ಗದಗ | ಮರಳು ಟಿಪ್ಪರ್‌ ಹಾವಳಿಗೆ ಹದಗೆಟ್ಟ ರಸ್ತೆಗಳು: ವಾಹನ ಸಂಚಾರ ʼನಿತ್ಯ ನರಕʼ

Date:

ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕೆ ಗ್ರಾಮದಿಂದ ಕೌಜಗೇರಿ-ಯಾ.ಸ. ಹಡಗಲಿ ರಸ್ತೆಯಲ್ಲಿ ನಿತ್ಯವೂ ನೂರಾರು ಮರಳು ಸಾಗಿಸುವ ಟಿಪ್ಪರ್‌ಗಳ ಸಂಚಾರದಿಂದ ಡಾಂಬರು ರಸ್ತೆ ಸಂಪೂರ್ಣ ಹದಗೆಟ್ಟಿದೆ. ವಾಹನ ಸವಾರರು ಜೀವಭಯದಲ್ಲಿಯೇ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.‌ ಮರಳು ದಂಧೆಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

- Advertisement -

“ಬೃಹತ್ ಗಾತ್ರದ ಮರಳು ಟಿಪ್ಪರ್‌ಗಳ ಸಂಚಾರದ ಹಾವಳಿಯಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿವೆ. ದ್ವಿಚಕ್ರ ವಾಹನ ಸವಾರರು, ಆಟೋ ಚಾಲಕರು ಹಾಗೂ ಶಾಲಾ ಬಸ್‌ಗಳು ದಿನವೂ ಭಯದಲ್ಲಿಯೇ ಈ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಮರಳು ಟಿಪ್ಪರ್‌ಗಳ ಹಾವಳಿಗೆ ಕಡಿವಾಣ ಹಾಕಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಿ,” ಎಂದು ಸ್ಥಳೀಯ ವಾಹನ ಸವಾರರು ಮತ್ತು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...
487f98b2 5295 4fea a9d1 fa9082627760

“ರೋಣ ತಾಲೂಕಿನ ಹೊಳೆ ಆಲೂರು, ಗಾಡಗೊಳಿ, ಹೊಳೆಮನ್ನೂರು, ಶಿರೂಳ, ಕಲ್ಲಾಪುರ, ಮೆಣಸಗಿ ಪರಿಸರದ ಮಲಪ್ರಭಾ ನದಿ ಪಾತ್ರಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಯಾವ ಎಗ್ಗಿಲ್ಲದೆ ಸಾಗಿದೆ. ಪರಿಣಾಮವಾಗಿ ಈ ಗ್ರಾಮಗಳ ರಸ್ತೆಗಳು ಹದಗೆಟ್ಟಿವೆ. ಸಾಮರ್ಥ್ಯಕ್ಕೂ ಮೀರಿ ಮರಳು ಹೊತ್ತ ಟಿಪ್ಪರ್‌ಗಳು ಕೌಜಗೇರಿ-ಬೆಳವಣಿಕೆ-ಶಲವಡಿ ಮಾರ್ಗವಾಗಿ ಹುಬ್ಬಳ್ಳಿಗೆ ಮರಳು ಸಾಗಿಸುತ್ತಿವೆ” ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ>ಗದಗ | ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ಎಸ್ ಎಫ್ ಐ ಖಂಡನೆ

“ಈ ಹಿಂದೆ ಸುಸ್ಥಿತಿಯಲ್ಲಿದ್ದ ರಸ್ತೆ, ಮರಳು ತುಂಬಿದ ಟಿಪ್ಪರ್‌ಗಳ ಹಾವಳಿಯಿಂದ ಸಂಪೂರ್ಣ ಹಾಳಾಗಿದೆ. ತಗ್ಗು-ಗುಂಡಿಗಳಲ್ಲಿ ಸಂಚಾರ ಮಾಡಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಬಿದ್ದು ತೀವ್ರ ಗಾಯಗೊಂಡ ಘಟನೆಗಳೂ ಇವೆ. ಭಾರಿ ಗಾತ್ರದ ವಾಹನಗಳು ಓಡಾಡುವಷ್ಟು ಸುಸಜ್ಜಿತವಲ್ಲದ ರಸ್ತೆಯಲ್ಲಿ ವಾಹನ ಸವಾರರಿಗೆ ಅಸುರಕ್ಷಿತತೆ ಕಾಡುತ್ತಿದೆ. ಬಸ್, ಬೈಕ್ ಹಾಗೂ ರೈತರ ಚಕ್ಕಡಿಗಳು ಟಿಪ್ಪರ್‌ಗಳಿಗೆ ಡಿಕ್ಕಿ ಹೊಡೆಯುವ ಆತಂಕದಲ್ಲಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ” ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

“ಮರಳು ಹೊತ್ತ ಟಿಪ್ಪರ್ ಚಾಲಕರನ್ನು ಪ್ರಶ್ನಿಸಿದರೆ ʼಶಾಸಕರು, ಸಚಿವರನ್ನು ಕೇಳಿ, ನಮ್ಮನ್ನು ಏಕೆ ಕೇಳುತ್ತೀರಿʼ ಎಂದು ಸೊಕ್ಕಿನಿಂದ ನಮ್ಮನ್ನು ಬೆದರಿಸುತ್ತಾರೆ” ಎಂದು ಸ್ಥಳೀಯರು ಆರೋಪಿಸಿದ್ದಾರೆ.

“ಹಗಲಿರುಳು ಮರಳು ಲೂಟಿ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ದುರಂತ. ಕೂಡಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಅಕ್ರಮ ಮರಳು ಸಾಗಾಣಿಕೆ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಸಾರಿಗೆ ಇಲಾಖೆಯು ನಿಯಮ ಮೀರಿ ಸಂಚರಿಸುವ ಭಾರಿ ಟಿಪ್ಪರ್‌ಗಳ ಪರವಾನಿಗೆ ರದ್ದುಗೊಳಿಸಬೇಕು. ಈಗಲೇ ರಸ್ತೆ ದುರಸ್ತಿಗೊಳಿಸಿ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಕುರಿತು ಈದಿನ.ಕಾಮ್‌ ಜತೆಗೆ ಮಾತನಾಡಿದ ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ಬಸವರಾಜ ಸಜ್ಜನ ಅವರು, “ಅಕ್ರಮ ಮರಳು ದಂಧೆಕೋರರಿಂದ ಬೆಳವಣಿಕೆ-ಕೌಜಗೇರಿ ರಸ್ತೆ ಹಾಳಾಗಿದೆ. ಸಾಮರ್ಥ್ಯಕ್ಕಿಂತ ಹೆಚ್ಚು ಮರಳು ತುಂಬಿಕೊಂಡು ಟಿಪ್ಪರ್‌ಗಳು ಓಡಾಡುತ್ತಿರುವುದರಿಂದ ಉತ್ತಮ ರಸ್ತೆಗಳೂ ಗುಂಡಿಬಿದ್ದು ದುರಸ್ತಿಗೆ ಬಂದಿವೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮತ್ತು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶೀಘ್ರವೇ ರಸ್ತೆ ಸರಿಪಡಿಸಿಕೊಡಿ, ಜೊತೆಗೆ ರಸ್ತೆಯ ಎರಡು ಬದಿಯ ಮುಳ್ಳುಕಂಟಿ ಸ್ವಚ್ಛಗೊಳಿಸಿ. ಅಕ್ರಮ ಮರಳು ಸಾಗಾಟ ತಡೆಯದಿದ್ದರೆ ಗಂಭೀರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.

ಈ ದಿನ.ಕಾಮ್‌ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಜನವರಿಯಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ

ಬೀದರ್‌ ನಗರದಲ್ಲಿ 2027ರ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಅಗ್ನಿವೀರ...

ದೇವಿಯಿಂದ ಕತ್ತಿ ಪಡೆದ ರಾಜರ ಕಥೆಗಳು ಶಾಲಾ ಪಠ್ಯದಲ್ಲಿ; NCERTಯಿಂದ ಮತ್ತೊಂದು ವಿವಾದ?

"ಭಾರತದಲ್ಲಿ ದೇವಿಯರ ಆರಾಧನೆಗೂ, ಯುದ್ಧಕ್ಕೂ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಪ್ರಾಚೀನ...

‘INDIA’ ಮೈತ್ರಿಕೂಟದ ಸಭೆಗಾಗಿ ದೆಹಲಿಗೆ ಮಮತಾ ಪ್ರಯಾಣ: ‘ದಿಮಾಗಿ ನಕ್ಸಲರ’ ಜತೆ ಸಮಾಲೋಚನೆ ಎಂದ ಸುವೇಂದು ಅಧಿಕಾರಿ

ಬುಧವಾರ ನಡೆಯಲಿರುವ 'INDIA' ಮೈತ್ರಿಕೂಟದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳದ...

ಮೋದಿ ಪ್ರಮಾಣಪತ್ರ ವಿವಾದ: ಕೇಜ್ರಿವಾಲ್ ಮೇಲ್ಮನವಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಪ್ರಮಾಣಪತ್ರವನ್ನು ಬಹಿರಂಗಪಡಿಸುವಂತೆ ಗುಜರಾತ್...