ದಿನಕ್ಕೆ 4 ಲಕ್ಷ ಬ್ಯಾರೆಲ್‌ ಎಲ್‌ಪಿಜಿ ಕೊರತೆ: ಅಸಲಿಯತ್ತು ಮುಚ್ಚಿಡುತ್ತಿದೆಯೇ ಮೋದಿ ಸರ್ಕಾರ?

Date:

ವಿದೇಶಕ್ಕೆ ಹೋಗಬೇಡಿ ಎಂದು ಹೇಳಿ ತಾವೇ ವಿದೇಶ ಸುತ್ತಾಡುವ ಪ್ರಧಾನಿ ಮೋದಿ "ಹೇಳುವುದು ಒಂದು ಮಾಡುವುದು ಇನ್ನೊಂದು, ನಂಬುವುದು ಹೇಗೋ ಕಾಣೆ…." ಎಂಬ ಹಾಡಿಗೆ ಸರಿಯಾಗಿ ಒಪ್ಪುವ ವ್ಯಕ್ತಿ. ಇವರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗದು. ಆದರೆ, ದೇಶದ ಜನಕ್ಕೆ ಮುಂದೆ ಕರಾಳ ಭವಿಷ್ಯ ಕಾದಿದೆ

ಭಾರತವು ದಿನಕ್ಕೆ ಸುಮಾರು ನಾಲ್ಕು ಲಕ್ಷ ಬ್ಯಾರೆಲ್‌ಗಳಷ್ಟು ದ್ರವೀಕೃತ ಪೆಟ್ರೋಲಿಯಂ ಅನಿಲ ಅಂದರೆ ಎಲ್‌ಪಿಜಿ ಕೊರತೆಯನ್ನು ಎದುರಿಸುತ್ತಿದೆ ಎಂದು ವಿಶ್ಲೇಷಣಾ ಕಂಪನಿ ಕೆಪ್ಲರ್‌ನ ಡೇಟಾವನ್ನು ಉಲ್ಲೇಖಿಸಿ ಜಪಾನ್ ಮೂಲದ ಪ್ರಮುಖ ಮಾಧ್ಯಮ ಸಂಸ್ಥೆ ನಿಕ್ಕಿ ಏಷ್ಯಾ (Nikkei Asia) ವರದಿ ಮಾಡಿದೆ. ದೇಶೀಯ ಉತ್ಪಾದನೆಯಿಂದ ಇರಾನ್ ಯುದ್ಧದಿಂದ ಉಂಟಾದ ಆಮದು ಕುಸಿತವನ್ನು ಸರಿದೂಗಿಸಲಾಗದು ಎಂದು ಕೆಪ್ಲರ್ ಡೇಟಾ ಹೇಳಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾತ್ರ ಅಸಲಿಯತ್ತು ಮುಚ್ಚಿಡುತ್ತಿಡುವ ಯತ್ನ ಮಾಡುತ್ತಿರುವಂತಿದೆ. ಒಮ್ಮೆ ಕೊರತೆ ಇದೆ ಎನ್ನುತ್ತಾ, ಮತ್ತೊಮ್ಮೆ ಕೊರತೆ ಇಲ್ಲ, ಮಾಧ್ಯಮಗಳ ವರದಿಗಳು ಸುಳ್ಳು ಎನ್ನುತ್ತಿದೆ. ಒಟ್ಟಾರೆಯಾಗಿ ಜನರನ್ನು ಗೊಂದಲದಲ್ಲಿ ಸಿಲುಕಿಸುತ್ತಿದೆ.

- Advertisement -

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ. ಇದಾದ ಬಳಿಕ ಜಾಗತಿಕವಾಗಿ ಎಲ್‌ಪಿಜಿ, ಇಂಧನಗಳ ಕೊರತೆ ಉಂಟಾಗಿದೆ. ವಿಶ್ಲೇಷಣಾ ಕಂಪನಿ ಕೆಪ್ಲರ್‌ ಪ್ರಕಾರ ಏಪ್ರಿಲ್‌ನಲ್ಲಿ ದಿನಕ್ಕೆ ಕೇವಲ 377,620 ಎಲ್‌ಪಿಜಿ ಬ್ಯಾರೆಲ್‌ಗಳು ಮಾತ್ರ ಬಂದಿವೆ. ಅಂದರೆ ಇದು ಫೆಬ್ರವರಿಯಲ್ಲಿ ಪ್ರತಿದಿನ ಆಮದು ಮಾಡಲಾದ 851,870 ಬ್ಯಾರೆಲ್‌ಗಳಿಗೆ ಹೋಲಿಸಿದರೆ ಅರ್ಧಕ್ಕಿಂತ ಕಡಿಮೆಯಾಗಿದೆ. ಈ ಕೊರತೆ ನಿಭಾಯಿಸಲು ದೇಶೀಯ ಉತ್ಪಾದನೆ ಹೆಚ್ಚಿಸಲಾಗಿದೆ. ಆದರೆ ಬರೀ 75,000 ಬ್ಯಾರೆಲ್‌ಗಳಷ್ಟು ಉತ್ಪಾದನೆ ಮಾತ್ರ ಸಾಧ್ಯವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಇದನ್ನು ಓದಿದ್ದೀರಾ? ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಸದ್ಯ ಆಮದುಗಳು ಸಂಪೂರ್ಣವಾಗಿ ಪುನರಾರಂಭಗೊಳ್ಳದವರೆಗೆ ಕೊರತೆ ಇರಲಿದೆ ಎಂದು ಕೆಪ್ಲರ್‌ನ ಸಂಸ್ಕರಣೆ ಮತ್ತು ಪೂರೈಕೆಯ ಪ್ರಮುಖ ವಿಶ್ಲೇಷಕ ಸುಮಿತ್ ರಿಟೋಲಿಯಾ ನಿಕ್ಕಿ ಏಷ್ಯಾ ಮಾಧ್ಯಮಕ್ಕೆ ತಿಳಿಸಿದ್ದಾರೆ. ದೇಶೀಯ ಪೂರೈಕೆ ಗರಿಷ್ಠ ಮಟ್ಟವನ್ನು ತಲುಪಿದೆ ಮತ್ತು ಮತ್ತಷ್ಟು ಹೆಚ್ಚಿಸಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇವೆಲ್ಲವುದರ ನಡುವೆ ಎಲ್‌ಪಿಜಿ ಬೆಲೆಯನ್ನೂ ದೇಶದಲ್ಲಿ ಹೆಚ್ಚಿಸಲಾಗಿದೆ. ಮಾರ್ಚ್‌ನಲ್ಲಿ ದೇಶದಲ್ಲಿ ಸಾಮಾನ್ಯ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 60 ರೂ. ಏರಿಸಲಾಗಿದೆ.

ದೇಶವು ಕಚ್ಚಾ ತೈಲಕ್ಕೆ ದೀರ್ಘಕಾಲೀನ ಕಾರ್ಯತಂತ್ರದ ನಿಕ್ಷೇಪಗಳನ್ನು (Strategic Petroleum Reserves) ಹೊಂದಿದೆ. ಆದರೆ ಎಲ್‌ಪಿಜಿಗಾಗಿ ಇಂತಹ ಯಾವುದೇ ಬೃಹತ್ ದೀರ್ಘಕಾಲೀನ ಮೀಸಲು ಸಂಗ್ರಹವನ್ನು ಹೊಂದಿಲ್ಲ. ದೇಶವು ಪ್ರಸ್ತುತ ಕೇವಲ 1.4 ಲಕ್ಷ ಟನ್‌ಗಳಷ್ಟು ಸಾಮರ್ಥ್ಯದ ಎರಡು ಭೂಗತ ಎಲ್‌ಪಿಜಿ ಶೇಖರಣಾ ಗುಹೆಗಳನ್ನು ಮಾತ್ರ ಹೊಂದಿದೆ. ದೇಶದ ಈ ಸಂಗ್ರಹವು ದೇಶದ 2 ದಿನಗಳ ಅಗತ್ಯವನ್ನು ಮಾತ್ರ ಪೂರೈಸಬಲ್ಲದು. ಅದರಿಂದಾಗಿ ಎಲ್‌ಪಿಜಿ ಕೊರತೆ ಕಾಣಿಸಿಕೊಳ್ಳುತ್ತಿದೆ. ಎಲ್‌ಪಿಜಿಯನ್ನು ದ್ರವರೂಪದಲ್ಲಿ ಇಡಲು ಅತಿ ಹೆಚ್ಚಿನ ಒತ್ತಡ ಮತ್ತು ವಿಶೇಷ ತಂತ್ರಜ್ಞಾನದ ಅಗತ್ಯವಿದೆ. ಇದಕ್ಕೆ ಬಿಲಿಯನ್ ಡಾಲರ್‌ಗಳಷ್ಟು ಹೂಡಿಕೆ ಬೇಕಾಗುತ್ತದೆ. ಅದಕ್ಕೆ ಸಾಕಷ್ಟು ಸಮಯವೂ ಬೇಕಾಗುತ್ತದೆ.

ಆದರೆ ಕೇಂದ್ರ ಸರ್ಕಾರ ಮಾತ್ರ ಕಾರ್ಯಸಾಧ್ಯವಿಲ್ಲದ ವಿಚಾರವನ್ನು ಮಾತನಾಡುತ್ತಿದೆ. ಕಳೆದ ವಾರ ಸಿಐಐನ ವಾರ್ಷಿಕ ವ್ಯವಹಾರ ಶೃಂಗಸಭೆಯಲ್ಲಿ ಸಚಿವ ಹರ್‌ದೀಪ್ ಪುರಿ ಮಾತನಾಡಿ ದೇಶದಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ, ಎಲ್‌ಪಿಜಿ ಕೊರತೆ ಇಲ್ಲ. ದೇಶದಲ್ಲಿ 45 ದಿನಗಳವರೆಗೆ ಬಾಳಿಕೆ ಬರುವ ಎಲ್‌ಪಿಜಿ ಇದೆ. ಜತೆಗೆ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ದಾಸ್ತಾನುಗಳು 69 ದಿನಗಳವರೆಗೆ ಬೇಕಾಗುವಷ್ಟಿದೆ ಎಂದು ಹೇಳಿಕೊಂಡಿದ್ದಾರೆ. ನಮ್ಮಲ್ಲಿ ಸಂಗ್ರಹಕ್ಕೆ ಅಷ್ಟೊಂದು ವ್ಯವಸ್ಥೆಯೇ ಇಲ್ಲದಾಗ 45 ದಿನಗಳವರೆಗೆ ಬಾಳಿಕೆ ಬರುವ ಎಲ್‌ಪಿಜಿ ಎಲ್ಲಿದೆ ಎಂಬ ಪ್ರಶ್ನೆಯನ್ನು ನಾವು ಕೇಂದ್ರ ಸಚಿವರನ್ನು ಕೇಳಬೇಕಾಗಿದೆ!

ದೇಶವು ತನ್ನ ಒಟ್ಟು ಎಲ್‌ಪಿಜಿ ಅಗತ್ಯಗಳಲ್ಲಿ ಮೂರನೇ ಎರಡರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಶೇಕಡ 80ರಷ್ಟು ಎಲ್‌ಪಿಜಿ ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತದೆ. ಅದರಲ್ಲೂ ದೇಶಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಕುವೈತ್ ಮತ್ತು ಸೌದಿ ಅರೇಬಿಯಾಗಳು ಒಟ್ಟು ಎಲ್‌ಪಿಜಿ ಆಮದಿನ ಶೇಕಡ 80ರಷ್ಟು ಮೂಲ. ಆದರೆ ಈ ಎಲ್ಲ ದೇಶಗಳ ಇಂಧನ ಮೂಲಸೌಕರ್ಯದ ಮೇಲೆ ದಾಳಿ ನಡೆದಿದೆ. ಇವೆಲ್ಲವುದರ ದುರಸ್ತಿ ಮಾಡಲು ವರ್ಷಗಳು ತಗುಲಬಹುದು ಎಂದು ವರದಿಗಳು ಹೇಳುತ್ತವೆ. ಈ ನಾಲ್ಕು ದೇಶಗಳಿಂದ ದೇಶದ ಎಲ್‌ಪಿಜಿ ಆಮದು ಏಪ್ರಿಲ್‌ನಲ್ಲಿ ದಿನಕ್ಕೆ 173,000 ಬ್ಯಾರೆಲ್‌ಗಳಿಗೆ ಇಳಿದಿದೆ. ಫೆಬ್ರವರಿ ಮಟ್ಟಕ್ಕಿಂತ ಸುಮಾರು 75% ಕಡಿಮೆಯಾಗಿದೆ. ಹೀಗಿರುವಾಗ ಮೋದಿ ಸರ್ಕಾರ ಇತರೆ ದೇಶಗಳಿಂದ ಆಮದಿನ ಚಿಂತನೆ, ಕಾರ್ಯಸಾಧ್ಯತೆ ಬಗ್ಗೆ ಚರ್ಚೆ ನಡೆಸುವುದು ಮುಖ್ಯ. ಅದನ್ನು ಬಿಟ್ಟು ಕೊರತೆ ಇದೆ, ಕೊರತೆ ಇಲ್ಲ ಎಂಬ ದ್ವಂದ್ವ ಹೇಳಿಕೆ ನೀಡಿ ಜನರನ್ನು ಇಕ್ಕಟ್ಟಿಗೆ ಸಿಲುಕಿಸುವುದನ್ನು ಬಿಡಲಿ.

ಭಾರತವು ಈ ಹಿಂದೆಯೇ ತನ್ನ ಎಲ್‌ಪಿಜಿ ಮೂಲಗಳನ್ನು ವೈವಿಧ್ಯಗೊಳಿಸಲು ಪ್ರಯತ್ನಿಸಿದೆ. ಇರಾನ್, ಆಸ್ಟ್ರೇಲಿಯಾ, ಅರ್ಜೆಂಟೀನಾ ಮತ್ತು ಚಿಲಿಯಿಂದ ಕಚ್ಚಾ ತೈಲ ಖರೀದಿಸಿದೆ. ಈ ನಾಲ್ಕು ದೇಶಗಳು ಕಳೆದ ತಿಂಗಳು ದಿನಕ್ಕೆ 43,000 ಬ್ಯಾರೆಲ್ ಎಲ್‌ಪಿಜಿ ಅನ್ನು ಪೂರೈಸಿದ್ದವು. ಆದರೆ ಪ್ರಮುಖ ನಾಲ್ಕು ಪೂರೈಕೆದಾರ ದೇಶಗಳಾದ ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಕುವೈತ್ ಮತ್ತು ಸೌದಿ ಅರೇಬಿಯಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿದ್ದ 678,000 ಬ್ಯಾರೆಲ್‌ಗಳಿಗೆ ಹೋಲಿಸಿದರೆ ಇದು ಅತಿ ಕಡಿಮೆ.

ಅದರಲ್ಲೂ ಆಸ್ಟ್ರೇಲಿಯಾದಿಂದ ಎಲ್‌ಪಿಜಿ ಭಾರತವನ್ನು ತಲುಪಲು ಸುಮಾರು 20 ದಿನಗಳನ್ನು ತೆಗೆದುಕೊಳ್ಳುತ್ತದೆ. ಅರ್ಜೆಂಟೀನಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಿಂದ 35 ದಿನಗಳಿಂದ 45 ದಿನಗಳು ಬೇಕಾಗುತ್ತದೆ. ಆದರೆ ಪಶ್ಚಿಮ ಏಷ್ಯಾದಿಂದ ಹಾರ್ಮುಜ್ ಮೂಲಕ ಆಮದು ಮಾಡಿದ ವಸ್ತುಗಳು, ಕಚ್ಚಾ ತೈಲಗಳು ಐದರಿಂದ ಆರು ದಿನಗಳಲ್ಲಿ ತಲುಪುತ್ತದೆ. ಈ ನಡುವೆ ನೈಸರ್ಗಿಕ ಅನಿಲದಿಂದ ಹೊರತೆಗೆಯಲಾದ ಪೈಪ್ಡ್ ಗ್ಯಾಸ್‌ ಬಳಕೆಗೆ ಉತ್ತೇಜನ ನೀಡುವ ಪ್ರಯತ್ನವೂ ನಡೆಯುತ್ತಿದೆ. ಇತ್ತ ಎಲ್‌ಪಿಜಿ ಕೊರತೆಯೂ ಇರುವ ಕಾರಣ ಮಾರ್ಚ್‌ನಲ್ಲಿ ಅರ್ಧ ಮಿಲಿಯನ್‌ಗಿಂತಲೂ (5 ಲಕ್ಷ) ಹೆಚ್ಚು ಹೊಸ ಪೈಪ್ಡ್ ಗ್ಯಾಸ್ ಸಂಪರ್ಕಗಳು ಆರಂಭವಾಗಿದೆ. ಆದರೆ ಪೈಪ್ಡ್ ಗ್ಯಾಸ್ ಸೇವೆಗಳು ಕೇವಲ 16 ಮಿಲಿಯನ್ (1.6 ಕೋಟಿ) ಮನೆಗಳಲ್ಲಿವೆ. ಎಲ್‌ಪಿಜಿ ಅನ್ನು ಇಂದಿಗೂ 330 ಮಿಲಿಯನ್ (33 ಕೋಟಿ) ಮನೆಗಳಲ್ಲಿ ಬಳಸಲಾಗುತ್ತದೆ. ಈ ಬಿಕ್ಕಟ್ಟಿನಿಂದಾಗಿ ಎಲ್‌ಪಿಜಿ ಕಪ್ಪು ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ. ಕಪ್ಪು ಮಾರುಕಟ್ಟೆಯಲ್ಲಿ ಬೆಲೆ ಗಗನಕ್ಕೇರಿದೆ. “ಒಂದು ಸಿಲಿಂಡರ್‌ಗೆ 3-4 ಸಾವಿರ ರೂಪಾಯಿ ನೀಡಿ, ಇಲ್ಲವೆ ಬಿಡಿ” ಎಂಬ ಮಾತಿಗೆ ಬಗ್ಗಿ ಜನರು ಅನಿವಾರ್ಯವಾಗಿ 1200 ರೂಪಾಯಿಯ ಸಿಲಿಂಡರ್‌ಗೆ ಮೂರು ಪಟ್ಟು ಅಧಿಕ ವ್ಯಯಿಸುವಂತಾಗಿದೆ.

ಇವೆಲ್ಲವುದರ ನಡುವೆ ಸರ್ಕಾರ ಮಾಡುತ್ತಿರುವುದೇನು? ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ವಿದೇಶ ಪ್ರವಾಸ ಹೋಗಬೇಡಿ, ಕಡಿಮೆ ಇಂಧನ ಬಳಸಿ ಎಂಬ ಮಾತುಗಳನ್ನಾಡಿದರು. ಅಂದರೆ ಕೊರತೆ ಇದೆ, ಸಹಕರಿಸಿ ಎಂದೇ ಅರ್ಥ. ಆದರೆ ಕೇಂದ್ರ ಸಚಿವರುಗಳು ಹೇಳುವುದೇ ಬೇರೆ. ದೇಶದ ಪ್ರಮುಖ ಮಾಧ್ಯಮಗಳಲ್ಲಿ ಮತ್ತು ಅಧಿಕೃತ ವರದಿಗಳಲ್ಲಿ ಸರ್ಕಾರದ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಖಂಡಿತವಾಗಿಯೂ ಗೊಂದಲ ಮತ್ತು ದೊಡ್ಡಮಟ್ಟದ ವ್ಯತ್ಯಾಸ ಎದ್ದು ಕಾಣುತ್ತದೆ. ಒಂದೆಡೆ ಸಂಸತ್ತಿನಲ್ಲಿ ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಾ ಬಿಕ್ಕಟ್ಟನ್ನು ಒಪ್ಪಿಕೊಳ್ಳುವ ಸರ್ಕಾರ, ಮತ್ತೊಂದೆಡೆ ಸಾರ್ವಜನಿಕ ಪ್ರಕಟಣೆಗಳಲ್ಲಿ ಯಾವುದೇ ಕೊರತೆಯೇ ಇಲ್ಲ ಎಂದು ವಾದಿಸುತ್ತಿದೆ.

ವಿದೇಶಕ್ಕೆ ಹೋಗಬೇಡಿ ಎಂದು ಹೇಳಿ ತಾವೇ ವಿದೇಶ ಸುತ್ತಾಡುವ ಪ್ರಧಾನಿ ಮೋದಿ “ಹೇಳುವುದು ಒಂದು ಮಾಡುವುದು ಇನ್ನೊಂದು, ನಂಬುವುದು ಹೇಗೋ ಕಾಣೆ….” ಎಂಬ ಹಾಡಿಗೆ ಸರಿಯಾಗಿ ಒಪ್ಪುವ ವ್ಯಕ್ತಿ. ಇವರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗದು. ಆದರೆ ಆಡಳಿತಾತ್ಮಕವಾಗಿ ಬಿಕ್ಕಟ್ಟನ್ನು ಎದುರಿಸಲು ಯುದ್ಧೋಪಾದಿಯಲ್ಲಿ ಪರ್ಯಾಯ ದೇಶಗಳಿಂದ ಆಮದು ಮಾಡಿಕೊಳ್ಳುವುದು, ದೇಶೀಯ ಉತ್ಪಾದನೆ ಹೆಚ್ಚಿಸುವ ಕ್ರಮಗಳತ್ತ ಸರ್ಕಾರ ಗಮನಹರಿಸಲಿ ಎಂಬ ಸಲಹೆ ನಾವು ನೀಡಬಹುದಷ್ಟೆ.

ಮಾಹಿತಿ: ದಿ ವೈರ್

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಫಾರ್ಮ್‌-7 ವಿವಾದ | ಆರೋಪಿಗಳ ರಕ್ಷಣೆಗೆ ನಿಂತರೇ ಎಚ್‌ಡಿಕೆ?

ರಾಜ್ಯದಲ್ಲಿ ಸದ್ಯ ಭಾರೀ ಗದ್ದಲ ಎಬ್ಬಿಸಿರುವ SIR ಮತ್ತು ದಂಡು ದಂಡಾಗಿ...

ಬಸವಕಲ್ಯಾಣ | ಶಾಲೆ ಮಾನವೀಯ ಮೌಲ್ಯ ಬೆಳೆಸುವ ಸ್ಫೂರ್ತಿಯ ಕೇಂದ್ರ

ಶಿಕ್ಷಣವೆಂಬುದು ಕೇವಲ ಶಾಲೆಯಲ್ಲಿ ಕಲಿಯುವ ಪಾಠಗಳಿಗೆ ಸೀಮಿತವಾಗದೆ, ಸಂಗೀತ, ಸಾಹಿತ್ಯ, ಅಭಿನಯ...

ಹ್ಯಾಟ್ರಿಕ್ ಗೆಲುವಿನ ಬೆನ್ನಲ್ಲೇ ನಾಯಕತ್ವಕ್ಕೆ ವಿದಾಯ: ದಿಟ್ಟ ನಿರ್ಧಾರದೊಂದಿಗೆ ನಿರ್ಗಮಿಸಿದ ಹರ್ಮನ್‌ಪ್ರೀತ್ ಕೌರ್

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಹರ್ಮನ್‌ಪ್ರೀತ್ ಕೌರ್...