‘ವಂದೇ ಮಾತರಂ’ನ ಎರಡು ಚರಣಗಳ ಹಾಡಿದರೆ ಸಾಕೇ? ಉಳಿದ ನಾಲ್ಕು ಚರಣಗಳು ಬೇಕೇ?

Date:

ಎಪ್ಸ್ಟೀನ್ ಫೈಲ್ಸ್ ನಲ್ಲಿ ಮೋದಿ ಮತ್ತು ಅವರ ಸಂಪುಟದ ಮಂತ್ರಿಯ ಹೆಸರಿರುವ ಆರೋಪ, ಚೀನಾ ದೇಶ ಭಾರತದ ಭೂಭಾಗವನ್ನು ಅತಿಕ್ರಮಿಸಿದ ಜನರಲ್ ನರವಣೆ ಪುಸ್ತಕದ ಬಣ್ಣನೆ, ವಾಣಿಜ್ಯ ಒಪ್ಪಂದಗಳಲ್ಲಿ ಮೋದಿ ಸರ್ಕಾರ, ಭಾರತವನ್ನು ಟ್ರಂಪ್ ಗೆ ಮಾರಿಕೊಂಡರೆಂಬ ವಿವಾದಗಳು ಮುತ್ತಿದ್ದ ಕಾಲವದು. ಈ ಸಂಗತಿಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲೆಂದೇ ವಂದೇ ಮಾತರಂ ಕುರಿತ ಕಾನೂನು ಜಾರಿಯಾಯಿತು.

- Advertisement -

1937ರಲ್ಲಿ ಮಹಾತ್ಮ ಗಾಂಧಿ, ಸುಭಾಷ್‌ಚಂದ್ರ ಬೋಸ್‌ ಸೇರಿದಂತೆ ಹಲವು ನಾಯಕರ ಬೆಂಬಲದೊಂದಿಗೆ ಕೈಗೊಂಡ ನಿರ್ಧಾರವನ್ನು ಅನುಸರಿಸಿ, ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನಷ್ಟೇ ಹಾಡುವುದಾಗಿ ಕಾಂಗ್ರೆಸ್‌ ಹೇಳಿದೆ. ಹಾಗಾದರೆ ಉಳಿದ ನಾಲ್ಕು ಚರಣಗಳಲ್ಲಿ ಏನಿದೆ?

ಅವು ವಿವಾದಕ್ಕೆ ಕಾರಣವಾಗಿರುವುದು ಏಕೆ?

ತನ್ನ ನಿಲುವಿಗೆ ಸಮರ್ಥನೆಯಾಗಿ 1937ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಕಾಂಗ್ರೆಸ್  ಉಲ್ಲೇಖಿಸಿದೆ. ಮಹಾತ್ಮ ಗಾಂಧಿ, ರವೀಂದ್ರನಾಥ ಟಾಗೋರ್ ಸೇರಿದಂತೆ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರು, ವಂದೇ ಮಾತರಂನ ಸಾರ್ವಜನಿಕ ಗಾಯನವನ್ನು ಮೊದಲ ಎರಡು ಚರಣಗಳಿಗೆ ಸೀಮಿತಗೊಳಿಸುವ ನಿಲುವಿಗೆ ಬೆಂಬಲ ನೀಡಿದ್ದರು ನೆಹರೂ, ಸರ್ದಾರ್ ಪಟೇಲ್, ಸುಭಾಷ್ ಚಂದ್ರ ಬೋಸರಿದ್ದ ಕಾಂಗ್ರೆಸ್‌ನ ಉನ್ನತ ಸಮಿತಿಯು ರವೀಂದ್ರನಾಥ ಟಾಗೋರರ ಜೊತೆಗಿನ ಸಮಾಲೋಚನೆಯೊಂದಿಗೆ ವಂದೇ ಮಾತರಂ ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಒಪ್ಪಿಗೆ ನೀಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಹಿಂದೂ, ಮುಸ್ಲಿಮ್, ಸಿಖ್ ಸಿಪಾಯಿಗಳಿರುವ ಆಜಾದ್ ಹಿಂದ್ ಸೇನೆಯಲ್ಲಿ ಸುಭಾಷ್ ಚಂದ್ರ ಬೋಸರು ಒಮ್ಮೆಯೂ ವಂದೇ ಮಾತರಂ ಚರಣಗಳನ್ನು ಹಾಡಿಸಲಿಲ್ಲ.

ವಂದೇ ಮಾತರಂ ಹಾಡುವುದು ಅಥವಾ ನುಡಿಸುವುದನ್ನು ಉದ್ದೇಶಪೂರ್ವಕವಾಗಿ ತಡೆಯುವುದು ಅಥವಾ ಅಡ್ಡಿಪಡಿಸುವುದು ಅಪರಾಧ ಎಂಬ ಕಾನೂನನ್ನು ಮೋದಿ ಸರ್ಕಾರ ಐದು ತಿಂಗಳ ಹಿಂದೆ ಹಠಾತ್ ಜಾರಿಗೊಳಿಸಿತ್ತು. ಎಪ್ಸ್ಟೀನ್ ಫೈಲ್ಸ್ ನಲ್ಲಿ ಮೋದಿ ಮತ್ತು ಅವರ ಸಂಪುಟದ ಮಂತ್ರಿಯ ಹೆಸರಿರುವ ಆರೋಪ, ಚೀನಾ ದೇಶ ಭಾರತದ ಭೂಭಾಗವನ್ನು ಅತಿಕ್ರಮಿಸಿದ ಜನರಲ್ ನರವಣೆ ಪುಸ್ತಕದ ಬಣ್ಣನೆ, ವಾಣಿಜ್ಯ ಒಪ್ಪಂದಗಳಲ್ಲಿ ಮೋದಿ ಸರ್ಕಾರ, ಭಾರತವನ್ನು ಟ್ರಂಪ್ ಗೆ ಮಾರಿಕೊಂಡರೆಂಬ ವಿವಾದಗಳು ಮುತ್ತಿದ್ದ ಕಾಲವದು. ಈ ಸಂಗತಿಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲೆಂದೇ ವಂದೇ ಮಾತರಂ ಕುರಿತ ಕಾನೂನು ಜಾರಿಯಾಯಿತು.

ವಂದೇ ಮಾತರಂ ರಚನೆಯ ಹಿನ್ನೆಲೆ

‘ವಂದೇ ಮಾತರಂ’ ಎಂದರೆ ‘ತಾಯೇ, ನಿನಗೆ ವಂದಿಸುವೆ’ ಎಂದು ಅರ್ಥ. ಬಂಕಿಮಚಂದ್ರ ಚಟರ್ಜಿ 1875ರಲ್ಲಿ ಸಂಸ್ಕೃತ ಮಿಶ್ರಿತ ಬಂಗಾಳಿ ಭಾಷೆಯಲ್ಲಿ ಈ ಗೀತೆಯನ್ನು ರಚಿಸಿದರು. ಆರು ವರ್ಷಗಳ ಬಳಿಕ, ಅವರು ಇದನ್ನು ತಮ್ಮ ‘ಆನಂದಮಠ’ ಕಾದಂಬರಿಯಲ್ಲಿ ಸೇರಿಸಿದರು. ಆಗ ಅವರು ಬ್ರಿಟಿಷ್ ಸರ್ಕಾರದಲ್ಲಿ ಅಧಿಕಾರಿಯಾಗಿದ್ದರು.

18ನೇ ಶತಮಾನದ ಅಂತ್ಯದಲ್ಲಿ ಬಂಗಾಳದ ನವಾಬ ಮತ್ತು ಆನಂತರ ಆತನನ್ನು ಸೋಲಿಸಿ ಸರ್ಕಾರ ಸ್ಥಾಪಿಸಿದ ಬ್ರಿಟಿಷರ ಶೋಷಣೆಯ ವಿರುದ್ಧ ನಡೆದ ಸನ್ಯಾಸಿಗಳು ಮತ್ತು ಫಕೀರರ ಬಂಡಾಯಗಳ ಹಿನ್ನೆಲೆಯನ್ನು ‘ಆನಂದಮಠ’ ಕಾದಂಬರಿ ವಿಕೃತಗೊಳಿಸುತ್ತದೆ. ಕೇವಲ ಹಿಂದೂ ಸನ್ಯಾಸಿಗಳ ಪಾತ್ರವನ್ನು ಉಲ್ಲೇಖಿಸುತ್ತದೆ. ದೇಶದ ಪ್ರಧಾನ ಶತ್ರುಗಳು ಬ್ರಿಟಿಷರಲ್ಲ, ಮುಸಲ್ಮಾನರು ಎಂದೇ ಕಾದಂಬರಿ ಬಿಂಬಿಸುತ್ತದೆ. ಬಂಗಾಳದ ಕ್ಷಾಮಕ್ಕೆ ಮುಸಲ್ಮಾನರೇ ಕಾರಣವೆಂದು ದೂಷಿಸಿ, ಅವರ ಮಾರಣಹೋಮಕ್ಕೆ ಹಿಂದೂಗಳನ್ನು ಸಜ್ಜಾಗಿಸಲು ಕರೆ ನೀಡುತ್ತದೆ. ನಮಗೆ ಅಧಿಕಾರ ಬೇಕಿಲ್ಲ, ಎಲ್ಲ ಮುಸಲ್ಮಾನರನ್ನು ಕೊಂದು ಹಾಕುವುದೇ ನಮ್ಮ ಉದ್ದೇಶ. ಅವರು ಹಿಂದೂ ದೇವತೆಗಳ ಶತ್ರುಗಳು ಎಂದು ಕಾದಂಬರಿಯ ನಾಯಕ ಸಾರುತ್ತಾನೆ. ತಮ್ಮ ಕಾದಂಬರಿಯು ಬ್ರಿಟಿಷ್ ವಿರೋಧಿಯಲ್ಲ ಎಂದೂ ಸ್ಪಷ್ಟಪಡಿಸಿದ್ದರು ಬಂಕಿಮಚಂದ್ರ ಚಟರ್ಜಿ.

ಆನಂದಮಠ ಮತ್ತು ವಂದೇ ಮಾತರಂ ನ್ನು ಬ್ರಿಟಿಷರು ಯಾಕೆ ನಿಷೇಧಿಸಲಿಲ್ಲ

ಬ್ರಿಟಿಷ್ ಆಡಳಿತದ ಅಧಿಕೃತ ಗೆಝೆಟ್ ನಲ್ಲಿ ಈ ಕಾದಂಬರಿಯ ಪ್ರಸ್ತಾಪವಿತ್ತು. ಈ ಕಾದಂಬರಿಯು ಮುಸ್ಲಿಮ್ ಆಳ್ವಿಕೆಯ ಅಂತ್ಯವನ್ನು ಬಯಸುವ ಮತ್ತು ಬ್ರಿಟಿಷರು ಭಾರತದ ಮೇಲೆ ಸಂಪೂರ್ಣ ಸ್ವಾಮ್ಯ ಪಡೆಯಬೇಕೆಂಬ ಆಶಯವುಳ್ಳ ಕಾದಂಬರಿ ಎಂದು 1883ರ ಮಾರ್ಚ್ 31ರ ಬ್ರಿಟಿಷ್ ಗೆಜೆಟ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿತ್ತು.

ಆನಂದ ಮಠ ಕಾದಂಬರಿಯು ಮುಸ್ಲಿಮರ ವಿರುದ್ಧ ಘೋಷಗೀತೆ ಎಂದು  ಬ್ರಿಟಿಷ್ ವೈಸರಾಯ್ ಪರಿಷತ್ತಿನ ಸದಸ್ಯ ಸರ್ ಹೆನ್ರಿ ಕ್ರೀಕ್ ಬಣ್ಣಿಸಿದ್ದನು. ಈ ಕಾದಂಬರಿಯನ್ನು ಅಥವಾ ವಂದೇ ಮಾತರಂ ಗೀತೆಯನ್ನು ಬ್ರಿಟಿಷರು ನಿಷೇಧಿಸದಿರುವ ರಹಸ್ಯವೂ ಇದೇ ಆಗಿದೆ.

1905ರಿಂದ 1908ರವರೆಗೆ ನಡೆದ ಸ್ವದೇಶಿ ಚಳವಳಿಯ ವೇಳೆ ‘ವಂದೇ ಮಾತರಂ’ ಹೋರಾಟದ ಘೋಷಣೆಯಾಗಿ ರೂಪುಗೊಂಡಿತು. ಆ ಮೂಲಕ ಅದು ಭಾರತದ ಸ್ವಾತಂತ್ರ್ಯ ಹೋರಾಟದೊಂದಿಗೆ ಆಳವಾಗಿ ಬೆಸೆದುಕೊಂಡಿತು.

 ಹಾಡಿನಲ್ಲಿರುವ ಕೆಲವು ಉಲ್ಲೇಖಗಳಿಗೆ ಮುಸ್ಲಿಂ ಲೀಗ್ ವಿರೋಧ ವ್ಯಕ್ತಪಡಿಸಿತು. ಜೊತೆಗೆ, ‘ತಾಯಿಗೆ ತಲೆಬಾಗುವುದು’ ಮೂರ್ತಿಪೂಜೆಗೆ ಸಮಾನ ಎಂದು ಅದು ವಾದಿಸಿತು. 1938ರ ಅಕ್ಟೋಬರ್‌ನಲ್ಲಿ ಕರಾಚಿಯಲ್ಲಿ ನಡೆದ ಸಿಂಧ್ ಪ್ರಾಂತೀಯ ಮುಸ್ಲಿಂ ಲೀಗ್ ಸಮ್ಮೇಳನದಲ್ಲಿ ಮೊಹಮ್ಮದ್ ಅಲಿ ಜಿನ್ನಾ, ಕಾಂಗ್ರೆಸ್ ವಿಧಾನಸಭೆಗಳ ಕಲಾಪವನ್ನು ‘ವಂದೇ ಮಾತರಂ’ನೊಂದಿಗೆ ಆರಂಭಿಸುತ್ತಿದೆ ಎಂದು ಟೀಕಿಸಿದ್ದರು. ಅದು ಕೇವಲ ಮೂರ್ತಿಪೂಜೆಯ ಸ್ವರೂಪದ್ದಷ್ಟೇ ಅಲ್ಲದೆ, ಅದರ ಮೂಲ ಮತ್ತು ಅರ್ಥದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಗೀತೆಯಾಗಿದೆ ಎಂದು ಆರೋಪಿಸಿದ್ದರು.

1937ರ ಕಾಂಗ್ರೆಸ್ ನಿರ್ಧಾರ

1937ರ ಅಕ್ಟೋಬರ್‌ನಲ್ಲಿ ಜವಾಹರಲಾಲ್ ನೆಹರು ಅವರು ಸುಭಾಷ್‌ಚಂದ್ರ ಬೋಸ್ ಅವರಿಗೆ ಬರೆದ ಪತ್ರದಲ್ಲಿ, ‘ಆನಂದಮಠ’ದ ಹಿನ್ನೆಲೆಯ ಕಾರಣದಿಂದ ವಂದೇ ಮಾತರಂ ಮುಸ್ಲಿಮರಲ್ಲಿ ಅಸಮಾಧಾನ ಹುಟ್ಟಿಸಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು. ಆದರೆ, ಇದರ ವಿರುದ್ಧ ಎದ್ದಿದ್ದ ಆಕ್ರೋಶವನ್ನು ‘ಕೋಮುವಾದಿಗಳು ಸೃಷ್ಟಿ’ ಎಂದೂ ಹೇಳಿದ್ದರು.

ನೆಹರು ಮತ್ತು ಬೋಸ್ ಸೇರಿದಂತೆ ಹಲವು ನಾಯಕರು ಈ ವಿವಾದದ ಕುರಿತು ರವೀಂದ್ರನಾಥ ಟಾಗೋರ್ ಅವರ ಅಭಿಪ್ರಾಯವನ್ನು ಕೇಳಿದ್ದರು.

‘ಆನಂದಮಠ’ದ ಹಿನ್ನೆಲೆಯೊಂದಿಗೆ ಸಂಪೂರ್ಣ ಕವನವನ್ನು ಓದಿದಾಗ ಅದು ಮುಸ್ಲಿಮರ ಭಾವನೆಗಳಿಗೆ ನೋವುಂಟುಮಾಡಬಹುದು. ಆದರೆ ಮೊದಲ ಎರಡು ಚರಣಗಳು ಸ್ವತಂತ್ರ ಅಸ್ತಿತ್ವ ಹೊಂದಿವೆ ಮತ್ತು ಸ್ಫೂರ್ತಿ ಪ್ರೇರಣೆ ನೀಡುತ್ತವೆ. ಅವುಗಳಲ್ಲಿ ಆಕ್ಷೇಪಾರ್ಹವಾದದ್ದು ಇಲ್ಲ ಎಂದು ಟಾಗೋರ್ ತಿಳಿಸಿದ್ದರು.

ಇದಾದ ನಂತರ 1937ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ರಾಷ್ಟ್ರೀಯ ಸಭೆಗಳಲ್ಲಿ ವಂದೇ ಮಾತರಂ ಹಾಡುವಾಗ ಅದರ ಮೊದಲ ಎರಡು ಚರಣಗಳನ್ನಷ್ಟೇ ಹಾಡಬೇಕು ಎಂದು ಶಿಫಾರಸು ಮಾಡಿತು. ಮೊದಲ ಎರಡು ಚರಣಗಳಲ್ಲಿ ಯಾರಾದರೂ ಆಕ್ಷೇಪಿಸಬಹುದಾದ ಅಂಶಗಳಿಲ್ಲ ಮತ್ತು ನಂತರದ ಚರಣಗಳು ಜನಸಾಮಾನ್ಯರಲ್ಲಿ ಹೆಚ್ಚು ಪರಿಚಿತವೂ ಅಲ್ಲ ಎಂದು ನಿರ್ಣಯದಲ್ಲಿ ಹೇಳಲಾಗಿತ್ತು.

ಮಹಾತ್ಮ ಗಾಂಧಿ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ವಂದೇ ಮಾತರಂ ಪಡೆದಿದ್ದ ಮಹತ್ವವನ್ನು ಸಮರ್ಥಿಸಿಕೊಂಡಿದ್ದರು. ಆದರೆ ಅದನ್ನು ಯಾರ ಮೇಲೂ ಬಲವಂತವಾಗಿ ಹೇರಬಾರದು ಎಂಬುದು ಅವರ ನಿಲುವಾಗಿತ್ತು.

1939ರ ಜುಲೈನಲ್ಲಿ ‘ಹರಿಜನ’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಗಾಂಧಿ, ಬಂಗಾಳ ವಿಭಜನೆಯ ವಿರುದ್ಧ ನಡೆದ ಚಳವಳಿಯ ಸಮಯದಲ್ಲಿ ವಂದೇ ಮಾತರಂ ಹಿಂದೂ ಮತ್ತು ಮುಸ್ಲಿಮರಿಬ್ಬರಲ್ಲೂ ಅತ್ಯಂತ ಪ್ರಭಾವಿ ಹೋರಾಟದ ಘೋಷಣೆಯಾಗಿತ್ತು ಎಂದು ನೆನೆದಿದ್ದರು. ಆದರೆ, ಹಲವು ಧರ್ಮಗಳ ಜನ ಪಾಲ್ಗೊಂಡಿರುವ ಸಭೆಯಲ್ಲಿ ವಂದೇ ಮಾತರಂ ಹಾಡುವ ವಿಚಾರವಾಗಿ ತಾವು ಜಗಳ  ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಕಾಂಗ್ರೆಸ್ ಅನುಮೋದಿಸಿದ ಎರಡೇ ಚರಣಗಳ ಸಂಕ್ಷಿಪ್ತ ಆವೃತ್ತಿಗೂ ಯಾರಾದರೂ ತಕರಾರು ತೆಗೆದರೆ, ಅಲ್ಲಿ ಹಾಡುವುದನ್ನೇ ಕೈಬಿಡಬೇಕು ಎಂಬುದು ಗಾಂಧಿಯವರ ನಿಲುವಾಗಿತ್ತು.

ಮೊದಲ ಎರಡು ಚರಣಗಳಲ್ಲಿ ಏನಿದೆ?

ವಂದೇ ಮಾತರಂನ ಮೊದಲ ಎರಡು ಚರಣಗಳು ಮಾತೃಭೂಮಿಯ ಪ್ರಕೃತಿ ಸೌಂದರ್ಯ ಮತ್ತು ಸಮೃದ್ಧಿಯನ್ನು ವರ್ಣಿಸುತ್ತವೆ. ಅವು ದೇಶದ ಸಮೃದ್ಧ ಜಲಸಂಪತ್ತು, ಫಲವತ್ತಾದ ಭೂಮಿ, ತಂಪಾದ ಗಾಳಿ, ಹಸಿರು ಬೆಳೆಗಳು, ಬೆಳದಿಂಗಳ ರಾತ್ರಿ, ಹೂಗಳಿಂದ ಕಂಗೊಳಿಸುವ ಮರಗಳು, ಮಧುರವಾದ ಮಾತು, ಸುಖ ಮತ್ತು ವರಗಳನ್ನು ನೀಡುವ ತಾಯ್ನಾಡನ್ನು ಸ್ತುತಿಸುತ್ತವೆ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕ ಪಾತ್ರ ವಹಿಸಿದ್ದ ವಂದೇ ಮಾತರಂಗೆ ‘ಜನ ಗಣ ಮನ’ದಷ್ಟೇ ಗೌರವ ನೀಡಲಾಗುವುದು ಎಂದು ಸಂವಿಧಾನ ರಚನಾ ಸಭೆಯ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್ 1950ರ ಜನವರಿ 24ರಂದು   ತಿಳಿಸಿದ್ದರು. ಸಾಂಪ್ರದಾಯಿಕವಾಗಿ ‘ರಾಷ್ಟ್ರಗೀತೆ’ಯ ಸ್ಥಾನಮಾನ ಪಡೆದಿರುವ ವಂದೇ ಮಾತರಂ ಆವೃತ್ತಿಯು ಮೊದಲ ಎರಡು ಚರಣಗಳನ್ನಷ್ಟೇ ಒಳಗೊಂಡಿದೆ.

ಉಳಿದ ನಾಲ್ಕು ಚರಣಗಳಲ್ಲಿ ಏನಿದೆ?

ಮಾತೃಭೂಮಿಯ ವರ್ಣನೆ ಕೇವಲ ಪ್ರಕೃತಿ ಸೌಂದರ್ಯಕ್ಕೆ ಸೀಮಿತವಾಗುವುದಿಲ್ಲ. ತಾಯ್ನಾಡನ್ನು ಶಕ್ತಿಯುತ ದೈವಿಕ ರೂಪವೆಂದು ಚಿತ್ರಿಸಲಾಗಿದೆ. ಕೋಟ್ಯಂತರ ಕಂಠಗಳ ಘರ್ಜನೆ ಮತ್ತು ಕೋಟ್ಯಂತರ ಕೈಗಳು ಶಸ್ತ್ರಾಸ್ತ್ರ ಹಿಡಿದು ತಾಯ್ನಾಡಿನ ರಕ್ಷಣೆಗೆ ಸಜ್ಜಾಗಿರುವ ಚಿತ್ರಣವಿದೆ. ತಾಯಿ ಅಪಾರ ಶಕ್ತಿಶಾಲಿಯೇ ವಿನಾ ದುರ್ಬಲಳಲ್ಲ ಎಂಬ ಸಂದೇಶವಿದೆ.

ನಾಲ್ಕನೇ ಚರಣದಲ್ಲಿ, ತಾಯ್ನೆಲವೇ ಅರಿವು, ಧರ್ಮ, ಹೃದಯ, ಜೀವಶಕ್ತಿ ಹಾಗೂ ಭಕ್ತಿ ಎಂದು ಬಣ್ಣಿಸಲಾಗಿದೆ. ಪ್ರತಿಯೊಂದು ದೇವಾಲಯದಲ್ಲೂ ತಾಯಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂಬ ರೀತಿಯ ಧಾರ್ಮಿಕ ರೂಪಕ ಮೂಡಿಸಲಾಗಿದೆ. ಐದನೇ ಚರಣದಲ್ಲಿ, ಮಾತೃಭೂಮಿಯನ್ನು ಹಿಂದೂ ದೇವತೆಗಳೊಂದಿಗೆ ಹೋಲಿಸಲಾಗುತ್ತದೆ. ಅವಳನ್ನು: ದುರ್ಗೆ — ಹತ್ತು ಆಯುಧಗಳನ್ನು ಧರಿಸಿದ ಶಕ್ತಿದೇವತೆ, ಕಮಲಾ/ಲಕ್ಷ್ಮಿ — ಸಮೃದ್ಧಿಯ ದೇವತೆ, ವಾಣಿ/ಸರಸ್ವತಿ — ವಿದ್ಯೆಯ ದೇವತೆ ಎಂದು ಕೊಂಡಾಡಲಾಗಿದೆ.

ಹಿಂದೂ ದೇವತೆಗಳ ನೇರ ಉಲ್ಲೇಖವೇ ಮುಸ್ಲಿಂ ಧಾರ್ಮಿಕ ವಿದ್ವಾಂಸರ ಪ್ರಮುಖ ಆಕ್ಷೇಪಕ್ಕೆ ಕಾರಣವಾಗಿದೆ. ಇಸ್ಲಾಮ್ ಧರ್ಮದಲ್ಲಿ ಕಟ್ಟುನಿಟ್ಟಾದ ಏಕದೇವೋಪಾಸನೆಯ ತತ್ವವಿದೆ. ಭಾರತವನ್ನು ದೇವತೆಯ ರೂಪದಲ್ಲಿ ಚಿತ್ರಿಸುವುದು ಮತ್ತು ಅದಕ್ಕೆ ವಂದಿಸಲಾಗದು. ಅಲ್ಲಾಹನ ಹೊರತು ಬೇರೆ ಯಾರನ್ನೂ ಆರಾಧಿಸಬಾರದು ಎಂಬ ಇಸ್ಲಾಮಿನ ಮೂಲಭೂತ ತತ್ವಕ್ಕೆ ವಿರುದ್ಧ ಎಂಬುದು ಅವರು ವಾದ.
ಹಾಡಿನ ನಂತರದ ಭಾಗಗಳು ಯುದ್ಧಕ್ಕೆ ಕರೆ ನೀಡುತ್ತವೆ. ‘ಆನಂದಮಠ’ದ ಕಥಾ ಸನ್ನಿವೇಶದಲ್ಲಿ ಮುಸ್ಲಿಮರು ಎದುರಾಳಿಗಳಾಗಿ ಕಾಣಿಸಿಕೊಳ್ಳುತ್ತಾರೆ ಮತ್ತು ಮಾತೃಭೂಮಿ ಹಿಂದೂ ದೇವತೆಯ ರೂಪ ಪಡೆಯುವುದರಿಂದ ಮುಸ್ಲಿಮರಲ್ಲಿ ಅನ್ಯತೆಯ ಭಾವನೆ ಉಂಟಾಗುತ್ತದೆ ಎಂಬುದು ಅವರ ವಿಶ್ಲೇಷಣೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗೆ ಒಗ್ಗೂಡಿದ ಪ್ರಗತಿಪರ ಧ್ವನಿಗಳು

ಸಂವಿಧಾನ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸೌಹಾರ್ದತೆಯ ರಕ್ಷಣೆಗಾಗಿ ಧಾರವಾಡದಲ್ಲಿ...

ರಾಜ್ಯಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಇಬ್ಬರು ಕೇಂದ್ರ ಸಚಿವರಿಗೆ ಕೊಕ್

ಉತ್ತರ ಪ್ರದೇಶದಿಂದ ತೆರವಾಗಲಿರುವ ಎಂಟು ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿ ಸೋಮವಾರ (ಅ....

ಆರೋಪಿಯ IQ ಕಡಿಮೆ ಇದ್ದ ಮಾತ್ರಕ್ಕೆ ವಿಚಾರಣೆಯಿಂದ ಹೊರಗಿಡಲು ಸಾಧ್ಯವಿಲ್ಲ: ಕೇರಳ ಹೈಕೋರ್ಟ್

ಕಡಿಮೆ ಬುದ್ಧಿಮತ್ತೆ (IQ) ಅಥವಾ ಬೌದ್ಧಿಕ ಅಸಮರ್ಥತೆ ಇದೆ ಎಂಬ ಕಾರಣವೊಂದರಿಂದಲೇ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ; NSUIನಿಂದ ವಿನೂತನ ‘ಜೀವಂತ ಶವ’ ಪ್ರತಿಭಟನೆ

ಮತದಾರರ ಹಕ್ಕುಗಳು ಮತ್ತು ಚುನಾವಣಾ ಪ್ರಕ್ರಿಯೆಯ ಮೇಲಿನ ಬೆದರಿಕೆಗಳನ್ನು ಖಂಡಿಸಿ, ಮುಖ್ಯ...