ಖಾಸಗಿ ವಿಡಿಯೋ ಲೀಕ್: ಡಿಜಿಟಲ್ ಬಲತ್ಕಾರಕ್ಕೆ ಸಾವೇ ಪರಿಹಾರವೇ?

Date:

ತಪ್ಪೇ ಮಾಡದೆ ಜೀವ ಕಳೆದುಕೊಳ್ಳುವುದಕ್ಕೆ ಅರ್ಥವಿದೆಯೇ? ತಮ್ಮನ್ನು ತಾವು ಕೊಲ್ಲುವ ಬದಲು, ಕಟ್ಟುಪಾಡುಗಳನ್ನು, ಸಿದ್ಧಮಾದರಿಯ ಯೋಚನೆಗಳನ್ನು ಕೊಂದುಬಿಡಿ. ನೀವು ಬದುಕಿ. ನಿಮ್ಮ ಬದುಕಿನ ವ್ಯಾಖ್ಯಾನವನ್ನು ನೀವೇ ರೂಪಿಸಿಕೊಳ್ಳಿ.

ಇತ್ತೀಚೆಗೆ ಮೈಸೂರಿನ ಟಿ.‌ ನರಸೀಪುರದಲ್ಲಿ, ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡರು. ಅದೇ ಊರಿನ ಉಲ್ಲಾಸ್ ಗೌಡ ಎಂಬಾತ, ಯುವತಿಯ ಖಾಸಗಿ ಫೋಟೊ,‌ ವಿಡಿಯೋ ಇಟ್ಟುಕೊಂಡು ಆಕೆಯ ಭಾವಿ ಪತಿಗೆ ಕಳಿಸುವುದಾಗಿ ಬೆದರಿಸಿದ್ದು ಅವರ ಆತ್ಮಹತ್ಯೆಗೆ ಕಾರಣ.

- Advertisement -

ಇದೇ ಮಾದರಿಯ ಘಟನೆಗಳು ದೇಶದಾದ್ಯಂತ ನಡೆಯುತ್ತಲೇ ಇವೆ. ಖಾಸಗಿ ವಿಡಿಯೊ, ಫೋಟೊಗಳನ್ನು ಲೀಕ್ ಮಾಡುವುದು, ಅಥವಾ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುವುದು ಹೀಗೆ ಹನಿಟ್ರ್ಯಾಪ್‌ನ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ. ಇದರ ನಡುವೆ, ನಂಬಿಕೆ ದ್ರೋಹ ಮಾಡುವವರ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಇದನ್ನೂ ಓದಿ: 2025ರಲ್ಲಿ AI ಪ್ರಭಾವ; ತಂತ್ರಜ್ಞಾನದಡಿ ಕಲಿಕೆ-ಆರೈಕೆ!

ಖಾಸಗಿ ಕ್ಷಣಗಳ ದಾಖಲಿಸಬೇಕೆ?

ಪ್ರೀತಿಪಾತ್ರರೊಂದಿಗೆ ಕಳೆಯುವ ‘ಖಾಸಗಿ ಕ್ಷಣ’ಗಳ ವಿಡಿಯೋ, ಫೋಟೊ ಸೆರೆಹಿಡಿದು ದಾಖಲಿಸಿ ಇಟ್ಟುಕೊಳ್ಳುವುದರ ಔಚಿತ್ಯವೇನೆಂದೇ ಅರ್ಥವಾಗುತ್ತಿಲ್ಲ. ಯಾವ ನಂಬಿಕೆ ಆಧಾರದಲ್ಲಿ ಖಾಸಗಿ ವಿಡಿಯೋ ಮಾಡಲು, ಫೋಟೊ ಕ್ಲಿಕ್ಕಿಸಲು ಸಂಗಾತಿಗೆ ಸಮ್ಮತಿ ನೀಡುವುದು? ಎಲ್ಲದಕ್ಕೂ ‘ನೋ’ ಎನ್ನಬಹುದೆಂದಾದರೆ, ಯಾವುದಕ್ಕೆ ‘ನೋ’ ಎನ್ನಬೇಕೋ ಅದಕ್ಕೇ ಹೇಳಲು ಏಕೆ ಸಾಧ್ಯವಾಗುತ್ತಿಲ್ಲ?

ಮಾನ ಹೋಗುತ್ತದೆ ಎಂಬ ಭಯಕ್ಕಿಂತ, ಖಾಸಗಿ ಕ್ಷಣವನ್ನು ಮೊಬೈಲಿನಲ್ಲಿ ಸೆರೆಹಿಡಿಯುವಾಗ ಮುಂದೊಮ್ಮೆ ಅದರ ಪರಿಣಾಮ ಏನಾಗಬಹುದು ಎಂಬ ಎಚ್ಚರ ಇಟ್ಟುಕೊಳ್ಳುವುದು ಒಳ್ಳೆಯದಲ್ಲವೇ? ಸುಡುತ್ತದೆ ಎಂಬ ಅರಿವು ಪಡೆಯಲು ಬೆಂಕಿಯನ್ನು, ವಿದ್ಯುತ್ತನ್ನು ಮುಟ್ಟಿಯೇ ನೋಡಬೇಕೆಂದಿಲ್ಲವಲ್ಲ?

ವಿಶ್ವಾಸದ್ರೋಹವೆಂಬ ‘ಅಶ್ಲೀಲತೆ’

ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಚಿತ್ರ ನಿರ್ದೇಶಕ ಓಂಪ್ರಕಾಶ್ ರಾವ್ ಅವರ ಸಂದರ್ಶನ ವೀಕ್ಷಿಸಿದೆ. ಸಂದರ್ಶನದ ಕೊನೆಯಲ್ಲಿ, ‘ನಿಮ್ಮ ಪ್ರಕಾರ ಅಶ್ಲೀಲತೆ ಎಂದರೆ ಏನು?’ ಎಂಬ ಪ್ರಶ್ನೆ ಕೇಳಲಾಗುತ್ತದೆ. ಅದಕ್ಕೆ ಓಂಪ್ರಕಾಶ್ ಉತ್ತರ, ‘ನಂಬಿಕೆ‌ ದ್ರೋಹವೇ ನಿಜವಾದ ಅಶ್ಲೀಲತೆ’ ಎಂದಾಗಿತ್ತು. ನಿರ್ದೇಶಕನ ಹಿನ್ನೆಲೆ, ಹಿಂದಿನ ಪ್ರಕರಣಗಳು ಏನೇ ಇರಬಹುದು, ಆದರೆ ಈ ವಿಚಾರದಲ್ಲಿ ಅವರ ಮಾತು ನೂರಕ್ಕೆ ನೂರು ಸತ್ಯ.

ಮಲಯಾಳಂನ ಖ್ಯಾತ ನಟ ಶೈನ್ ಟೋಮ್‌ ಚಾಕೊ, ಇತ್ತೀಚೆಗೆ ಸಂವಾದವೊಂದರಲ್ಲಿ, ‘ಅಶ್ಲೀಲವೆಂದು ಕರೆಯುವ ಲೈಂಗಿಕ ಕ್ರಿಯೆಯ ಮೂಲಕವೇ ಹುಟ್ಟು ಪಡೆದವರು ನಾವು. ನಮ್ಮ ಹುಟ್ಟಿಗೆ ಕಾರಣವಾಗುವ ಒಂದು ಕ್ರಿಯೆ ಅಶ್ಲೀಲ ಹೇಗಾಗುತ್ತದೆ? ಅದನ್ನು ಪವಿತ್ರವಾದದ್ದು ಎಂದಲ್ಲವೇ ಪರಿಗಣಿಸಬೇಕಿರುವುದು?’ ಎಂದು ಕೇಳಿದರು.

ಇವರಿಬ್ಬರ ಮಾತುಗಳು, ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ, ಬೌದ್ಧಿಕವಾಗಿ ರೂಪಿಸುವಲ್ಲಿ ನಾವೆಷ್ಟು ಎಡವಿದ್ದೇವೆ ಎನ್ನುವುದಕ್ಕೆ ಸಾಕ್ಷಿ. ಹೆಣ್ಣೊಬ್ಬಳ ಮನಸ್ಸಿಗೆ ಅತಿದೊಡ್ಡ ಗಾಯವಾಗುವುದು ವಿಡಿಯೋ, ಫೋಟೊ ಲೀಕ್ ಆದದ್ದಕ್ಕಲ್ಲ. ನನ್ನವನು ಕಣ್ಣುಮುಚ್ಚಿ ನಂಬಬಹುದಾದಷ್ಟು ಒಳ್ಳೆಯವನು ಎಂದು ಆಕೆ ಎಲ್ಲದಕ್ಕೂ ಸಮ್ಮತಿಸಿದಾಗ ಆತ ಮಾಡುವ ವಿಶ್ವಾಸದ್ರೋಹ ಇದೆಯಲ್ಲ, ಅದು. ನಿಜಕ್ಕೂ ಸಮಾಜ ಅಶ್ಲೀಲವೆಂದು ಪರಿಗಣಿಸಬೇಕಿರುವುದು ಆತನ ವಿಶ್ವಾಸದ್ರೋಹವನ್ನೇ ಹೊರತು, ಆಕೆಯ ದೇಹದ ಚಿತ್ರಗಳನ್ನಲ್ಲ.

ಸಮಾಜ ಅಪರಾಧಿಯಾಗಿ ಕಾಣಬೇಕಿರುವುದು ವಿಡಿಯೋ ಲೀಕ್‌ ಮಾಡಿದ ವ್ಯಕ್ತಿಯನ್ನು. ಆದರೆ ನಮ್ಮ ಸಮಾಜ, ಸಂತ್ರಸ್ತರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಹೀಯಾಳಿಸಿ, ನಿಂದಿಸಿ, ಮನೆತನಕ್ಕೆ, ಕುಲಕ್ಕೆ, ಜಾತಿಗೆ, ಧರ್ಮಕ್ಕೆ ಅವಮಾನ ಮಾಡಿ, ಅಂತಹ ವಿಡಿಯೋಗಳನ್ನು ಸಾಕಷ್ಟು ಹಂಚಿ ಹರಿದಾಡಿ ವಿಕೃತಿ ಮೆರೆಯುವುದನ್ನು ರೂಢಿಸಿಕೊಂಡಿದೆ. ವಾಸ್ತವದಲ್ಲಿ ಆ ಸಂತ್ರಸ್ತ ಹೆಣ್ಣಿನ ಮುಂದೆ ಇಡೀ ಸಮಾಜವೇ ಅಶ್ಲೀಲವೆಂಬಂತೆ ಕಾಣಿಸುವುದು ಆಗಲೇ.

ಮಾನವನ್ನು, ಮರ್ಯಾದೆಯನ್ನು, ನಾಚಿಕೆಯನ್ನು ದೇಹಕ್ಕೆ ಸೀಮಿತಗೊಳಿಸಿ, ದೇಹವನ್ನೇ ಕೇಂದ್ರೀಕರಿಸಿ ಅಳೆಯುವುದರಿಂದ ಭಾರತೀಯ ಸಮಾಜದಲ್ಲಿ ಬಹಳಷ್ಟು ಜನ ತಮ್ಮ ದೇಹದೊಳಗಿನ ರೋಗಗಳಿಗೆ ಸಂಬಂಧಿಸಿ ವೈದ್ಯರನ್ನು ಭೇಟಿಯಾಗಲು ಹಿಂಜರಿಯುತ್ತಾರೆ. ಮಾನವೆಂಬ ಕಾರಣಕ್ಕೆ ಜೀವವನ್ನೇ ಪಣಕ್ಕಿಡುತ್ತಾರೆ. ಒಟ್ಟು ಸಮಾಜದ ಮನಸ್ಥಿತಿಗೆ ಚಿಕಿತ್ಸೆ ಬೇಕಿದೆ.

ವಿಡಿಯೋ ಲೀಕ್ ಆದ್ರೆ ಸಾವೇ ಗತಿಯೇ?

ನಮ್ಮ ಯೋಚನೆಗಳನ್ನೇಕೆ ಬದಲಿಸಲು ನಾವು ಸಿದ್ಧರಿಲ್ಲ? ಬೆತ್ತಲೆ ದೇಹವೇ ನಮ್ಮ ಮಾನವೇ? ಅದು ಅಲ್ಲ ಎಂದು ಯಾಕಾಗಬಾರದು? ‘ಸಾವು’ ಮತ್ತು ‘ಮಾನ’ ಎಂಬ ವಿಚಾರ ಬಂದಾಗ ‘ಮಾನ’ದ ವ್ಯಾಖ್ಯಾನವನ್ನೇ ಬದುಕಿನಲ್ಲಿ ಬದಲಿಸಿಬಿಡುವುದು ಅತ್ಯುತ್ತಮ ನಿರ್ಧಾರ. ಮಾನ ಹೋಗುವವರೆಗೆ ಅದನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ಹೋದಮೇಲೆ, ಅದು ಮಾನವೇ ಅಲ್ಲ ಎಂದು ತಿಳಿದುಕೊಂಡು, ಮುಂದುವರಿಯಬೇಕು. ಅಷ್ಟೆ.

ಇದನ್ನೂ ಓದಿ: ಗೋವಾ | ವಿದ್ಯಾರ್ಥಿಯನ್ನು ಬಲಿ ಪಡೆದ ಕಸ

ಮಾನಕ್ಕಿಂತ ಮುಖ್ಯವಾದದ್ದು ಬದುಕು. ವಿಡಿಯೋ ಹರಿದಾಡಬಹುದು, ಅವಮಾನಗಳ ಬೆಟ್ಟವೇ ನಿಮ್ಮ‌ ಮುಂದಿರಬಹುದು. ಆದರೆ ಆ ಸಮಯ ಖಂಡಿತ ಕಳೆದುಹೋಗುತ್ತದೆ. ಹಾಗೆ ಕಳೆದುಹೋದ ಸಮಯದ ನಂತರ ಸಿಗುವ ಹೊಸ ಬದುಕಿನ ಕಡೆಗೆ ಚಿತ್ತ ಇರಬೇಕು. ನಿಮಗಾದರೂ ಈಗ ಐದಾರು ವರ್ಷಗಳ‌ ಹಿಂದೆ ನಡೆದ ಇಂತಹ ಪ್ರಕರಣ ನೆನಪಿನಲ್ಲಿದೆಯೇ? ಅದೂ ಬೇಡ, ಎರಡು, ಮೂರು ತಿಂಗಳ ಹಿಂದಿನ ಪ್ರಕರಣ? ಕಾಲದ ವೇಗದ ಜೊತೆಗೆ ಗಾಯಗಳು ಮಾಸಿಹೋಗುತ್ತವೆ. ನಮ್ಮ ಸ್ವಂತ ಬದುಕಿನ ಕಠಿಣ ಸಮಯದಲ್ಲಿ ಸಹನೆಯಿಂದಿರುವುದು ಅತ್ಯಗತ್ಯ.

ಈ ವಿಷಯದಲ್ಲಿ ಕನ್ನಡದ ನಟಿಯೊಬ್ಬರು ಮಾಡಿಕೊಂಡ ನಿರ್ಧಾರವನ್ನು ಮೆಚ್ಚಲೇಬೇಕು. ಆಕೆಯ ಸ್ನೇಹಿತನೇ ವಿಡಿಯೋ ಲೀಕ್ ಮಾಡಿದ. ಆಕೆಯೂ ಆತ್ಮಹತ್ಯೆಯ ಯೋಚನೆ‌ ಮಾಡಿದ್ದಳು. ಆದರೆ ಹಿಂದೆ ಸರಿದಳು. ಈಗ ಯಾವುದೇ ಅಳುಕಿಲ್ಲದೆ, ಯಾರ ಕೆಟ್ಟ ಕಮೆಂಟಿಗೂ ಕ್ಯಾರೇ ಎನ್ನದೆ, ದಿಟ್ಟತನದಿಂದ ಆ ಸನ್ನಿವೇಶವನ್ನು ಎದುರಿಸಿ‌ ನಿಂತಿದ್ದಾಳೆ. ಇಂತಹ ಹಲವು ಉದಾಹರಣೆಗಳು ಕೂಡ ಮಾನಕ್ಕೆ ಅಂಜಿ ಜೀವ ಬಿಡುವವರ ನಡುವೆ ಸಿಗುತ್ತವೆ.

ಹಾಗಂತ ಮರ್ಯಾದೆಗೆ, ಮಾನಕ್ಕೆ ಹೆದರುವುದು ತಪ್ಪೆಂದಲ್ಲ. ಆದರೆ ಅದು ಸಾವನ್ನು ಕೊನೆಯ ಆಯ್ಕೆ ಎಂದು ಬಲವಾಗಿ ಯೋಚಿಸುವ ಹಾಗಾಗಬಾರದು. ಒಂದು ವಿಡಿಯೋ ಲೀಕ್ ಆದ ತಕ್ಷಣ ನೇಣು ಹಾಕಿಕೊಳ್ಳುವಷ್ಟು ಸಣ್ಣ ಬೆಲೆಯೇ ಒಂದು ಜೀವಕ್ಕೆ? ‘ಮಾನ’ದ ಮಾನದಂಡವನ್ನು ಇನ್ನೊಬ್ಬರ ಕೈಗೆ ಕೊಡದೆ, ಯಾವುದು ಮಾನ, ಯಾವುದು ಅಲ್ಲ ಎನ್ನುವ ತೀರ್ಮಾನ ನೀವೇ ಮಾಡಿಕೊಳ್ಳಿ. ದೇಹಕ್ಕೆ ಮಾನವನ್ನು, ಮಾನಕ್ಕೆ ದೇಹವನ್ನು ಸೀಮಿತಗೊಳಿಸುವ ಯೋಚನೆಯನ್ನೇ ಈ ಸಮಾಜ ಬದಲಿಸಬೇಕಿದೆ.

ಹನಿಟ್ರ್ಯಾಪ್‌ಗೆ ಒಳಗಾಗಿದ್ದೇವೆ ಎಂದು ಅರಿವಾದ ತಕ್ಷಣ, ಮೊದಲು ನೆನಪಾಗಬೇಕಿರುವುದು ಕಾನೂನು ಮಾರ್ಗವೇ ಹೊರತು ಸಾಯುವ ಮಾರ್ಗ ಅಲ್ಲ. ಯಾರು ಎಷ್ಟೇ ಕಾಡಿಸಿದರೂ, ಬೆದರಿಸಿದರೂ ಅವರನ್ನು ಕಾನೂನಿನ ಮುಂದೆ ತಂದೇ ತರುತ್ತೇವೆ ಎನ್ನುವ ದೃಢ ವಿಶ್ವಾಸ ಬೇಕು.

ಕಾನೂನಿನ ಬಲ ಹೆಚ್ಚಿಸಿದ ಗೃಹಸಚಿವರು

ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರು, ಈ ವಿಚಾರದಲ್ಲಿ ಪೊಲೀಸ್ ಇಲಾಖೆಗೆ ಮಹತ್ವದ ಸೂಚನೆ ನೀಡಿದ್ದಾರೆ. ವಿಡಿಯೋ ಲೀಕ್, ‘ಸೆಕ್ಸ್ ಟಾರ್ಷನ್’ ವಿಚಾರಕ್ಕೆ ಸಂಬಂಧಿಸಿ ಕಡ್ಡಾಯವಾಗಿ ಎಫ್ಐಆರ್ ದಾಖಲಿಸಬೇಕು ಎಂದು ಸೂಚಿಸಿದ್ದಾರೆ. ಅಷ್ಟೆ ಅಲ್ಲ, ‘ರೆಕಾರ್ಡ್ ಮಾಡಲು ನೀಡಿದ ಒಪ್ಪಿಗೆಯು, ಪ್ರಸಾರ ಮಾಡಲು ನೀಡಿದ ಒಪ್ಪಿಗೆ ಅಲ್ಲ’ ಎಂಬ ಸ್ಪಷ್ಟ ಹೇಳಿಕೆ ನೀಡಿದ್ದಾರೆ. ಇದು ಸಂತ್ರಸ್ತರಲ್ಲಿ ಭರವಸೆ ಹುಟ್ಟಿಸಬಲ್ಲ ಮಾತು. ಜೊತೆಗೆ, ವಿಡಿಯೋ ರೆಕಾರ್ಡ್, ಲೀಕ್ ಮಾಡುವವರಿಗೆ ಎಚ್ಚರಿಕೆಯ ಮಾತೂ ಹೌದು.

ತಪ್ಪುಗಳು ಸಹಜ. ಕೊಲೆಗಾರರು, ಗೂಂಡಾಗಳು, ಪರಮ ಭ್ರಷ್ಟ ರಾಜಕಾರಣಿಗಳು, ಕೋಮುವಾದಿ ಮನಸ್ಥಿತಿಯವರು ಕೂಡ ನಿಶ್ಚಿಂತೆಯಿಂದ‌ ಬದುಕುತ್ತಿರುವ ಈ ಸಮಾಜದಲ್ಲಿ, ತಪ್ಪೇ ಮಾಡದೆ ಜೀವ ಕಳೆದುಕೊಳ್ಳುವುದಕ್ಕೆ ಅರ್ಥವಿದೆಯೇ? ತಮ್ಮನ್ನು ತಾವು ಕೊಲ್ಲುವ ಬದಲು, ಕಟ್ಟುಪಾಡುಗಳನ್ನು, ಸಿದ್ಧಮಾದರಿಯ ಯೋಚನೆಗಳನ್ನು ಕೊಂದುಬಿಡಿ. ನೀವು ಬದುಕಿ. ನಿಮ್ಮ ಬದುಕಿನ ವ್ಯಾಖ್ಯಾನವನ್ನು ನೀವೇ ರೂಪಿಸಿಕೊಳ್ಳಿ.

WhatsApp Image 2025 05 03 at 1.29.17 PM
ಶರೀಫ್‌ ಕಾಡುಮಠ
+ posts

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ‌ದವರು. ಸದ್ಯ‌ ಸೌದಿ ಅರೇಬಿಯಾದ ರಿಯಾಧ್ ನಲ್ಲಿದ್ದಾರೆ. ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶರೀಫ್‌ ಕಾಡುಮಠ
ಶರೀಫ್‌ ಕಾಡುಮಠ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ‌ದವರು. ಸದ್ಯ‌ ಸೌದಿ ಅರೇಬಿಯಾದ ರಿಯಾಧ್ ನಲ್ಲಿದ್ದಾರೆ. ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುದ್ದೇಬಿಹಾಳ | ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘದ ಆರ್ಥಿಕ ಚಟುವಟಿಕೆ: ಗವಿಸಿದ್ದೇಶ್ವರ ಶ್ರೀಗಳಿಂದ ಚಾಲನೆ

ರೈತರೇ ಮಾಲೀಕರಾಗಿ, ರೈತರ ಆರ್ಥಿಕ ಸಬಲೀಕರಣವನ್ನೇ ಕೇಂದ್ರವಾಗಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿರುವ ದಾಸೋಹಿ...

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ: ವೈರಲ್ ಆಯ್ತು ರಾಹುಲ್ ಗಾಂಧಿ ‘X’ ಪೋಸ್ಟ್

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ ಎಂದು ಕಾಂಗ್ರೆಸ್ ನಾಯಕ ಹಾಗೂ...

ಗವಿಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದಾರೆಂಬ ಸುಳ್ಳುಸುದ್ದಿ: ತಪ್ಪಿತಸ್ಥನ ವಿರುದ್ಧ FIR

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಆಹ್ವಾನವನ್ನು...