ಈ ದಿನ ಕವಿತೆ | ʼನಾನು ಈ ಭೂಮಿಯ ಭ್ರೂಣʼ- ಡಾ ಜಿತೇಂದ್ರ ವಾಸನ್

Date:

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಇಂದು ಬುಡಕಟ್ಟು ಕವಿ ಡಾ.ಜಿತೇಂದ್ರ ವಾಸವ್ ಅವರ (ಇಂಗ್ಲಿಷ್‌ ಕವಿತೆ) ʼನಾನು ಈ ಭೂಮಿಯ ಭ್ರೂಣʼ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಹೆಚ್‌ ಭಾಗ್ಯ.

- Advertisement -


ನಾನು ಈ ಭೂಮಿಯ ಮೂಲ ಧಾತು,ಭ್ರೂಣ
ನಾನೇ ಸೂರ್ಯ, ಸ್ಪರ್ಶ, ಬಿಸುಪು, ಶಾಶ್ವತತೆ.
ನಾನು , ಭಿಲ್, ಮುಂಡಾ, ಬೋಡೋ, ಸಂತಾಲ್ ಕೂಡಾ.
ನಾನು ಸಹಸ್ರಾರು ವರ್ಷಗಳ ಹಿಂದೆ ಜನಿಸಿದ ಮನುಷ್ಯ
ನೀನು ನನ್ನನ್ನು ಉಜ್ಜೀವಿಸುವೆ,
ಸಂಪೂರ್ಣವಾಗಿ.
ನಾನೇ ಈ ಬುವಿಯ ಮೇಲಣ ಸ್ವರ್ಗ
ನಾನು ಈ ಭೂಮಿಯ ಮೂಲ ಧಾತು, ಭ್ರೂಣ.
ನಾನೇ ಸೂರ್ಯ, ಸ್ಪರ್ಶ, ಬಿಸುಪು, ಶಾಶ್ವತತೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ನಾನು ಸಹ್ಯಾದ್ರಿ, ಸಾತ್ಪುರ, ವಿಂಧ್ಯ, ಅರಾವಲಿ
ನಾನು ಹಿಮಾಲಯದ ಶೃಂಗ
ದಕ್ಷಿಣದ ಸಾಗರದ ಕೊನೆ
ಈಶಾನ್ಯ ಹಸಿರು ವನಸಿರಿಯು ನಾನೇ
ನೀನು ಮರ ಕಡಿದಾಗ, ಬೆಟ್ಟ ಗುಡ್ಡಗಳ ಅಡವಿಟ್ಟಾಗ
ನನ್ನನ್ನು ಹರಾಜು ಹಾಕುವೆ
ನದಿಯನು ಕೊಂದಾಗ ನಾನು ಸಾಯುವೆ
ನಿನ್ನ ಉಸಿರಿನ ಉಸಿರಾಗಿರುವೆ
ನಾನು ಜೀವಾಮೃತ
ನಾನು ಈ ಭೂಮಿಯ ಮೂಲ ಧಾತು, ಭ್ರೂಣ
ನಾನೇ ಸೂರ್ಯ, ಸ್ಪರ್ಶ, ಬಿಸುಪು, ಶಾಶ್ವತತೆ.

ಎಷ್ಟೇ ಆಗಲಿ ನೀನು ನನ್ನ ಸಂತತಿ,
ನನ್ನ ರಕ್ತ.
ಹಪಾಹಪಿ, ಅಧಿಕಾರ ಲಾಲಸೆ ಕವಿದು
ನಿನಗೆ ನಿಜದ ಜಗತ್ತನ್ನು ಮರೆಮಾಚಿದೆ.
ನೀನು ಭೂಮಿಯನು ಭೂಮಿ ಎನುವೆ
ನಾವಿವಳನು ತಾಯಿ ಎನುವೆವು
ನೀನು ನದಿಯನು ನದಿ ಎನುವೆ
ನಮಗಿವಳು ಸೋದರಿ
ಬೆಟ್ಟಗಳು ನಿನಗೆ ಬೆಟ್ಟಗಳು ಮಾತ್ರ
ಅವು ನಮ್ಮನು ಸೋದರ ಎನುವುವು.
ಸೂರ್ಯ ನಮ್ಮ ಅಜ್ಜ
ಚಂದ್ರ ನಮ್ಮ ಸೋದರ ಮಾವ.
ಈ ಸಂಬಂಧಗಳಿಗಾಗಿ
ನಮ್ಮ ನಿನ್ನ ನಡುವೆ ಒಂದು ಗೆರೆ ಎಳೆಯಲು ಅವರು ಹೇಳುವರು.
ಆದರದನು ಕೇಳಲು ನಾನು ಸಿದ್ಧನಿಲ್ಲ
ನನಗೆ ನಂಬಿಕೆ:
ನೀನು ನಿನ್ನಷ್ಟಕ್ಕೆ ಕರಗಿ ಹೋಗುವೆ ಎಂದು
ನಾನು ಹಿಮವನ್ನು ಕರಗಿಸುವ ಶಾಖ

ನಾನು ಈ ಭೂಮಿಯ ಮೂಲ ಧಾತು, ಭ್ರೂಣ
ನಾನೇ ಸೂರ್ಯ, ಸ್ಪರ್ಶ, ಬಿಸುಪು ಶಾಶ್ವತತೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್ ಕಿರಿಕಿರಿಗೆ ಪ್ರಯಾಣಿಕರು ಹೈರಾಣ

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...