ಪೆಟ್ರೋಲ್ ಬೆಲೆ ಏರಿಕೆ: ಜನರ ಮನೋಭೂಮಿಕೆ ಸಿದ್ಧಗೊಳಿಸುತ್ತಿದೆ ಮೋದಿ ಸರ್ಕಾರ!

Date:

ಇಂಧನ ಬೆಲೆ ಏರಿಕೆಯು ದಿನಬಳಕೆಯ ವಸ್ತುಗಳಾದ ತರಕಾರಿ, ಹಾಲು ಹಾಗೂ ಇತರ ಅಗತ್ಯ ಸಾಮಗ್ರಿಗಳ ಬೆಲೆಗಳನ್ನು ಪ್ರಭಾವಿಸುತ್ತವೆ. ಅವುಗಳ ಬೆಲೆಯೂ ಗಗನಕ್ಕೇರುವಂತೆ ಮಾಡುತ್ತವೆ

ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಏಕತರನಾದ ಹೇಳಿಕೆಗಳನ್ನು ನೀಡಿದ್ದಾರೆ. ‘ಕಚ್ಚಾ ತೈಲದ ಬೆಲೆ ಇಳಿಯದೆ ಹೋದರೆ ಪೆಟ್ರೋಲ್ ಡೀಸೆಲ್ ದರ ಏರಿಕೆ ಅನಿವಾರ್ಯ’ ಎಂದಿರುವ ಅವರು, ಶೀಘ್ರದಲ್ಲೇ ದೇಶದಲ್ಲಿ ಇಂಧನ ದರ ಏರಿಕೆಯಾಗುವ ಸಾಧ್ಯತೆಯನ್ನು ದೃಢಪಡಿಸಿದ್ದಾರೆ. ಆದರೆ, ಅವರ ಹೇಳಿಕೆಗಳು ಕೇವಲ ಆರ್ಥಿಕ ಅನಿವಾರ್ಯತೆಯನ್ನು ಮಾತ್ರವೇ ಸೂಚಿಸುತ್ತಿಲ್ಲ. ಬದಲಾಗಿ, ಬೆಲೆ ಏರಿಕೆಯ ಹೊಡೆತಕ್ಕೆ ಜನರ ಮನಸ್ಸನ್ನು ಈಗಿನಿಂದಲೇ ಸಿದ್ಧಗೊಳಿಸುವ ಮತ್ತು ಜನಾಕ್ರೋಶವನ್ನು ಅದುಮಿಡುವ ತಂತ್ರವೂ ಆಗಿದೆ ಎನ್ನುತ್ತಾರೆ ವಿಶ್ಲೇಷಕರು.

- Advertisement -

“ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಸ್ಥಿತಿ ದೀರ್ಘಕಾಲ ಮುಂದುವರಿದರೆ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು ಅನಿವಾರ್ಯವಾಗಬಹುದು. ಜಾಗತಿಕವಾಗಿ ಕಚ್ಚಾ ತೈಲದ ಬೆಲೆಗಳು ಹೆಚ್ಚಾಗುತ್ತಿದ್ದರೂ, ಭಾರತದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಈವರೆಗೂ ಆ ಹೊರೆಯನ್ನು ತಾವೇ ಭರಿಸುತ್ತಿವೆ. ಆದರೆ, ಈ ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಸರ್ಕಾರವು ಈ ಬೆಲೆ ಏರಿಕೆಯ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಬೇಕಾಗುತ್ತದೆ. ಇದು, ಕೇವಲ ಸಮಯದ ವಿಷಯವಷ್ಟೇ” ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಆರ್‌ಬಿಐ ಗವರ್ನರ್ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಸ್ಥಿರವಾಗದಿದ್ದರೆ ದೇಶದ ಹಣದುಬ್ಬರ ನಿಯಂತ್ರಣ ಕಷ್ಟವಾಗುತ್ತದೆ. ತೈಲ ಕಂಪನಿಗಳು ಅನುಭವಿಸುತ್ತಿರುವ ನಷ್ಟವನ್ನು ಸರಿದೂಗಿಸಲು ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಾಗುತ್ತಿರುವ ಏರುಪೇರುಗಳನ್ನು ನಿಭಾಯಿಸಲು ಬೆಲೆ ಏರಿಕೆ ಅನಿವಾರ್ಯ ಎಂಬುದು ಸರ್ಕಾರದ ವಾದ. ಸಚಿವ ಹರ್ದೀಪ್ ಪುರಿ ಅವರು ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆಯನ್ನು ಪದೇ ಪದೇ ಪ್ರಸ್ತಾಪಿಸುವ ಮೂಲಕ, ಬೆಲೆ ಏರಿಕೆಯ ಹೊಣೆಯನ್ನು ಅಂತಾರಾಷ್ಟ್ರೀಯ ವಿದ್ಯಮಾನಗಳ ಮೇಲೆ ಹೊರಿಸುತ್ತಿದ್ದಾರೆ.

Advertisements

”ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದರಿಂದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು (OMCs) ದಿನಕ್ಕೆ ಸುಮಾರು 1,000 ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸುತ್ತಿವೆ. ಒಂದೇ ತ್ರೈಮಾಸಿಕದಲ್ಲಿ ಈ ನಷ್ಟವು ಸುಮಾರು 1 ಲಕ್ಷ ಕೋಟಿ ರೂಪಾಯಿಗೆ ತಲುಪಬಹುದು. ಈ ನಷ್ಟವನ್ನು ಕಂಪನಿಗಳು ಎಷ್ಟು ದಿನಗಳವರೆಗೆ ಭರಿಸಲು ಸಾಧ್ಯ ಎಂಬುದು ನನಗೆ ಚಿಂತೆಯ ವಿಷಯವಾಗಿದೆ. ಯಾವುದೋ ಒಂದು ಹಂತದಲ್ಲಿ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲೇಬೇಕಾಗುತ್ತದೆ. ಬೆಲೆ ಏರಿಕೆಯ ಅನಿವಾರ್ಯವಾಗಿದೆ” ಎಂದು ಸಚಿವ ಹರ್ದೀಪ್ ಪುರಿ ಹೇಳಿದ್ದಾರೆ. ತೈಲ ಕಂಪನಿಗಳ ಪರವಾಗಿ ಬ್ಯಾಟ್‌ ಬೀಸಿರುವ ಅವರು, ಜನರು ಬೆಲೆ ಏರಿಕೆಯ ಹೊರೆ ಹೊರಲು ಸಿದ್ದರಾಗಬೇಕು ಎಂದು ಸೂಚಿಸಿದ್ದಾರೆ.

ಗಮನಾರ್ಹವಾಗಿ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯು ಕೇವಲ ವಾಹನ ಸವಾರರು/ಚಾಲಕರ ಮೇಲೆ ಮಾತ್ರವೇ ಪರಿಣಾಮ ಬೀರುವುದಿಲ್ಲ. ಇಂಧನ ಬೆಲೆ ಏರಿಕೆಯು ದಿನಬಳಕೆಯ ವಸ್ತುಗಳಾದ ತರಕಾರಿ, ಹಾಲು ಹಾಗೂ ಇತರ ಅಗತ್ಯ ಸಾಮಗ್ರಿಗಳ ಬೆಲೆಗಳನ್ನು ಪ್ರಭಾವಿಸುತ್ತವೆ. ಅವುಗಳ ಬೆಲೆಯೂ ಗಗನಕ್ಕೇರುವಂತೆ ಮಾಡುತ್ತವೆ.

ಈಗಾಗಲೇ ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸುತ್ತಿರುವಾಗ, ಇಂಧನ ದರ ಏರಿಕೆಯು ಬೆಂಕಿಗೆ ತುಪ್ಪ ಸುರಿದಂತಾಗುತ್ತದೆ. ಜನಾಕ್ರೋಶಕ್ಕೂ ಕಾರಣವಾಗುತ್ತದೆ. ಅದನ್ನು ನಿಭಾಯಿಸಲು ಸರ್ಕಾರಗಳು ನಾನಾ ತಂತ್ರಗಳನ್ನು ಹೆಣೆಯುತ್ತವೆ. ಅಂತಹ ತಂತ್ರವನ್ನು ಈಗ ಮೋದಿ ಸರ್ಕಾರ ರೂಪಿಸುತ್ತಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಯಾವುದೇ ದೊಡ್ಡ ಬೆಲೆ ಏರಿಕೆಯ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸರ್ಕಾರಗಳು ಇಂತಹ ‘ಎಚ್ಚರಿಕೆ’ ಅಥವಾ ‘ಮುನ್ಸೂಚನೆ’ಗಳನ್ನು ನೀಡುತ್ತವೆ. ಇದರ ಹಿಂದೆ ಕೆಲವು ಪ್ರಮುಖ ಉದ್ದೇಶಗಳಿರುತ್ತವೆ. ಅದರಲ್ಲಿ, ಮುಖ್ಯವಾಗಿ, ಬೆಲೆ ಏರಿಕೆ ವಿರುದ್ಧ ಜನರು ಮಾತನಾಡದಂತೆ, ಜನರ ಮನಸ್ಥಿತಿಯನ್ನು ಸಜ್ಜುಗೊಳಿಸಿ, ಬಳಿಕ ದರ ಹೆಚ್ಚಳ ಮಾಡುವುದು ಸರ್ಕಾರಗಳ ತಂತ್ರ. ಇದು, ಬೆಲೆ ಏರಿಕೆ ಮಾಡಿದಾಗ ಉಂಟಾಗುವ ಸಾರ್ವಜನಿಕ ಆಕ್ರೋಶವನ್ನು ತಡೆಯುತ್ತದೆ. ದೇಶದ ಒಳಿತಿಗಾಗಿ ಬೆಲೆ ಹೆಚ್ಚಳವನ್ನು ಸಹಿಸಿಕೊಳ್ಳಬೇಕೆಂಬ ಮನಸ್ಥಿತಿಗೆ ಜನರನ್ನು ದೂಡುತ್ತದೆ.

ಅಂತೆಯೇ, ಬೆಲೆ ಏರಿಕೆಯು ಸರ್ಕಾರದ ವೈಫಲ್ಯವಲ್ಲ, ಬದಲಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳ ಏರಿಳಿತದ ಫಲಿತಾಂಶ ಎಂಬ ಸಂದೇಶವನ್ನು ಮೊದಲಿನಿಂದಲೂ ಜನರಿಗೆ ದಾಟಿಸಲಾಗುತ್ತದೆ. ಪರಿಣಾಮ, ಜನರ ಸರ್ಕಾರಗಳ ವಿರುದ್ಧ ಆಕ್ರೋಶಗೊಳ್ಳುವ ಬದಲಾಗಿ, ದೂರದ ಗುಮ್ಮನ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೇ, ಸರ್ಕಾರದ ಪರವಾಗಿ ಜನರೇ ಮಾತನಾಡುವಂತೆ ಗ್ರಾಹಕರ ಮನಸ್ಥಿತಿಯ ಮೇಲೆ ಪ್ರಭಾವ ಬೀರುತ್ತವೆ.

ಈ ಲೇಖನ ಓದಿದ್ದೀರಾ?: ಮೋದಿ VS ಇಂದಿರಾ ; ಯಾವುದು ಸತ್ಯ, ಯಾವುದು ಸುಳ್ಳು?

ಅದರಲ್ಲೂ, ಆರ್‌ಬಿಐನಂತಹ ಸ್ವತಂತ್ರ ಸಂಸ್ಥೆಗಳೇ ಈ ರೀತಿಯ ಅನಿವಾರ್ಯವೆಂಬ ಮಾತುಗಳನ್ನಾಡುವುದು, ಸರ್ಕಾರಗಳ ಆರ್ಥಿಕ ಸಮರ್ಥನೆಗೆ ಹೆಚ್ಚಿನ ಮಹತ್ವ ಕೊಡುತ್ತವೆ. ಇದೆಲ್ಲವನ್ನೂ ಮೋದಿ ಸರ್ಕಾರ ತಂತ್ರ-ಕುತಂತ್ರಗಳಿಂದ ಮಾಡುತ್ತಿವೆ.

ಸರ್ಕಾರವು ಅಂತಾರಾಷ್ಟ್ರೀಯ ಬೆಲೆಗಳ ಏರಿಕೆಯನ್ನು ಉಲ್ಲೇಖಿಸುತ್ತಿದೆಯಾದರೂ, ಕಚ್ಚಾ ತೈಲ ಬೆಲೆ ಇಳಿಕೆಯಾದಾಗ ಅದರ ಪೂರ್ಣ ಲಾಭವನ್ನು ಜನರಿಗೆ ವರ್ಗಾಯಿಸದೆ ಸುಂಕ ಹೆಚ್ಚಳದ ಮೂಲಕ ತನ್ನ ಬೊಕ್ಕಸ ತುಂಬಿಸಿಕೊಂಡ ಉದಾಹರಣೆಗಳು ಕಣ್ಮುಂದಿವೆ. ಈಗ ಬೆಲೆ ಏರಿಕೆಗೆ ಜನರ ಮನಸ್ಸನ್ನು ಸಿದ್ಧಗೊಳಿಸುತ್ತಿದೆ. ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ.

ಆರ್‌ಬಿಐ ಮತ್ತು ಸಚಿವರ ಹೇಳಿಕೆಗಳು ಜನರಲ್ಲಿ ಭೀತಿಯನ್ನು ಹುಟ್ಟಿಸಿವೆ. ಆದಾಗ್ಯೂ, ಬೆಲೆ ಏರಿಕೆಯ ಹೊರೆಯು ಜನಸಾಮಾನ್ಯರ ಮೇಲೆ ಬೀಳದಂತೆ ತಡೆಯಲು ಸರ್ಕಾರವು ಈಗಲೂ ನಾನಾ ಕ್ರಮಗಳನ್ನು ಕೈಗೊಳ್ಳಬಹುದು. ಅಂತಹ ಅವಕಾಶಗಳಲ್ಲಿ, ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತಗೊಳಿಸುವುದು ಪ್ರಮುಖವಾಗಿದೆ. ಆದರೆ, ಮೋದಿ ಸರ್ಕಾರವು ಎಲ್ಲ ಹೊರೆಯನ್ನು ಜನರ ಮೇಲೆ ಹಾಕಲು ಎದುರು ನೋಡುತ್ತಿದೆ. ಅದಕ್ಕಾಗಿ, ಜನರ ಮನೋಭೂಮಿಕೆಯನ್ನು ಸಿದ್ಧಗೊಳಿಸುವ ಪ್ರಯತ್ನಕ್ಕೆ ಕೈಹಾಕಿದೆ. ಆದರೂ, ಈಗಿರುವ ಹಣದುಬ್ಬರ ಮತ್ತು ದುಬಾರಿ ದುನಿಯಾದಲ್ಲಿ, ಜನಸಾಮಾನ್ಯರ ಆಕ್ರೋಶ ತಣಿಯುತ್ತದೆ ಅಥವಾ ಜನರು ಮೌನವಾಗಿ ಸಹಿಸುತ್ತಾರೆ ಎಂದು ಹೇಳಲಾಗದು. ಬೆಲೆ ಏರಿಕೆಯು ಮಿತಿ ಮೀರಿದರೆ, ಭಾರೀ ಆಕ್ರೋಶ ವ್ಯಕ್ತವಾಗುವ ಸಾಧ್ಯತೆಯನ್ನು ಕಡೆಗಣಿಸಲೂ ಆಗದು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ, ಚೀನಾಗೆ ಹೆದರಿದಿರೇ?

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ...