಮೂಡಿಸಿದ ʼಅಗ್ರಹಾರತ್ತಿಲ್‌ ಕಳದೈʼ (ಅಗ್ರಹಾರದಲ್ಲಿ ಒಂದು ಕತ್ತೆ) ಇದು ತಮಿಳಿನಲ್ಲಿ ನಿರ್ದೇಶಿಸಿದ ಚಿತ್ರ. 1979ರಲ್ಲಿ ಜಾನ್‌ ನಿರ್ದೇಶಿಸಿದ ಚಿತ್ರ ʼಚೆರಿಯಾಚಾನಂಟೇ ಕ್ರೂರಕೃತ್ಯಂಗಳ್‌ʼ (ಚೆರಿಯಾಂತನ್‌ ನ ಕ್ರೂರಕೃತ್ಯಗಳು). 1986ರಲ್ಲಿ ಇವರು ನಿರ್ದೇಶಿಸಿದ ಕೊನೆಯ ಚಿತ್ರವೇ ʼಅಮ್ಮ ಅರಿಯನ್)‌. ಜಾನ್‌ ದೃಶ್ಯ ಕಥನ ಶೈಲಿಯೇ ವಿಶಿಷ್ಟ. ʼಅಮ್ಮ ಅರಿಯನ್‌ʼʼ. ನಕ್ಸಲೈಟ್‌ ಮಗನೊಬ್ಬನ ಸಾವನ್ನು ವಿವಿಧ ಪಾತ್ರಗಳ ಮೂಲಕ, ಮಗನ ಗೆಳೆಯ, ಅವನ ತಾಯಿಗೆ ಒಪ್ಪಿಸುವ ವರದಿಯ ಸ್ವರೂಪದ್ದು, ಈ ಕಥೆ.

ಜಾನ್‌ ಕಾಲೇಜಿನಲ್ಲಿ ಕಲಿತದ್ದು ಇತಿಹಾಸ ಮತ್ತು ರಾಜಕೀಯ ಶಾಸ್ತ್ರ. ಹೊಟ್ಟೆಪಾಡಿಗಾಗಿ ಕೆಲವು ಕಾಲ ನಮ್ಮ ಉಡುಪಿಯ ಜೀವ ವಿಮಾ ನಿಗಮದಲ್ಲಿ ಇವರು ಕಾರಕೂನರಾಗಿ ಕೆಲಸ ಮಾಡಿದ್ದರು. ಹೀಗೆಯೇ ನಮ್ಮ ನಡುವಿನ ಪ್ರತಿಭಾವಂತ ಲೇಖಕ, ಜಿ. ರಾಜಶೇಖರ್‌ ಕೂಡ ನಮ್ಮ ಉಡುಪಿಯ ಜೀವ ವಿಮಾ ನಿಗಮದಲ್ಲಿ ಇವರು ಕಾರಕೂನರಾಗಿ ಕೆಲಸ ಮಾಡಿದ್ದರು. ಜಾನ್‌ ಕೆಲವು ಕಾಲ ಭಾರತದ ಮತ್ತೊಬ್ಬ ಅದ್ಭುತ ದೃಶ್ಯ ಚಿಂತಕ ಮಣಿ ಕೌಲ್‌ ಜೊತೆ ಕೂಡ ಕೆಲಸ ಮಾಡಿದ್ದರು.

WhatsApp Image 2026 05 09 at 9.32.55 PM

ತನ್ನ ಅಲೆಮಾರಿ ಜೀವನಶೈಲಿ ಮತ್ತು ಅಪಾರ ತಿಳಿವಳಿಕೆಯ ಸ್ವತಂತ್ರ ಚಿತ್ರಗಳನ್ನು ನಿರ್ದೇಶಿಸಲು ಹೆಸರಾದ ಜಾನ್‌ ಕಲಿತದ್ದು ಪುಣೆಯ Film and Television Institute of India ದಲ್ಲಿ. ಇವರ ಗುರು ಭಾರತೀಯ ಚಿತ್ರರಂಗದ ಅಧ್ವರ್ಯು ಎಂದೇ ಪರಿಗಣಿಸುವ ರಿತ್ವಿಕ್‌ ಘಟಕ್.‌ Film and Television Institute of India ಚಿನ್ನದ ಪದಕ ಪಡೆದ ದಿಗ್ದರ್ಶಕ ಜಾನ್‌. ಭಾರತೀಯ ಸಿನಿಮಾಕ್ಕೆ crowd funding ಸಿನಿಮಾ ಪರಿಚಯಿಸಿದ ಕೀರ್ತಿ ಜಾನ್‌ ಅವರದು. ಮುಖ್ಯವಾಹಿನಿ ಚಿತ್ರಗಳ ವಾಣಿಜ್ಯೋದ್ದೇಶಗಳಿಗೆ ವಿರುದ್ಧವಾಗಿ ಮಲೆತುನಿಂತು Odessa Collective ಕಟ್ಟಿಕೊಂಡು ಸಮಾಜದ ಕ್ಷುದ್ರ ಲೋಕಕ್ಕೆ ತನ್ನ ಚಿತ್ರಗಳ ಮೂಲಕ ಕನ್ನಡಿ ಹಿಡಿದವನು ಜಾನ್.‌ ಆ ಕಾಲಕ್ಕೆ ʼಅಮ್ಮ ಅರಿಯನ್‌ʼ́ British Film Institute ನ ʼಭಾರತದ ಹತ್ತು ಚಿತ್ರಗಳ ಪೈಕಿ ಒಂದೆಂದು ಪರಿಗಣಿಸಲಾಯಿತು. ʼಅಗ್ರಹಾರತ್ತಿಲ್‌ ಕಳದೈʼ ಭಾರತದ ನೂರು classic ಚಿತ್ರಗಳ ಪೈಕಿ ಒಂದೆಂದು 2013ರಲ್ಲಿ ಗುರುತಿಸಿದ್ದು ಜಾನ್‌ಗೆ ಸಂದ ಗೌರವ. ಖ್ಯಾತ ಕಮ್ಯುನಿಸ್ಟ್‌ ನಾಯಕ ಇ ಎಂ ಎಸ್‌ ನಂಬೂದರಿಪಾಡ್‌ ಅವರ ಬಗ್ಗೆ ಸಾಕ್ಷ್ಯಚಿತ್ರ ಚಿತ್ರೀಕರಣ ಆರಂಭಿಸಿದ್ದರು. ಆದರೆ ಅವರು ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲೇ ಇಲ್ಲ. ಅವರು ತಾವು ಪೂರ್ಣಗೊಳಿಸಲಾಗದ ಚಿತ್ರಕತೆಗಳನ್ನು ಬಿಟ್ಟುಹೋಗಿದ್ದಾರೆ ಎಂದು ಅವರ ಗೆಳೆಯರು ಈಗಲೂ ಅಲವತ್ತುಕೊಳ್ಳುತ್ತಾರೆ. ಅವರೆಲ್ಲ ಜಾನ್‌ನನ್ನು ಕರೆಯುತ್ತಿದ್ದುದೇ ʼಒಟ್ಟಾಯನ್‌ʼ ಎಂದು. ಹಾಗೆಂದರೆ ʼಒಂಟಿ ಸಲಗʼ ಎಂದರ್ಥ. ಜಾನ್‌ ಮನೋಜ್ಞ ಸಣ್ಣ ಕತೆಗಳನ್ನು ಬರೆಯುತ್ತಿದ್ದರು. ಅವರ ʼನೇರ್ಚಕೊಳಿʼ ಹಾಗೂ ಅಬ್ರಾಹಿಮಂಟೇ ಕಥೆಗಳʼ ಸಣ್ಣ ಕತೆಗಳ ಸಂಗ್ರಹ ಪ್ರಕಟವಾಗಿದೆ.

ಈ ʼಅಮ್ಮ ಅರಿಯನ್‌ʼ ಮತ್ತೆ ನೋಡುವುದು ಸಾಧ್ಯವಿಲ್ಲವೇನೋ ಎಂದು ಹತಾಶ ಸ್ಥಿತಿಯಲ್ಲಿರುವಾಗಲೇ, ಅದನ್ನು ಹುಡುಕಿ, ಸಂರಕ್ಷಿಸಿ, ಪುನರ್‌ ನಿರ್ಮಿಸಿ, ಕಾನ್‌ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ತಂದಿಟ್ಟ ಕೀರ್ತೀ, ಲಾಭದ ನಿರೀಕ್ಷೆ ಮಾಡದ Film Heritage Foundation ಗೆ ಸಲ್ಲುತ್ತದೆ. ಈ ಚಿತ್ರವನ್ನು ನಾಲ್ಕು k restoration ಮಾದರಿಯಲ್ಲಿ ಸಂರಕ್ಷಿಸಿದ್ದು ಈ ಪ್ರತಿಷ್ಠಾನ.

ಈ ಪ್ರತಿಷ್ಠಾನದ ಶಿವೇಂದ್ರ ಸಿಂಗ್‌ ಡುಂಗರಪುರ್‌ ಈ ಚಿತ್ರವನ್ನು ಹುಡುಕಿದ ಬಗ್ಗೆ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರೂವಾರಿ ಬಿನಾ ಪಾಲ್‌ ʼಈ ದಿನʼದೊಂದಿಗೆ ಹಂಚಿಕೊಂಡದ್ದು ಹೀಗೆ; “ಅಮ್ಮ ಅರಿಯನ್‌ʼ ಹುಡುಕಿ ಸಂರಕ್ಷಿಸಿದ ಕಥೆ, ಚಿತ್ರದಷ್ಟೇ ರೋಚಕವಾದುದು. ಈ ಚಿತ್ರವನ್ನು ಸಂರಕ್ಷಿಸಲು ಸಂಬಂಧಿಸಿದವರ ಅನುಮತಿ ಪಡೆಯುವುದರಿಂದ ಹಿಡಿದು ಅದರ ಅವಶೇಷ ಚಿತ್ರದ ನೆಗೆಟಿವ್‌ ಹುಡುಕಿದ್ದು ಒಂದು ಸಾಹಸ. ʼಅಮ್ಮ ಅರಿಯನ್‌ʼ ಚಿತ್ರವನ್ನು ಮತ್ತೆ ನೋಡುತ್ತೇವೆ ಎಂಬ ಭರವಸೆ ಕೂಡ ನನಗಿರಲಿಲ್ಲ. ಬಹಳ ಕಷ್ಟಪಟ್ಟು ಈ ಚಿತ್ರದ ಎರಡು ಅಳೆದುಳಿದ ಚಿತ್ರ ಪ್ರತಿಗಳನ್ನು ಹುಡುಕಿ ಕೊನೆಗೂ ಅತ್ಯಂತ ಜತನದಿಂದ ಸಂರಕ್ಷಿಸಲಾಯಿತು. ಈ ಚಿತ್ರವನ್ನು ಮಾಡಿದ ಬಗ್ಗೆಯನ್ನು ವಿವರಿಸಿದ ಈ ಚಲನಚಿತ್ರದ ಛಾಯಾಗ್ರಾಹಕ ವೇಣು; ಜಾನ್‌ ಈ ಚಿತ್ರವನ್ನು ಮಾಡಲು ಪ್ರಯತ್ನಿಸಿದಾಗ, ಆಗಲೇ ಸಾಕಷ್ಟು ಖ್ಯಾತಿಗಳಿಸಿದ್ದರೂ, ನಿರ್ಮಾಪಕ ಸಿಕ್ಕಲಿಲ್ಲ. ಕೊನೆಗೆ ಚಿತ್ರವನ್ನು Odessa Collective ಮೂಲಕವೇ ಮಾಡಲು ನಿರ್ಧರಿಸಲಾಯಿತು. ಹಾಗಾಗಿ ಪ್ರತಿಭಟನೆ ಮತ್ತು ಸೈದ್ಧಾಂತಿಕತೆಯ ಹೂರಣವಾದ ಈ ಚಿತ್ರವನ್ನು ಈಗ ನೋಡಲು ಸಾಧ್ಯವಾಗಿದೆ” ಎನ್ನುತ್ತಾರೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಈ ಚಿತ್ರವನ್ನು ಸಂರಕ್ಷಿಸಿದ Film Heritage Foundation ಕಾನ್ಸ್‌ ಗೆ ತರುತ್ತಿರುವ ಸತತ ಐದನೇ ಚಿತ್ರವಿದು. ಇದಕ್ಕೆ ಮೊದಲು, ಸತ್ಯಜಿತ್‌ ರೇ ಅವರ ಅರಣ್ಯೇರ್‌ ದಿನ್‌ ರಾತ್ರಿʼ, ಶ್ರೀಲಂಕಾದ ಸುಮಿತ್ರ ಪೆರೀಸ್‌ ಅವರ ʼಗೆಹನೂ ಲಮಾಯಿʼ ಶ್ಯಾಮ್‌ ಬೆನೆಗಲ್‌ ಅವರ ʼಮಂಥನ್‌ʼ ಅರಿಭಮ್‌ ಶ್ಯಾಮ್‌ ಶರ್ಮಾ ಅವರʼ ಇಷಾನ್ಷುʼ, ಜಿ. ಅರವಿಂದನ್‌ ಅವರ ʼಥಂಪುʼ 2022ರಿಂದ ಇಂದಿನವರೆಗೆ ಕಾನ್‌ ನಲ್ಲಿ ಸತತವಾಗಿ ಪ್ರದರ್ಶನಗೊಂಡಿದೆ.”ಈ ವರ್ಷ ʼಅಮ್ಮ ಅರಿಯನ್‌ʼ ಆ ಸಾಲಿಗೆ ಸೇರಿದೆ. ಜಾನ್‌, ಒಂದು ಅರ್ಥದಲ್ಲಿ Cult filmmaker. ಸಿನಿಮಾ ವಿದ್ಯಾರ್ಥಿಗಳಿಗೆ ಅವರ ಚಿತ್ರಗಳು ಮಾದರಿ. ಅವರು ಮಾಡಿದ ಚಿತ್ರಗಳ ಕಥೆಯನ್ನು ಕೇಳಿದವರಿಗೆ ಅವರ ಚಿತ್ರಗಳನ್ನು ನೋಡಲೇಬೇಕು. ಅರ್ಥ ಮಾಡಿಕೊಳ್ಳಬೇಕೆಂದು ಅನ್ನಿಸುವುದರಲ್ಲಿ ಆಶ್ಚರ್ಯವೇ ಇಲ್ಲ. ನಾವು ಅದಕ್ಕೊಂದು catalyst ಆಗಿ ಕೆಲಸ ಮಾಡಿದ್ದೇವೆ. ನಮ್ಮದು ಅಳಿಲ ಸೇವೆ. ಈ ಚಿತ್ರದಲ್ಲಿ ಸಾಕ್ಷ್ಯಚಿತ್ರ ಮತ್ತು ಚಿತ್ರಕತೆಯ ತೆಳುವಾದ ಗೆರೆಯನ್ನು ಛಾಯಾಗ್ರಾಹಕ ವೇಣು ಸೂಕ್ಷ್ಮವಾಗಿ ನಿರ್ವಹಿಸಿದ್ದಾರೆ”, ಎಂದರು ಶಿವೇಂದ್ರ.

ಈ ಚಿತ್ರವನ್ನು 35 MM ನಲ್ಲಿ ಕಪ್ಪು-ಬಿಳುಪಿನ ಮಾಧ್ಯಮದಲ್ಲಿ ಚಿತ್ರಿಸಲಾಗಿದೆ. “ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಜೋಯ್‌ ಮ್ಯಾಥ್ಯೂ; “ಚಿತ್ರ ಮತ್ತು ಚಿತ್ರದ ಕಥೆ ಎರಡೂ, ಲೆಕ್ಕವಿಲ್ಲದಷ್ಟು ಕಥೆಗಳ ಕಣಜವಾಗಿದೆ. ಇದೊಂದು ರೀತಿಯಲ್ಲಿ ಸಾಕ್ಷ್ಯ-ಕಥಾಚಿತ್ರ”. ಇದು ಆ ಕಾಲದ ಸಮಾಜೋ ರಾಜಕೀಯ ಸಂದರ್ಭವನ್ನು ಕಲಾತ್ಮಕವಾಗಿ ತೆರೆದಿಡುತ್ತದೆ. ಅಷ್ಟೇ ಅಲ್ಲ ಆ ಕಾಲದ ಎಡಪಂಥೀಯ ತೀವ್ರವಾದದ ಚಿಂತನೆಯ ಸೋಲನ್ನೂ ಚಿತ್ರಿಸುತ್ತದೆ. ಜಾನ್‌ ಅಬ್ರಾಹಂ ಗೆ ಸಿನಿಮಾ ಎನ್ನುವುದು ಕೇವಲ ಕಲೆಯ ಮಾಧ್ಯಮವಲ್ಲ. ಆದರೆ, ಅದೊಂದು ಸಾರ್ವಜನಿಕ ಕ್ರಿಯೆ. ಹಾಗೆಯೇ ಪ್ರತಿಭಟನೆಯ ಕಲ್ಮಶರಹಿತ ಪ್ರೀತಿಯನ್ನು ಚಿತ್ರ ತೆರೆದಿಡುತ್ತದೆ” ಎನ್ನುತ್ತಾರೆ ಮ್ಯಾಥ್ಯೂ.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾದ ಎನ್.‌ ವಿದ್ಯಾಶಂಕರ್‌ ಕಾನ್‌ ನಿಂದ ಮಾತನಾಡಿ; “ಈ ಚಿತ್ರವನ್ನು ಮತ್ತೆ ನೋಡುವ ಪುಣ್ಯ ನನ್ನದಾಗಿದೆ. ಮುಂದಿನ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರವನ್ನು ನೋಡುವ ಸೌಭಾಗ್ಯ ನಿಮ್ಮೆಲ್ಲರದಾಗಲಿ” ಎಂದರು ವಿದ್ಯಾಶಂಕರ.

IMG 20251121 WA0005
ಮುರಳೀಧರ ಖಜಾನೆ
+ posts

ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮುರಳೀಧರ ಖಜಾನೆ
ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...