ಮಣಿಪುರದಿಂದ ʼಈ ದಿನʼ ವರದಿ -9 : ಬಿರೇನ್ ಸಿಂಗ್ ಸರ್ಕಾರದ ವಿರುದ್ದ ಸಿಡಿದೆದ್ದಿರುವ ಕುಕಿ- ಝೋ ಮಹಿಳೆಯರಿಂದ ಪ್ರತಿಭಟನೆ

Date:

ಮೇ 3, ಮೇ 9 ಮತ್ತು ಜುಲೈ 26, 2023 ರಂದು ಮೈತೇಯಿ ಜನರ ಮನೆಗಳಿಗೆ ಬೆಂಕಿ ಹಚ್ಚಿದಾಗ ಮೋರೆಹ್ ದೊಡ್ಡ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಈ ವೇಳೆ ಭದ್ರತಾ ಪಡೆಗಳು ಮತ್ತು ಜನರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲು ರಾಜ್ಯ ರಕ್ಷಣಾ ಪಡೆಗಳನ್ನು ಕಳುಹಿಸಲಾಗಿದ್ದು, ಇದು ಕುಕಿ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ.

20 ದಿನಗಳು ಕಳೆದಿವೆ, ಯುದ್ಧ ಪೀಡಿತ ರಾಜ್ಯ ಮಣಿಪುರದ ತೆಂಗೌನ್‌ಪಾಲ್ ಜಿಲ್ಲೆಯ ಕುಕಿ-ಝೋ ಮಹಿಳೆಯರು ತಮ್ಮ ಬುಡಕಟ್ಟು ಪ್ರದೇಶದ ಗಡಿಯಲ್ಲಿ ಭದ್ರವಾಗಿ ಕೋಟೆ ಕಾಯುತ್ತಿದ್ದಾರೆ. ಯಾವ ಪರಿಸ್ಥಿತಿಗೂ ಬಗ್ಗದೆ ಜನನಿಬಿಡ ಇಂಫಾಲ್-ಮೊರೆಹ್ ರಾಷ್ಟ್ರೀಯ ಹೆದ್ದಾರಿ-102ನ್ನು ತಡೆಹಿಡಿದಿದ್ದಾರೆ.

ಇತ್ತೀಚಿನ ಹಿಂಸಾಚಾರಗಳ ನಂತರ ಬಿರೇನ್ ಸಿಂಗ್ ನೇತೃತ್ವದ ಸರ್ಕಾರ ನಿಯೋಜಿಸಿದ ಮಣಿಪುರ ರಾಜ್ಯ ರಕ್ಷಣಾ ಪಡೆಗಳ ವಿರುದ್ಧ ಸೆಟೆದು ನಿಂತಿರುವ ಮಹಿಳೆಯರು ವಾಣಿಜ್ಯ ಚಟುವಟಿಕೆಗಳ ಪಟ್ಟಣವಾದ ಇಂಡೋ-ಮ್ಯಾನ್ಮಾರ್ ಗಡಿಗೆ ತಾಗಿಕೊಂಡಿರುವ ಮೋರೆಹ್ ನಲ್ಲಿ ಕಾವಲು ಕಾಯುತ್ತಿದ್ದಾರೆ.

ಮೇ 3, ಮೇ 9 ಮತ್ತು ಜುಲೈ 26, 2023 ರಂದು ಮೈತೇಯಿ ಜನರ ಮನೆಗಳಿಗೆ ಬೆಂಕಿ ಹಚ್ಚಿದಾಗ ಮೋರೆಹ್ ದೊಡ್ಡ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಈ ವೇಳೆ ಭದ್ರತಾ ಪಡೆಗಳು ಮತ್ತು ಜನರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲು ರಾಜ್ಯ ರಕ್ಷಣಾ ಪಡೆಗಳನ್ನು ಕಳುಹಿಸಲಾಗಿದ್ದು, ಇದು ಕುಕಿ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ.

ಇದರ ಪರಿಣಾಮವಾಗಿ ಜನನಿಬಿಡ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ರಾಜ್ಯದ ಆಗ್ನೇಯ ಭಾಗದ ಜನರಿಗೆ ಇದರಿಂದ ಕಷ್ಟವಾಗುತ್ತಿದೆ. ಅವರ ದೈನಂದಿನ ಬದುಕಿನ ಮೇಲೆ ಇದು ಪರಿಣಾಮ ಬೀರಿದೆ. Eedina.com ಮೇ 3, 2023 ರಂದು ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ನಲುಗಿರುವ ಮಣಿಪುರಿ ಜನರ ಪರಿಸ್ಥಿತಿಯನ್ನು ವರದಿ ಮಾಡಲು ರಾಜ್ಯದಾದ್ಯಂತ ಸಂಚರಿಸಿದೆ.

ಕಳೆದ ಕೆಲವು ವಾರಗಳಿಂದ ರಾಜ್ಯದಲ್ಲಿ ಸ್ವಲ್ಪ ಶಾಂತಿ ಮತ್ತು ಸಹಜತೆ ಮರಳಿದ್ದು ಗುಂಡಿನ ದಾಳಿ, ಬೆಂಕಿ ಹಚ್ಚುವಿಕೆ ಮತ್ತು ಕೊಲೆಗಳ ಮೊದಲಾದ ಹಿಂಸಾಚಾರಗಳ ಆಘಾತದಿಂದ ಮಣಿಪುರದ ಜನರು, ಅದರಲ್ಲೂ ಬಹುಸಂಖ್ಯಾತ ಮೈತೇಯಿ ಮತ್ತು ಬುಡಕಟ್ಟು ಕುಕಿ ಜನರು ಹೊರಬಂದಿಲ್ಲ. ಪರಸ್ಪರ ಕಾದಾಡುತ್ತಿರುವ ಎರಡೂ ಸಮುದಾಯಗಳು ಭಯ, ಅನುಮಾನ ಮತ್ತು ಇತರರಿಂದ ಆಕ್ರಮಣಕ್ಕೆ ಒಳಗಾಗುವ ಹಾಗೂ ಸೋಲುವ ಭಯದಿಂದ ಬದುಕುತ್ತಿವೆ. ರಾಜ್ಯದ ಪ್ರಮುಖ ಕಾರಿಡಾರ್‌ಗಳು, ಹೆದ್ದಾರಿಗಳು ಮತ್ತು ಹಳ್ಳಿಯ ರಸ್ತೆಗಳಾದ್ಯಂತ ಅಲ್ಲಲ್ಲಿ ರಸ್ತೆತಡೆಗಳು ಅಣಬೆಗಳಂತೆ ಹುಟ್ಟಿಕೊಂಡಿವೆ. ಎರಡೂ ಸಮುದಾಯಗಳ ಜನರು, ಹೆಚ್ಚಾಗಿ ಮಹಿಳೆಯರು ಜಾಗೃತೆಯಿಂದ ವರ್ತಿಸುತ್ತಿದ್ದಾರೆ. ಎಲ್ಲರನ್ನೂ ಅನುಮಾನದಿಂದಲೇ ನೋಡುತ್ತಾ ನಡೆದಾಡುತ್ತಿದ್ದಾರೆ.

ಆಗಸ್ಟ್ 17, 2023 ರ ಬೆಳಿಗ್ಗೆ ಇಂಫಾಲ್‌ನಿಂದ ಮೋರೆಹ್ ವರೆಗೆ Eedina.com ನ ಪ್ರಯಾಣವು ಸುಲಭವಾಗಿರಲಿಲ್ಲ.
ಮೊದಲ 46-ಕಿಮೀ ಹೆದ್ದಾರಿಯಲ್ಲಿ ಮೈರಾಪೈಬಿಸ್ ಎಂದು ಕರೆಯಲ್ಪಡುವ ಮೈತೇಯಿ ಮಹಿಳೆಯರ ಸರಣಿ ಚೆಕ್‌ಪಾಯಿಂಟ್‌ಗಳು ಕಂಡವು. ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರ ಗುಂಪು ಜಮಾಯಿಸಿ ಪೂರ್ವದ ಕಡೆ ಹೋಗುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸುತ್ತಿದ್ದರು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲಾ ಪ್ರಯಾಣಿಕರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಅವರು ವಾಹನವನ್ನು ಬಿಡುತ್ತಿದ್ದರು.

ರಸ್ತೆಯಲ್ಲಿ ಕಲ್ಲುಗಳನ್ನಿಟ್ಟು ಬಂದ್‌ ಮಾಡಲಾಗಿರುವುದು

ಈ ರಸ್ತೆತಡೆಗಳನ್ನು ಟ್ರಾನ್ಸ್-ಏಷ್ಯನ್ ಸೂಪರ್ ಹೈವೇ ಗೇಟ್‌ ವೇ ಪಲ್ಲೆಲ್ ಗೇಟ್‌ವರೆಗೆ ಹಾಕಲಾಗಿದೆ. ಪಲ್ಲೆಲ್, ಇದು ಪಶ್ಚಿಮ ಇಂಫಾಲ್ ಮತ್ತು ತೆಂಗೌನ್‌ಪಾಲ್ ಜಿಲ್ಲೆಗಳ ನಡುವೆ ಇರುವ ಕಕ್ಚಿಂಗ್ ಜಿಲ್ಲೆಯ ಒಂದು ಪಟ್ಟಣ. ಪಲ್ಲೆಲ್ ನ ನಂತರ ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ಅನೇಕ ವ್ಯತ್ಯಾಸಗಳನ್ನು ನೋಡಬಹುದು. ಪಲ್ಲೆಲ್‌ ಕುಕಿ-ಝೋ ಬುಡಕಟ್ಟು ಜನರು ಹೆಚ್ಚಾಗಿ ವಾಸವಿರುವ ಗುಡ್ಡಗಾಡು ಜಿಲ್ಲೆಯಾದ ತೆಂಗೌನ್‌ಪಾಲ್ ಜಿಲ್ಲೆಯನ್ನು ಸುತ್ತುವರೆದಿದೆ. ಇಲ್ಲಿ ಹೆಚ್ಚು ಚೆಕ್‌ಪೋಸ್ಟ್‌ಗಳಿಲ್ಲದಿದ್ದರೂ ತೆಂಗೌನ್‌ಪಾಲ್‌ನ ಮೋರೆಹ್ ವರೆಗೆ ಮುಂದಿನ 62-ಕಿಮೀ‌ ದೂರ ರಸ್ತೆತಡೆಗಳನ್ನು ಹಾಕಲಾಗಿದೆ. ಕುಕಿ ಜನರು ನಿರ್ಮಿಸಿದ ಒಂದೆರಡು ರಸ್ತೆ ತಡೆಗಳನ್ನು ದಾಟಿದ ನಂತರ ಕೇಂದ್ರ ಅರೆಸೇನಾ ಪಡೆಗಳ ಚೆಕ್‌ಪೋಸ್ಟ್‌ಗಳು ಕಾಣಸಿಗುತ್ತವೆ.

ಈ ಉದ್ದಕ್ಕೂ ಅಸ್ಸಾಂ ರೈಫಲ್ಸ್ ಕನಿಷ್ಠ ಮೂರು ಪ್ರಮುಖ ಚೆಕ್‌ಪೋಸ್ಟ್‌ಗಳನ್ನು ಹೊಂದಿದೆ. ಕುಕಿ-ಝೋ ಮಹಿಳೆಯರು ಜಿಲ್ಲೆಯ ಪ್ರವೇಶ ಮಾರ್ಗವನ್ನು ತಡೆದಂದಿನಿಂದ ರಾಜ್ಯದ ರಕ್ಷಣಾ ಪಡೆಗಳು ತೆಂಗೌನ್‌ಪಾಲ್‌ನಲ್ಲಿರುವ ಪ್ರಧಾನ ಕಚೇರಿಯಲ್ಲಿ ಆಶ್ರಯ ಪಡೆಯುತ್ತಿವೆ.

ಜುಲೈ 28, 2023 ರಂದು ಭಾರತೀಯ ರಿಸರ್ವ್ ಬೆಟಾಲಿಯನ್ (IRB), ಮಣಿಪುರ ರೈಫಲ್ಸ್ ಮತ್ತು ಕಮಾಂಡೋಗಳು ಸೇರಿದಂತೆ ಭದ್ರತಾ ಪಡೆಗಳ ಹತ್ತು ಸೇನಾವಾಹನಗಳ ಬೆಂಗಾವಲು ಮೊರೆಹ್ ಪಟ್ಟಣದ ಕಡೆಗೆ ಸಾಗುತ್ತಿದ್ದಾಗ ತೆಂಗೌನ್‌ಪಾಲ್‌ ನಲ್ಲಿ ಮಹಿಳೆಯರು ಅವರನ್ನು ತಡೆದಿದ್ದರು.

Eedina.com ಪರ್ವತ ಪ್ರದೇಶಗಳ ಅಂಕುಡೊಂಕಾದ ರಸ್ತೆಗಳ ಉದ್ದಕ್ಕೂ ಸಾಗಿದಂತೆ ಹವಾಮಾನವೂ ಬದಲಾಗುತ್ತಾ ಹೋಯಿತು. ಮಳೆ, ಗಾಳಿ ಮತ್ತು ಮಂಜಿನಿಂದ ಕೂಡಿದ ವಾತಾವರಣ ಜಿಲ್ಲಾ ಕೇಂದ್ರವಿರುವ ತೆಂಗೌನ್‌ಪಾಲ್‌ನ ತುತ್ತತುದಿಗೆ ಸ್ವಾಗತಿಸಿತು. ಇದ್ದಕ್ಕಿದ್ದಂತೆ ಜಿಲ್ಲಾಧಿಕಾರಿ ಕಚೇರಿಗೆ ಕೇವಲ 100 ಮೀಟರ್‌ಗಳ ದೂರ ಇರುವಾಗ ನಮ್ಮ ವಾಹನವನ್ನು ಬಲವಂತವಾಗಿ ತಡೆದು ನಿಲ್ಲಿಸಲಾಯಿತು. ದೊಡ್ಡ ದೊಡ್ಡ ಬಂಡೆಕಲ್ಲುಗಳ ಸಾಲು ಅರ್ಧ ರಸ್ತೆಯನ್ನು ತಡೆದರೆ, ಇನ್ನರ್ಧ ರಸ್ತೆಯಲ್ಲಿ ಮಹಿಳೆಯರ ಗುಂಪು ಸಾಲಾಗಿ ನಿಂತು ಹೆದ್ದಾರಿಯಲ್ಲಿ ಹಾದುಹೋಗುವ ವಾಹನಗಳನ್ನು ನಿಲ್ಲಿಸುತ್ತಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕುಕಿ-ಝೋ ಬುಡಕಟ್ಟು ಜನಾಂಗದವರಿಗೆ ಪ್ರತ್ಯೇಕ ಆಡಳಿತ ಬೇಕು (We demand separate administration for Kuki-Zo Tribals )” ಎಂದು ದೊಡ್ಡ ದಪ್ಪ ಅಕ್ಷರಗಳಲ್ಲಿ ಬರೆಯಲ್ಪಟ್ಟ ತಾತ್ಕಾಲಿಕ ಟೆಂಟ್‌ಗಳು ದಾರಿಹೋಕರನ್ನು ಸ್ವಾಗತಿಸುತ್ತಿದ್ದವು. ಹತ್ತಾರು ಹೆಂಗಸರು ಹೆದ್ದಾರಿಯ ಅಲ್ಲಲ್ಲಿ ಅಕ್ಕಿ ಮತ್ತು ಬೇಳೆ ಸಾಂಬಾರಿನ ಊಟ ಮಾಡುತ್ತಿದ್ದರು. ಹೊಸದಾಗಿ ಡಾಂಬರು ಹಾಕಿದ ರಸ್ತೆ ಅವರ ತಾತ್ಕಾಲಿಕ ಊಟದ ಟೇಬಲ್‌ಗಳಾಗಿ ಮಾರ್ಪಟ್ಟಿದೆ.

Eedina.com ಜೊತೆಗೆ ಮಾತನಾಡುತ್ತಾ ಕುಕಿ ಮಹಿಳಾ ಸಂಘಟನೆಯ ಮಾನವ ಹಕ್ಕುಗಳ (KWOHR) ತೆಂಗೌನ್‌ಪಾಲ್‌ನ ಉಪಾಧ್ಯಕ್ಷರಾದ ಚೋಂಗ್ಬೋಯ್ ಮೇಟ್ ಮಹಿಳೆಯರಲ್ಲಿರುವ ಸಮಸ್ಯೆಗಳನ್ನು ವಿವರಿಸಿದರು.

ಹಿರಿಯ ಹೋರಾಟಗಾರ್ತಿ ಜೊತೆ ಚೋಂಗ್ಬೋಯ್ ಮೇಟ್

ರಾಜ್ಯ ರಕ್ಷಣಾ ಪಡೆಗಳು ತಮ್ಮ ʼಮಿತಿʼಗಳನ್ನು ಮೀರುತ್ತಾರೆ ಎಂಬ ಭಯದಿಂದ ಸ್ವತಃ ಮಹಿಳೆಯರೇ ತಡೆದು ನಿಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದರು. ರಾಜ್ಯ ರಕ್ಷಣಾ ಪಡೆಗಳಲ್ಲಿ ಅನೇಕ ಮೈತೇಯಿ ಸಿಬ್ಬಂದಿಗಳಿದ್ದಾರೆ. ಅವರು ಕುಕಿಗಳು ವಾಸಿಸುವ ಹಳ್ಳಿಗಳನ್ನು “ಸುಡಲು” ಯಾವ ಹಂತಕ್ಕೂ ಹೋಗಬಲ್ಲರು ಎಂದು ಅವರು ಹೇಳಿದರು. ಪೊಲೀಸ್ ಬೆಂಗಾವಲು ಪಡೆಯಲ್ಲಿರುವ ಅರಾಂಬೈ ತೆಂಗೋಲ್ ಮತ್ತು ಮೈತೆ ಲೀಪುನ್ ತರಹದ ಮೈತೇಯಿ ಆತಂತವಾದಿ ಗುಂಪುಗಳ ಸದಸ್ಯರ ಬಗ್ಗೆ ಆತಂಕವಾಗುತ್ತದೆ ಎಂದು ಅವರು ತಿಳಿಸಿದರು.

“ನಾವು ರಾಜ್ಯ ರಕ್ಷಣಾ ಪಡೆಗಳ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದೇವೆ. ಏಕೆಂದರೆ ಅವರು ಎರಡು ತೀವ್ರಗಾಮಿ ಮೈತೇಯಿ ಸಂಘಟನೆಗಳ ಸದಸ್ಯರೊಂದಿಗೆ ಸೇರಿ ನಮ್ಮ ಜನರ ಮೇಲೆ ದಾಳಿ ನಡೆಸುತ್ತಿದ್ದಾರೆ. ಜಿಲ್ಲೆಯ ಸುಮಾರು 30 ಗ್ರಾಮಗಳ 1,000 ಕ್ಕೂ ಹೆಚ್ಚು ಮಹಿಳೆಯರು ಮಣಿಪುರಿ ರಾಜ್ಯದ ಪಡೆಗಳು ಮೋರೆಹ್ ಪಟ್ಟಣವನ್ನು ಪ್ರವೇಶಿಸದಂತೆ ಹೆದ್ದಾರಿಯಲ್ಲಿ ತಡೆಯುತ್ತಿದ್ದಾರೆ. ಯಾವನೇ ಒಬ್ಬ ಮೈತೇಯಿ ನಮ್ಮ ಬೆಟ್ಟ ಪ್ರದೇಶವನ್ನು ಪ್ರವೇಶಿಸುವುದು ನಮಗೆ ಬೇಕಾಗಿಲ್ಲ. ಕುಕಿಗಳಿಗೂ ಮೈತೇಯಿ ಪ್ರಾಬಲ್ಯದ ಪ್ರದೇಶಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮೈತೇಯಿಗಳು ನಮ್ಮ ಸರಹದ್ದಿಗೆ ಕಾಲಿಡುವುದು ನಮಗೆ ಇಷ್ಟವಿಲ್ಲ. ಇಡೀ ಹಿಂಸಾಚಾರಕ್ಕೆ ಮೈತೇಯಿಗಳೇ ಕಾರಣರು. ಕುಕಿಗಳ ವಿರುದ್ಧ ಅವರು ದೌರ್ಜನ್ಯವನ್ನು ನಿಲ್ಲಿಸುವುದಿಲ್ಲ ಎಂದು ಗೊತ್ತಿದ್ದರೂ ನಾವೇಕೆ ಅವರನ್ನು ನಮ್ಮ ಪ್ರದೇಶಕ್ಕೆ ಬಿಟ್ಟುಕೊಳ್ಳಬೇಕು?” ಎಂದು ಅವರು ಕೇಳಿದರು.

ರಾಜ್ಯ ರಕ್ಷಣಾಪಡೆಗಳಲ್ಲಿ ಅನೇಕ ಮೈತೇಯಿ ಸಿಬ್ಬಂದಿಗಳಿದ್ದಾರೆ ಎಂದು ಚೊಂಗ್ಬೋಯ್ ಹೇಳಿದರು. “ಅವರು ನಮ್ಮ ಗ್ರಾಮಗಳಿಗೆ ಬರುವುದು ನಮಗೆ ಇಷ್ಟವಿಲ್ಲ. ರಾಜ್ಯ ರಕ್ಷಣಾಪಡೆಗಳು ಏನೆಲ್ಲಾ ಮಾಡಲು ತಯಾರಾಗಿವೆ ಎಂಬುದನ್ನು ನಮಗೆ ಹೇಳಲು ಸಾಧ್ಯವಿಲ್ಲ. ಆದರೆ ಅವರು ಪರಿಪೂರ್ಣ ಯೋಜನೆಯೊಂದಿಗೆ ಇಲ್ಲಿಗೆ ಬಂದಿದ್ದಾರೆ. ನಾವು ಅವರಿಂದ ನಮ್ಮ ಘನತೆಯನ್ನು ರಕ್ಷಿಸಿಕೊಳ್ಳಬೇಕಾಗಿದೆ. ಕಳೆದ 20 ದಿನಗಳಿಂದ ಮಹಿಳೆಯರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಹವಾಮಾನ ಮತ್ತು ಇತರ ತೊಂದರೆಗಳನ್ನು ಲೆಕ್ಕಿಸದೆ ಅವರು ಹೆದ್ದಾರಿಯಲ್ಲಿ ಬಿಡದೆ ಸಂಚಾರ ನಿರ್ಬಂಧಿಸುತ್ತಿದ್ದಾರೆ. ಎಡೆಬಿಡದೆ ಮಳೆ ಸುರಿಯುತ್ತಿದೆ. ಆದರೂ ಒಬ್ಬಳೇ ಒಬ್ಬ ಮಹಿಳೆ ತಲೆ ಕೆಡಿಸಿಕೊಂಡಿಲ್ಲ. ನಾವು ಈ ಹೆದ್ದಾರಿಯನ್ನು ಎಷ್ಟರ ಮಟ್ಟಿಗೆ ಕಾವಲು ಕಾಯುತ್ತಿದ್ದೇವೆ ಎಂದರೆ ರಸ್ತೆಯೇ ನಮ್ಮ ಊಟದ ಟೇಬಲ್‌ ಆಗಿ ಮಾರ್ಪಟ್ಟಿದೆ” ಎಂದು ಅವರು ಹೇಳಿದರು.

ಆದರೂ ಕುಕಿಗಳಿಗೆ ಕೇಂದ್ರ ರಕ್ಷಣಾ ಪಡೆಗಳೊಂದಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಚೊಂಗ್ಬೋಯ್ ಹೇಳಿದರು. “ವಾಸ್ತವವಾಗಿ ಕೇಂದ್ರ ರಕ್ಷಣಾಪಡೆಗಳು ಬುಡಕಟ್ಟು ಪ್ರದೇಶಗಳಿಗೆ ಬರಬೇಕೆಂದು ನಾವು ಬಯಸುತ್ತೇವೆ. ಅವು ರಾಜ್ಯ ರಕ್ಷಣಾ ಪಡೆಗಳಿಗೆ ಸರೀ ವಿರೋಧವಾಗಿ ವರ್ತಿಸುತ್ತವೆ. ಮುಖ್ಯಮಂತ್ರಿ ಬಿರೇನ್ ಸಿಂಗ್ ಏನು ಮಾಡಲಿದ್ದಾರೆ ಎಂಬುದು ನಮಗೆ ಗೊತ್ತಿದೆ. ನಾವು ಪ್ರತ್ಯೇಕ ಆಡಳಿತದ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ. ಆದರೆ ಇಲ್ಲಿಂದ ರಾಜ್ಯ ರಕ್ಷಣಾಪಡೆಗಳನ್ನು ಹಿಂಪಡೆಯಬೇಕು ಎಂಬುದು ಸದ್ಯದ ನಮ್ಮ ಪ್ರಮುಖ ಬೇಡಿಕೆ. ನಾವು ಎಷ್ಟು ಸಮಯದವರೆಗೆ ಈ ರೀತಿ ಕಾವಲು ಕಾಯಬೇಕು ಎಂದು ನಮಗೆ ತಿಳಿದಿಲ್ಲ. ಆದರೆ ರಾಜ್ಯ ರಕ್ಷಣಾಪಡೆಗಳನ್ನು ಹಿಂತೆಗೆದುಕೊಳ್ಳುವವರೆಗೆ ನಾವು ಇದನ್ನು ಮಾಡುತ್ತೇವೆ. ಅವರು ಮೋರೆಹ್‌ ಒಳಗೆ ಬರಲು ಸರ್ವಪ್ರಯತ್ನಗಳನ್ನೂ ಮಾಡುತ್ತಿದ್ದಾರೆ” ಎಂದು ಅವರು ಹೇಳಿದರು.

ನಾಗರಿಕರನ್ನೂ ತಪಾಸಣೆ ಮಾಡಬೇಕಾದ ಅಗತ್ಯ ಬಂದಿದೆ ಎಂದು ಚೊಂಗ್ಬೋಯ್ ಹೇಳಿದರು. “ಜನರು ವೇಷ ಧರಿಸಿ ಅಕ್ರಮ ವಸ್ತುಗಳೊಂದಿಗೆ ಬುಡಕಟ್ಟು ಪ್ರದೇಶಗಳನ್ನು ಪ್ರವೇಶಿಸಿದ ನಿದರ್ಶನಗಳಿವೆ. ಆದರೂ ನಾವು ಆದಿವಾಸಿಗಳನ್ನು ಮತ್ತು ಕೇಂದ್ರದ ರಕ್ಷಣಾಪಡೆಗಳನ್ನು ತಡೆಯುತ್ತಿಲ್ಲ. ನಿನ್ನೆ ರಾತ್ರಿ ಸ್ವಲ್ಪ ಗೊಂದಲಗಳವಾಯಿತು. ನಾವು ಹೆಚ್ಚಿನ ಎಚ್ಚರಿಕೆಯಲ್ಲಿದ್ದೆವು. ಆದರೂ ಕೆಲವರು ಮಾರುವೇಷದಲ್ಲಿ ಮೋರೆಹ್ ಪ್ರವೇಶಿಸಲು ಪ್ರಯತ್ನಿಸಿದ್ದು ಎಂದು ನಮಗೆ ತಿಳಿಯಿತು. ಆದರೆ ಯಾರನ್ನೂ ಒಳಗೆ ಬಿಡಲಾಗಿಲ್ಲ ಎಂದು ನಾವು ಖಚಿತಪಡಿಸಿಕೊಂಡಿದ್ದೇವೆ, ” ಎನ್ನುತ್ತಾರೆ ಚೊಂಗ್ಬೋಯ್.

ಇದನ್ನು ಓದಿ ಮಣಿಪುರದಿಂದ ʼಈ ದಿನʼ ವರದಿ-8 | ಮ್ಯಾನ್ಮಾರ್‌ಗೆ ಪಲಾಯನಗೈದಿದ್ದ 200 ಮೈತೇಯಿಗಳು ಮರಳಿ ಮಣಿಪುರಕ್ಕೆ

ರಸ್ತೆತಡೆಯು ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಕಷ್ಟನ್ನು ಉಂಟುಮಾಡುತ್ತಿದೆ ಎಂದು ಒಪ್ಪಿಕೊಂಡ ಚೊಂಗ್ಬೋಯಿ, ಇದು ಮಹಿಳೆಯರ ಉಳಿವಿನ ಪ್ರಶ್ನೆಯಾಗಿರುವುದರಿಂದ ಇದನ್ನು ಮಾಡಬೇಕಾಯಿತು ಎಂದು ಹೇಳಿದರು.
ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಇತ್ತೀಚಿನ ಹೇಳಿಕೆಯ ವಿರುದ್ಧ ಸಮುದಾಯವು ಆಗಸ್ಟ್ 18, 2023 ರಂದು ಮೋರೆಹ್‌ನಲ್ಲಿ ಶಾಂತಿಯುತ ರ‍್ಯಾಲಿಯನ್ನು ಆಯೋಜಿಸಿತ್ತು. ನೆರೆಯ ಮ್ಯಾನ್ಮಾರ್‌ನಿಂದ ಬರುವ ಕುಕಿ ನಿರಾಶ್ರಿತರಿಂದಾಗಿ ಮಣಿಪುರದ ಸಮಸ್ಯೆಗಳು ಹೆಚ್ಚಾಗಿವೆ ಎಂದು ಶಾ ಹೇಳಿದ್ದರು.

ಅರೆಸೇನಾ ಪಡೆಗಳೊಂದಿಗೆ ತೆಂಗೌನ್‌ಪಾಲ್ ಜಿಲ್ಲಾಡಳಿತವು ಭದ್ರತಾ ಕಾರಣಗಳನ್ನು ನೀಡಿ ಈ ಶಾಂತಿಯುತ ರ‍್ಯಾಲಿಯನ್ನು ನಿಲ್ಲಿಸಿತು. ಇದರಿಂದ ವಿಚಲಿತರಾಗದ ಕುಕಿ ಸಮುದಾಯದವರು, ಹೆಚ್ಚಾಗಿ ಮಹಿಳೆಯರು ಮರುದಿನ ತೆಂಗೌನ್‌ಪಾಲ್ ನಲ್ಲಿ ಮತ್ತೆ ಶಾಂತಿಯುತ ಮೆರವಣಿಗೆಯನ್ನು ನಡೆಸಿ ಸಮಸ್ಯೆಗೆ ನ್ಯಾಯ ಮತ್ತು ಸಾಂವಿಧಾನಿಕ ಪರಿಹಾರ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿದರು.

ಇದನ್ನೂ ಓದಿ ಮಣಿಪುರದಿಂದ ‘ಈ ದಿನ’ ವರದಿ-7 | 25 ವರ್ಷಗಳ ನಂತರ ಹಿಂದಿ ಚಲನಚಿತ್ರ ಪ್ರದರ್ಶನ

ಮಣಿಪುರದಿಂದ ’ಈ ದಿನ’ ವರದಿ- 6 | ಕದನ ಕೇಂದ್ರದಲ್ಲಿ ಮಣಿಪುರಿ ಮಹಿಳೆಯರೂ ಆರೋಪಿಗಳು!

ಮಣಿಪುರದಿಂದ ’ಈ ದಿನ’ ವರದಿ- 5 | ಎಳೆಯ ಕೈಗಳಲ್ಲಿ ಬಂದೂಕು! ಬಂಕರ್‌ಗಳಲ್ಲಿ ಕಂಡ ದುರಂತ ಕಥನ

ಮಣಿಪುರದಿಂದ ’ಈ ದಿನ’ ವರದಿ- 4 | ಜನಾಂಗೀಯ ಕದನದಲ್ಲಿ ಮಡಿದ ಕುಕಿಗಳ ’ನೆನಪಿನ ಗೋಡೆ’

ಮಣಿಪುರದಿಂದ ’ಈ ದಿನ’ ವರದಿ-3 | ಕುಕಿಗಳ ನಿರಾಶ್ರಿತ ಶಿಬಿರದಲ್ಲಿ; ಕುಕಿ-ಮೈತೇಯಿ ದಂಪತಿ ದೂರ ಮಾಡಿದ ಅಂತರ್ಯುದ್ಧ

ಮಣಿಪುರದಿಂದ ‘ಈ ದಿನ’ ವರದಿ-2 | ಕುಕಿ ಪ್ರಾಬಲ್ಯದ ಲಮ್ಕಾ- ಚೂರಚಾಂದ್ಪುರ ಹೆದ್ದಾರಿಯಲ್ಲಿ…

ಮಣಿಪುರದಿಂದ ‘ಈ ದಿನ’ ವರದಿ-1 | ಬಿಜೆಪಿ ಆರಂಭಿಸಿರುವ ’ಮೈತೇಯಿ ಗರ್ಭಿಣಿಯರ ಶಿಬಿರ’ದಲ್ಲಿ…

ಅಶ್ವಿನಿ ವೈ ಎಸ್‌
+ posts

ಪತ್ರಕರ್ತೆ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಬು ಜಗಜೀವನ್ ರಾಮ್ ಅವರನ್ನು ಪ್ರಧಾನಿ ಮಾಡಬೇಕೆಂದು ಆರೆಸ್ಸೆಸ್‌ ಪ್ರಯತ್ನಿಸಿತ್ತೇ?

ಇಂದು ಜಗಜೀವನ್ ರಾಮ್ ಅವರ ಹುಟ್ಟಿದ ದಿನ.ಸಂಘಿಗಳು ಚುನಾವಣಾ ದೃಷ್ಟಿಯಿಂದ ಅಂಬೇಡ್ಕರ್...

ಲೋಹಿಯಾ ಅವರ ಚಿಂತನೆಯ ಬೆಳಕಿನಲ್ಲಿ ನಮ್ಮ ಕರ್ತವ್ಯದ ಅವಲೋಕನ

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಇಂದು ಅತ್ಯಂತ ಭೀಕರವಾದ ವಾಸ್ತವವನ್ನು ಎದುರಿಸುತ್ತಿದ್ದೇವೆ. ಅದು...

ಹೊಸ ಓದು | ಎಸ್. ಗಂಗಾಧರಯ್ಯರ ‘ಗಂಗಪಾಣಿ’ : ಅಜ್ಜಿಯ ಹಾಳು ಮಂಟಪವೂ ಗದ್ದಿಗಪ್ಪನ ತತ್ವ ಮಂಟಪವೂ

ಊರವರ ಬಾಯಲ್ಲಿ 'ಹಾಳು ಮಂಟಪ'ವಾಗಿತ್ತು. ಆದರೆ ಗದ್ದಿಗಪ್ಪನಿಗೆ ಅದು 'ತತ್ವ ಮಂಟಪ'ವಾಗಿತ್ತು....

‘ಸಿಎಎ ಅಸಂವಿಧಾನಿಕ’ ಎಂದ ನ್ಯಾಯಮೂರ್ತಿ ಚಂದ್ರಚೂಡ್‌ರ ಪುತ್ರ; ವೀಡಿಯೋ ವೈರಲ್

ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ಜಾರಿಗೆ ತೀವ್ರ ವಿರೋಧ...