ಚೇತರಿಕೆ ಕಂಡ ಬಾಕ್ಸ್ ಆಫೀಸ್ ; ಮಧ್ಯಮ, ಸಣ್ಣ ನಗರಗಳೇ ಭಾರತೀಯ ಚಿತ್ರರಂಗದ ಬೆನ್ನೆಲುಬಾಗುತ್ತಿವೆಯೇ?

Date:

ಸಣ್ಣ ನಗರಗಳಲ್ಲಿ ಟಿಕೆಟ್ ದರವನ್ನು ಜನಸಾಮಾನ್ಯರಿಗೆ ನಿಲುಕುವಂತೆ ಮಾಡುವುದು ಮತ್ತು ಸಿಂಗಲ್ ಸ್ಕ್ರೀನ್‌ಗಳನ್ನು ನವೀಕರಿಸುವುದು ಉದ್ಯಮದ ಸುಸ್ಥಿರತೆಗೆ ಅತ್ಯಗತ್ಯ. ಇದೇ ವೇಳೆ, ‘ರಾಜಾ ಶಿವಾಜಿ’ (ಮರಾಠಿ), ‘ಪೆದ್ದಿ’ (ತೆಲುಗು), ‘ಕರುಪ್ಪು’ (ತಮಿಳು) ಹಾಗೂ ‘ದೃಶ್ಯಂ 3’ (ಮಲಯಾಳಂ) ನಂತಹ ಚಿತ್ರಗಳು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಅದ್ಭುತ ಯಶಸ್ಸು ಸಾಧಿಸಿವೆ. ಹಿಂದಿಯ ಬೃಹತ್ ಬಜೆಟ್ ಚಿತ್ರಗಳು ನಗರ ಹಾಗೂ ಗ್ರಾಮೀಣ ಭಾಗಗಳೆರಡರಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿವೆ.

- Advertisement -

ಭಾರತೀಯ ಚಲನಚಿತ್ರೋದ್ಯಮ ಸತತ ಮೂರು ವರ್ಷಗಳ ಇಳಿಮುಖ ಮತ್ತು ಮಂದಗತಿಯ ಹಾದಿಯಿಂದ ಹೊರಬರುವ ಭರವಸೆಯ ಲಕ್ಷಣಗಳು ಗೋಚರಿಸುತ್ತಿವೆ. ಓರ್ಮಾಕ್ಸ್ (Ormax) ಮೀಡಿಯಾ ಕನ್ಸಲ್ಟಿಂಗ್ ಸಂಸ್ಥೆ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶಗಳ ಪ್ರಕಾರ, 2026ರ ಮೊದಲಾರ್ಧದಲ್ಲಿ (ಜನವರಿ – ಜೂನ್) ಭಾರತೀಯ ಬಾಕ್ಸ್ ಆಫೀಸ್‌ ಪ್ರೇಕ್ಷಕರ ಭೇಟಿಯ ಪ್ರಮಾಣದಲ್ಲಿ ಶೇ. 5ರಷ್ಟು ಏರಿಕೆ ಕಂಡಿದೆ. ಆದಾಗ್ಯೂ, ಈ ಚೇತರಿಕೆಯು ಉದ್ಯಮದಾದ್ಯಂತ ಸಮಾನವಾಗಿ ಹಂಚಿಕೆಯಾಗಿಲ್ಲ ಮತ್ತು ಇದು ಕೇವಲ ಬೆರಳೆಣಿಕೆಯಷ್ಟು ಹಿಂದಿ ಹಾಗೂ ಮರಾಠಿ ಚಿತ್ರಗಳ ಯಶಸ್ಸನ್ನು ಅವಲಂಬಿಸಿದೆ ಎಂಬುದು ವರದಿಯ ವಾಸ್ತವ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ...

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು...

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ತೆಲಂಗಾಣದ ಕೃಷಿ ಪ್ರದೇಶದಲ್ಲಿನ ನಿಂತಿರುವ ಬೆಳೆಗಳನ್ನು ರಕ್ಷಿಸಲು ಕರ್ನಾಟಕದಿಂದ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಆ ರಾಜ್ಯದ ಸಚಿವರು...

ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ವರ್ಷದ ಮೊದಲ ಆರು ತಿಂಗಳಲ್ಲಿ ಒಟ್ಟು 378 ಮಿಲಿಯನ್ (37.8 ಕೋಟಿ) ಪ್ರೇಕ್ಷಕರು ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಸಂಖ್ಯೆ 362 ಮಿಲಿಯನ್(35 ಕೋಟಿ) ಇತ್ತು. ಈ ಶೇ. 5ರಷ್ಟು ಬೆಳವಣಿಗೆ ಸಕಾರಾತ್ಮಕವಾಗಿದ್ದರೂ, ಉದ್ಯಮವು ಇನ್ನೂ ತನ್ನ ಹಳೆಯ ವೈಭವಕ್ಕೆ ಮರಳಿಲ್ಲ. ವಿಶೇಷವಾಗಿ ‘ಕೆಜಿಎಫ್: ಚಾಪ್ಟರ್ 2’ (K.G.F: Chapter 2) ಮತ್ತು ‘ಆರ್‌ಆರ್‌ಆರ್’ (RRR) ಚಿತ್ರಗಳು ಬಿಡುಗಡೆಯಾದಾಗ, ಅಂದರೆ 2022ರ ಮೊದಲಾರ್ಧದಲ್ಲಿ ದಾಖಲಾಗಿದ್ದ 400 ಮಿಲಿಯನ್(40 ಕೋಟಿ) ಗಡಿಯನ್ನು ತಲುಪಲು ಈ ವರ್ಷ ಸಾಧ್ಯವಾಗಿಲ್ಲ.

ಈ ವರ್ಷದ ಬಾಕ್ಸ್ ಆಫೀಸ್ ಗಳಿಕೆಯು ನಿರ್ದಿಷ್ಟ ಸಿನೆಮಾಗಳನ್ನಷ್ಟೇ (slate-led) ಬಹುಪಾಲು ಅವಲಂಬಿಸಿದೆ. ‘ಸಿನಿ‌ನೌ’ (CineNow) ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ದಾಲ್ಮಿಯಾ ಅವರ ಪ್ರಕಾರ, ಬಾಲಿವುಡ್‌ನ ಒಂದು ಚಿತ್ರ ಬರೋಬ್ಬರಿ 40 ಕೋಟಿಗೂ ಅಧಿಕ ಪ್ರೇಕ್ಷಕರನ್ನು ಸೆಳೆಯುವ ಮೂಲಕ ಮೊದಲಾರ್ಧದ ಬಾಕ್ಸ್ ಆಫೀಸ್‌ನ ಶೇ. 20ರಷ್ಟು ಪಾಲನ್ನು ಏಕಾಂಗಿಯಾಗಿ ನೀಡಿದೆ! ಜೊತೆಗೆ, ಹಿಂದಿ ಸಿನೆಮಾಗಳ ಒಟ್ಟು ಮಾರುಕಟ್ಟೆ ಪಾಲು ಶೇ. 39ರಿಂದ ಶೇ. 44ಕ್ಕೆ ಏರಿಕೆಯಾಗಿದ್ದರೆ, ತಮಿಳು ಸಿನೆಮಾಗಳ ಪಾಲು ಶೇ. 17ರಿಂದ ಶೇ. 12ಕ್ಕೆ ಕುಸಿದಿದೆ. ಬೃಹತ್ ಕ್ಯಾನ್ವಾಸ್‌ನ ಕಥೆಗಳು ಹಾಗೂ ನಿರಂತರ ಬಿಡುಗಡೆಯಿಂದಾಗಿ ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಪ್ರೇಕ್ಷಕರ ಸಂಖ್ಯೆ ಸ್ಥಿರವಾಗಿದೆ.

ಬೆಳವಣಿಗೆಯ ಪ್ರಮಾಣ ನಗರದಿಂದ ನಗರಕ್ಕೆ ಭಿನ್ನವಾಗಿದೆ. ಮಿರಾಜ್ ಎಂಟರ್‌ಟೈನ್‌ಮೆಂಟ್‌ನ ಸಿಒಒ ಸಮೀರ್ ಮುನ್ಷಿ ಅವರು ಹೇಳುವಂತೆ, ಮಧ್ಯಮ ಹಾಗೂ ಸಣ್ಣ ನಗರಗಳು ನಗರಗಳಲ್ಲಿ ಸ್ಥಿರ ಮತ್ತು ಬಲವಾದ ಚೇತರಿಕೆ ಕಂಡುಬಂದಿದೆ. ಈ ಸಣ್ಣ ನಗರಗಳಲ್ಲಿ ಸಿನೆಮಾ ಇಂದಿಗೂ ಅತ್ಯಂತ ಕೈಗೆಟುಕುವ ಮನರಂಜನಾ ಮಾಧ್ಯಮವಾಗಿದೆ. ಆದರೆ, ಮೆಟ್ರೋ ನಗರಗಳಲ್ಲಿ ಜನರು ಅಸಂಖ್ಯಾತ ಆಯ್ಕೆಗಳನ್ನು ಹೊಂದಿರುವುದರಿಂದ, ಕೇವಲ ದೊಡ್ಡ ಇವೆಂಟ್ ಸಿನೆಮಾಗಳು ಹಾಗೂ ಐಮ್ಯಾಕ್ಸ್‌ನಂತಹ ಪ್ರೀಮಿಯಂ ಅನುಭವಗಳಿಗೆ ಮಾತ್ರ ಚಿತ್ರಮಂದಿರದತ್ತ ಮುಖ ಮಾಡುತ್ತಿದ್ದಾರೆ.

ಮೆಟ್ರೋಗಳಲ್ಲಿ ದುಬಾರಿ ಟಿಕೆಟ್ ದರವು ಗಳಿಕೆಗೆ ಸಹಾಯ ಮಾಡುತ್ತಿದ್ದರೂ, ಸಣ್ಣ ಮಾರುಕಟ್ಟೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ. ನಿರ್ಮಾಪಕ ಆನಂದ್ ಪಂಡಿತ್ ಅವರು ಅಭಿಪ್ರಾಯಪಡುವಂತೆ, ಸಣ್ಣ ನಗರಗಳಲ್ಲಿ ಟಿಕೆಟ್ ದರವನ್ನು ಜನಸಾಮಾನ್ಯರಿಗೆ ನಿಲುಕುವಂತೆ ಮಾಡುವುದು ಮತ್ತು ಸಿಂಗಲ್ ಸ್ಕ್ರೀನ್‌ಗಳನ್ನು ನವೀಕರಿಸುವುದು ಉದ್ಯಮದ ಸುಸ್ಥಿರತೆಗೆ ಅತ್ಯಗತ್ಯ. ಇದೇ ವೇಳೆ, ‘ರಾಜಾ ಶಿವಾಜಿ’ (ಮರಾಠಿ), ‘ಪೆದ್ದಿ’ (ತೆಲುಗು), ‘ಕರುಪ್ಪು’ (ತಮಿಳು) ಹಾಗೂ ‘ದೃಶ್ಯಂ 3’ (ಮಲಯಾಳಂ) ನಂತಹ ಚಿತ್ರಗಳು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಅದ್ಭುತ ಯಶಸ್ಸು ಸಾಧಿಸಿವೆ. ಹಿಂದಿಯ ಬೃಹತ್ ಬಜೆಟ್ ಚಿತ್ರಗಳು ನಗರ ಹಾಗೂ ಗ್ರಾಮೀಣ ಭಾಗಗಳೆರಡರಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿವೆ.

ಬುಕ್‌ಮೈಶೋ (BookMyShow) ನ ಸಿಒಒ ಆಶಿಶ್ ಸಕ್ಸೇನಾ ಅವರು ಪ್ರೇಕ್ಷಕರ ಬದಲಾದ ಗುಣಾತ್ಮಕ ನಡವಳಿಕೆಯ ಕಡೆಗೆ ಬೆಳಕು ಚೆಲ್ಲಿದ್ದಾರೆ. ಮುಂಗಡ ಬುಕಿಂಗ್ (Advance Booking) ಟ್ರೆಂಡ್ ಮತ್ತೆ ಶುರುವಾಗಿದ್ದು, ಪ್ರೇಕ್ಷಕರು ವಿಮರ್ಶೆಗಳಿಗಾಗಿ ಕಾಯದೆ ಬಿಡುಗಡೆಗೂ ಮುನ್ನವೇ ಟಿಕೆಟ್ ಕಾಯ್ದಿರಿಸುತ್ತಿದ್ದಾರೆ. ಇದು ಮುಂಬರುವ ಚಿತ್ರಗಳ ಮೇಲಿನ ಅವರ ಭರವಸೆಯನ್ನು ಸೂಚಿಸುತ್ತದೆ. ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಬರುತ್ತವೆ ಎಂದು ತಿಳಿದಿದ್ದರೂ ಸಹ, ‘ಮೈ ವಾಪಸ್ ಆವುಂಗಾ’ ದಂತಹ ಚಿತ್ರಗಳು ಚಿತ್ರಮಂದಿರಗಳಲ್ಲಿ ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿರುವುದು ಥಿಯೇಟರ್ ವೀಕ್ಷಣೆಯ ತುರ್ತನ್ನು ದೃಢಪಡಿಸಿದೆ.

2026ರ ದ್ವಿತೀಯಾರ್ಧವು ಚಿತ್ರರಂಗಕ್ಕೆ ಇನ್ನಷ್ಟು ಆಶಾದಾಯಕವಾಗಿದೆ. ಸಾಲು ಸಾಲು ಹಬ್ಬಗಳಿರುವುದರಿಂದ ನಿರೀಕ್ಷೆಗಳು ಗರಿಗೆದರಿವೆ. ಪಿವಿಆರ್ ಐನಾಕ್ಸ್ (PVR INOX) ನ ಸಿಇಒ ಗೌತಮ್ ದತ್ತಾ ಅವರು ತಿಳಿಸುವಂತೆ, ‘ಟಾಕ್ಸಿಕ್’, ‘ಕಿಂಗ್’ ಮತ್ತು ‘ಲವ್ & ವಾರ್’ ನಂತಹ ಬಹುನಿರೀಕ್ಷಿತ ಭಾರತೀಯ ಚಿತ್ರಗಳೊಂದಿಗೆ, ಹಾಲಿವುಡ್‌ನ ‘ಅವೆಂಜರ್ಸ್: ಡೂಮ್ಸ್‌ಡೇ’ (Avengers: Doomsday), ‘ಡ್ಯೂನ್: ಪಾರ್ಟ್ 3’ ಹಾಗೂ ‘ದಿ ಮ್ಯಾಂಡಲೋರಿಯನ್ & ಗ್ರೋಗು’ ಚಿತ್ರಗಳು ಬಿಡುಗಡೆಯಾಗಲಿವೆ. ಮುಂಬರುವ ಸಿನೆಮಾಗಳ ಈ ವೈವಿಧ್ಯತೆ ಮತ್ತು ನಿರಂತರ ಬಿಡುಗಡೆಗಳು ಎಲ್ಲಾ ವರ್ಗದ ಪ್ರೇಕ್ಷಕರನ್ನು ಸತತವಾಗಿ ಚಿತ್ರಮಂದಿರಗಳತ್ತ ಸೆಳೆಯಲಿವೆ ಎಂಬುದು ಉದ್ಯಮದ ಅಚಲ ವಿಶ್ವಾಸವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೌಜನ್ಯ ಪ್ರಕರಣ | SIT ವಿರುದ್ಧ ತಾಯಿ ಕುಸುಮಾವತಿ ಅಸಮಾಧಾನ; ತನಿಖಾಧಿಕಾರಿ ಬದಲಾವಣೆಗೆ ಆಗ್ರಹ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್‌ನ...

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ ‘ಮಹಾಭಿಯೋಗ’ ನಡೆದಿದೆಯೇ?

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ...

‘ವೀರಮಣಿ ಅತ್ಯಾಚಾರ ಪ್ರಕರಣ ಮುಚ್ಚುವುದರ ಹಿಂದೆ ಯಾವ ಒಪ್ಪಂದವಿತ್ತು’?; ಡಿಎಂಕೆ ವಿರುದ್ಧ ಸಿಎಂ ವಿಜಯ್‌ ವಾಗ್ದಾಳಿ

ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ತಮಿಳುನಾಡಿನ ಆರ್‌....

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ...