ಕಲ್ಲಿನ ಮೇಲಿನ ಕಲೆಗಳು; ಬಂಡೆಗಳ ನಡುವೆ ಸಿಡಿದು ನಜ್ಜುಗುಜ್ಜಾದ ಬಡಪಾಯಿ ಬದುಕು

Date:

ರಾಜ್ಯದಲ್ಲಿ 2020ರಿಂದ ಈಚೆಗೆ ಸ್ಫೋಟಕಗಳ ಬಳಕೆ, ಅಕ್ರಮ ಗಣಿಗಾರಿಕೆ, ಬಂಡೆ ಕುಸಿತದಂತಹ ದುರಂತಗಳಲ್ಲಿ 35ಕ್ಕೂ ಹೆಚ್ಚು ಗಣಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸಾಮಾನ್ಯವಾಗಿ ಇಂತಹ ಗಣಿ ದುರಂತಗಳಲ್ಲಿ ಬಲಿಯಾದವರಲ್ಲಿ ಹೆಚ್ಚಿನವರು ಬಿಹಾರ, ಉತ್ತರ ಪ್ರದೇಶ, ಆಂಧ್ರ ಪ್ರದೇಶ ಹಾಗೂ ಕೇರಳ ಮೂಲದ ಬಡ ಕಾರ್ಮಿಕರು. ಗಣಿ ಕಾಯ್ದೆಗಳು, ಕಾರ್ಮಿಕ ಸುರಕ್ಷತಾ ನಿಯಮ ಮಾಡಿದ್ದರೂ ಇವರ ಜೀವಗಳಿಗೆ ಯಾವ ಸುರಕ್ಷತೆಯೂ ಇಲ್ಲ.

- Advertisement -

ಮುಗಿಲೆತ್ತರದ ಬಹುಮಹಡಿ ಕಟ್ಟಡಗಳು, ಕಲ್ಲು ಹಾಸಿನ ದಾರಿ, ದೇಗುಲದ ಮೆಟ್ಟಿಲು, ನಮ್ಮ ನಿಮ್ಮ ಮನೆಯ ಅಂಗಳದ ಚಪ್ಪಡಿಗಲ್ಲು ಇವೆಲ್ಲವನ್ನು ಮೆಟ್ಟುವಾಗೆಲ್ಲ ನೆನೆಯಬೇಕಿರುವುದು ನೂರಾರು ವರ್ಷಗಳಿಂದ ಬಂಡೆಗಳ ನಡುವೆ ಬಂಡೆಯಂತಹ ಕಠಿಣ ಬದುಕು ನಡೆಸುತ್ತಿರುವ ಕಾರ್ಮಿಕರನ್ನು. ಬಂಡೆಗಲ್ಲುಗಳ ನಡುವೆ ನುಚ್ಚುನೂರಾಗುತ್ತಿರುವ ಗಣಿ ಕಾರ್ಮಿಕರ ಬೆವರು ಮೈಯನ್ನು, ಅವರ ರಕ್ತ, ಮಾಂಸ-ಮಜ್ಜೆಯ ಕಲೆಯನ್ನು ನಮ್ಮ ನಾಗರಿಕ ಸಮಾಜ ಮೆಟ್ಟುತ್ತಲೇ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ರಾಜ್ಯದಲ್ಲಿ 2020ರಿಂದ ಈಚೆಗೆ ಸ್ಫೋಟಕಗಳ ಬಳಕೆ, ಅಕ್ರಮ ಗಣಿಗಾರಿಕೆ, ಬಂಡೆ ಕುಸಿತದಂತಹ ದುರಂತಗಳಲ್ಲಿ 35ಕ್ಕೂ ಹೆಚ್ಚು ಗಣಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸಾಮಾನ್ಯವಾಗಿ ಇಂತಹ ಗಣಿ ದುರಂತಗಳಲ್ಲಿ ಬಲಿಯಾದವರಲ್ಲಿ ಹೆಚ್ಚಿನವರು ಬಿಹಾರ, ಉತ್ತರ ಪ್ರದೇಶ, ಆಂಧ್ರ ಪ್ರದೇಶ ಹಾಗೂ ಕೇರಳ ಮೂಲದ ಬಡ ಕಾರ್ಮಿಕರು. ಯಾವೆಲ್ಲಾ ಗಣಿ ಕಾಯ್ದೆಗಳು, ಕಾರ್ಮಿಕ ಸುರಕ್ಷತಾ ನಿಯಮಗಳು ಜಾರಿಯಲ್ಲಿದ್ದರೂ ಇವರ ಜೀವಗಳಿಗೆ ಯಾವ ಸುರಕ್ಷತೆಯೂ ಇಲ್ಲ.

ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣದಲ್ಲಿ ಇದೇ ಜುಲೈ 2ರಂದು ಘಟಿಸಿದ ಕಲ್ಲು ಕ್ವಾರಿ ದುರಂತದಲ್ಲಿ 7 ಜನ ಬಿಹಾರ ಮೂಲದ ಕಾರ್ಮಿಕರು ಮೃತಪಟ್ಟರು. ಕಾವೇರಿ ಕಂಪನಿಗೆ ಸೇರಿದ ಕ್ವಾರಿಯಲ್ಲಿ ಬೆಳಗ್ಗೆ 7:30ರ ಸುಮಾರಿಗೆ ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದವರ ಬದುಕು ಭೀಕರ ಅಂತ್ಯ ಕಂಡಿತು.

ಕ್ವಾರಿಯಲ್ಲಿ ಹೊಸ ಕ್ರಷರ್ ನಡೆಸಲು ಹಿಟಾಚಿ ಯಂತ್ರದಲ್ಲಿ ಸ್ಥಳ ಸ್ವಚ್ಛಗೊಳಿಸುತ್ತಿದ್ದ ವೇಳೆ ಸುಮಾರು 100 ಅಡಿ ಮೇಲಿನಿಂದ ಕಲ್ಲು ಬಂಡೆಗಳು ಕೆಳಗೆ ಉರುಳಿದವು. ಹಿಟಾಚಿ ನಿರ್ವಹಿಸುತ್ತಿದ್ದ ಚಾಲಕ ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಗಮನಿಸದೆ ಕಲ್ಲುಗಳನ್ನು ಮೇಲಿನಿಂದ ಕೆಳಕ್ಕೆ ತಳ್ಳಿದ್ದರಿಂದ ಕೂಲಿ ಕಾರ್ಮಿಕರ ತಲೆಯ ಮೇಲೆ ಬಂಡೆ ಬಿದ್ದು ದುರಂತ ನಡೆದಿದೆ.

ದುಡಿಮೆಗೆಂದು ದೂರದೂರಿಗೆ ಬಂದಿದ್ದ ಮಕ್ಕಳು ಬಾರದ ಲೋಕ ಸೇರಿದ್ದಕ್ಕೆ ಸಾಕ್ಷಿಯಾದ ಹೆತ್ತವರ ಕರಳುಗಳ ರೋಧನೆ ಕ್ವಾರಿಯ ಬಂಡೆಗಳನ್ನು ಕರಗಿಸುವಂತಿತ್ತು. ಘಟನೆ ನಡೆದು 24 ತಾಸುಗಳೊಳಗೆ ಚಿಕ್ಕಬಳ್ಳಾಪುರದಲ್ಲಿ ಇಂತಹದ್ದೇ ಮತ್ತೊಂದು ಗಣಿ ಅವಘಡ ಜರುಗಿದ ವಿಷಯ ಬೆಳಕಿಗೆ ಬಂತು.

ಚಿಕ್ಕಬಳ್ಳಾಪುರ ಎಕೋ ಸ್ಯಾಂಡ್ ಕ್ವಾರಿಯಲ್ಲಿ ಆಂಧ್ರಪ್ರದೇಶ ಮೂಲದ ನಾಗೇಂದ್ರ (35) ಎಂಬ ಕಾರ್ಮಿಕ ಡ್ರಿಲ್ಲಿಂಗ್ ಕಾರ್ಯಾಚರಣೆ ವೇಳೆ ಸ್ಫೋಟ ಸಂಭವಿಸಿದ ಪರಿಣಾಮ ಮೃತಪಟ್ಟರು. ಮಾದಾಪುರ ದುರಂತಕ್ಕೂ ಮುನ್ನವೇ ಈ ಘಟನೆ ಸಂಭವಿಸಿತ್ತು, ಜೂನ್‌ 30ರ ಮಂಗಳವಾರ ಪೆರೇಸಂದ್ರ ಸಮೀಪದ ಯಲಗಲಹಳ್ಳಿ ಕ್ರಷರ್ ವಲಯದಲ್ಲಿರುವ ಎಕೋ ಸ್ಯಾಂಡ್ ಕ್ರಶರ್‌ಗೆ ಸೇರಿದ ಕ್ವಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಕಾರ್ಮಿಕನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆ ಫಲಿಸದೇ ನಾಗೇಂದ್ರ ಮೃತಪಟ್ಟಿದ್ದಾರೆ.

ಮೃತ ನಾಗೇಂದ್ರ ಕಳೆದ 8 ವರ್ಷಗಳಿಂದ ಇದೇ ಕ್ವಾರಿಯಲ್ಲಿ ಕೆಲಸ ನಿರ್ಹಿಸುತ್ತಿದ್ದರು. ಅವಘಡ ಸಂಭವಿಸಿದ ದಿನದ ನಂತರದ ದಿನವೂ ಎಫ್‌ ಐ ಆರ್‌ ದಾಖಲು ಮಾಡಿಲ್ಲ. ಕಾರ್ಮಿಕ ಸಾವನ್ನಪ್ಪಿದ ನಂತರ ಪ್ರಕರಣ ದಾಖಲಾಗಿರುವ ಕುರಿತು ಸ್ಥಳೀಯರು ಆರೋಪಿಸಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.

Mineing.max 1280x720.format webp

ಮಲೆನಾಡಿನಲ್ಲೂ ಗಣಿ ಹಾವಳಿ

ತಣ್ಣಗೆ ಮಲಗಿದ್ದ ಮಲೆನಾಡ ಮಗ್ಗುಲಿನ ಜಿಲ್ಲೆಗಳು ತಡರಾತ್ರಿ ಬೆಚ್ಚೆದ್ದು ಕುಳಿತದ್ದು ಈಗ ನೆನಪು. ಶಿವಮೊಗ್ಗ ಜಿಲ್ಲೆಯ ಹೊರವಲಯ ಹುಣಸೋಡು ಗ್ರಾಮದಲ್ಲಿ 2021ರ ಜನವರಿಯಲ್ಲಿ ನಡೆದ ಗಣಿ ದುರಂತದಲ್ಲಿ 8 ಜನ ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಂಡರು. ಕಲ್ಲು ಕ್ರಷರ್ ಘಟಕದ ಬಳಿ ಜೆಲೆಟಿನ್ ಕಡ್ಡಿಗಳನ್ನು ಕದ್ದು ಸಾಗಿಸುತ್ತಿದ್ದ ಲಾರಿಯೊಂದು ಭೀಕರವಾಗಿ ಸ್ಫೋಟಗೊಂಡಿತ್ತು. ಈ ದುರಂತದಲ್ಲಿ 6 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರು. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸುತ್ತಮುತ್ತಲಿನ ಜಿಲ್ಲೆಗಳಿಗೂ ಭೂಕಂಪನದ ಅನುಭವವಾಗಿತ್ತು. ಲಾರಿಯ ಬಿಡಿ ಭಾಗಗಳು ಛಿದ್ರಗೊಂಡು ಅರ್ಧ ಕಿಲೋಮೀಟರ್ ದೂರದವರೆಗೂ ಚದುರಿ ಬಿದ್ದಿದ್ದವು. ಇನ್ನೂ ಎರಡು ಮೃತದೇಹಗಳು ಪತ್ತೆಯಾಗದೆ ಪೋಷಕರು ತಮ್ಮ ಮಕ್ಕಳ ದೇಹ ಹುಡುಕುತ್ತಾ ಅಡ್ಡಾಡಿದರೂ ಪ್ರಯೋಜನವಾಗಲಿಲ್ಲ.

220121 Hunasodu Blast Spot 1

ಸುತ್ತಮುತ್ತಲಿನ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದವು, ಕಿಟಕಿ ಗಾಜುಗಳು ಒಡೆದು ಹೋಗಿದ್ದವು, ಮನೆ ಹೆಂಚುಗಳು ಧ್ವಂಸಗೊಂಡಿದ್ದವು. ಕ್ರಷರ್ ಸಮೀಪ ವಾಸವಿದ್ದ ಈಶ್ವರ್ ನಾಯಕ್ ಅವರ ತಾಯಿ ಭಾರೀ ಸದ್ದಿಗೆ ಮೂರ್ಛೆ ಹೋಗಿದ್ದರು. ಸ್ಫೋಟದ ಸದ್ದಿಗೆ ಪುಟ್ಟ ಮಕ್ಕಳು ಮತ್ತು ಮಹಿಳೆಯರು ಪ್ರಜ್ಞೆ ಕಳೆದುಕೊಂಡಿದ್ದರು. ಸಮೀಪದ ಮನೆಯೊಂದರ 22 ವರ್ಷದ ಯುವತಿಯ ಕಿವಿ ಪರದೆ ಹರಿದು ಆಸ್ಪತ್ರೆಗೆ ದಾಖಲಾಗಿದ್ದರು. ಪುಟ್ಟ ಕಂದಮ್ಮಗಳು ಬೆಚ್ಚಿ ಜ್ವರ ಬಂದು ಹಾಸಿಗೆ ಸೇರಿದ್ದರು.

ಹುಣಸೋಡು ಗಣಿಯಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರು ದೂರದ ಕೇರಳ, ಆಂಧ್ರ, ಬಿಹಾರ, ಜಾರ್ಖಂಡ್ ರಾಜ್ಯಗಳಿಂದ ಹೊಟ್ಟೆಪಾಡಿಗಾಗಿ ಬಂದವರು. ಮಕ್ಕಳು, ವಯೋವೃದ್ಧ ತಂದೆ-ತಾಯಿಗಳೊಂದಿಗೆ ಕಾರ್ಮಿಕ ಕುಟುಂಬಗಳೇ ಇಲ್ಲಿ ಬೀಡು ಬಿಟ್ಟಿವೆ.

ಸಂಜೆಯಾಗುತ್ತಿದ್ದಂತೆ 150ಕ್ಕೂ ಹೆಚ್ಚು ಕಲ್ಲುಕ್ವಾರಿಗಳಿಂದ ಸ್ಫೋಟಕದ ಸದ್ದು ಹೊಮ್ಮುತ್ತದೆ. ನಗರದಿಂದ ಕೇವಲ 5 ಕಿ.ಮೀ. ಅಂತರದಲ್ಲಿರುವ ಹುಣಸೋಡು, ಕಲ್ಲುಗಂಗೂರು, ದೇವಕಾತಿಕೊಪ್ಪ ಗ್ರಾಮಗಳ ಸುತ್ತ 200ಕ್ಕೂ ಹೆಚ್ಚು ಕ್ರಷರ್‌ಗಳು ದಾಂಧಲೆ ಮಾಡುತ್ತಿವೆ. ಅನಾಹುತ ಸಂಭವಿಸುತ್ತದೆ ಎಂಬ ಆತಂಕದಿಂದಲೇ ಸುತ್ತಲಿನ ಗ್ರಾಮಸ್ಥರು ಜೀವ ಕೈಯಲ್ಲಿಟ್ಟುಕೊಂಡು ಬದುಕುತ್ತಿದ್ದಾರೆ.

ಶಿವಮೊಗ್ಗದ ಈ ಗಾಯ ಇನ್ನೂ ಹಸಿಹಸಿಯಾಗಿರುವಾಗಲೇ ಫೆಬ್ರವರಿ 2021ರಲ್ಲಿ ಚಿಕ್ಕಬಳ್ಳಾಪುರ ಹಿರೇನಾಗವಲ್ಲಿ ಭ್ರಮರವಾಸಿನಿ ಕಲ್ಲು ಕ್ವಾರಿಯಲ್ಲಿ ಮತ್ತೊಂದು ದುರಂತ 6 ಜೀವಗಳನ್ನು ಬಲಿ ತೆಗೆದುಕೊಂಡಿತು. ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸ್ಫೋಟಕಗಳನ್ನು ಪೊಲೀಸರ ದಾಳಿ ಭಯದಿಂದ ಕಾರ್ಮಿಕರು ಬೇರೆಡೆ ಬಚ್ಚಿಡಲು ಯತ್ನಿಸುತ್ತಿದ್ದಾಗ ಆಕಸ್ಮಿಕ ಸ್ಫೋಟ ಸಂಭವಿಸಿತ್ತು.

ಕ್ವಾರಿಯಲ್ಲಿ ನಿಯಮ ಬಾಹಿರ ಗಣಿಗಾರಿಕೆ ನಡೆಯುತ್ತಿರುವುದನ್ನು ತಡೆಯಲು ಸ್ಥಳೀಯರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಗಣಿಗಾರಿಕೆ ಮತ್ತು ಸ್ಫೋಟಕಗಳ ಬಳಕೆಯನ್ನು ನಿಷೇಧಿಸಿತ್ತು. ಆದರೆ ಆದೇಶವನ್ನು ಉಲ್ಲಂಘಿಸಿ ಅಕ್ರಮವಾಗಿ ಜಿಲೆಟಿನ್ ದಾಸ್ತಾನು ಮಾಡಲಾಗಿತ್ತು. ಪೊಲೀಸರು ಮತ್ತೊಮ್ಮೆ ದಾಳಿ ಮಾಡುತ್ತಾರೆ ಎಂಬ ಸೂಚನೆ ಸಿಕ್ಕಿದ ತಕ್ಷಣ ಗಣಿ ಮಾಲೀಕರು ಕಾರ್ಮಿಕರಿಗೆ ಅಕ್ರಮ ಸ್ಫೋಟಕಗಳನ್ನು ನಾಶಗೊಳಿಸುವ ಹೊರೆ ಹೊರಿಸಿದ್ದರು. ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ 6 ಮಂದಿ ಕಾರ್ಮಿಕರ ದೇಹಗಳು ಛಿದ್ರಗೊಂಡು ಮೃತಪಟ್ಟರು. ಮೃತರು ಆಂಧ್ರಪ್ರದೇಶ, ನೇಪಾಳ ಹಾಗೂ ಬಾಗೇಪಲ್ಲಿ ಮೂಲದವರಾಗಿದ್ದರು.

ಮಾರ್ಚ್ 2022ರಲ್ಲಿ ಚಾಮರಾಜನಗರದ ಗುಂಡ್ಲುಪೇಟೆಯ ಮಡಹಳ್ಳಿ ಬಿಳಿಕಲ್ಲು ಕ್ವಾರಿಯಲ್ಲಿ ಗುಡ್ಡ ಕುಸಿದು ಮೂವರು ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಂಡರು. ಸತ್ತವರು ಉತ್ತರ ಪ್ರದೇಶ ಮೂಲದ ಯುವಕರು. ಒಂದೇ ಸೂರಿನಡಿ ವಾಸಿಸುತ್ತಿದ್ದ ಶ್ರಮಿಕ ಸ್ನೇಹಿತರು. ಕೇರಳ ಮತ್ತು ಉತ್ತರ ಪ್ರದೇಶ ಮೂಲದ ಕಾರ್ಮಿಕರೇ ಹೆಚ್ಚಾಗಿದ್ದರು ಎಂದು ಅಧಿಕೃತ ವರದಿ ತಿಳಿಸಿತ್ತು.

ಮಡಹಳ್ಳಿ ಬಿಳಿಕಲ್ಲು ಕ್ವಾರಿ ದುರಂತ

ಈ ದುರಂತದ ನಂತರ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿತ್ತು. ಗಣಿ ಮಾಲೀಕರು ನಿಯಮಗಳ ಮೇರೆಗೆ ಗಣಿಗಾರಿಕೆ ಮಾಡುವುದಾಗಿ ಮುಚ್ಚಳಿಕೆ ಬರೆದುಕೊಟ್ಟ ನಂತರವಷ್ಟೇ ಮತ್ತೆ ಅನುಮತಿ ನೀಡಲಾಯಿತು.

ಈ ಭೀಕರತೆಗೆ ಸಾಕ್ಷಿಯಾಗಿ ಕೇವಲ 9 ತಿಂಗಳೊಳಗೆ ಜಿಲ್ಲೆ ಮತ್ತೊಂದು ದುರಂತದಿಂದ ಸುದ್ದಿಯಾಯಿತು. 2022ರ ಡಿಸೆಂಬರ್‌ನಲ್ಲಿ ಬಿಸಲವಾಡಿ ಗ್ರಾಮದ ಕಲ್ಲು ಕ್ವಾರಿಯಲ್ಲಿ ಸುಮಾರು 250 ಅಡಿಗೂ ಹೆಚ್ಚು ಆಳದ ಕ್ವಾರಿಯ ಮೇಲ್ಭಾಗದಿಂದ ಬಂಡೆಗಳು ಕುಸಿದು ಕಾರ್ಮಿಕರ ಮೇಲೆ ಉರುಳಿ ಬಿದ್ದವು. ಘಟನೆಯಲ್ಲಿ ಕುಮಾರ್, ಶಿವರಾಜು, ಸಿದ್ದರಾಜು ಎಂಬ ಮೂವರು ಬಡ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ರಾಜ್ಯದಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಗಣಿ ದುರಂತಗಳು ಮತ್ತು ಅಮಾಯಕ ಕಾರ್ಮಿಕರ ಸಾವುಗಳು ಕೇವಲ ಅಪಘಾತಗಳಲ್ಲ. ಅವು ಗಣಿ ಮಾಲೀಕರ ಬೇಜವಾಬ್ದಾರಿತನ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆಗೆ ಹಿಡಿದ ಕೈಗನ್ನಡಿಯಾಗಿವೆ. ಹೊಟ್ಟೆಪಾಡಿಗಾಗಿ ದೂರದ ರಾಜ್ಯಗಳಿಂದ ವಲಸೆ ಬರುವ ಬಡ ಕೂಲಿ ಕಾರ್ಮಿಕರ ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲದಂತಾಗಿರುವುದು ಅತ್ಯಂತ ವಿಷಾದನೀಯ.

ಕಟ್ಟುನಿಟ್ಟಾದ ಗಣಿ ಕಾಯ್ದೆಗಳು ಮತ್ತು ಕಾರ್ಮಿಕ ಸುರಕ್ಷತಾ ನಿಯಮಗಳು ಕಾಗದಕ್ಕಷ್ಟೇ ಸೀಮಿತವಾಗದೆ ಕಡ್ಡಾಯವಾಗಿ ಜಾರಿಗೆ ಬರಬೇಕಿದೆ. ಅಕ್ರಮ ಗಣಿಗಾರಿಕೆ ಮತ್ತು ನಿಯಮ ಬಾಹಿರ ಸ್ಫೋಟಕಗಳ ಬಳಕೆಯ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಇನ್ನು ಮುಂದೆ ಇಂತಹ ಭೀಕರ ಅವಘಡಗಳು ಮರುಕಳಿಸದಂತೆ ತಡೆಯಲು ಮತ್ತು ಶ್ರಮಿಕ ವರ್ಗಕ್ಕೆ ನ್ಯಾಯಯುತ ಸುರಕ್ಷತೆ ಒದಗಿಸಲು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣವೇ ಎಚ್ಚರಗೊಳ್ಳಬೇಕಿದೆ.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಆಯುರ್ವೇದ ಚಿಕಿತ್ಸೆಗೆ ಜಾಗತಿಕ ಮನ್ನಣೆ

ಆಯುರ್ವೇದ ಚಿಕಿತ್ಸೆಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ ಎಂದು ಕೇಂದ್ರ ಸರ್ಕಾರದ...

ದೇಹದ ಅಪಹಾಸ್ಯ, ನಿಂದನೆ ಮಾತ್ರವೇ ಮಹಿಳೆಯ ಮರ್ಯಾದೆ ಭಂಗದ ಅಪರಾಧವಲ್ಲ: ಹೈಕೋರ್ಟ್

ಕೇವಲ ದೇಹದ ಅಪಹಾಸ್ಯ (ಬಾಡಿ ಶೇಮಿಂಗ್‌) ಮತ್ತು ಅವಾಚ್ಯವಾಗಿ ನಿಂದಿಸುವುದು ಐಪಿಸಿ...

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಗ್ಗೆ ದೂರಿದ್ದ ಎಎಪಿ ಶಾಸಕ ಅಮಾನತು

ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಹೆಚ್ಚಿದೆ ಎಂದು ತಮ್ಮದೇ...

ಚುನಾವಣಾ ಆಯೋಗದ ಸಾಫ್ಟ್‌ವೇರ್ ದೋಷ: ಹೈಕೋರ್ಟ್ ಮೆಟ್ಟಿಲೇರಿದ ಗೋವಾದ ನಾಗರಿಕನ ಹೋರಾಟ

ಉತ್ತರ ಗೋವಾದ ಸಾಂತಾಕ್ರೂಜ್ ಕ್ಷೇತ್ರದ ನಿವಾಸಿ, 41 ವರ್ಷದ ಪರೇಶ್ ಸಾಲ್ಗಾಂವ್ಕರ್...